ಹೊಡೆಯುತ್ತೇನೆ ಕೋಪ ಬರುತ್ತೆ ಸೈಕ್ ಮಾಡಬೇಡಿ ಎನ್ನುತ್ತಿದ್ದ ನವಾಜ್ ಕಣ್ಣೀರಿಟ್ಟಿದ್ದಾರೆ. ಇಡೀ ಮನೆಗೆ ಬೇಸರವಾಗಿದೆ....

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ಎರಡನೇ ವಾರ ಮುಗಿಸಿ ಮೂರನೇ ವಾರಕ್ಕೆ ಕಾಲಿಟ್ಟಿದೆ. ಪ್ರತಿಯೊಬ್ಬರಲ್ಲೂ ಇರುವ ಹಿಡನ್ ಟ್ಯಾಲೆಂಟ್ ಹೊರ ಬರುತ್ತಿದೆ. ಇವ್ರು ಸೈಲೆಂಟ್ ಜಾಸ್ತಿ ದಿನ ಇರಲ್ಲ ಎಂದು ಲೆಕ್ಕಚಾರ ಮಾಡಿದ್ದವರು ದಡ್ಡರು ಏಕೆಂದರೆ ಅತಿ ಹೆಚ್ಚು ವೋಟ್ ಪಡೆದು ಸೇಫ್ ಆಗುತ್ತಿರುವುದು ಅವರೇ. ಒಟ್ಟಿನಲ್ಲಿ ಮೂರನೇ ವಾರಕ್ಕೆ ಆರ್ಯವರ್ಧನ್ ಕ್ಯಾಪ್ಟನ್ ಆಗಿರುವ ಕಾರಣ ಇಡೀ ಮನೆ ಹೇಗಿರುತ್ತದೆ ಅನ್ನೋ ಕುತೂಹಲ ಹೆಚ್ಚಿದೆ.

ವೀಕೆಂಡ್ ಆರಂಭವಾಗುವ ಮುನ್ನ ರೂಪೇಶ್ ಶೆಟ್ಟಿ ತಂದೆಯ ಬಗ್ಗೆ ಹಾಡು ಬರೆಯುತ್ತಾರೆ. ಪ್ರತಿಯೊಬ್ಬರೂ ಭಾವುಕರಾಗುತ್ತಾರೆ ಮನಸ್ಸಿನಲ್ಲಿ ತಂದೆಯನ್ನು ನೆನಪಿಸಿಕೊಂಡು ಸುಮ್ಮನಾಗುತ್ತಾರೆ. ಆದರೆ ಸೈಕ್ ನವಾಜ್ ಮಾತ್ರ ಒಂದು ಮೂಲೆಯಲ್ಲಿ ಕುಳಿತುಕೊಂಡು ಕಣ್ಣೀರಿಡುತ್ತಾರೆ. ಇದನ್ನು ಗಮನಿಸಿದ ನೇಹಾ ಗೌಡ ಮತ್ತು ರೂಪೇಶ್ ಮಾತನಾಡಿಸುವ ಪ್ರಯತ್ನ ಮಾಡುತ್ತಾರೆ. ಆಗ ತಂದೆ ಮಾಡಿರುವ ತ್ಯಾಗ, ಶ್ರಮ ನೆನಪಿಸಿಕೊಳ್ಳುತ್ತಾರೆ ನವಾಜ್.

ರೂಪೇಶ್: ಯಾಕೆ ಅಳುತ್ತಿರುವೆ? ಇಷ್ಟೊಂದು ಒಳ್ಳೆಯ ಮನಸ್ಸು ಇದೆ ನಿನಗೆ. ಬಿಗ್ ಬಾಸ್ ಮನೆಯಿಂದ ಹೊರ ಹೋದ ಮೇಲೆ ಅಪ್ಪಂಗೆ ಒಂದು hug ಕೊಡಬೇಕು. ಐ ಲವ್ ಯು ಅಪ್ಪ ಅಂತ ಹೇಳಬೇಕು ಅಷ್ಟೆ.
ನೇಹಾ ಗೌಡ: ಮೊನ್ನೆ ಹೇಳುತ್ತಿದ್ದರು ಅವರ ಅಪ್ಪ ಎಷ್ಟು ಕಷ್ಟ ಪಡುತ್ತಾರೆ ಏನೆಲ್ಲಾ ಮಾಡುತ್ತಾರೆ ಅಂತ ಪಾಪ.
ನವಾಜ್: ಜೀವನದಲ್ಲಿ ಎಷ್ಟೇ ಕಷ್ಟ ಬಂದ್ರೂ...ನಮ್ಮ ಅಪ್ಪ ಯಾವಾಗ ಸಾಯ್ತಾರೆ ಗೊತ್ತಿಲ್ಲ ಆದರೆ ಸಾಯೋವರೆಗೂ ಮಸ್ತಾಗಿ ರಾಜನ ತರ ನೋಡಿಕೊಳ್ಳಬೇಕು.
ವಿನೋದ್: ನಿಮ್ಮ ತಂದೆ ಕೂಡ ನಿನ್ನನ್ನು ರಾಜನ ತರ ಸಾಕಿದ್ದಾರೆ. ನೀನು ರಾಜನೇ ಅಂದುಕೊಂಡಿರುವುದು ಅವ್ರುನೂ. ನನ್ನ ಮಗ ರಾಜ ಅಂತ ಯಾವತ್ತಿದ್ದರೂ ಒಬ್ಬ ಅಪ್ಪನೇ ಹೇಳೋದು.
ನೇಹಾ ಗೌಡ: ಎಷ್ಟು ಕ್ಯೂಟ್ ಆಗಿ ನವಾಜ್ ಅಳುತ್ತಾನೆ ನೋಡಿ.
ರೂಪೇಶ್: ಚುಚ್ಚುತ್ತೀನಿ ಕೊಚ್ಚುತ್ತೀನಿ ಅಂತಾನೆ ಅಪ್ಪನ ಬಗ್ಗೆ ಹೇಳಿದ ತಕ್ಷಣ ಅಳುತ್ತಾನೆ

ಎಲ್ಲರ ಧೈರ್ಯದ ಮಾತಗಳನ್ನು ಕೇಳಿ ನವಾಜ್‌ ಸಮಾಧಾನ ಮಾಡಿಕೊಳ್ಳುತ್ತಾರೆ.

BBK9 100 ಚಡ್ಡಿ ಕೊಡ್ಸು ಅಂದ್ರೆ ಬರೀ 6 ಚಡ್ಡಿ ಕೊಡ್ಸಿದ್ದಾರೆ ನಮ್ಮಪ್ಪ: ಸೈಕ್ ನವಾಜ್

ಬಟ್ಟೆ ಕಳುಹಿಸಿದವರಿಗೆ ಥ್ಯಾಂಕ್ಸ್‌ ಹೇಳಿದ ನವಾಜ್:

ತುಂಬಾ ಕಷ್ಟಗಳನ್ನು ನೋಡಿಕೊಂಡು ಬೆಳೆಯುತ್ತಿರುವ ನವಾಜ್‌ ಬಿಗ್ ಬಾಸ್ ಪ್ರವೇಶಿಸುವಾಗಲೂ ಕಡಿಮೆ ಬಟ್ಟೆ ತಂದಿದ್ದರು. ಹೀಗಾಗಿ ಹಬ್ಬದ ದಿನ ವಿಶೇಷವಾಗಿ ಧರಿಸಲು ಯಾವ ಉಡುವು ಇರಲಿಲ್ಲ. ವಿಜಯದಶಮಿ ಹಬ್ಬದ ದಿನ ಚಡ್ಡಿ ಶರ್ಟ್‌ ಧರಿಸಿ ನವಾಜ್ ಓಡಾಡುವಾಗ ಸ್ಟೋರ್‌ ರೂಮ್‌ನಲ್ಲಿ ಗೋಲ್ಡನ್ ಬಝರ್ ಹೊಡೆಯುತ್ತದೆ. ಆಗ ಬಾಗಿಲು ತೆರೆದು ನೋಡಿದಾಗ ನವಾಜ್‌ಗೆ ಬುಟ್ಟಿಯಲ್ಲಿ ಡಿಸೈನರ್ ಡ್ರೆಸ್‌ ಬಂದಿರುತ್ತದೆ. 

ಸಂತೋಷಕ್ಕೆ ಹೇಗೆ ರಿಯಾಕ್ಟ್‌ ಮಾಡಬೇಕು ಎಂದು ಗೊತ್ತಾಗದೆ ನವಾಜ್ ಬಟ್ಟೆ ಹಿಡಿದುಕೊಂಡು ಬಾತ್‌ರೂಮ್‌ಗೆ ಬರುತ್ತಾರೆ. ಆಗ ತಮ್ಮ ಕಷ್ಟ ದಿನಗಳ ಬಗ್ಗೆ ನೆನಪಿಸಿಕೊಂಡು ಭಾವುಕರಾಗಿದ್ದಾರೆ. 'ಜೀವನದಲ್ಲೂ ನಾನು ಈ ರೀತಿ ಬಟ್ಟೆ ಹಾಕಿಕೊಳ್ಳುತ್ತೀನಿ ಅಂತ ಅಂದುಕೊಂಡಿರಲಿಲ್ಲ. ನಾನು ಒಂದು ಸತ್ಯ ವಿಚಾರ ಹಂಚಿಕೊಳ್ಳುತ್ತೀನಿ ನನ್ನ ಲೈಫಲ್ಲಿ ಮನೆಯಲ್ಲಿ ಅಥವಾ ಹೊರಗಡೆ ಹೋದಾಗ ಕೇವಲ ಎರಡು ಜೋಡಿ ಬಟ್ಟೆ ಇತ್ತು ಅದೇ ಹಾಕಿಕೊಳ್ಳುತ್ತಿದ್ದೆ. ಎರಡು ಜೀನ್ಸ್‌ ಪ್ಯಾಂಟ್‌ ಮತ್ತು ನಾಲ್ಕು ಶರ್ಟ್‌. ಎಲ್ಲಿ ಹೋದರೂ ಅದೇ ಹಾಕಿಕೊಳ್ಳುತ್ತಿದ್ದೆ ಎಷ್ಟರ ಮಟ್ಟಕ್ಕೆ ಹಾಕಿಕೊಳ್ಳುತ್ತಿದ್ದೆ ಅಂದ್ರೆ ಎಲ್ಲರೂ ಕೇಳುತ್ತಿದ್ದರೂ ಏನೂ ಬಟ್ಟೆ ಇಲ್ವಾ? ಅದೇ ಹಾಕೊಂಡು ಬರ್ತೀಯಾ ಅಂತ. ಆಗ ಸುಳ್ಳು ಹೇಳುತ್ತಿದ್ದೆ. ನನಗೆ ಚೆನ್ನಾಗಿ ಕಾಣಿಸುತ್ತದೆ ಮಸ್ತ್ ಆಗಿರುತ್ತೆ ಅಂತ ಹೇಳಿ ಸುಮ್ಮನಾಗುತ್ತಿದ್ದೆ. ಯಾರು ಈ ಬಟ್ಟೆಗಳನ ಕಳುಹಿಸಿಕೊಟ್ಟಿದ್ದಾರೆ ಗೊತ್ತಿಲ್ಲ ಆದರೆ ಅವರಿಗೆ ನಾನು ಥ್ಯಾಂಕ್ಸ್‌ ಹೇಳುವೆ' ಎಂದು ಮಾತನಾಡಿರುವ ನವಾಜ್ ಭಾವುಕರಾಗುತ್ತಾರೆ. ಕ್ಯಾಮೆರಾಗಳ ಕಡೆ ಮುಖ ಮಾಡಿ ಕೈ ಮುಗಿದು ಯಾರು ಬಟ್ಟೆ ಕಳುಹಿಸಿಕೊಟ್ಟಿದ್ದೀರಾ ನನಗೆ ಗೊತ್ತಿಲ್ಲ ನಿಮಗೆ ನಾನು ಕೈ ಮುಗಿದು ಧನ್ಯವಾದಗಳನ್ನು ಹೇಳುತ್ತೀನಿ ಅಂದಿದ್ದಾರೆ.