ಬಿಗ್ ಬಾಸ್‌ ಸೀಸನ್‌ 7ರ  ಸ್ಪರ್ಧಿ ಚೈತ್ರಾ ಕೊಟೂರು ಹಾಗೂ ಉದ್ಯಮಿ ನಾಗಾರ್ಜುನ್‌ ಮಾರ್ಚ್‌ 28ರಂದು ಬೆಂಗಳೂರಿನ ದೇವಸ್ಥಾನದಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರು. ಎರಡೂ ಕುಟುಂಬಗಳು ಒಪ್ಪದ ಕಾರಣ ಮದುವೆಯಾದ ದಿನವೇ ನವ ದಂಪತಿಯ ಮನೆಯವರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರು.

ಚೈತ್ರಾ ಕೊಟೂರು-ನಾಗಾರ್ಜುನ್‌ರದ್ದು ಬಲವಂತ ಮದುವೆ ಆಗಿದ್ದರೆ ಈ ಪೋಟೋಗಳು ಏನು?

ಉದ್ಯಮಿ ನಾಗಾರ್ಜುನ್‌ಗೆ ಒತ್ತಾಯದಿಂದ ಮದುವೆ ಮಾಡಿಸಿದ್ದಾರೆ ಎಂದು ಆರೋಪಿಸಿ, ಮಂಡ್ಯದಿಂದ  ಬೆಂಗಳೂರಿಗೆ ಬಂದ ಪೋಷಕರು ನಾಗಾರ್ಜುನ್‌ ಅವರನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಕೋಲಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಮಾತುಕತೆಗೆ ಬರೋದಾಗಿ ಹೇಳಿದ್ದ ನಾಗಾರ್ಜುನ್ ಹಾಗೂ ಪೋಷಕರು ಮಾತುಕತೆಗೆ ಬಾರದೆ ನಿರ್ಲಕ್ಷ್ಯ ಮಾಡಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಯತ್ನ ಮಾಡಿದ್ದಾರೆ ಎನ್ನಲಾಗಿದೆ. ತಮ್ಮ ವೈವಾಹಿಕ ಜೀವನ ಒಂದೇ ದಿನದಲ್ಲಿ ಬಿರುಕು ಕಂಡಿರುವ ಕಾರಣ ಚೈತ್ರಾ ಕೊಟೂರು ಮನ ನೊಂದಿದ್ದರು. 

ಬೆಳಗ್ಗೆ 5 ಗಂಟೆಗೆ ಫಿನಾಯಿಲ್ ಸೇವಿಸಿದ್ದರು, ಬೆಳಗ್ಗೆ 6 ಗಂಟೆಗೆ ಕೋಲಾರ ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈಗಾಗಲೇ ಎರಡು ಬಾರಿ ಆತ್ಮಹತ್ಯೆ ಪ್ರಯತ್ನ ಪಟ್ಟಿರುವುದಾಗಿ  ಏಷಿಯಾನೆಟ್ ಸುವರ್ಣ ನ್ಯೂಸ್ ಗೆ ಚೈತ್ರಾ ತಂದೆ ನಾರಾಯಣಪ್ಪ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಚೈತ್ರಾ.

"