ಬಿಗ್ ಬಾಸ್‌ ಮನೆಯಿಂದ ಹೊರ ಬರುತ್ತಿದ್ದಂತೆ ಡಿವೋರ್ಸ್‌ ಗಾಸಿಪ್‌ಗೆ ಬ್ರೇಕ್ ಹಾಕಿದ ಅಂಕಿತಾ. ನೆಟ್ಟಿಗರಿಗೆ ಸಮಾಧಾನ ಇಲ್ಲ....

ಬಿಗ್ ಬಾಸ್‌ ಸೀಸನ್ 17ರಲ್ಲಿ ಅಂಕಿತಾ ಲೋಕಂಡೆ ಮತ್ತು ವಿಕ್ಕಿ ಜೈನ್ ಕಪಲ್‌ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟರು. ಈ ಹಿಂದೆ ಸುಶಾಂತ್ ಸಿಂಗ್‌ ರಾಜ್‌ಪುತ್‌ ಗರ್ಲ್‌ಫ್ರೆಂಡ್‌ ಎಂದೇ ಸುದ್ದಿಯಲ್ಲಿದ್ದ ಅಂಕಿತಾ ವೈಯಕ್ತಿಕ ಜೀವನ ಆಫ್‌ ಸ್ಕ್ರೀನ್‌ನಲ್ಲಿ ಹೇಗಿದೆ ಗೊತ್ತಿಲ್ಲ ಆದರೆ ಆನ್‌ ಸ್ಕ್ರೀನ್‌ನಲ್ಲಿ ಅಷ್ಟಕ್ಕೆ ಅಷ್ಟೆ. ಬಿಗ್ ಬಾಸ್ ಮನೆಯಲ್ಲಿ ಗೇಮ್‌ಗಿಂದ ಈ ಸಲ ಗಂಡ- ಹೆಂಡತಿ ಜಗಳ ನೋಡಿದ್ದೇ ಜಾಸ್ತಿ. ಮೊದಲು ವಿಕ್ಕಿ ಎಲಿಮಿನೇಟ್ ಆಗಿ ಹೊಂದಿದ್ದು, ಫಿನಾಲೆ ಸ್ಪರ್ಧಿಯಾಗಿ ಅಂಕಿತಾ ಕಾಣಿಸಿಕೊಂಡರು. ವೀಕ್ಷಕರ ದೃಷ್ಟಿಯಲ್ಲಿ ವಿಕ್ಕಿ ಕೆಟ್ಟ ಹುಡುಗ, ಜಗಳ ಮಾಡುತ್ತಾನೆ, ಹೆಂಡತಿ ಅರ್ಥ ಮಾಡಿಕೊಳ್ಳುವುದಿಲ್ಲ, ಅತ್ತೆ ಕೂಡ ಕಾಟ ಕೊಡುತ್ತಾರೆ ಇವರಿಬ್ಬರು ಡಿವೋರ್ಸ್ ಆಗುತ್ತಾರೆ ಅನ್ನೋ ಸುದ್ದಿ ಇತ್ತು. ಇದಕ್ಕೆ ಅಂಕಿತಾ ಸ್ಪಷ್ಟನೆ ಕೊಟ್ಟಿದ್ದಾರೆ.

'ಹಲವು ವರ್ಷಗಳ ಕಾಲ ಸ್ನೇಹಿತರಾಗಿದ್ದು ಆಮೇಲೆ ಮದುವೆ ಮಾಡಿಕೊಂಡಿದ್ದು. ನಾವು ಸುಮ್ಮನೆ ಮಾತನಾಡಿರುತ್ತೀವಿ ಅದನ್ನು ಎಲ್ಲರೂ ಗಂಭೀರವಾಗಿ ಪರಿಗಣಿಸಿದ್ದಾರೆ. ನಾನು ಸೆನ್ಸಿಬಲ್ ಆಗಿಲ್ಲ...ನಾನು ಜಾಸ್ತಿ ಸೆನ್ಸಿಲ್ ಆಗಿ ಇರಬೇಕು. ಕ್ಯಾಮೆರಾ ಎದುರು ಮಾತನಾಡುವ ಮುನ್ನ ಯೋಚನೆ ಮಾಡಬೇಕು. ಇನ್ನು ಕಲಿಯುತ್ತಿರುವೆ. ನನ್ನ ಸಂಬಂಧ ಅಷ್ಟು ಸ್ಟ್ರಾಂಗ್ ಅಗಿ ಇರಲಿಲ್ಲ ಅಂದಿದ್ದು ನಾವು ಜಗಳ ಮಾಡುತ್ತಿರಲಿಲ್ಲ' ಎಂದು ಅಂಕಿತಾ ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಬಿಗ್‌ಬಾಸ್‌ ನಂತರ ಪತ್ನಿ ಅಂಕಿತಾ ಲೋಖಂಡೆ ಜತೆಗಿನ ಸಂಬಂಧದ ಬಗ್ಗೆ ಮೌನ ಮುರಿದ ವಿಕ್ಕಿ ಜೈನ್

'ಸಾಮಾನ್ಯವಾಗಿ ಕಪಲ್‌ಗಳು ಜಗಳ ಮಾಡುತ್ತಾರೆ ಆದರೆ ನಮ್ಮ ಜಗಳ ಟಿವಿಯಲ್ಲಿ ಬರುತ್ತಿದೆ. ಇದರಿಂದ ನಮ್ಮ ಸಂಬಂಧ ಇನ್ನು ಗಟ್ಟಿಯಾಗಿದೆ. ಈಗ ನಾನು ಎಲ್ಲಿ ತಪ್ಪು ಮಾಡುತ್ತಿದ್ದೆ ಎಂದು ಅರ್ಥವಾಗಿದೆ ಹಾಗೂ ವಿಕ್ಕಿ ಕೂಡ ತಪ್ಪು ತಿಳಿದುಕೊಂಡಿದ್ದಾರೆ. ಮೊದಲಿಗಿಂತ ನಾವು ಈಗ ಸ್ಟ್ರಾಂಗ್ ಆಗಿದ್ದೀವಿ' ಎಂದು ಹೇಳುವ ಮೂಲಕ ಡಿವೋರ್ಸ್ ವಿಚಾರಕ್ಕೆ ಅಂಕಿತಾ ಬ್ರೇಕ್ ಹಾಕಿದ್ದಾರೆ. ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿಸಿದ ಮೊದಲ ಜೋಡಿನೇ ಇವರಿಬ್ಬರು.