ಭವ್ಯಾ ಗೌಡ ಸುಳ್ಳಿನ ಆಟ ಬಯಲು ಮಾಡಿದ ವೀಕ್ಷಕರು; ವಿಡಿಯೋ ಸಾಕ್ಷಿ ಸಿಕ್ಕಿದರೂ ವಾದಿಸಲು ನಾಚಿಕೆ ಆಗಲ್ವಾ ಅಂತಿದ್ದಾರೆ!
ವ್ಯಕ್ತಿತ್ವದಲ್ಲಿ ಸೋತ ಭವ್ಯಾ ಗೌಡ. ಕ್ಯಾಪ್ಟನ್ ಆಗಿದ್ದರೂ ನಮಗೆ ಖುಷಿ ಇಲ್ಲ ಅಂತಿದ್ದಾರೆ ಅಭಿಮಾನಿಗಳು.....
ಬಿಗ್ ಬಾಸ್ ಸೀಸನ್ 11ರ 12ನೇ ವಾರದ ಟಫ್ ಟಾಸ್ಕ್‌ಗಳು ಕ್ಯಾಪ್ಟನ್ ಗೋಲ್ಡ್ ಸುರೇಶ್ ಇಲ್ಲದೆ ನಡೆದಿದೆ. ಕ್ಯಾಪ್ಟನ್ ಸ್ಥಾನವನ್ನು ಸ್ವೀಕರಿಸಲು ಭವ್ಯಾ ಗೌಡ ಮಾಡಿರುವ ಮೋಸವನ್ನು ವಿಡಿಯೋ ಸಮೇತ ವೀಕ್ಷಕರು ಹಿಡಿದಿದ್ದಾರೆ. ನಾನ್ ಸ್ಟಾಪ್ ವಾದ ಮಾಡಿ ಜಗಳ ಮಾಡುತ್ತಿರುವ ಭವ್ಯಾ ಗೌಡ ಸಾಛ ಅಲ್ಲ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಿದ್ದಾರೆ. ಅಲ್ಲದೆ ವೀಕೆಂಡ್ ಮಾತುಕತೆಯಲ್ಲಿ ಚೈತ್ರಾ ಕುಂದಾಪುರ ಮಾತ್ರವಲ್ಲ ಭವ್ಯಾ ಗೌಡಗೂ ಕ್ಲಾಸ್ ತಗೋಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಹಗ್ಗದ ಟಾಸ್ಕ್:
ಹಗ್ಗದ ಟಾಸ್ಕ್‌ನಲ್ಲಿ ಐಶ್ವರ್ಯ ಆಟವಾಡುತ್ತಿದ್ದಾಗ ಭವ್ಯಾ ಗೌಡ ಉಸ್ತುವಾರಿ ಆಗಿದ್ದರು. ಸುಖಸುಮ್ಮನೆ ಫೈಲ್ ಕೊಡುವುದನ್ನು ಗಮನಿಸಿದ ಗೌತಮಿ ಗೇಮ್ ಮುಗಿದ ಮೇಲೆ ಭವ್ಯಾರನ್ನು ಪ್ರಶ್ನೆ ಮಾಡುತ್ತಾರೆ. 'ಆ ಫೌಲ್ ಯಾಕೆ? ವೇಸ್ಟ್ ಅದು' ಎಂದು. 'ಅಯ್ಯೋ ಅವರು ಕೊಟ್ಟಿದ್ಮೇಲೆ ನಾನು ಕೊಟ್ಟಿದ್ದು' ಅಂತ ಭವ್ಯಾ ಉತ್ತರಿಸುವುದು ಬಿಗ್ ಬಾಸ್ ಮುಖ್ಯ ದ್ವಾರದ ಕ್ಯಾಮೆರಾದಲ್ಲಿ ಸೆರೆ ಆಗಿದೆ. ಇದನ್ನು ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರು ಅಪ್ಲೋಡ್ ಮಾಡಿ 'ಏನ್ ಡವ್ ಮಾಡ್ತೀಯಾ ಅಮ್ಮ...ನೀನು ಸೀರಿಯಲ್ ಕ್ವೀನ್ ಅಂತ ಪ್ರೂವ್ ಮಾಡ್ಬಿಟ್ಟಿ' ಎಂದು ಕಾಲೆಳೆಯುತ್ತಿದ್ದಾರೆ.
ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್ ಮಾಡೋರಿಗೆ C & T ಅಂದ್ರೆ ಏನು ಗೊತ್ತಾ? ಎಷ್ಟು ಲೈನ್ ಬಂದ್ರೆ ಪಾಸಿಟಿವ್?
ತಾ ದಿಂದು ತಾ ಟಾಸ್ಕ್:
10 ಸುತ್ತುಗಳಲ್ಲಿ ತಾ ದಿಂಬು ತಾ ಟಾಸ್ಕ್ ನಡೆಯುತ್ತದೆ. ಎರಡೂ ತಂಡದಲ್ಲಿ 8ನೇ ಸುತ್ತಿನಷ್ಟರಲ್ಲಿ 4-4 ಅಂಕಗಳನ್ನು ಪಡೆದಿರುತ್ತಾರೆ. 9ನೇ ಸುತ್ತಿನಲ್ಲಿ ಐಶ್ವರ್ಯ ತಂದಿರುವ ದಿಂಬನ್ನು ಭವ್ಯಾ ಕಿತ್ತುಕೊಳ್ಳುತ್ತಾರೆ ಆನಂತರ ಅದನ್ನು ಗೌತಮಿಗೆ ಪಾಸ್ ಮಾಡುತ್ತಾರೆ ತಕ್ಷಣವೇ ಮೋಕ್ಷಿತಾ ಅದನ್ನು ಕಿತ್ತುಕೊಂಡು ಐಶ್ವರ್ಯಗೆ ಪಾಸ್ ಮಾಡುತ್ತಾರೆ. ಈ ಟಾಸ್ಕ್‌ನಲ್ಲಿ ಹನುಮಂತು ಮತ್ತು ಚೈತ್ರಾ ಕುಂದಾಪುರ ಉಸ್ತುವಾರಿ ಆಗಿರುತ್ತಾರೆ. 'ಒಳಗಿನಿಂದ ಈಸಿಕೊಂಡರು' ಎಂದು ಭವ್ಯಾ ಕೂಗಿದ್ದಾರೆ.'ನಾನು ಒಳಗೆ ಕೊಟ್ಟಿಲ್ಲ ಎಂದು ಮೋಕ್ಷಿತಾ ಹೇಳುತ್ತಾರೆ. ಇಲ್ಲಿ ಐಶ್ವರ್ಯ ಮತ್ತು ಮೋಕ್ಷಿತಾ ಎಷ್ಟೇ ಹೇಳಿದರೂ ಚೈತ್ರಾ ಕುಂದಾಪುರ ಭವ್ಯಾ ಮಾತುಗಳನ್ನು ನಂಬಿ ವಾದ ಮಾಡುತ್ತಾರೆ.
ಮೂಗೂತಿ ಸುಂದರಿ ಅನ್ನೋಕೆ ಮೂಗೇ ಇಲ್ಲ; ಭವ್ಯಾ ಗೌಡ ಕಾಲೆಳೆದ ನೆಟ್ಟಿಗರು
ಮೋಸ ಆಗ್ತಿದೆ ಎಂದು ರಜತ್ ಧ್ವನಿ ಎತ್ತಿದ್ದಾಗ 'ನಾನು ಸುಳ್ಳು ಹೇಳುತ್ತಿಲ್ಲ ನಾನು ಮೋಸ ಮಾಡಿಲ್ಲ ಪ್ರೂವ್ ಆಗೋದ್ರೆ ಅಜೀಬ್ ಆಗೋಗ್ತೀಯಾ' ಎಂದು ನೇರವಾಗಿ ಹೇಳುತ್ತಾರೆ. ಈ ವಿಡಿಯೋವನ್ನು ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. 'ಲಿಲ್ಲಿಪುಟ್ ಎಷ್ಟು ಮೋಸ ಮಾಡ್ತಿದ್ದಾಳೆ ನಾಚಿಕೆ ಆಗಲ್ವಾ? ಭವ್ಯಾ ಗೌತಮಿಗೆ ಲೈನ್ ಒಳಗೆ ಕೈಗೆ ಕೊಟ್ಟಿದ್ದು ತಪ್ಪು ಅಲ್ಲ ಅಂದ್ರೆ ಮೋಕ್ಷಿತಾ ಐಶ್ವರ್ಯಗೆ ಕೊಟ್ಟಿದ್ದು ಯಾಕೆ ತಪ್ಪು? ಅಲ್ಲದೆ ಐಶ್ವರ್ಯ ಹೊರಗಿನಿಂದ ಪಡೆದಿರುವುದು ಸ್ಪಷ್ಟವಾಗಿದೆ' ಎಂದು ನೆಟ್ಟಿಗರು ವಿಡಿಯೋ ವೈರಲ್ ಮಾಡುತ್ತಿದ್ದಾರೆ.
'ರಜತ್‌ಗೆ ವೈಲ್ಡ್ ಕಾರ್ಡ್ ಎಂಟ್ರಿ ಇಷ್ಟನೇ ಇರಲಿಲ್ಲ, ಟ್ರೈ ಮಾಡಿದ್ದೇ ಬೇರೆ'