ಬಿಗ್ ಬಾಸ್‌ ಮಾಜಿ ಸ್ಪರ್ಧಿ ಚೈತ್ರಾ ಕೊಟೂರು ವೈಯಕ್ತಿ ಜೀವನದಲ್ಲಿ ಆದ ಬದಲಾವಣೆಗಳಿಗೆ ಅಭಿಮಾನಿಗಳೇ ಸಾಕ್ಷಿ. ಎಷ್ಟೇ ಏಳು ಬೀಳುಗಳನ್ನು ಕಂಡರೂ ನಗು ನಗುತ್ತಾ ಸಾಕಬೇಕು, ಎಂಬ ಚೈತ್ರಾ ಹೊಸ ಜೀವನದ ಪಾಲಿಸಿಯನ್ನು ನೆಟ್ಟಿಗರು ಮೆಚ್ಚಿ ಕೊಂಡಿದ್ದಾರೆ. ಇತ್ತೀಚಿಗೆ ಸೋಷಿಯಲ್ ಮೀಡಿಯಾದಲ್ಲಿ ಚೈತ್ರಾ ಮಾಡಿದ ಪೋಸ್ಟ್ ವೈರಲ್ ಆಗುತ್ತಿದೆ.

ಕೆಲವು ದಿನಗಳ ಹಿಂದೆ ಚೈತ್ರಾ ಕೊಟೂರು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದ, ಗೆಳೆಯ ನಾಗಾರ್ಜುನ್‌ ಜೊತೆ ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನಾಗಾರ್ಜುನ್ ಪೋಷಕರು ಈ ಮದುವೆಗೆ ವಿರೋಧ ವ್ಯಕ್ತ ಪಡಿಸಿದ ಕಾರಣ, ಇದು ಬಲವಂತದ ಮದುವೆ ಎಂದು ಆರೋಪಿಸಿ, ನಾಗಾರ್ಜುನ್‌ ಚೈತ್ರಾರ ವಿರುದ್ಧ ಮದುವೆ ದಿನವೇ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದರು. ಇದಕ್ಕೊಂದು ತಾರ್ಕಿಕ ಅಂತ್ಯ ನೀಡಲು ಪೊಲೀಸರ್ ಡೆಡ್‌ಲೈನ್ ಕೊಟ್ಟಿದ್ದರು. ಆದರೆ, ಇದಕ್ಕೆ ನಾಗರ್ಜುನ ಕಡೆಯುವರ ಸೂಕ್ತ ರೀತಿಯಲ್ಲಿ ಸ್ಪಂದಿಸದ ಕಾರಣ ಬೇಸತ್ತ ಚೈತ್ರಾ ಆತ್ಮಹತ್ಯೆ ಪ್ರಯತ್ನ ಮಾಡಿದ್ದರು. ಆದರೆ ಪೋಷಕರ ಸಹಾಯದಿಂದ ತಕ್ಷಣವೇ ಆಸ್ಪತ್ರೆಗೆ ಸೇರಿಸಿ, ಪ್ರಾಣಪಾಯದಿಂದ ಪಾರಾದರು. 

ಚೈತ್ರಾ ಪೋಸ್ಟ್:

'ಬದುಕು ಮತ್ತೆ ಕೈಬೀಸಿ ಕರೆದಾಗ, ಎರಡೆರಡು ಸ್ಯಾನಿಟೈಸರ್ ಬಾಟಲಿಗಳನ್ನು ಹೆಚ್ಚಾಗಿ ಇರಿಸಿಕೊಂಡು ಮುಂದೆ ಸಾಗಿ. ದೇಹ ಸೇರಿ ಸಾವಿನ ದವಡೆಗೆ ನೂಕುವ ಕ್ರಿಮಿಯು, ಬದುಕಿನ ಮಹತ್ವವನ್ನೂ ತಿಳಿಸುವಲ್ಲಿ ಯಶಸ್ವಿಯಾಗುತ್ತದೆ. ನಿಮ್ಮೆಲ್ಲರ ಪ್ರೀತಿ ಕಾಳಜಿಗೆ ಆಭಾರಿ,' ಎಂದು ಚೈತ್ರಾ ಬರೆದುಕೊಂಡು, ಸೆಲ್ಫೀಯೊಂದನ್ನು ಅಪ್ಲೋಡ್ ಮಾಡಿದ್ದಾರೆ. 

ಬಿಗ್ ಬಾಸ್ ಸ್ಪರ್ಧಿ ಚೈತ್ರಾ ಕೊಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಚೈತ್ರಾ ಪೋಸ್ಟ್‌ಗೆ ನೆಟ್ಟಿಗರು ನಾನ್‌ ಸ್ಟಾಪ್ ಕಾಮೆಂಟ್ ಮಾಡುತ್ತಿದ್ದಾರೆ. 'ನನ್ನ ಕಾಲೇಜ್‌ ದಿನಗಳಿಂದಲೂ ನಾನು ನಿಮ್ಮನ್ನು ನೋಡುತ್ತಿರುವೆ. ನೀವು ತುಂಬಾನೇ ಸ್ಟ್ರಾಂಗ್. ಜೀವನದಲ್ಲಿ ಏನೇನೋ ವಿಚಾರಕ್ಕೆ ಏಳು ಬೀಳುಗಳನ್ನು ನೋಡುತ್ತೇವೆ. ನಮ್ಮ ಜೀವನದ ಹಿಂದಿನ ಘಟನೆಗಳನ್ನು ಮರೆತು, ಹೊಸ ಜೀವನ ಶುರು ಮಾಡಬೇಕು. ಲೈಫ್‌ ಈಸ್‌ ಬ್ಯೂಟಿಫುಲ್', ' ಯಾರಿಗೋ ಬೇಕಾಗಿ ನಮ್ಮ ಅಮೂಲ್ಯ ಜೀವನವನ್ನು ಕೊನೆಗೊಳಿಸುವವರಷ್ಟು ಶತಮೂರ್ಖರು ಇನ್ಯಾರೂ ಇಲ್ಲ. ಏನೇ ಬಂದರೂ ಮೆಟ್ಟಿನಿಲ್ಲುವ ಪರಿಪಾಠ ಬೆಳಿಸಿದರೆ ಜೀವನವೇ ಚೆಂದ,' ಎಂದು ಕಾಮೆಂಟ್ ಮಾಡುತ್ತಿದ್ದಾರೆ.