ಬಿಗ್ ಬಾಸ್ ಖ್ಯಾತಿಯ ಅಬ್ದು ರೋಝಿಕ್ ಬಿಗ್ ಬ್ರದರ್ ರಿಯಾಲಿಟಿ ಶೋಗೆ ಎಂಟ್ರಿ ಕೊಡುತ್ತಿದ್ದಾರೆ. ಈ ಬಗ್ಗೆ ಸಲ್ಮಾನ್ ಖಾನ್ ತಮಾಷೆ ಮಾಡಿದ್ದಾರೆ.
ಹಿಂದಿ ಬಿಗ್ ಬಾಸ್ ಸೀಸನ್ 16ಕ್ಕೆ ಗ್ರ್ಯಾಂಡ್ ತೆರೆ ಬಿದ್ದಿದೆ. ಭಾನುವಾರ ನಡೆದ ಫಿನಾಲೆಯಲ್ಲಿ ಯಾರು ವಿನ್ ಆಗ್ತಾರೆ ಎನ್ನುವ ಕುತೂಹಲ ಹೆಚ್ಚಾಗಿತ್ತು. ಎಂಸಿ ಸ್ಟಾನ್ ವಿನ್ ಆಗುವ ಮೂಲಕ ಬಿಗ್ ಬಾಸ್ ಸೀಸನ್ 16 ಟ್ರೋಫಿ ಎತ್ತಿಹಿಡಿದರು. ಈ ಬಾರಿಯ ಹಿಂದಿ ಬಿಗ್ ಬಾಸ್ ನಲ್ಲಿ ಅತೀ ಹೆಚ್ಚು ಗಮನ ಸೆಳೆದ ಸ್ಫರ್ಧಿ ಅಬ್ಧು ರೋಝಿಕ್. ಹಿಂದಿ ಬಿಗ್ ಬಾಸ್ ನಲ್ಲಿ ಭಾಗಿಯಾಗಿದ್ದ ಸ್ಪರ್ಧಿಗಳಲ್ಲಿ ಅತ್ಯಂತ ಕಿರಿಯ ಸ್ಪರ್ಧಿ ಅಬ್ದು ಆಗಿದ್ದರು. ತಜಕಿಸ್ತಾನ ಮೂಲದ ಗಾಯಕ ಅಬ್ದು ಬಿಗ್ ಬಾಸ್ ಮೂಲಕ ಎಲ್ಲರ ಹೃದಯ ಗೆದ್ದಿದ್ದರು. ಸಿಕ್ಕಾಪಟ್ಟೆ ಬ್ಯುಸಿಯಾಗಿರುವ ಅಬ್ದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಆದರೂ ಬಿಗ್ ಬಾಸ್ ಫಿನಾಲೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಅಬ್ದು ಬಿಗ್ ಬ್ರದರ್ಗೆ ಹೋಗುವ ಬಗ್ಗೆ ಬಹಿರಂಗ ಪಡಿಸಿದ್ದಾರೆ.
ಅಬ್ದು ಬಿಗ್ ಬಾಸ್ ಮನೆಯಿಂದ ಹೊರಬಂದ ಬಳಿಕ ಬಿಗ್ ಬ್ರದರ್ ರಿಯಾಲಿಟಿ ಶೋನಲ್ಲಿ ಭಾಗಿಯಾಗ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಈಗ ಅಬ್ದು ಅವರೇ ಬಹಿರಂಗ ಪಡಿಸಿದ್ದಾರೆ. ಬಿಗ್ ಬ್ರದರ್ ರಿಯಾಲಿಟಿ ಶೋಗೆ ಹೋಗುವುದು ಹೌದು ಎಂದು ಹೇಳಿದ್ದಾರೆ. ಈ ಬಗ್ಗೆ ಸಲ್ಮಾನ್ ಖಾನ್ ಪ್ರಶ್ನೆ ಮಾಡಿದ್ದಾರೆ. 'ಬಿಗ್ ಬ್ರದರ್ ಗೆ ಹೋಗ್ತೀರಾ ಎನ್ನುವ ಬಗ್ಗೆ ವದಂತಿ ಇದೆ ನಿಜವೇ?' ಎಂದು ಸಲ್ಮಾನ್ ಖಾನ್ ಕೇಳಿದರು. ಇದಕ್ಕೆ ಉತ್ತರಿಸಿದ ಗಾಯಕ ಅಬ್ದು 'ಹೌದು ಸರ್' ಎಂದು ಹೇಳಿದ್ದಾರೆ. ಅಬ್ದು ಮಾತಿನಿಂದ ರೋಮಾಂಚನಗೊಂಡ ಸಲ್ಮಾನ್ ಖಾನ್ಅಬ್ದನನ್ನು ತಬ್ಬಿಕೊಂಡರು. ಬಳಿಕ ಅಬ್ಧು ಕಾಲೆಳೆದು ತಮಾಷೆ ಮಾಡಿದರು.
ಅಲ್ಲಿ ನನ್ನಂತ ನಿರೂಪಕನೇ ಇರುತ್ತಾರಾ?' ಎಂದು ಕೇಳಿದರು. ಬಳಿಕ ನೀವು ಅಲ್ಲಿ NRI ಸ್ನೇಹಿತರನ್ನು ಮಾಡಿಕೊಳ್ಳುತ್ತೀರಾ. ಭಾರತೀಯರನ್ನು ಭಾರತೀಯರನ್ನು ಮರೆತುಬಿಡುತ್ತೀರಿ' ಎಂದು ಹೇಳಿದರು. ಇದಕ್ಕೆ ಅಬ್ಧು, 'ಇಲ್ಲ ಸರ್. ನಾನು ಎಂದಿಗೂ ಮರೆಯುವುದಿಲ್ಲ' ಎಂದು ಹೇಳಿದರು. 'ತಜಕಿಸ್ತಾನ್ ಮತ್ತು ಭಾರತವನ್ನು ಹೆಮ್ಮೆ ಪಡುವಂತೆ ಮಾಡುತ್ತೇನೆ ಎಂದು ಹೇಳಿದರು.
ಬಿಗ್ ಬಾಸ್ ಆಯ್ತು ಈಗ UK ಬಿಗ್ ಬ್ರದರ್‌ನಲ್ಲಿ ಛೋಟಾ ಅಬ್ದು ರೋಝಿಕ್; ಇಂಟ್ರಸ್ಟಿಂಗ್ ಮಾಹಿತಿ ಬಹಿರಂಗ
ಅಬ್ದು ಅವರು ಪ್ರಸಿದ್ಧ ಬಿಗ್ ಬ್ರದರ್ ಶೋಗೆ ಎಂಟ್ರಿ ಕೊಡುತ್ತಿದ್ದಾರೆ. ಅತೀ ದೊಡ್ಡ ಅಂತಾರಾಷ್ಟ್ರೀಯ ಪ್ರಾಜೆಕ್ಟ್ ಗೆ ಅಬ್ದು ಸಹಿ ಮಾಡಿರುವುದು ಅವರ ಸ್ನೇಹಿತರಿಗೆ ಖುಷಿಯ ವಿಚಾರವಾಗಿದೆ. ಅಂದಹಾಗೆ ಬಿಗ್ ಬ್ರದರ್ ರಿಯಾಲಿಟಿ ಶೋ 5 ವರ್ಷಗಳ ಬಳಿಕ ಬರ್ತಿದೆ. ಹಾಗಾಗಿ ಈ ಶೋ ಮೇಲೆ ಬಾರಿ ನಿರೀಕ್ಷೆ ಸೃಷ್ಟಿಯಾಗಿದೆ. ಇದೀಗ ಬಿಗ್ ಬಾಸ್ ಹಿಂದಿ ಖ್ಯಾತಿಯ ಅಬ್ದು ಬಿಗ್ ಬ್ರದರ್ ಶೋ ಒಪ್ಪಿಕೊಂಡಿರುವುದು ಭಾರತೀಯರಿಗೂ ವಿಶೇಷವಾಗಿದೆ. ಜೂನ್ ಅಥವಾ ಜುಲೈನಲ್ಲಿ ಪ್ರಾರಂಭವಾಗುತ್ತಿರುವ ಶೋನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಅಬ್ದು ತನ್ನ ಹಾಡುಗಳ ಮೂಲಕವೇ ಖ್ಯಾತಗಳಿಸಿದವರು. ಸೋಶಿಲಯ್ ಮೀಡಿಯಾ ಸೆನ್ಸೇಷನ್ ಅಬ್ದು ಇನ್ಸ್ಟಾಗ್ರಾಮ್ ನಲ್ಲಿ 7 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಬಿಗ್ ಬಾಸ್ ನಲ್ಲಿ ಅವರು ಶಿವ ಠಾಕರೆ, ಸಾಜಿದ್ ಖಾನ್, ಎಸ್ ಸ್ಟಾನ್, ಸುಂಬುಲ್ ತೌಕೀರ್ ಮತ್ತು ನಿಮೃತ್ ಕೌರ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಅಬ್ದು ತನ್ನ ಕಾಮಿಡಿ ಮೂಲಕವೂ ಪ್ರೇಕ್ಷಕರನ್ನು ಸೆಳೆದಿದ್ದರು.
Bigg Boss 16; ಹಿಂದಿ ಬಿಗ್ ಬಾಸ್ ಗೆದ್ದ ಎಂಸಿ ಸ್ಟಾನ್ ಯಾರು, ಸಿಕ್ಕ ಬಹುಮಾನದ ಮೊತ್ತವೆಷ್ಟು?
ಅಂದಹಾಗೆ ಅಬ್ದು ಹಿಂದಿ ಸಿನಿಮಾದಲ್ಲೂ ನಟಿಸಿದ್ದಾರೆ. ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಳಿಕ ಅಬ್ದು ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಿಗ್ ಬ್ರದರ್ ಶೋ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಲು ರೆಡಿಯಾಗಿದ್ದಾರೆ.
