ಬಿಗ್‌ಬಾಸ್ ಸ್ಪರ್ಧಿಗಳ ರೊಮಾನ್ಸ್: ನಮ್ರತಾ ಗೌಡ- ಕಿಶನ್ ಪ್ರೇಮ ಕಾವ್ಯಕ್ಕೆ ಉಫ್ ಅಂತಿರೋ ಫ್ಯಾನ್ಸ್
ಬಿಗ್‌ಬಾಸ್ ಸ್ಪರ್ಧಿಗಳಾಗಿದ್ದ ನಮ್ರತಾ ಗೌಡ ಮತ್ತು ಕಿಶನ್ ಬಿಳಗಲಿ ಮತ್ತೊಮ್ಮೆ ಪ್ರೇಮದ ಕಿಚ್ಚು ಹೊತ್ತಿಸಿದ್ದಾರೆ. ಅವರ ಡಾನ್ಸ್ ವಿಡಿಯೋ ವೈರಲ್ ಆಗಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿ ನಮ್ರತಾ ಗೌಡ ಮತ್ತು ಬಿಗ್‌ಬಾಸ್ ಕನ್ನಡ ಸೀಸನ್ 7ರ ಕಿಶನ್ ಬಿಳಗಲಿ ಇದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸುತ್ತಿದ್ದಾರೆ. ಇದಾಗಲೇ ಇಬ್ಬರೂ ಸೇರಿ ಕೆಲವು ಡ್ಯೂಯೆಟ್ ಹಾಡಿದ್ದು, ಅದಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇವರಿಬ್ಬರು ರವಿಚಂದ್ರನ್ ನಟನೆಯ ಶಾಂತಿಕ್ರಾಂತಿ ಸಿನಿಮಾದ "ಮಧ್ಯರಾತ್ರಿಲಿ ಹೈವೆ ರಸ್ತೇಲಿ" ಹಾಡಿಗೆ ನರ್ತಿಸಿದ್ದರು. ಕೊನೆಗೆ ಪರವಶನಾದೆನು ಹಾಡಿಗೆ ಹೆಜ್ಜೆ ಹಾಕಿ ಅಭಿಮಾನಿಗಳ ಹೃದಯ ಗೆದ್ದಿದ್ದರು. ಇದೀಗ ಈ ಜೋಡಿ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಸಪ್ತಸಾಗರದಾಚೆ ಎಲ್ಲೋ ಹಾಡಿಗೆ ಹೊಸ ಭಾಷ್ಯವನ್ನೇ ಬರೆದಿದ್ದಾರೆ. ಅಷ್ಟಕ್ಕೂ ಈ ಚಿತ್ರದಲ್ಲಿರುವ ಹಾಡುಗಳೆಲ್ಲವೂ ಸಾಫ್ಟ್ ಹಾಡುಗಳು. ಕೇಳಿದರೆ ಇನ್ನಷ್ಟು ಮತ್ತಷ್ಟು ಕೇಳುವ ಆಸೆ ಇರುವ ಹಾಡುಗಳು. ಹೃದಯವನ್ನು ಸ್ಪರ್ಶಿಸುವಂಥ ಹಾಡುಗಳೇ ಇವೆ. ಆದರೆ ಇದೀಗ ಇದೇ ಹಾಡಿಗೆ ಕಿಶನ್ ಮತ್ತು ನಮ್ರತಾ ಹೊಸ ಸ್ಪರ್ಷ ಕೊಟ್ಟು ಡಾನ್ಸ್ ಮಾಡಿದ್ದಾರೆ.
ನೃತ್ಯ ಪಟು ಕಿಶನ್ ಅವರ ಪ್ರಯೋಗ ಇದು ಎಂದು ಬೇರೆ ಹೇಳಬೇಕಾಗಿಲ್ಲ. ಇವರ ಡಾನ್ಸ್ಗೆ ನಮ್ರತಾ ಗೌಡ ಮತ್ತೊಮ್ಮೆ ಸಾಥ್ ಕೊಟ್ಟಿದ್ದಾರೆ. ಸಪ್ತಸಾಗರದಾಚೆ ಹಾಡಿಗೆ ಹೊಸ ಸ್ಪರ್ಶ ನೀಡುತ್ತಲೇ ಡಾನ್ಸ್ ಮೂಲಕ ಎಲ್ಲರನ್ನೂ ರಂಜಿಸಿದೆ ಈ ಜೋಡಿ. ಅಷ್ಟಕ್ಕೂ ಈ ಹಾಡಿನಲ್ಲಿ ಸಿನಿಮಾ ಸಾಂಗ್ ಜೊತೆ ಶಾಸ್ತ್ರೀಯ ಸಂಗೀತ ಟಚ್ ಕೂಡ ನೀಡಲಾಗಿದೆ. ಕಥಕ್ ಮಿಶ್ರಣ ಮಾಡಿ ಈ ನೃತ್ಯ ಮಾಡಲಾಗಿದೆ. ಡಾನ್ಸ್ನಲ್ಲಿಯೂ ಇದನ್ನು ನೋಡಬಹುದು. ಇಬ್ಬರೂ ಪ್ರೇಮದ ಕಿಚ್ಚು ಹೊತ್ತಿಸುವ ಮೂಲಕ ಮತ್ತೊಮ್ಮೆ ಭೇಷ್ ಎನಿಸಿಕೊಂಡಿದ್ದಾರೆ.
ನಂಬರ್ ಎಂದ್ರೆ ನಾನು, ನಾನೆಂದ್ರೆ ನಂಬರ್ ಎನ್ನುತ್ತಲೇ ಆರ್ಯವರ್ಧನ್ ಗುರೂಜಿ ಭರ್ಜರಿ ಸ್ಟೆಪ್! ತೀರ್ಪುಗಾರರೇ ಶಾಕ್
ಅಂದಹಾಗೆ ಕಿಶನ್ ಅವರು ಮೂಲತಃ ಡಾನ್ಸರ್ ಚಿಕ್ಕಮಗಳೂರಿನ ಇವರು ಬಿಗ್‌ಬಾಸ್ 7ರಿಂದ ಸಕತ್ ಫೇಮಸ್ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್. ಡಾನ್ಸ್ ಮಾತ್ರವಲ್ಲದೇ ಬಿರಿಯಾನಿ ಪ್ಯಾಲೇಸ್ ಫ್ರಾಂಚೈಸಿ ಕೂಡ ಇವರು ಹೊಂದಿದ್ದು, ಬೆಂಗಳೂರಿನಲ್ಲಿ ಇವರ ಔಟ್ಲೆಟ್ಗಳಿವೆ. ಇದಕ್ಕೆ ಸಾಕ್ಷಿ ಎಂಬಂತೆ ಖುದ್ದು ಇವರೇ ಬಿರಿಯಾನಿ ತಯಾರಿಸುತ್ತಿದ್ದ ವಿಡಿಯೋ ಒಂದು ವೈಲ್ ಆಗಿತ್ತು.
ಇನ್ನು ನಮ್ರತಾ ಗೌಡ ಅವರ ಕುರಿತು ಹೇಳುವುದೇ ಬೇಡ. ಬಿಗ್‌ಬಾಸ್ 10 ಮೂಲಕ ಸಕತ್ ಫೇಮಸ್ ಆಗಿರುವವರು ಇವರು. ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಆಗಿರುವ ನಮ್ರತಾ 1993 ಏಪ್ರಿಲ್ 15ರಲ್ಲಿ ಬೆಂಗಳೂರಿನಲ್ಲಿ ಜನಿಸಿದವರು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಪದಾರ್ಪಣೆ ಮಾಡಿದ ನಮ್ರತಾ ಅದಾದ ಬಳಿಕ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ 'ಹಿಮಾ' ಪಾತ್ರದ ಮೂಲಕ ಗಮನ ಸೆಳೆದರು. ನಂತರ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದ ಮೂಲಕ ಗಮನ ಸೆಳೆದರು. ಈಗ ಎಲ್ಲಕ್ಕಿಂತಲೂ ಹೆಚ್ಚು ಖ್ಯಾತಿ ತಂದುಕೊಟ್ಟಿರುವುದು ಬಿಗ್‌ಬಾಸ್ 10. ಇಲ್ಲಿ ಇವರು ಮತ್ತು ಸ್ನೇಹಿತ್ ಸ್ನೇಹ ಸಾಕಷ್ಟು ಸದ್ದು ಕೂಡ ಮಾಡಿತ್ತು.
ನೀ ಸನಿಹಕೆ ಬಂದರೆ... ಎನ್ನುತ್ತಲೇ ವೇದಿಕೆ ಮೇಲೆ ಪ್ರೇಮದ ಕಿಚ್ಚು ಹೊತ್ತಿಸಿದ ಸೀರಿಯಲ್ ಜೋಡಿ ಪೂರ್ಣಿ-ಜೀವಾ