ಈ ಬಾರಿಯ ಬಿಗ್ ಬಾಸ್ ಆರಂಭದಿಂದಲೂ ಒಂದಾದ ಮೇಲೆ ಒಂದು ಶಾಕ್ ಕೊಟ್ಟಿಕೊಂಡೇ ಬರುತ್ತಿದ್ದಾರೆ. ಮೊದಲು ಸ್ಪರ್ಧಿ ಎಂದು ಮನೆಯೊಳಗೆ ಹೋಗಿದ್ದ ಹಿರಿಯ ಪತ್ರಕರ್ತ ರವಿ ಬೆಳಗೆರೆ ನಂತರ ಗೆಸ್ಟ್ ಆಗಿ ಬದಲಾದರು.

ಮೂರನೇ ವಾರದ ಎಲಿಮಿನೇಶನ್ ಗೆ ಬಿಗ್ ಬಾಸ್ ಬಂದು ನಿಂತಿದೆ. ಮೊದಲ ವಾರ ಗೆದ್ದರೆ ಎಲ್ಲ ಹಣ ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗೆ ನೀಡುತ್ತೇನೆ ಎಂದು ಹೇಳಿದ್ದ ಗುರುಲಿಂಗ ಸ್ವಾಮೀಜಿ ಔಟ್ ಆಗಿದ್ದರು, ನಂತರ ಎರಡನೇ ವಾರದಲ್ಲಿ ನಿರೂಪಕಿ ಚೈತ್ರಾ ವಾಸುದೇವನ್ ಹೊರಬಂದಿದ್ದರು.

ಜೈಜಗದೀಶ್ ಎರಡನೇ ಮದುವೆ ಕತೆ!

ಶನಿವಾರದ ವಾರದ ಕತೆ ಕಿಚ್ಚನ ಜತೆಯಲ್ಲಿ ಮಾತನಾಡುತ್ತ ಸುದೀಪ್ ಈ ವಾರ ಒಂದು ಟ್ವಿಸ್ಟ್ ಇದೆ ಎಂದು  ಹೇಳಿದ್ದರು. ಅದರಂತೆ ಈ ವಾರ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಒಬ್ಬರು ಒಳಸೇರುವುದು ಖಚಿತವಾಗಿದೆ.

ಸುದೀಪ್ ಅವರೇ ಪ್ರೋಮೋದಲ್ಲಿ ಈ ವಿಚಾರವನ್ನು ತಿಳಿಸಿದ್ದು ಕವರ್ ಒಂದನ್ನು ಹಿಡಿದುಕೊಂಡು ಮನೆಯೊಳಗೆ ಹೋಗಲಿದ್ದಾರೆ. ಆ ಕವರ್ ನಲ್ಲಿ ಹೆಸರಿರುವ ವ್ಯಕ್ತಿ ಮನೆಯಿಂದ ಹೊರಬೀಳಲಿದ್ದಾರೆ ಎಂದು ಸುದೀಪ್ ತಿಳಿಸಿದ್ದಾರೆ.

ಹಾಗಾದರೆ ಮನೆಯೊಳಗೆ ಪ್ರವೇಶ ಪಡೆಯಲಿರುವ ವ್ಯಕ್ತಿ ಯಾರು? ಯಾವ ಕ್ಷೇತ್ರದ ಸೆಲೆಬ್ರಿಟಿ? ನಟನೋ, ನಿರ್ದೇಶಶಲನೋ ಇಂದಿನ ಎಪಿಸೋಡ್ ನಲ್ಲೇ ಗೊತ್ತಾಗಬೇಕಿದೆ.