ಪುತ್ರನ ಹೆಸರು ರಿವೀಲ್ ಮಾಡಿದ ನಟಿ ನಯನಾ. ಹೆಸರು ವಿಭಿನ್ನವಾಗಿದೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ ನೆಟ್ಟಿಗರು. 

ಕಿರುತೆರೆ ನಟಿ ನಯನಾ ಪುಟ್ಟಸ್ವಾಮಿ ಜೂನ್‌ 11ರಂದು ಕುಟುಂಬಕ್ಕೆ ಗಂಡು ಮಗುವನ್ನು ಬರ ಮಾಡಿಕೊಂಡಿದ್ದಾರೆ. 'Its a Boy, ಹೆಲೋ ವರ್ಲ್ಡ್‌' ಎಂದು ಹೇಳುವ ಮೂಲಕ ಪುತ್ರನನ್ನು ಅಭಿಮಾನಿಗಳಿಗೆ ಪರಿಚಯಿಸಿಕೊಟ್ಟರು. ಇದೀಗ ಪುತ್ರನಿಗೆ ಡಿಫರೆಂಟ್ ಆಗಿ ನಾಮಕರಣ ಮಾಡಿದ್ದಾರೆ. 

Add Asianetnews Kannada as a Preferred SourcegooglePreferred

'ನಾವು ನಮ್ಮ ಪುತ್ರನಿಗೆ ತಾರುಶ್ ಕೃಷ್ಣ (Taarush Krishna) ಎಂದು ನಾಮಕರಣ ಮಾಡಿದ್ದೇವೆ. ಹೆಸರಿನ ಅರ್ಥ Conqueror/ವಿಜಯಶಾಲಿ ಎಂದು' ಎಂದು ನಯನಾ ಬರೆದುಕೊಂಡಿದ್ದಾರೆ. ನಯನಾ ಮತ್ತು ಪತಿ ಚರಣ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳು ಹರಿದು ಬರುತ್ತಿದೆ. 

ಪುತ್ರನ ಆಗಮನದ ನಂತರ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ನಯನಾ, ತಮ್ಮ ದಿನಚರಿ ಬಗ್ಗೆ ಅಭಿಮಾನಿಗಳಿಗೆ ಅಪ್ಡೇಟ್ ನೀಡುತ್ತಿರುತ್ತಾರೆ. ಪುತ್ರನ ಕೈ ಬೆರಳು ಪೋಟೋಗಳು ಹೊರತು ಪಡಿಸಿ, ಯಾವ ಪೋಟೋವನ್ನೂ ಇದುವರೆಗೆ ರಿವೀಲ್ ಮಾಡಿಲ್ಲ. ಸ್ಪೆಷಲ್ ದಿನದಂದು ರಿವೀಲ್ ಮಾಡಬಹುದು, ಎನ್ನಲಾಗಿದೆ. 

ಗಂಡು ಮಗುವಿಗೆ ಜನ್ಮ ನೀಡಿದ ನಟಿ ನಯನಾ ಪುಟ್ಟಸ್ವಾಮಿ! 

ಸದ್ಯ ವಿದೇಶದಲ್ಲಿ ಪತಿ ಜೊತೆ ಮದರ್‌ವುಡ್‌ ಎಂಜಾಯ್ ಮಾಡುತ್ತಿರುವ ನಯನಾ, ಭಾರತಕ್ಕೆ ಹಿಂದಿರುಗಿ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದಾಗಿ ಭರವಸೆ ನೀಡಿದ್ದಾರೆ.

View post on Instagram