ಕರ್ನಾಟಕದಲ್ಲಿ ತನ್ನ ತಪ್ಪಿನಿಂದಾಗಿ ಜೈಲಿಗೆ ಹೋಗಿ ಬಂದಿರುವ ಕನ್ನಡದ ನಟ, ನನಗೆ ಮೀಡಿಯಾ ಎಂದರೆ ಭಯ ಎಂದು ಕಾರ್ಯಕ್ರಮದ ವೇದಿಕೆಯೊಂದಲ್ಲಿ ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ಯಾರು ಆ.. ನಟ ಇಲ್ಲಿದೆ ನೋಡಿ ವಿವರ..
ಬೆಂಗಳೂರು (ಮಾ.02): ಚಿತ್ರರಂಗದ ನಟ, ನಟಿಯರಿಗೆ ಸಿನಿಮಾ ಹೊರತಾಗಿ ನಿಜ ಜೀವನದಲ್ಲಿ ಹೇಗಿರುತ್ತಾರೆ ಎಂಬುದನ್ನು ತೋರಿಸುವ ಮಾಧ್ಯಮಗಳು ಕೆಲವರಿಗೆ ಖ್ಯಾತಿ ತಂದುಕೊಟ್ಟರೆ, ಬೆರಳೆಣಿಕೆ ಜನರಿಗೆ ಅಪಖ್ಯಾತಿ ತಂದುಕೊಟ್ಟಿವೆ. ಇದರಿಂದಾಗಿ ಏನ್ರೀ ಮೀಡಿಯಾ.. ಎಂದು ಮಾತನಾಡುವವರ ಮುಂದೆ ಇಲ್ಲೊಬ್ಬ ಜೈಲಿಗೆ ಹೋಗಿ ಬಂದಿರುವ ನಟ ಮೀಡಿಯಾ ಎಂದರೆ ಭಯ ಎಂದು ಬಹಿರಂಗವಾಗಿ ಹೇಳಿಕೊಂಡಿದ್ದಾನೆ. ಇಲ್ಲಿದೆ ನೋಡಿ ಆ ಹೀರೋ ಪರಿಚಯ..
ಕನ್ನಡ ಚಿತ್ರರಂಗ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲಿ ಅನೇಕ ನಾಯಕ, ನಾಯಕರನ್ನು ತುಂಬಾ ಎತ್ತರಕ್ಕೆ ಬೆಳೆಯಲು ಅಭಿಮಾನಿಗಳು ಒಂದೆಡೆ ಕಾರಣವಾದರೆ, ಅವರ ಸಾಧನೆಗಳನ್ನು ಜನರಿಗೆ ತಿಳಿಸಿ ಉತ್ತಮ ಅಭಿಪ್ರಾಯ ಮೂಡುವಂತಹ ಕೆಲಸ ಮಾಡುವುದು ಮಾಧ್ಯಮಗಳು. ಒಬ್ಬ ನಟ ಅಥವಾ ನಟಿ ಸಿನಿಮಾದಲ್ಲಿ ಮಾಡುವ ಪಾತ್ರಕ್ಕೂ ಹಾಗೂ ನೈಜವಾಗಿ ಹೇಗಿರುತ್ತಾರೆ ಎಂಬುದನ್ನು ತೋರಿಸುವುದು ಈ ಮಾಧ್ಯಮಗಳು. ಆದರೆ, ಕೆಲವೊಬ್ಬರಿಗೆ ಸಿನಿಮಾ ಹೊರತಾಗಿ ಇರುವ ಕೆಟ್ಟ ಅಭ್ಯಾಸಗಳನ್ನು ಕೂಡ ಜನರ ಮುಂದೆ ಮಾಧ್ಯಮಗಳು ತೆರೆದಿಟ್ಟಿವೆ. ಅಂಥವರು ಮಾಧ್ಯಮಗಳ ಸಹವಾಸವೇ ಬೇಡ ಎಂದು ದೂರ ಉಳಿದವರೂ ಇದ್ದಾರೆ. ಅದರ ನಡುವೆ ನನಗೆ ಮೀಡಿಯಾ ಅಂದ್ರೆನೇ ಭಯ ಎಂದು ಹೇಳುವವರೂ ಇದ್ದಾರೆ. ಹೀಗಾಗಿ, ಯಾವುದೇ ಕ್ಯಾಮೆರಾ ಕಂಡರೂ ತಾನು ಮಾತನಾಡಿದ್ದು ಎಲ್ಲಿ ತಪ್ಪಾಗುತ್ತದೆ ಎನ್ನುವ ಭಯದಲ್ಲಿಯೇ ಇರುವವರೂ ಕೂಡ, ತನ್ನ ಒಂದೊಂದು ಮಾತಿನ ಮೇಲೆ ತೀವ್ರ ನಿಗಾ ಇಟ್ಟು ಮಾತನಾಡುವವರೂ ಇದ್ದಾರೆ. ಅದಕ್ಕೆ ಜ್ವಲಂತ ಸಾಕ್ಷಿಯಾಗಿ ಇಲ್ಲೊಬ್ಬ ನಾಯಕ ಇದ್ದಾರೆ ನೋಡಿ ಇವರೇ ಆ.. ಡ್ರೋನ್ ಪ್ರತಾಪ್..
ಹೌದು ಡ್ರೋನ್ ಪ್ರತಾಪ್ ಅವರು ತಮ್ಮ ಬಾಲ್ಯದಿಂದಲೇ ಮಾಧ್ಯಮಗಳ ಮುಂದೆ ಬಂದು ಪ್ರಸಿದ್ಧಿ ಹೊಂದಿದ್ದರು. ತಮಗಿದ್ದ ಡ್ರೋನ್ ಸಂಶೋಧನೆ ಮಾಡುವ ಹುಚ್ಚಿನಿಂದ ತಾವು ಕೆಲವೆಡೆ ಹೇಳಿದ್ದ ಸುಳ್ಳು ಮಾತುಗಳು ಅವರಿಗೆ ಜೀವನದಲ್ಲಿ ತುಂಬಾ ಅಪಖ್ಯಾತಿಯನ್ನು ಉಂಟುಮಾಡಿತು. ಡ್ರೋನ್ ಸಂಶೋಧಕ ಎಂದು ಎತ್ತಿ ಮೆರೆಸುತ್ತಿದ್ದ ಮಾದ್ಯಮಗಳು, ಪ್ರತಾಪ್ ಹೇಳಿದ್ದರಲ್ಲಿ ಸುಳ್ಳು ಇದೆ ಎಂದು ಗೊತ್ತಾದಾಗ ಅವರನ್ನು ತುಂಬಾ ಹೀಯಾಳಿಸಿ ಮರ್ಯಾದೆ ಹಾಳು ಮಾಡಿದ್ದೂ ಉಂಟು.. ಇದಾದ ನಂತರ ಮಾಧ್ಯಮಗಳು ಎಂದರೆ ಪ್ರತಾಪ್‌ಗೆ ಭಯ ಶುರುವಾಯಿತು. ಎಲ್ಲಿಯೂ ಮೀಡಿಯಾ ಮುಂದೆ ಕಾಣಿಸಿಕೊಳ್ಳದೇ ತಮ್ಮನ್ನು ತಾವು ಮುಚ್ಚಿಡಲು ಪ್ರಯತ್ನ ಮಾಡಿದರು.
ಇದನ್ನೂ ಓದಿ: ಡ್ರೋನ್ ಪ್ರತಾಪ್‌ಗೆ 143 ಅರ್ಥನೇ ಗೊತ್ತಿಲ್ವಾ..! ಗಗನಾ ತಬ್ಬಿಕೊಂಡು ಅಮಾಯಕನ ಥರಾ ನಾಟಕ ಮಾಡ್ತಿದ್ದಾನಾ?
ಬಿಗ್ ಬಾಸ್ ಶೋ ಬೆನ್ನಲ್ಲೇ ಸಿನಿಮಾದಲ್ಲಿ ನಟನಾದ ಪ್ರತಾಪ್:
ಕೆಲವು ವರ್ಷಗಳ ಕಾಲ ಅಜ್ಞಾತವಾಸಿಯಂತೆ ಜೀವನ ಮಾಡುತ್ತಿದ್ದ ಡ್ರೋನ್ ಪ್ರತಾಪ್‌ಗೆ ಮರುಜೀವನ ಕೊಟ್ಟಿದ್ದು ಕಲರ್ಸ್ ಕನ್ನಡ ವಾಹಿನಿಯ ಬಿಗ್ ಬಾಸ್ ರಿಯಾಲಿಟಿ ಶೋ. ಬಿಗ್ ಬಾಸ್ ಸೀಸನ್ 10ರ ರಿಯಾಲಿಟಿ ಶೋಗೆ ಸ್ಪರ್ಧಿಯಾಗಿ ಬಂದ ಡ್ರೋನ್ ಪ್ರತಾಪ್ ಒಬ್ಬ ಹಳ್ಳಿಯ ಹುಡುಗನಾಗಿ ತಾನು ಹೇಳಿದ್ದ ಸುಳ್ಳಿಗೆ ಕರುನಾಡಿನ ಜನತೆ ಮುಂದೆ ಕ್ಷಮೆ ಕೇಳುತ್ತಾನೆ. ಇದಾದ ನಂತರ ಆತ ನಡೆದುಕೊಂಡ ಎಲ್ಲ ಚಟುವಟಿಕೆಗಳೂ ಕೂಡ ಜನರಿಗೆ ಇಷ್ಟವಾಗಿದ್ದರಿಂದ ಅವರನ್ನು ಫಿನಾಲೆಗೆ ಬರುವಂತೆ ಹಾಗೂ ರನ್ನರ್ ಅಪ್ ಆಗುವಂತೆ ಮಾಡಿದ್ದಾರೆ. ಇದಾದ ನಂತರ ಡ್ರೋನ್ ಪ್ರತಾಪ್ ಅವರು ಸಿನಿಮಾವೊಂದರಲ್ಲಿ ನಟಿಸುವುದಕ್ಕೂ ಸಹಿ ಹಾಕಿದ್ದಾರೆ. ಆದರೆ, ಸಿನಿಮಾದ ಟೈಟಲ್ ಇನ್ನೂ ಬಹಿರಂಗವಾಗಿಲ್ಲ. ಹೀಗಾಗಿ, ಅವರನ್ನು ಇದೀಗ ನಟ ಎಂದೇ ಹೇಳಬಹುದು.
ಜೈಲಿಗೆ ಹೋಗಿಬಂದ ಡ್ರೋನ್ ಪ್ರತಾಪ್: ತಾನು ಹೇಳುತ್ತಿದ್ದ ಮಾತಿನಂತೆ ಡ್ರೋನ್ ಅನ್ನು ಕಂಡುಹಿಡಿದು ಅದಕ್ಕೆ ಒಂದು ಸಂಸ್ಥೆಯನ್ನು ಸ್ಥಾಪಿಸಿ ರೈತರಿಗೆ ಡ್ರೋನ್ ಪೂರೈಕೆ ಮಾಡುವುದಾಗಿ ಹೇಳುತ್ತಾನೆ. ಅದೇ ರೀತಿ ಕೆಲವೊಂದು ಡ್ರೋನ್‌ಗಳನ್ನು ಕೂಡ ಸಿದ್ಧಪಡಿಸಿದ್ದಾನೆ. ಇದಾದ ನಂತರ ತುಮಕೂರಿನ ಒಂದು ಫಾರ್ಮ್ ಹೌಸ್‌ನಲ್ಲಿ ನೀರಿನ ಕೊಳಕ್ಕೆ ಸ್ಫೋಟಕವೊಂದನ್ನು ಎಸೆದು ಸ್ಪೋಟಿಸುತ್ತಾನೆ. ಈ ವಿಡಿಯೋವನ್ನು ತುಂಬಾ ಖುಷಿಯಿಂದ ಪ್ರತಾಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾನೆ. ಆದರೆ, ಇದೇ ದೃಶ್ಯಗಳು ಮಾಧ್ಯಮಗಳಲ್ಲಿ ತಪ್ಪು ಎಂಬಂತೆ ವರದಿಗಳು ಬಿಂಬಿತವಾಗುತ್ತದೆ. ನೀರಿನಲ್ಲಿ ಸ್ಪೋಟಿಸಿದ್ದರಿಂದ ಜಲಚರಗಳಿಗೆ ಹಾನಿಯಾಗಿದೆ ಎನ್ನುವುದು ಒಂದೆಡೆಯಾದರೆ, ಮತ್ತೊಂದೆಡೆ ಭಯಂಕರ ಸ್ಪೋಟದ ಕೃತ್ಯದ ಪ್ರಯೋಗಳು ಕೆಟ್ಟ ಉದ್ದೇಶಕ್ಕೂ ಬಳಕೆ ಮಾಡಬಹುದು ಎನ್ನುವುದು ಮತ್ತೊಂದು ವಾದವಾಗಿತ್ತು. ಇದರ ಬೆನ್ನಲ್ಲಿಯೇ ಪ್ರಕರಣ ದಾಖಲಿಸಿಕೊಂಡ ತುಮಕುರು ಪೊಲೀಸರು ಡ್ರೋನ್ ಪ್ರತಾಪ್‌ನಲ್ಲಿ ಬಂಧಿಸಿ ಜೈಲಿಗಟ್ಟುತ್ತಾರೆ. ಇದೀಗ ಜಾಮೀನಿನ ಮೇಲೆ ಡ್ರೋನ್ ಪ್ರತಾಪ್ ಹೊರಗಿದ್ದಾರೆ. ಈ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ.
ಇದೆಲ್ಲದರ ನಡುವೆ ಡ್ರೋನ್ ಪ್ರತಾಪ್ ಅವರು ಜೀ ಕನ್ನಡ ವಾಹಿನಿಯಲ್ಲಿ ನಡೆಯುವ ಭರ್ಜರಿ ಬ್ಯಾಚುಲರ್ಸ್ ಸೀಸನ್-2ರ ಸ್ಪರ್ಧಿಯಾಗಿ ಬಂದಿದ್ದಾರೆ. ಈ ವೇದಿಕೆಯಲ್ಲಿ ಮೈಚಳಿ ಬಿಟ್ಟು ಮಾತನಾಡದೇ ತುಂಬಾ ಆಲೋಚನೆ ಮಾಡಿ ಮಾತನಾಡುವ ಪ್ರತಾಪ್‌ಗೆ ನಟಿ ಹಾಗೂ ಶೋ ಜಡ್ಜ್ ರಚಿತಾ ರಾಮ್ ಒಂದು ಸಲಹೆ ಕೊಡುತ್ತಾರೆ. ಈ ಶೋನಲ್ಲಿ ಚಿತರದುರ್ಗದ ಯುವತಿ ಗಗನಾ ಭಾರಿಗೆ ಜೋಡಿಯಾಗಿ ಆಯ್ಕೆಯಾದ ಡ್ರೋನ್ ಪ್ರತಾಪ್ ಜೋಡಿಯನ್ನು ನೋಡಿದ ನಟಿ ರಚಿತಾ ರಾಮ್ ಅವರು, 'ಇವರಿಬ್ಬರ ಜೋಡಿ ನನಗೆ ತುಂಬಾ ಇಷ್ಟ ಆಯಿತು. ಏಕೆರಂದತೆ ಪ್ರತಾಪ್ ಅವರು ತುಂಬಾ ಸೈಲೆಂಟ್ ಆಗಿರುತ್ತಾರೆ. ಅವರು ಎಲ್ಲದನ್ನೂ ತುಂಬಾ ಕಾನ್ಸಿಯಸ್ ಆಗಿ ಮಾತನಾಡುತ್ತಾರೆ. ಆದರೆ, ನಿಮಗೆ ಯಾಕೆ ಮಾತನಾಡುವಾಗ ಅಷ್ಟೊಂದು ಮುಜುಗರ ಅಥವಾ ಹಿಂಜರಿಕೆ' ಎಂದು ಕೇಳುತ್ತಾರೆ.
ಇದನ್ನೂ ಓದಿ: ಈ ನಟಿ ಇದ್ದಿದ್ದರೆ ತ್ರಿಶಾ, ನಯನತಾರಾ, ಶ್ರೀಯಾಗೆ ಮಾರುಕಟ್ಟೆಯೇ ಇರ್ತಿರಲಿಲ್ಲ; ಒಂದು ನಿರ್ಧಾರದಿಂದ ಜೀವವೇ ಹಾಳಾಯ್ತು!
ಡ್ರೋನ್ ಪ್ರತಾಪ್ - ' ಮೀಡಿಯಾ ಅಂದ್ರೆ ಭಯ ಮೇಡಂ' ಎಂದು ಹೇಳುತ್ತಾನೆ.
ರಚಿತಾ ರಾಮ್ - ಅಯ್ಯೋ..! ದೇವ.. ಎಂತಹ ಒಳ್ಳೆಯ ಪ್ಲಾಟ್‌ಪಾರ್ಮ್ ಗೊತ್ತಾ ಇದು ಪ್ರತಾಪ್. ನೀವು ನೀವಾಗಿದ್ದು, ನೀಉ ಏನು ಬೇಕಾದರೂ ಮಾತನಾಡಬಹುದು ಇಲ್ಲಿ. ಯಾರೊಬ್ಬರೂ ನಿಮ್ಮನ್ನು ಜಡ್ಜ್ ಮಾಡೋದಿಲ್ಲ. ಅದನ್ನೆಲ್ಲಾ ತಲೆಯಿಂದ ಬಿಟ್ಹಾಕಿ. ಯಾರಿಗೋಸ್ಕರ ಬದುಕುತ್ತಿದ್ದೀರಿ ನೀವು..? ನೀವು ಭರ್ಜರಿ ಬ್ಯಾಚುಲರ್ಸ್ ಶೋಗೆ ಬಂದ ಮೊದಲ ದಿನ ಏನು ಹೇಳಿದ್ರಿ ಹೇಳಿ ನೀವು?
ಪ್ರತಾಪ್ - 'ಐ ವಿಲ್ ಗಿವ್ ಮೈ 100 ಪರ್ಸೆಂಟ್' (ನಾನು ನನ್ನಿಂದಾಗುವ ಶೇ.100 ಪರಿಶ್ರಮ ಹಾಕುತ್ತೇನೆ) ಎಂದು ಹೇಳಿದ್ದೆ ಮೇಡಂ.
ರಚಿತಾ ರಾಮ್ - ಮೊದಲ ಎಪಿಸೋಡ್ ಟೆಲಿಕಾಸ್ಟ್ ಆಗಿದ್ದನ್ನು ನೋಡಿದಾಗ ನನಗೆ ಅನಿಸ್ತು. ಯಾಕೆ ಪ್ರತಾಪ್ ಇಷ್ಟೊಂದು ಸೊಫೆಸ್ಟಿಕೆಟೆಡ್ ಆಗಿದ್ದಾರೆ ಎಂದು. ನೀವು ಸರಿಯಾಗಿ ಕಾನ್ಫಿಡೆಂಟ್ ಆಗಿ ಇರಿ ಎಂದು ಧೈರ್ಯ ತುಂಬುತ್ತಾರೆ.
