Asianet Suvarna News

ಅಬ್ಬಬ್ಬಾ! ನಟಿ ರಚಿತಾ ರಾಮ್‌ ಮುಖದಲ್ಲಿ ಮೀಸೆ; ಫಾದರ್ಸ್‌ ಡೇ ವಿಡಿಯೋ ವೈರಲ್

ಫಾದರ್ಸ್‌ ಡೇಗೆ ರಚಿತಾ ರಾಮ್ ಶೇರ್ ಮಾಡಿಕೊಂಡ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

Actress Rachita Ram wishes happy father day with mustache video vcs
Author
Bangalore, First Published Jun 21, 2021, 1:29 PM IST
  • Facebook
  • Twitter
  • Whatsapp

ಡಿಂಪಲ್ ಕ್ವೀನ್ ರಚಿತಾ ರಾಮ್‌ ಇದೀಗ ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ. ಇನ್ನೂ ಮೂರು ವರ್ಷಕ್ಕೆ ಆಗುವಷ್ಟು ಕಾಲ್‌ ಶೀಟ್ ಫಿಲ್ ಆಗಿದ್ದು, ಸಖತ್ ಬ್ಯುಸಿಯಾಗಿದ್ದಾರೆ. ಈ ನಡುವೆಯೂ ಸೋಷಿಯಲ್ ಮೀಡಿಯಾದಲ್ಲಿ ವಿಭಿನ್ನ ಫೋಸ್ಟ್ ಹಾಕುವ ಮೂಲಕ ಫಾಲೋವರ್ಸ್‌ ಅನ್ನು ಮನೋರಂಜಿಸುತ್ತಿರುತ್ತಾರೆ. 

ಜೂನ್ 20ರಂದು ಫಾದರ್ಸ್‌ ಡೇಗೆ ರಚ್ಚು ಅಪ್ಪನ ಜೊತೆಗಿರುವ ಫೋಟೋ ಅಥವಾ ವಿಡಿಯೋ ಶೇರ್ ಮಾಡಿಕೊಳ್ಳುತ್ತಾರೆ ಎಂದುಕೊಂಡ ಅಭಿಮಾನಿಗಳು ಈ ವಿಡಿಯೋ ನೋಡಿ ಶಾಕ್ ಆಗಿದ್ದಾರೆ. ಹೌದು! ರಚ್ಚು ಮೀಸೆ ಇರುವ ಫಿಲ್ಟರ್‌ನಲ್ಲಿ ವಿಡಿಯೋ ಸೆರೆ ಹಿಡಿದು, ಅಪ್ಲೋಡ್ ಮಾಡಿದ್ದಾರೆ, 'ಎಲ್ಲಾ ಅಪ್ಪಂದಿರಿಗೂ ಫಾದರ್ಸ್ ಡೇ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ. 

ರಚ್ಚುನ ಈ ಲುಕ್‌ನಲ್ಲಿ ಕಂಡು ನೆಟ್ಟಿಗರು ಶಾಕ್ ಆದರೂ ರಚ್ಚು ನೀವು ಹುಡುಗನಾಗಿದ್ದರೆ ಹೇಗಿರುತ್ತೀರಾ ಅನ್ನೋ ಐಡಿಯಾ ನಮಗೆ ಬಂದಿದೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ರಚ್ಚು ನಿಮಗೆ ಮೀಸೆ ಇದ್ದರೆ ಸೇಮ್ ನಿಮ್ಮ ತಂದೆಯಂತೆ ಕಾಣಿಸುತ್ತೀರಾ ಎಂದಿದ್ದಾರೆ. ಒಟ್ಟಿನಲ್ಲಿ ರಚಿತಾ ರಾಮ್‌ ಡಿಫರೆಂಟ್‌ ಲುಕ್‌ ನೋಡಿ ನಿರ್ದೇಶಕರು ಡುಯಲ್ ರೋಲ್ ಮಾಡಿಸುವ ಪ್ಲ್ಯಾನ್ ಶೀಘ್ರದಲ್ಲಿಯೇ ಮಾಡುತ್ತಾರೆ ಎಂದೆನಿಸುತ್ತದೆ.

ಯಶ್ ಗ್ರೇಟ್ ಬಾಯ್‌ಫ್ರೆಂಡ್, ಈಗ ಬೆಟರ್ ಗಂಡ, ಬೆಸ್ಟ್‌ ತಂದೆ: ರಾಧಿಕಾ ಪಂಡಿತ್ 

ಕೊರೋನಾ ಲಾಕ್‌ಡೌನ್‌ ಸಮಯದಲ್ಲಿ ಸಿನಿಮಾ ಮತ್ತು ಕಿರುತೆರೆ ಕಲಾವಿದರು ಸೋಷಿಯಲ್ ಮೀಡಿಯಾದಲ್ಲಿ 24 ಗಂಟೆಯೂ ಆ್ಯಕ್ಟಿವ್ ಆಗಿರುತ್ತಾರೆ. ತಾವು ಏನೇ ಮಾಡಿದರೂ ಪೋಸ್ಟ್ ಶೇರ್ ಮಾಡಿಕೊಂಡು ಅಭಿಮಾನಿಗಳನ್ನು ಎಂಗೇಜ್ ಮಾಡಿರುತ್ತಾರೆ ಆದರೆ ರಚಿತಾ ಮಾತ್ರ ಲಾಕ್‌ಡೌನ್‌ ಅಂತ ಗೊತ್ತಾದರೆ ಸಾಕು  ಸೋಷಿಯಲ್ ಮೀಡಿಯಾದಿಂದ ದೂರ ಉಳಿಯುತ್ತಾರೆ. ಪೋಷಕರ ಜೊತೆ ಸಮಯ ಕಳೆಯುತ್ತಾ, ಅಡುಗೆ ಮಾಡುತ್ತಾ ಎಂಜಾಯ್ ಮಾಡುತ್ತಾರೆ.

 

Follow Us:
Download App:
  • android
  • ios