ಬಿಗ್‌ಬಾಸ್‌ ಖ್ಯಾತಿಯ ಚೈತ್ರಾ ಕೊಟೂರು ಬೆಳಗ್ಗೆ ಮದುವೆಯಾಗಿ ಸಂಜೆ ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಘಟನೆ ಕೋಲಾರದಲ್ಲಿ ಭಾನುವಾರ ನಡೆದಿದೆ.

ಕೋಲಾರ: ಬಿಗ್‌ಬಾಸ್‌ ಖ್ಯಾತಿಯ ಚೈತ್ರಾ ಕೊಟೂರು ಬೆಳಗ್ಗೆ ಮದುವೆಯಾಗಿ ಸಂಜೆ ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ಘಟನೆ ಕೋಲಾರದಲ್ಲಿ ಭಾನುವಾರ ನಡೆದಿದೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೊಟ್ಟೂರು! 

ಚೈತ್ರಾ ಕೊಟೂರು ಅವರು ಮಂಡ್ಯ ಮೂಲದ ನಾಗಾರ್ಜುನ ಅವರೊಂದಿಗೆ ಭಾನುವಾರ ಬೆಳಗ್ಗೆ ಬೆಂಗಳೂರು ಬ್ಯಾಟರಾಯನಪುರ ಗಣಪತಿ ದೇವಸ್ಥಾನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟದ್ದರು. ಆದರೆ ನಾಗಾರ್ಜುನ್‌ಗೆ ಈ ಮದುವೆ ಇಷ್ಟವಿರಲಿಲ್ಲ. ಸಂಘಟನೆಗಳ ಜತೆಗೂಡಿ ಬಲವಂತವಾಗಿ ನಾಗಾರ್ಜುನ ಅವರನ್ನು ಕೂಡಿ ಹಾಕಿ ದೇಗುಲದಲ್ಲಿ ಮದುವೆ ನಡೆಸಲಾಗಿದೆ ಎನ್ನಲಾಗಿದೆ.

ಈ ಸಂಬಂಧ ಬೆಂಗಳೂರಿನಿಂದ ಕೋಲಾರದ ಕುರುಬರ ಪೇಟೆಯ ಚೈತ್ರಾ ಮನೆಗೆ ಬಂದು ತರಾಟೆ ತೆಗೆದ ನಾಗಾರ್ಜುನ ಮತ್ತು ಕುಟುಂಬದವರು ನಂತರ ಕೋಲಾರದ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಚೈತ್ರಾ ಮಾತ್ರ ತನಗೆ ನಾಗಾರ್ಜುನ ಇಷ್ಟ, ಅವನ ಜತೆಗೆ ಹೋಗುವೆ ಎಂದು ಹಠ ಹಿಡಿದಿದ್ದಾಳೆ ಎನ್ನಲಾಗಿದೆ. ಚೈತ್ರಾ ಕೊಟೂರು ಕೋಲಾರದವರಾಗಿದ್ದು, ಬಿಗ್‌ಬಾಸ್‌ ಸೀಸನ್‌ 7ರಲ್ಲಿ ಭಾಗವಹಿಸಿದ್ದರು.