ಪ್ರೀತಿಸಿದ ಹುಡುಗ ನಾಗಾರ್ಜುನ್‌ ಜೊತೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚೈತ್ರಾ ಕೊಟ್ಟೂರು ಏ.8ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಬೆಳಗ್ಗೆ 5 ಗಂಟೆಗೆ ಫಿನಾಯಲ್‌ ಸೇವಿಸಿದ್ದರು, ಪೋಷಕರಿಗೆ ತಿಳಿದು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲಿ 6 ಗಂಟೆ ಆಗಿತ್ತು. ಪ್ರಾಣಾಪಾಯದಿಂದ ಪಾರಾಗಿರುವ ಚೈತ್ರಾ, ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸುವ ಮುನ್ನ ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 

ಕುಟುಂಬಕ್ಕೆ ಕೊಲೆ ಬೆದರಿಕೆ, ಹೊಡೆದಾತನಿಂದ ಅವಾಚ್ಯ ಶಬ್ಧ ಬಳಕೆ: ಚೈತ್ರಾ ಕೊಟೂರು 

ಮದುವೆ ಮುರಿದು ಬೀಳಲು ಕಾರಣವೇನು? ಪೊಲೀಸ್ ಠಾಣೆಯಲ್ಲಿ ಏನೆಂದು ದೂರು ನೀಡಲಾಗಿದೆ. ಇವರಿಬ್ಬರ ನಡುವೆ ಬಿರುಕು ಬೀಳಲು ಕಾರಣ ಆ ಮಹಿಳೆ ಎಂದು ಹೇಳಿದ್ದೇಕೆ? ಸಂಪೂರ್ಣ ಮಾಹಿತಿಯನ್ನು ಚೈತ್ರಾ ಈ ವಿಡಿಯೋದಲ್ಲಿ ಹೇಳಿ ಕೊಂಡಿದ್ದಾರೆ. 

ವಿಡಿಯೋದಲ್ಲಿ ಹೇಳಿರುವುದೇನು?
'ನಾನು ನಾಗಾರ್ಜುನ್‌ ಅವರನ್ನು ನಂಬಿ ತಪ್ಪು ಮಾಡಿದ್ದೇನೆ. ಆತ ಮಾಡಿದ ನಂಬಿಕೆ ದ್ರೋಹದಿಂದ ಅನುಭವಿಸುತ್ತಿದ್ದೇನೆ. ನನ್ನನ್ನು ಅತಿಯಾಗಿ ಪ್ರೀತಿಸಿದ ಹುಡುಗನಿಗೆ ನೋವು ನೀಡುವುದಕ್ಕೆ, ಹಿಂಸಿಸುವುದಕ್ಕೆ ನನಗೆ ಇಷ್ಟವಿಲ್ಲ. ಆ ಉದ್ದೇಶವೂ ನನಗೆ ಇರಲಿಲ್ಲ. ಆ ದಿನ ಮದುವೆ ಆಗೋಣ ಎಂದು ಬಂದವರು ಅವರೇ. ನಾನು ನಡತೆಗೆಟ್ಟವಳು ಎಂದ ಕೆಟ್ಟದಾಗಿ ನಿಂದಿಸುತ್ತಿದ್ದರು. ಅಲ್ಲಿಗೆ ಬಂದ ಕೆಲವು ಸಂಘಟನೆಗಳ ಪ್ರತಿನಿಧಿಗಳು ಅನ್ಯಾಯಕ್ಕೊಳಗಾದ ಹೆಣ್ಣಿಗೆ ನ್ಯಾಯ ದೊರಕಿಸಿ ಕೊಡಲು ಮುಂದಾದರು. ಮದುವೆ ಮಾಡಿಸಿದ್ದರು. ಯಾರು. ಯಾರನ್ನೂ ಕಿಡ್ನಾಪ್ ಮಾಡಿಲ್ಲ. ಅವರ ಫೋನ್ ಅವರ ಬಳಿಯೇ ಇತ್ತು. ಅವರಿಗೆ ಬರುತ್ತಿದ್ದ ಕರೆಗಳನ್ನೂ ಸ್ವೀಕರಿಸುತ್ತಿದ್ದರು,'ಎಂದ  ಚೈತ್ರಾ ವೀಡಿಯೋ ಆರಂಭದಲ್ಲಿ ಹೇಳಿದ್ದಾರೆ. 

ಚೈತ್ರಾ ಕೊಟೂರು-ನಾಗಾರ್ಜುನ್‌ರದ್ದು ಬಲವಂತ ಮದುವೆ ಆಗಿದ್ದರೆ ಈ ಪೋಟೋಗಳು ಏನು? 

ಏನು ಆಗಿಲ್ಲ ಅಂತ ಹೇಳಿ ಬಿಡು:
'ಒಂದು ಹೆಣ್ಣಿನ ಜೊತೆ ಸಮಯ ಕಳೆದವನು, ಎಲ್ಲವನ್ನೂ ಮುಗಿಸಿದ್ದವನು, ಕಡೆಯಲ್ಲಿ ನಮ್ಮ ಮಧ್ಯೆ ಏನೂ ಆಗಿಲ್ಲ ಅಂದ್ರೆ ಹೇಗೆ? ಅದೇನ್ ಮಾಡ್ಕೋತಿಯೋ ಮಾಡ್ಕೋ. ಅದೇನ್ ಕಿತ್ಕೋತೀಯೋ ಕಿತ್ಕೋ, ಎಂದಾಗ ಹೊಟ್ಟೆಯಲ್ಲಿ ಬೆಂಕಿ ಹಚ್ಚಿದಂತೆ ಆಗುವುದಿಲ್ವಾ? ನಾನು ಆತನಿಗೆ ಹೇಳಿದ್ದು ಇಷ್ಟೆ, 'ಎನೂ ಆಗಿಲ್ಲ, ಎನೂ ಇಲ್ಲ... ನಮ್ಮ ಮಧ್ಯೆ ಅಂತ ಹೇಳಿಬಿಡು. ಬೇಕಾದರೆ ಒಪ್ಪಿಕೊಂಡು ಬಿಡು. ಆಗ ನಾನು ಬೇಕಾಗಿತ್ತು. ಆದರೀಗ ಬೇಕಾಗಿಲ್ಲ ಅಂತ ನೇರವಾಗಿ ಹೇಳಿ ಬಿಡು. ನಾನು ಸುಮ್ಮನಾಗುತ್ತೇನೆ,'ಎಂದಿದ್ದೆ..ಪಾಪ ಆತ ಏನೂ ಒಪ್ಪಿಕೊಳ್ಳಲಿಲ್ಲ.  ಆವೇಶ, ದುಃಖ, ದುಗುಡ ಎಲ್ಲವೂ ಹುಟ್ಟೋಲ್ವಾ? ನನಗೂ ಅದೇ ಆಗಿದ್ದು,'  ಎಂದು ದುಃಖ ತೋಡಿಕೊಂಡಿದ್ದಾರೆ. 

'ನಾನು ಕೆಲವು ತಿಂಗಳಿಂದ ಡಿಪ್ರೆಶನ್‌ನಲ್ಲಿ ಇದ್ದೀನಿ. ಅದಕ್ಕೆ ಔಷಧಿಯನ್ನೂ ತೆಗೆದುಕೊಳ್ಳುತ್ತಿರುವೆ. ಈ ವಿಚಾರ ಅವರ ಮನೆಯಲ್ಲಿ ಎಲ್ಲರಿಗೂ ಗೊತ್ತು. ಆದರೆ ಯಾರೂ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಲಿಲ್ಲ. ಪಾಪ ಅವರಿದೋ ಅವರದ್ದೇ ಚಿಂತೆ, ಅಂದ್ಮೇಲೆ ನನ್ನ ನೋವು ಯಾರಿಗಾದರೂ ಅರ್ಥ ಮಾಡಿಕೊಳ್ಳಲು ಹೇಗೆ ಸಾಧ್ಯ? ಒಬ್ಬ ಗಂಡು ಹೆಣ್ಣನ್ನು ಬಳಸುವಷ್ಟು ಬಳಸಿಕೊಂಡು, ಬೇಡವೆಂದರೆ ಅವಳ ಜೀವನ ಅಲ್ಲಿಗೇ ಮುಗಿಯಿತು ಎಂದರ್ಥ. ಪಾಪ ಆತನನ್ನು ಆಗ ಯಾರೂ ಏನೂ ಕೇಳುವುದಿಲ್ಲ. ಆವನೂ ಒಂದು ಜೀವ. ಅವನಿಗೂ ಮನಸ್ಸಿರುತ್ತದೆ. ಒಂದು ಜೀವನ ಇದೆ, ಅಂತ ಯೋಚನೆ ಮಾಡುತ್ತಾರೆ. ಆದರೆ ಹೆಣ್ಣಾದವಳು ಎಲ್ಲವನ್ನೂ ಸಹಿಸಿಕೊಂಡು ಮೋಸದಿಂದ ನೊಂದು ಜೀವನ ಮಾಡಬೇಕು. ಅದು ಯಾರಿಗೂ ಬೇಡ,' ಎಂದಿದ್ದಾರೆ. 

ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ 

'ನನ್ನ ಗಂಡ ನಾಗಾರ್ಜುನ್‌ ಮೇಲೆ ಕೇಸ್ ಹಾಕಿ ನಮ್ಮ ಮಧ್ಯೆ ಎಲ್ಲಾ ರೀತಿ ಸಂಬಂಧ ಇತ್ತು ಎಂದು ಸಾಬೀತುಪಡಿಸಬಹುದು. ಆಮೇಲೆ ಆತನಿಗೆ ಶಿಕ್ಷೆಯನ್ನೂ ಕೊಡಿಸಬಹುದು. ಆದರೆ ಅದರಿಂದ ನನಗೆ ದೊರೆಯುವುದೇನು? ನಾನು ಅತಿಯಾಗಿ ನಂಬಿ ಪ್ರೀತಿಸಿದ ಹುಡುಗನಿಗೆ ನೋವು ಶಿಕ್ಷೆ ನೀಡಿ, ನಾನು ಸಾಧಿಸುವುದಾದರೂ ಏನನ್ನು? ಅವನು ಎಲ್ಲಿದ್ದರೂ, ಹೇಗಿದ್ದರೂ ಚೆನ್ನಾಗಿರಲಿ. ನನ್ನ ಪ್ರಾಣ, ನನ್ನ ಜೀವನ, ನನ್ನ ಉಸಿರು ಅವನು ಎಂದು ಬದುಕಿದ್ದೆ. ನಾಗಾರ್ಜುನ್ ಒಬ್ಬ ಉದ್ಯಮಿ. ದುಡ್ಡಿಗಾಗಿ ಈಕೆ ಹೀಗೆ ಮಾಡುತ್ತಿದ್ದಾರೆ, ಎಂದು ಕೆಲವರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಅವನು ತೀರಾ ಸಾಮಾನ್ಯ. ನನ್ನಂತೆ ಮಿಡಲ್ ಕ್ಲಾಸ್ ಹುಡುಗ. ನಾನು ಅನೇಕ ಬಾರಿ ಅವನು ಮಾಡಿಕೊಂಡಿರುವ ಸಾಲ ಮತ್ತೆ ಸಮಸ್ಯೆಗಳ ಕುರಿತು ತಿಳಿದು, ಸಹಾಯ ಮಾಡಲು ಹೋಗಿದ್ದೆ. ನಮ್ಮ ಮದುವೆ ಅಗುವುದಕ್ಕೆ ಈ ಸಾಲ ಸಮಸ್ಯೆ ಆಗುತ್ತಿರಬೇಕು, ಎಂದು ನಾನು ಅಷ್ಟೂ ಹಣವನ್ನು ಹೊಂದಿಸಿಕೊಡುತ್ತೇನೆ. ಸಾಲ ತೀರಿಸು ಎಂದು ಹೇಳಿದ್ದೆ. ಸ್ವಲ್ಪ ಹಣವನ್ನು ಟ್ರಾಸ್ಫರ್ ಮಾಡಿರುವ ದಾಖಲೆಗಳೂ ನನ್ನ ಬಳಿ ಇವೆ,' ಎಂದಿದ್ದಾರೆ.

'ಆಮೇಲೆ ನನ್ನ ಗಂಡ ಇಷ್ಟೆಲ್ಲಾ ಈಗ ವಿರೋಧಿಸುತ್ತಿರುವುದಕ್ಕೆ ಮುಖ್ಯ ಕಾರಣ ಆತನ ಜೊತೆಗಿರುವ ಆ ಹೆಂಗಸು. ಅವರ ಹೆಸರು ನನಗೆ ಸರಿಯಾಗಿ ತಿಳಿದಿಲ್ಲ....ಜ್ಯೋತಿ ಅಥವಾ ರೇಖಾ ಇರಬಹುದು. ಒಮ್ಮೆ ಅವನೊಂದಿಗೆ ಕೋಲಾರದ ನನ್ನ ಮನೆಗೂ ಬಂದಿದ್ದಳು. ಇಂದಿನ ಕಾಲದಲ್ಲಿ F**K and forget ಕಾಮನ್, ಹುಡುಗ ಕರೆದಾಗ ಹುಡುಗಿ ಹೋಗುವುದು ಅಥವಾ ಹುಡುಗಿ ಕರೆದಾಗ ಹುಡುಗ ಹೋವುದೂ ಕಾಮನ್, ಎಂದು ಒಂದು ಹೆಣ್ಣಾಗಿದ್ದರೂ ಹೀನಾಯವಾಗಿ ಮಾತನಾಡಿ ಹೋಗಿದ್ದಳು. ಆಕೆ ನಮ್ಮ ವಿಚಾರದಲ್ಲಿ ಯಾಕೆ ತಲೆ ತೂರಿಸುತ್ತಿದ್ದಾಳೋ ನನಗೆ ಗೊತ್ತಿಲ್ಲ. ಅವರಿಬ್ಬರ ನಡುವಿನ  ಸಂಬಂವಧವೇನು ಎಂಬುವುದೂ ನನಗೆ ಗೊತ್ತಿಲ್ಲ. ನಮ್ಮಿಬ್ಬರನ್ನು ದೂರ ಮಾಡುವುದರಿಂದ ಆಕೆಗೆ ಸಿಗುವುದೇನು ಎಂಬವುದೂ ನನಗೆ ಅರ್ಥವಾಗುವುದಿಲ್ಲ. ಆದರೆ ಹೀಗೆ ಮಾಡಿರುವುದಕ್ಕೆ ಹೊಟ್ಟೆಗೆ ಹಾಲು ಕುಡಿದಷ್ಟೇ ತೃಪ್ತಿಯಾಗುತ್ತದೇನೋ, ಆಕೆ ತಣ್ಣಗಿರಲಿ. ನನ್ನ ಸಾವಿನಿಂದ ಆಕೆಗೆ ಸುಖ ಸಿಗುವುದಾದರೆ ಸಿಗಲಿ. ನಾಗಾರ್ಜುನ್‌ಗೆ ನಾನು ಹೇಳಿದ್ದೆ. ನೀನು ಅಥವಾ ಸಾವು, ನನ್ನ ಮುಂದೆ ಎರಡೇ ಆಯ್ಕೆ ಇವೆ ಎಂದು. ಆಗ ಆತ ಸತ್ತು ಹೋಗು. ಇಂಥ ಬದುಕು ಬದುಕುವುದಕ್ಕಿಂತ ಸಾಯುವುದೇ ಮೇಲು, ಎಂದು ಸಾರಿ ಸಾರಿ ಹೇಳುತ್ತಿದ್ದ. ಅದರಂತೆಯೇ ಸಾಯುತ್ತಿದ್ದೇನೆ. ನಾನು ಹೊರಡುತ್ತೇನೆ. ಎಲ್ಲವೂ ಸಾಕಾಗಿದೆ. ಪ್ರಪಂಚ, ಜನ, ಜಗತ್ತು ಈ ಪ್ರಕ್ರಿಯೆಯಲ್ಲಿ ಎಲ್ಲವನ್ನೂ ನೋಡಿಬಿಟ್ಟೆ. ಎಲ್ಲರಿಗೂ ಧನ್ಯವಾಗಳು,' ಎಂದು ಹೇಳುವ ಪೋಷಕರಿಗೆ ಹಾಗೂ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ ಚೈತ್ರಾ.

ಕೋಲಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಚೈತ್ರಾ, ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.