Asianet Suvarna News

ದಿವ್ಯಾ ಉರುಡುಗ ಹಿಂದೆ 5 ಲಕ್ಷ ಫ್ಯಾನ್ಸ್! ಬಿಗ್‌ಬಾಸ್‌ ಎರಡನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ ಆಟದ ನಿರೀಕ್ಷೆ

ಬಿಗ್‌ಬಾಸ್‌ ಸೀಸನ್ 8ನ ಸೆಕೆಂಡ್ ಇನ್ನಿಂಗ್ಸ್ ಬುಧವಾರದಿಂದ ಶುರುವಾಗ್ತಿದೆ. ದಿವ್ಯಾಗೆ 5 ಲಕ್ಷ ಅಭಿಮಾನಿಗಳು ಸಿಕ್ಕಿದ್ದಾರೆ. ಇದೆಲ್ಲ ಹೇಗೆ ಸಾಧ್ಯವಾಯ್ತು ಅಂತೀರಾ!

 

Bigg boss contestant gets 5 lakh fans on social media expected great performance
Author
Bengaluru, First Published Jun 22, 2021, 4:32 PM IST
  • Facebook
  • Twitter
  • Whatsapp

ಇನ್ನೊಂದು ದಿನ ಕಳೆದರೆ ಮತ್ತೆ ಬಿಗ್‌ಬಾಸ್‌ ಹವಾ!

ಕಳೆದ ಕೆಲವು ದಿನಗಳ ಹಿಂದೆ ಬಿಗ್‌ಬಾಸ್‌ ಸೀಸನ್‌ 8 ಅರ್ಧಕ್ಕೆ ನಿಂತಿತ್ತು. ಕಾರಣ ಕೋವಿಡ್‌ಲಾಕ್‌ಡೌನ್‌. ಬಯೋಬಬಲ್‌ ಥರದ ಸ್ಥಿತಿ ನಿರ್ಮಾಣ ಮಾಡಿ ಒಂದು ಲೆವೆಲ್‌ವರೆಗೆ ಶೋವನ್ನು ತೆಗೆದುಕೊಂಡು ಹೋದರೂ ತೀವ್ರಗತಿಯಲ್ಲಿಸೋಂಕು ಹಬ್ಬಿದಾಗ ಶೋ ನಿಲ್ಲಿಸುವುದು ಅನಿವಾರ್ಯವಾಯಿತು. ಜೊತೆಗೆ ಬಿಗ್‌ಬಾಸ್‌ ಸಿಬ್ಬಂದಿಗಳಿಗೇ ಕೊರೋನಾ ತಗುಲಿತು ಎಂಬ ಮಾತೂ ಕೇಳಿ ಬಂತು. ಆದರೆ ಸಖತ್‌ ಸ್ಪೋರ್ಟಿವ್ ಆಗಿ ಆಡುತ್ತಿದ್ದ ದಿವ್ಯಾ ಉರುಡುಗ ಇದಕ್ಕೂ ಮುನ್ನವೇ ಖಾಯಿಲೆಗೆ ತುತ್ತಾಗಿ ಹೊರಬಂದರು. ಇಷ್ಟರಲ್ಲಾಗದೇ ಆಟದಿಂದ, ನೋಟದಿಂದ ಸಾಕಷ್ಟು ಜನರ ಮನಸ್ಸು ಗೆದ್ದಿದ್ದರು. ಆಟ ಮುಗಿಯೋ ಮೊದಲೇ ಇವರು ಹೊರಹೋಗಿದ್ದು ಇವರಿಷ್ಟದ ಅರವಿಂದ್ ಸೇರಿದಂತೆ ಮನೆಯ ಹಲವು ಮಂದಿಗೆ ಬೇಜಾರು ತಂದಿತ್ತು. ಅನಾರೋಗ್ಯದಿಂದ ಹೊರಹೋಗಿ ಆಸ್ಪತ್ರೆಯಲ್ಲಿದ್ದ ದಿವ್ಯಾಗೆ ಆಮೇಲೆ ಬಿಗ್ ಬಾಸ್ ಮನೆಯೊಳಗೆ ಬರುವುದಕ್ಕಾಗಿರಲಿಲ್ಲ. ಆದರೆ ಬಿಗ್‌ಬಾಸ್‌ ಟೀಮ್‌ಗೂ, ಒಳಗಿರುವವರಿಗೂ ಅವರನ್ನು ಮತ್ತೆ ಮನೆಯೊಳಗೆ ಸೇರಿಸುವ ಆಸಕ್ತಿ ಇದ್ದೇ ಇತ್ತು. ಇದಾದ ಕೆಲವೇ ದಿನಗಳಿಗೆ ಕೋವಿಡ್‌ ಪ್ರಕರಣ ಸಿಕ್ಕಾಪಟ್ಟೆ ಏರಿ ಮನೆಯಲ್ಲಿರುವವರೆಲ್ಲ ಆಚೆ ಬರಬೇಕಾಯ್ತು. ಈ 26ರ ಹರೆಯದ ಹುಡುಗಿ ಇದೀಗ ಐದು ಲಕ್ಷ ಜನರ ಅಭಿಮಾನವನ್ನು ಸಂಪಾದಿಸಿದ್ದಾರೆ. ಇನ್ನೊಂದು ಗುಡ್‌ನ್ಯೂಸ್ ಅಂದರೆ ದಿವ್ಯಾ ಮತ್ತೊಮ್ಮೆ ಬಿಗ್‌ಬಾಸ್ ಮನೆಯೊಳಗೆ ಹೋಗುತ್ತಿದ್ದಾರೆ. ಈ ಬಾರಿ ಇಡೀ ಟೀಮ್‌ ಜೊತೆಗೆ ಅವರೂ ದೊಡ್ಡ ಮನೆ ಒಳಗೆ ಎಂಟ್ರಿ ಕೊಡುತ್ತಿದ್ದಾರೆ.

ಹಾಗೆ ನೋಡಿದ್ರೆ ಸೆಲೆಬ್ರಿಟಿಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಫಾಲೋವರ್ಸ್ ಹೆಚ್ಚಾದಷ್ಟೂ ಬೇಡಿಕೆ ಹೆಚ್ಚಾಗುತ್ತಲೇ ಹೋಗುತ್ತದೆ. ಹೀಗಾಗಿ ಸೋಷಿಯಲ್‌ ಮೀಡಿಯಾದಲ್ಲಿ ಜನರ ಗಮನ ಸೆಳೆಯಲು ಹೆಚ್ಚಿನ ಸೆಲೆಬ್ರಿಟಿ ಒಂದಿಲ್ಲೊಂದು ಸರ್ಕಸ್ ಮಾಡುತ್ತಲೇ ಇರುತ್ತಾರೆ. ಇದೀಗ ದಿವ್ಯಾ ಉರುಡುಗ 5 ಲಕ್ಷ ಜನರ ಅಭಿಮಾನವನ್ನು ಸಂಪಾದಿಸಿದ್ದು ಇನ್‌ಸ್ಟಾಗ್ರಾಂನಲ್ಲಿ. ಬಿಗ್ ಬಾಸ್‌ಗೆ ಹೋಗುವ ಮೊದಲು ಅಷ್ಟಾಗಿ ಬೇಡಿಕೆ ಇಲ್ಲದಿದ್ದ ಈಕೆ, ಬಿಗ್‌ಬಾಸ್‌ಗೆ ಹೋದದ್ದೇ ಜನರ ಆಕರ್ಷಣೆಗೆ ಪಾತ್ರವಾದರು. ದಿವ್ಯಾ ಹಾಗೂ ಅರವಿಂದ್ ನಡುವೆ ಸಂಥಿಂಗ್‌ ಸಂಥಿಂಗ್‌ಶುರುವಾದ ಮೇಲಂತೂ ಇವರಿಬ್ಬರ ಫ್ಯಾನ್‌ ಫಾಲೋವಿಂಗ್‌ ದುಪ್ಪಟ್ಟಾಗುತ್ತಾ ಹೋಯ್ತು. ಅವರೆಲ್ಲ ಇವರಿಬ್ಬರನ್ನು ರೊಮ್ಯಾಂಟಿಕ್‌ ಆಗಿ ನೋಡಲು ಶುರು ಮಾಡಿದರು. ಬಿಗ್‌ ಬಾಸ್‌ನಿಂದ ಹೊರಬಂದ ಮೇಲೂ ಈ ಬೇಡಿಕೆ ಇಳಿಯದೇ ಇದ್ದದ್ದೇ ಆಶ್ಚರ್ಯ ತರುವ ಸಂಗತಿ. ಇದೀಗ ಬಿಗ್‌ಬಾಸ್‌ ಮನೆಗೆ ಮತ್ತೆ ಎಂಟ್ರಿ ಕೊಟ್ಟಿರುವ ದಿವ್ಯಾಗೆ ಈ ಫ್ಯಾನ್‌ ಫಾಲೊವಿಂಗ್‌ ಸಖತ್‌ ಪಾಸಿಟಿವ್‌ ಆಗಿ ಪರಿಣಮಿಸಲಿದೆ.

ಯಶ್ ಗ್ರೇಟ್ ಬಾಯ್‌ಫ್ರೆಂಡ್, ಈಗ ಬೆಟರ್ ಗಂಡ, ಬೆಸ್ಟ್‌ ತಂದೆ: ರಾಧಿಕಾ ಪಂಡಿತ್ ...

ಹೀಗೆ ಹರಿದುಬಂದ ಅಭಿಮಾನಕ್ಕೆ ದಿವ್ಯಾ ಉರುಡುಗ ಕೃತಜ್ಞತೆ ಸಲ್ಲಿಸಿದ್ದಾರೆ. 'ಥ್ಯಾಂಕ್ಯೂ ಸೋ ಮಚ್‌.. ಐ ಲವ್‌ ಯೂ ಗೈಸ್‌...' ಅಂತ ಮುದ್ದಾಗಿ ಥ್ಯಾಂಕ್ಸ್ ಹೇಗಿದ್ದಾರೆ. ಜೊತೆಗೆ 'ಏನಾದ್ರೂ ಮಾಡಬೇಕು ಅಂದುಕೊಂಡಾಗ ನನ್ನ ಫ್ಯಾಮಿಲಿಯನ್ನ ನೆನೆಯುತ್ತೇನೆ. ನನ್ನ ಕುಟುಂಬದ ಬಗೆಗಿನ ಪ್ರೀತಿ ನನ್ನೊಳಗೆ ಎಂದೂ ಇರುತ್ತದೆ. ಈಗ ನನ್ನ ಕುಟುಂಬ ಬಹಳ ದೊಡ್ಡದಾಗಿದೆ. 5 ಲಕ್ಷ ಜನ ಅಭಿಮಾನಿಗಳು ಮನೆಮಗಳಂತೆ ನನಗೆ ಸಪೋರ್ಟ್‌ ಮಾಡುತ್ತಿದ್ದಾರೆ. ಈ ವಿಚಾರ ತಿಳಿದಾಗಿನಿಂದ ಹೃದಯ ತುಂಬಿ ಬರುತ್ತಿದೆ. ಈ ಅರ್ಧ ಮಿಲಿಯನ್‌ ಜನರಲ್ಲಿ ಪ್ರತಿಯೊಬ್ಬರೂ ನಾನು ಮತ್ತಷ್ಟು ಸ್ಟ್ರಾಂಗ್, ಇನ್ನಷ್ಟು ಸಾಧನೆ ಮಾಡಲು ಬೆನ್ನುಲುಬಾಗಿ ನಿಂತಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಸದಾ ಆಭಾರಿ, ಇನ್ನಷ್ಟು ಜನರನ್ನು ಈ ಕುಟುಂಬಕ್ಕೆ ನಲ್ಮೆಯಿಂದ ಸ್ವಾಗತಿಸುತ್ತೇನೆ' ಎಂದು ದಿವ್ಯಾ ಹೃದಯತುಂಬಿ ಬರೆದುಕೊಂಡಿದ್ದಾರೆ.

ಅಬ್ಬಬ್ಬಾ! ನಟಿ ರಚಿತಾ ರಾಮ್‌ ಮುಖದಲ್ಲಿ ಮೀಸೆ; ಫಾದರ್ಸ್‌ ಡೇ ವಿಡಿಯೋ ವೈರಲ್ ...

ಬಿಗ್‌ಬಾಸ್‌ ಸ್ಪರ್ಧಿಗಳಲ್ಲಿ ವೈಷ್ಣವಿಗೆ 8.26 ಲಕ್ಷ ಫಾಲೋವರ್ಸ್ ಇದ್ದಾರೆ. ಅರವಿಂದ್ ಕೆ ಪಿ ಅವರಿಗೆ ಹತ್ರತ್ರ ಮೂರು ಲಕ್ಷ ಫಾಲೋವರ್ಸ್ ಇದ್ದಾರೆ. ಶುಭಾ ಪೂಂಜಾಗೆ 2.54 ಲಕ್ಷ ಫಾಲೋವರ್ಸ್ ಇದ್ದರೆ, ನಿಧಿ ಸುಬ್ಬಯ್ಯ 2.87 ಮಂದಿ ಫಾಲೋವರ್ಸ್ ಹೊಂದಿದ್ದಾರೆ. ರಘು ಗೌಡ ಅವರಿಗೆ 3.27 ಲಕ್ಷಗಳಷ್ಟು ಅಭಿಮಾನಿಗಳು ಇನ್‌ಸ್ಟಾಗ್ರಾಮ್‌ನಲ್ಲಿದ್ದಾರೆ.

ಬಿಗ್‌ಬಾಸ್ ಆಟದಲ್ಲಿ ಜನರ ಪ್ರತಿಕ್ರಿಯೆ, ಬೆಂಬಲ ಬಹಳ ಮುಖ್ಯ. ಜನ ಓಟ್‌ ಮಾಡಿದಷ್ಟು ಸ್ಪರ್ಧಿಗಳ ಅಂಕ ಹೆಚ್ಚಾಗುತ್ತಾ ಹೋಗುತ್ತೆ. ಈ ಹಿನ್ನೆಲೆಯಲ್ಲಿ ದಿವ್ಯಾ ಉರುಡುಗ ಈ ಸಲದ ಬಿಗ್‌ಬಾಸ್‌ ಸೀಸನ್‌ 8ನ ಸೆಕೆಂಡ್ ಇನ್ನಿಂಗ್ಸ್‌ನ ಟಾಪ್‌ 5ನಲ್ಲಿ ಕಾಣಿಸಿಕೊಳ್ಳೋದು ಬಹುತೇಕ ಖಚಿತವಾಗಿದೆ.

ನಟಿ ಮಿನಿಷಾ ವಿರುದ್ಧ ಪಿಜಿ ಓನರ್ ಹಣ ಕದ್ದ ಆರೋಪ! ...
 

Follow Us:
Download App:
  • android
  • ios