ಬಿಗ್​ಬಾಸ್​ ಮನೆಯಲ್ಲಿ ಗರ್ಭಿಣಿಯಾದೆ ಎಂದಿದ್ದ ಅಂಕಿತಾ ಲೋಖಂಡೆ ಹಿಜಾಬ್​ನಲ್ಲಿ! ವಿಡಿಯೋ ವೈರಲ್

ಬಿಗ್​ಬಾಸ್​ ಮನೆಯಲ್ಲಿ ಗರ್ಭಿಣಿಯಾದೆ ಎಂದು ಬೆಡ್​ರೂಮ್​ ವಿಡಿಯೋ ಶೇರ್​ ಮಾಡಿದ್ದ ಅಂಕಿತಾ ಲೋಖಂಡೆ ಹಿಜಾಬ್​ನಲ್ಲಿ! ವಿಡಿಯೋ ವೈರಲ್
 

Bigg Boss fame Ankita Lokhande breaks the internet with hijab in airport video viral

 ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಹಿಂದಿ ಬಿಗ್​ಬಾಸ್​ ಸಕತ್​ ಸುದ್ದಿಯಾಗಿದ್ದು, ಇದರ ಸ್ಪರ್ಧಿಯಾಗಿದ್ದ, ಕಿರುತೆರೆ ನಟಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿಯಿಂದ. ಅಷ್ಟಕ್ಕೂ ಅಂಕಿತಾ ಮತ್ತು ಅವರ ಪತಿ ವಿಕ್ಕಿ ಜೈನ್  ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17ನಿಂದ ಸಕತ್​ ಸುದ್ದಿಯಲ್ಲಿದ್ದರು. ಈ ಸಲದ  ಬಿಗ್ ಬಾಸ್‌  ಉಳಿದ ಸೀಸನ್​ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದರು. ಅದರಲ್ಲಿ  ಹೆಚ್ಚು ಸುದ್ದಿಯಾಗುತ್ತಿರುವುದು ಈ ಜೋಡಿ. ಇದಕ್ಕೆ  ಕಾರಣ ಇವರಿಬ್ಬರ ಕಚ್ಚಾಟ.   ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾಗ್ರಾಮ್​ ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡಿ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದರು.  ಇವೆಲ್ಲಾ ಡ್ರಾಮಾಗಳ ನಡುವೆಯೇ ಅಂಕಿತಾ ತಾವು ಗರ್ಭಿಣಿ ಎಂದಿದ್ದರು. ಅದರ ವಿಡಿಯೋ ವೈರಲ್​ ಆಗಿತ್ತು.  ತಮಗೆ  ಹುಳಿ ತಿನಬೇಕೆಂದು ಅನಿಸುತ್ತಿದೆ, ತಮಗೆ  ಪಿರಿಯಡ್ಸ್ ಮಿಸ್ ಆಗಿದೆ ಎಂದು ಹೇಳಿದ್ದರು. ಕೊನೆಗೆ ಇದು ಪ್ರಚಾರದ ಗಿಮಿಕ್​ ಎನ್ನುವುದು ತಿಳಿದಿತ್ತು.

ಇದೀಗ ಮತ್ತೊಂದು ವಿಡಿಯೋ ಶೇರ್​ ಮಾಡಿರುವ ನಟಿ, ಇನ್ನಷ್ಟು ಕುತೂಹಲ ಕೆರಳಿಸಿದ್ದಾರೆ. ಹಿಜಾಬ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಹಿಜಾಬ್​ ಧರಿಸಿ ಬಂದ ಅವರು, ಆದಾಬ್​ ಹೇಳಿದ್ದಾರೆ. ಇದನ್ನು ನೋಡುತ್ತಿದ್ದಂತೆಯೇ ನಟಿ ಮತಾಂತರವಾದ್ರಾ ಎಂದು ಹಲವರು ಪ್ರಶ್ನಿಸುತ್ತಿದ್ದರೆ, ಹಿಜಾಬ್​ನಲ್ಲಿ ತುಂಬಾ ಸುಂದರವಾಗಿ ಕಾಣಿಸುತ್ತಿರುವಿರಿ ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ. ಸೀರೆ ತೊಟ್ಟರೂ ದೇಹ ಪ್ರದರ್ಶನದಿಂದಲೇ ಫೇಮಸ್​ ಆಗಿರೋ ಅಂಕಿತಾ, ಇದೀಗ ಫುಲ್​ ಡ್ರೆಸ್​ ಧರಿಸಿದ್ದು ನೋಡಿ ಹಲವರು ಶಾಕ್​ ಆಗಿದ್ದಂತೂ ದಿಟ. ಮತ್ತೆ ಕೆಲವರು, ಡ್ರಾಮಾ ಕ್ವೀನ್​, ಪ್ರಚಾರಕ್ಕಾಗಿ ಏನು ಬೇಕಾದರೂ ಮಾಡುತ್ತಾಳೆ ಎಂದಿದ್ದಾರೆ.

ಬಿಗ್​ಬಾಸ್​ ಮನೆಯಲ್ಲೇ ಗರ್ಭಿಣಿಯಾದೆ ಎಂದಿದ್ದ ನಟಿಯ ಪರೀಕ್ಷಾ ರಿಪೋರ್ಟ್​ ಕೊನೆಗೂ ಬಂತು: ಫ್ಯಾನ್ಸ್​ ಫುಲ್​ ಖುಷ್​!

ಇದಕ್ಕೆ ಕಾರಣ, ಕೆಲ ದಿನಗಳ ಹಿಂದೆ ಅಂಕಿತಾ ಲೋಖಂಡೆ, ಬೆಡ್ ರೂಮ್ (bedroom) ವಿಡಿಯೋ ಒಂದನ್ನು ಶೇರ್​ ಮಾಡಿದ್ದರು.  ರಾತ್ರಿ ಅಂಕಿತಾ, ಪತಿ ಜೊತೆ ಮಾಡುವ ಕೆಲಸ ನೋಡಿ ಫ್ಯಾನ್ಸ್ ದಂಗಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋಕ್ಕೆ ಸಾಕಷ್ಟು ಕಮೆಂಟ್ ಕೂಡ ಬಂದಿದ್ದವು. ಸಂಸ್ಕಾರಿ ಸೊಸೆ ಎಂದೂ ಕರೆಸಿಕೊಳ್ಳುವ ಅಂಕಿತಾ ಲೋಖಂಡೆ ಈ ವಿಡಿಯೋದಲ್ಲಿ  ರಾತ್ರಿ ತನ್ನ ಗಂಡ ವಿಕ್ಕಿ ಕಾಲುಗಳನ್ನು ಮಸಾಜ್ ಮಾಡಿದ್ದರು. ವಿಕ್ಕಿ ಜೈನ್ ಕಾಲು ಮಸಾಜ್ ಮಾಡುವುದು ಮಾತ್ರವಲ್ಲ ವಿಕ್ಕಿ ಪಾದಗಳಿಗೆ ಅಂಕಿತಾ ಮಸಾಜ್ ಮಾಡಿದ್ದರು. ಪ್ರತಿ ದಿನ ರಾತ್ರಿ ಅಂಕಿತಾ ಈ ಕೆಲಸವನ್ನು ಮಾಡುವುದಾಗಿ ಹೇಳಿದ್ದರು. 

ಇನ್ನು ಅಂಕಿತಾ ಮತ್ತು ವಿಕ್ಕಿ ದಂಪತಿ ಕುರಿತು ಹೇಳುವುದಾದರೆ,  ಇವರು ಡಿಸೆಂಬರ್ 14, 2021 ರಂದು ಮುಂಬೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ನಂತ್ರ ಬಿಗ್ ಬಾಸ್ 17 ರಲ್ಲಿ ಸ್ಪರ್ಧಿಗಳಾಗಿ ಕಾಣಿಸಿಕೊಂಡಿದ್ದರು. ವಿಕ್ಕಿ ಜೈನ್ 130 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ. ಅಂಕಿತಾ ಲೋಖಂಡೆ ಸುಮಾರು 30 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.  ವಿಕ್ಕಿ ಜೈನ್ ಒಬ್ಬ ಬ್ಯುಸಿನೆಸ್ ಮೆನ್. ಎಂಬಿಎ ಮುಗಿದ ನಂತ್ರ ಕುಟುಂಬದ ವ್ಯವಹಾರ ಮುಂದುವರೆಸಿದ್ದಾರೆ. ಮಹಾವೀರ್ ಇನ್‌ಸ್ಪೈರ್‌ನ ವ್ಯವಸ್ಥಾಪಕ ನಿರ್ದೇಶಕರಾಗಿರುವ ವಿಕ್ಕಿ, ಲಾಜಿಸ್ಟಿಕ್ಸ್, ರಿಯಲ್ ಎಸ್ಟೇಟ್, ವಜ್ರಗಳು, ವಿದ್ಯುತ್ ಉತ್ಪಾದನೆ, ಕಲ್ಲಿದ್ದಲು ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿದೆ.  ಅಂಕಿತಾ, ಅನೇಕ ಸೀರಿಯಲ್ ಹಾಗೂ ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಿರುತ್ತಾರೆ. ಅಂಕಿತಾ, ನಟ ಸುಶಾಂತ್ ಸಿಂಗ್ ರಜಪೂತ್ ಜೊತೆ ಸಂಬಂಧದಲ್ಲಿದ್ದಾಗ ಹೆಚ್ಚು ಚರ್ಚೆಯಲ್ಲಿದ್ದರು. ಸುಶಾಂತ್ ನಿಧನದ ನಂತರ ಅನೇಕ ಬಾರಿ ಅಂಕಿತಾ, ಸುಶಾಂತ್ ಬಗ್ಗೆ ಮಾತನಾಡಿದ್ದಾರೆ. 

ಅಂಕಿತಾ ಲೋಖಂಡೆ ಬೆಡ್ ರೂಮ್ ವಿಡಿಯೋ ವೈರಲ್, ರಾತ್ರಿ ಪತಿಗೆ ಮಾಡ್ತಾರೆ ಈ ಸೇವೆ!

 

Latest Videos
Follow Us:
Download App:
  • android
  • ios