ಜೈಲು ಸೇರಿದ ಬಿಗ್ಬಾಸ್ ಸ್ಪರ್ಧಿ ತನಿಷಾ: ಮನೆಯವರ ಬಳಿ ಕ್ಷಮೆ ಕೋರಿ ಕಣ್ಣೀರು- ವಿಡಿಯೋ ವೈರಲ್
ಬಿಗ್ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ಅವರು ಜೈಲು ಸೇರಿದ್ದು, ಅಲ್ಲಿಂದಲೇ ಕಣ್ಣೀರು ಹಾಕಿರುವ ವಿಡಿಯೋ ವೈರಲ್ ಆಗಿದೆ.

ಬಿಗ್ಬಾಸ್ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ಅವರು ಹುಲಿಯುಗುರು ಪ್ರಕರಣದಲ್ಲಿ ಜೈಲು ಸೇರಿ ಕೊನೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಿಗ್ಬಾಸ್ ಮನೆಯಲ್ಲಿ ಸೇಫ್ ಆಗಿದ್ದಾರೆ. ಅನಿವಾರ್ಯ ಕಾರಣದಿಂದ ಬಿಗ್ಬಾಸ್ನಿಂದ ಹೊರ ಹೋಗುವುದಾಗಿ ಕಣ್ಣೀರು ಹಾಕಿ ಹೈಡ್ರಾಮಾ ಮಾಡಿದ್ದ ಸಂತೋಷ್ ಸದ್ಯ ಅದರ ಚಕಾರ ಎತ್ತದೇ ಈಗ ಸ್ಪರ್ಧೆ ಮುಂದುವರೆಸಿದ್ದಾರೆ. ಅದರ ಬೆನ್ನಲ್ಲೇ ಇನ್ನೋರ್ವ ಸ್ಪರ್ಧಿ ತನಿಷಾ ಕುಪ್ಪಂಡ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇವರ ವಿರುದ್ಧ ಜಾತಿ ನಿಂದನೆ ಕೇಸ್ ದಾಖಲಾಗಿದೆ. ಇವರು ಮಾತಿನ ಭರದಲ್ಲಿ ಜಾತಿ ನಿಂದನೆ ಮಾಡಿರುವ ಆರೋಪ ಇದೆ. ಸದ್ಯ ಬೆಂಗಳೂರಿನ ಮಾಗಡಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಪ್ರಕರಣದ ಕುರಿತಂತೆ ರಾಮನಗರ ಎಸ್ಪಿ ಅವರು ಮಾಹಿತಿ ನೀಡಿದ್ದು, ‘ತನಿಷಾ ಅವರ ಮಾತನಾಡಿದ್ದಾರೆ ಎನ್ನಲಾದ ವಿಡಿಯೋವನ್ನು ಎಫ್.ಎಸ್.ಎಲ್ (FSL)ಗೆ ಕಳುಹಿಸಲಾಗಿದೆ. ವರದಿ ಬಂದ ನಂತರ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ. ಮಾಗಡಿ ಡಿವೈಎಸ್‍್ಪಿ ಪ್ರವೀಣ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಆದರೆ ಇದರ ನಡುವೆಯೇ ಬಿಗ್ಬಾಸ್ ಮನೆಯಲ್ಲಿ ಇನ್ನೊಂದು ಹೈಡ್ರಾಮಾ ನಡೆದಿದೆ. ಜಾತಿ ನಿಂದನೆ ಕೇಸ್ನಲ್ಲಿ ತನಿಷಾ ಅವರಿಗೆ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ ಸದ್ಯ ಬಿಗ್ಬಾಸ್ ಮನೆಯಲ್ಲಿ ತನಿಷಾ ಜೈಲು ಸೇರಿದ್ದಾರೆ! ಹೌದು. ಇದರ ಪ್ರೊಮೋ ರಿಲೀಸ್ ಆಗಿದೆ. ತನಿಷಾ ಅವರು ಈ ವಾರ ಕಳಪೆ ಆಟವಾಡಿದ್ದಾರೆ ಎನ್ನುವ ಕಾರಣಕ್ಕೆ ಎಲ್ಲ ಸ್ಪರ್ಧಿಗಳು ತನಿಷಾ ಅವರ ಹೆಸರನ್ನು ಸೂಚಿಸಿದ್ದಾರೆ. ಪ್ರತಿ ವಾರವೂ ಇದು ಮಾಮೂಲು. ಒಬ್ಬರ ಆಟವನ್ನು ಕಳಪೆ ಎಂದು ಹೇಳಲಾಗುತ್ತದೆ. ಇದೀಗ ಈ ವಾರ ತನಿಷಾ ಅವರ ಹೆಸರು ಕೇಳಿಬಂದಿದೆ.
ಏನ್ ನಾಟ್ಕ ಗುರೂ... ಸುದೀಪ್ಗಿಂತ್ಲೂ ಬೆಸ್ಟ್ ಆ್ಯಕ್ಟ್ ಮಾಡ್ತಿರಾ ಬಿಡಿ... ವರ್ತೂರ್ ಸಂತೋಷ್ ಸಕತ್ ಟ್ರೋಲ್!
ತಮ್ಮ ಹೆಸರನ್ನು ಎಲ್ಲರೂ ಹೇಳುತ್ತಿದ್ದಂತೆಯೇ ಕಣ್ಣೀರು ಸುರಿಸಿದ ತನಿಷಾ ಅವರು, ಬಿಗ್ಬಾಸ್ ಮನೆಯಲ್ಲಿ ಇರುವ ಜೈಲಿಗೆ ಸೇರಿದ್ದಾರೆ. ಮನೆಯಿಂದ ಬಂದ ಪತ್ರಗಳನ್ನು ಪಡೆಯುವ ಟಾಸ್ಕ್ನಲ್ಲಿ ಕೂಡ ಅವರು ವಿಫಲರಾಗಿದ್ದರು. ಇವೆಲ್ಲದ್ದರಿಂದ ಪ್ರತಿಯೊಂದು ಸದಸ್ಯರೂ ತನಿಷಾ ಹೆಸರು ಹೇಳಿದ್ದರಿಂದ ಅವರು ಜೈಲು ಪಾಲಾಗಿದ್ದಾರೆ. ಕೈದಿಗೆ ನೀಡುವ ಡ್ರೆಸ್ ಅವರಿಗೆ ನೀಡಲಾಗಿದ್ದು, ಇದೇ ವೇಳೆ ಕಣ್ಣೀರು ಹಾಕಿದ್ದಾರೆ ತಮಿಷಾ. ಈ ಸಂದರ್ಭದಲ್ಲಿ ತಮ್ಮ ಮನೆಯವರ ಬಳಿ ಕ್ಷಮೆ ಯಾಚನೆ ಮಾಡುತ್ತಿದ್ದಾರೆ. ಈ ವಾರ ಕಳಪೆ ಪ್ರದರ್ಶನದಿಂದ ಜೈಲು ಸೇರುವಂತಾಗಿದೆ. ಕ್ಷಮಿಸಿ ಎಂದು ಮನೆಯವರನ್ನು ನೆನೆದು ಅಳುವುದನ್ನು ನೋಡಬಹುದು.
ಅಂದಹಾಗೆ ನಟಿ ತನಿಷಾ ಕುಪ್ಪಂಡ ಅವರ ವಿರುದ್ಧ ಅಖಿಲ ಕರ್ನಾಟಕ ಬೋವಿ ಸಮಾಜದ ರಾಜ್ಯಾಧ್ಯಕ್ಷೆ ಪಿ ಪದ್ಮಾ ನವೆಂಬರ್ 11ರಂದು ದೂರು ದಾಖಲಿಸಿದ್ದಾರೆ. ಇದರ ಆಧಾರದ ಮೇಲೆ ಕುಂಬಳಗೋಡು ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಾಗಲೇ ಪೊಲೀಸರು ಬಿಗ್ ಬಾಸ್ ಮನೆಗೆ ತೆರಳಿ, ನಟಿಯ ವಿಚಾರಣೆ ನಡೆಸಿದ್ದಾರೆ. ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದಾರೆ.