Asianet Suvarna News Asianet Suvarna News

ಲೆಕ್ಕವಿಲ್ಲದಷ್ಟು ದಿನ ಅತ್ತಿರುವೆ; ಡಿಪ್ರೆಶನ್- ಸಾವು ಬಗ್ಗೆ ಚೈತ್ರಾ ವಾಸುದೇವನ್ ಹೇಳಿಕೆ ವೈರಲ್

ಒತ್ತಡದಿಂದ ಜನರು ಮಾತನಾಡುತ್ತಿರುವ ಸಾವು ಮತ್ತು ಡಿಪ್ರೆಶನ್‌ಗಳ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ನಿರೂಪಕಿ ಚೈತ್ರಾ ವಾಸುದೇವನ್..
 

Bigg boss Anchor Chaitra Vasudevan talks about Stress Depression and self love vcs
Author
First Published Sep 5, 2023, 10:57 AM IST

ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕಿ ಹಾಗೂ ಬಿಗ್ ಬಾಸ್ ಸ್ಪರ್ಧಿ ಚೈತ್ರಾ ವಾಸುದೇವನ್ ಕೆಲಸದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದರೂ ಸಮಯ ಮಾಡಿಕೊಂಡು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಕೆಲವು ದಿನಗಳ ಹಿಂದೆ ವೈಯಕ್ತಿಕ ಜೀವನದಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಬಹಿರಂಗ ಪಡಿಸಿದ್ದರು. ತಾವು ಸದಾ ಖುಷಿಯಾಗಿರಲು ಕಾರಣ ಏನೆಂದು ರಿವೀಲ್ ಮಾಡಿದ್ದಾರೆ. 

'ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನರು ಒತ್ತಡದಿಂದ ಆಗುತ್ತಿರುವ ಸಾವು ಡಿಪ್ರೆಶನ್ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ಮಾನಸಿಕ ನೆಮ್ಮದಿಗೆ ಆದಷ್ಟು ಆದ್ಯತೆ ನೀಡಬೇಕು. ನನ್ನ ಜೀವನದಲ್ಲಿ ಕೆಲವು ತಿಂಗಳುಗಳು ಕೆಲವು ವರ್ಷಗಳ ಕಾಲ ನನ್ನ ಮನಸ್ಸಿನಲ್ಲಿರುವ ನೋವು ಯಾರಿಗೂ ಹೇಳಿಕೊಳ್ಳಬಾರದು ಎಂದು ತೀರ್ಮಾನ ಮಾಡಿದ್ದೆ ಹೀಗಾಗಿ ಸದಾ ನಗುತ್ತಿದ್ದೆ ಹಾಗೂ ಓವರ್ ಆಗಿ ಮಾತನಾಡುವ ಮೂಲಕ ನನ್ನ ಮನಸ್ಸಿನಲ್ಲಿರುವ ನೋವು ಅಥವಾ ಬೇಸರವನ್ನು ಕವರ್ ಅಪ್ ಮಾಡಿಕೊಳ್ಳುತ್ತಿದ್ದೆ. ಹೀಗೆ ಸಾಕಷ್ಟು ಮಂದಿ  ನಮ್ಮಲ್ಲಿರುವ ನೋವು ಯಾರಿಗೂ ಹೇಳಿಕೊಳ್ಳಬಾರದು ಅದು ನನ್ನಲ್ಲಿ ಇರಲಿ ಎನ್ನುವ ರೀತಿಯಲ್ಲಿರುತ್ತಾರೆ. ಜೀವನ ತುಂಬಾ ದೊಡ್ಡದು ನಾವು ನೋಡುವ ರೀತಿ ಬದಲಾಗಬೇಕು ಈಗ ನಮಗೆ ಈ ರೀತಿ ಪರಿಸ್ಥಿತಿ ಇರಬಹುದು ಈಗ ಸಮಸ್ಯೆ ಇರಬಹುದು ಒಂದಲ್ಲ ಒಂದು ದಿನ ಎಲ್ಲವೂ ಸರಿ ಹೋಗುತ್ತದೆ ಬದಲಾಗುತ್ತದೆ. ದೇವರು 5 ಬೆರಳು ಒಂದೇ ರೀತಿ ಕೊಟ್ಟಿರುವುದಿಲ್ಲ ನಮ್ಮ ಜೀವನದಲ್ಲಿ 10 ಬೇಡಿಕೆ ಇಟ್ಟರೆ 7 ಕೊಟ್ಟು 3 ಕಿತ್ತುಕೊಂಡಿರುತ್ತಾನೆ. ಕೆಲವರಿಗೆ ಫ್ಯಾಮಿಲಿ ಇರುತ್ತೆ ದುಡ್ಡಿರಲ್ಲಿ ಆರೋಗ್ಯ ಇರಲ್ಲ, ಕೆಲವರು ಆರೋಗ್ಯವಾಗಿರುತ್ತಾರೆ ಆದರೆ ಕುಟುಂಬ ಮತ್ತು ಹಣ ಇರುವುದಿಲ್ಲ ಇನ್ನೂ ಕೆಲವರಿಗೆ ಹಣ ತುಂಬಿರುತ್ತದೆ ಆದರೆ ಅವರೊಟ್ಟಿಗೆ ಫ್ಯಾಮಿಲಿ ಇರಲ್ಲಿ ಒಳ್ಳೆ ಆರೋಗ್ಯ ಇರಲ್ಲ...ಎಲ್ಲರಿಗೂ ಎಲ್ಲ ರೀತಿ ಸಮಸ್ಯೆಗಳು ಇರುತ್ತದೆ. ನಾವು ಈಗ ಎದುರಿಸುತ್ತಿರುವ ಸಂದರ್ಭ ಆಗಿದ್ದು ಒಳ್ಳೆಯದಾಯ್ತು ಎಷ್ಟೋ ದೊಡ್ಡದಾಗುತ್ತಿತ್ತು ಆದರೆ ಇಷ್ಟೇ ಇಷ್ಟು ಆಗಿದೆ' ಎಂದು ಚೈತ್ರಾ ವಾಸುದೇವನ್ ರೆಡಿಯೋ ಸಿಟಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

5 ವರ್ಷ ಅನ್ಯೋನ್ಯವಾಗಿ ಬಾಳಲು ಪ್ರಯತ್ನಪಟ್ಟಿದ್ದೀನಿ: ಡಿವೋರ್ಸ್‌ ಬಗ್ಗೆ ಮೌನ ಮುರಿದ ಚೈತ್ರಾ ವಾಸುದೇವನ್!

ನನ್ನ ಜೀವನದಲ್ಲಿ ಒಂದು ಸಮಯ ಇತ್ತು ಎಲ್ಲೋ ಹೋಗಬಾರದು ಸುಮ್ಮನೆ ಕುಳಿತಿರಬೇಕು ಏನೂ ಮಾಡಬಾರದು ಅನ್ನೋ ಮನಸ್ಥಿತಿಯಲ್ಲಿದ್ದೆ. ಇದನ್ನು ಡಿಪ್ರೆಶನ್ ಎಂದು ಕರೆಯುವುದಕ್ಕೆ ನನಗೆ ಇಷ್ಟವಿಲ್ಲ ಆದರೆ ಏನೂ ಮಾಡುವುದಕ್ಕೆ ಇಷ್ಟ ವಿರಲಿಲ್ಲ. ನನ್ನ ಲೈಫ್‌ನ ತುಂಬಾ ಚೆನ್ನಾಗಿ ಫ್ಲಾನಿಂಗ್ ಮಾಡಿದ್ದೆ ಹೀಗೇ ಇರಬೇಕು ಈ ಸಮಯಕ್ಕೆ ಹೀಗೆ ಆಗಬೇಕು ಎಂದು ಆದರೆ ಎಲ್ಲಾ ಉಲ್ಟಾ ಪಲ್ಟಾ ಆಯ್ತು ಅಂತ ಬೇಸರ ಆಯ್ತು. ನನಗೆ ತುಂಬಾ ಬೇಸರ ಆಯ್ತು ಹಣೆಯಲ್ಲಿ ದೇವರು ಬರೆದಿರುವುದನ್ನು ಬದಲಾಯಿಸುವುದಕ್ಕೆ ಆಗಲ್ಲ. ಮೈಂಡ್ ಫ್ರೆಶ್ ಮಾಡಿಕೊಳ್ಳಲು ಫಿಟ್ನೆಸ್‌ ಕಡೆ ಹೆಚ್ಚಿನ ಗಮನ ಕೊಡಲು ಶುರು ಮಾಡಿದೆ ಸೆಲ್ಫ್‌ ಕೇರ್ ಮಾಡಲು ಶುರು ಮಾಡಿದ್ದೆ ಸ್ವಲ್ಪ ಸ್ವಾರ್ಥಿಯಾಗಿ ನಮ್ಮನ್ನು ಕೇರ್ ಮಾಡಬೇಕು. ಕುಟುಂಬದಲ್ಲಿ ಅಥವಾ ಆಪ್ತರಲ್ಲಿ ಯಾರಿಗಾದರೂ ನಮ್ಮ ಸಮಸ್ಯೆ ಹೇಳಿಕೊಳ್ಳಬೇಕು ಆಗ ಅವರಿಂದ ಬರುವ ಧೈರ್ಯ ನಮ್ಮನ್ನು ಗಟ್ಟಿ ಮಾಡುತ್ತದೆ. ಸಮಸ್ಯೆ ಬಗ್ಗೆ ಹೆಚ್ಚಿಗೆ ಚಿಂತೆ ಮಾಡಬೇಡಿ...ಹೇಳಲು ಆಗಲ್ಲ ಅಷ್ಟು ಅತ್ತಿರುವೆ ಲೆಕ್ಕವಿಲ್ಲದಷ್ಟು ಕಣ್ಣೀರಿಟ್ಟಿರುವೆ ಈಗ ಯೋಚನೆ ಮಾಡಿದರೆ ಸಮಯ ವೇಸ್ಟ್ ಆಯ್ತು ಅನಿಸುತ್ತದೆ. ಸುಮ್ಮನೆ ಕೂರಬೇಡಿ ಅಡುಗೆ ಮಾಡಿ ಸೆಲ್ಫ್‌ ಕೇರ್ ಮಾಡಿ ಏನಾದರೂ ಮಾಡಿ. ಎಷ್ಟು ಅತ್ತಿ ಎಷ್ಟು ಟೈಮ್ ವೇಸ್ಟ್ ಮಾಡಿದ್ದೀನಿ ಅಂದ್ರೆ ಸೋಷಿಯಲ್ ಮೀಡಯಾದಲ್ಲಿ ಯಾರಿಗೂ ಪ್ರಾಬ್ಲಂ ತೋರಿಸಿಕೊಳ್ಳುತ್ತಿರಲಿಲ್ಲ' ಎಂದು ಚೈತ್ರಾ ವಾಸುದೇವನ್ ಹೇಳಿದ್ದಾರೆ. 

Follow Us:
Download App:
  • android
  • ios