ಬಿಗ್ ಬಾಸ್ ಮನೆಯಲ್ಲಿ ಭಾನುವಾರ ಸಂಗೀತ ಕಛೇರಿ. ರವಿ ಬೆಳಗೆರೆ ನಿರೂಪಣೆಯಲ್ಲಿ ಒಂದು ಕಾಲದ ಸೂಪರ್ ಹಿಟ್ ಕಾರ್ಯಕ್ರಮ ಎಂದೂ ಮರೆಯದ ಹಾಡು ಮರು ನಿರ್ಮಾಣವಾಯಿತು. ಆದರೆ ಇದರೊಂದಿಗೆ ಬೆಳಗೆರೆ ಹೊಸ ಘೋಷಣೆಯೊಂದನ್ನು ಮಾಡಿದರು.

ಕನ್ನಡದ ಹಿರಿಯ ನಟನೊಬ್ಬನ ಆತ್ಮ ಚರಿತ್ರೆಯನ್ನು ಬರೆಯುತ್ತೇನೆ ಎಂದು ಬೆಳಗೆರೆ ಘೋಷಣೆ ಮಾಡಿದರು. ಅದು ಬೇರೆ ಯಾರೂ ಅಲ್ಲ ಬಿಗ್ ಬಾಸ್ ಮನೆಯೊಳಗೆ ಇರುವ ಜೈಜಗದೀಶ್ ಅವರ ಆತ್ಮಚರಿತ್ರೆ ಬರೆಯುತ್ತೇನೆ ಎಂದು ಹೇಳಿದರು. ಈ ವೇಳೆ ಜೈಜಗದೀಶ್ ಅವರು ಸಹ ಜತೆಯಲ್ಲಿದ್ದರು.

ಶಂಕರ್‌ನಾಗ್ ಅವರನ್ನು ಕೋತಿ ಎಂದು ಕರೆದ ನಟಿ ಯಾರು?

ಮನೆಯಲ್ಲಿ ಒಂದು ವಾರ ಅತಿಥಿಯಾಗಿದ್ದು ಅನೇಕ ವಿಚಾರಗಳನ್ನು ಹಂಚಿಕೊಂಡರು. ಮಂಜುಳಾ, ಶಂಕರ್ ನಾಗ್, ಗೌರಿ ಲಂಕೇಶ್, ತಮ್ಮ ಅಮ್ಮ, ಅಪರಾಧ ಜಗತ್ತು, ತನಿಖಾ ಪತ್ರಿಕೋದ್ಯಮ.. ಹೀಗೆ ಅವರು ಹಂಚಿಕೊಳ್ಳದ ವಿಚಾರಗಳಿಲ್ಲ.

ಮನೆಯ ಹೆಣ್ಣು ಮಕ್ಕಳಿಗೆ ಅಪ್ಪನಾಗಿ, ಚಿಕ್ಕಪ್ಪನಾಗಿ, ತಮ್ಮನಾಗಿ, ನಿರೂಪಕನಾಗಿ, ತೀರ್ಪುಗಾರನಾಗಿ ಹೀಗೆ ಹಲವಾರು ಪಾತ್ರಗಳಲ್ಲಿ ರವಿ ಮಿಂಚಿದರು. ಅಮ್ಮನ ಚೆನ್ನಾಗಿ ನೋಡ್ಕಳಿ ಬದುಕು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತದೆ ಎಂದು ಹೇಳುತ್ತಲೇ ಮನೆಯವರಿಂದ ಮೊಗೆದಷ್ಟು ಪ್ರೀತಿ ಪಡೆದುಕೊಂಡು ಮನೆಯಿಂದ ಹೊರಬಂದರು.

 ವೇಳೆ ಬಿಗ್ ಬಾಸ್ ನೀಡಿದ 15 ಕನ್ನಡ ಚಿತ್ರಗೀತೆಗಳನ್ನು ಸ್ಪರ್ಧಿಗಳು ಹಾಡಿ ರಂಜಿಸಿದರು.  ಈ ವೇಳೆ ಆ ದಿನಗಳು ಚಿತ್ರದ ಸೂರ್ ಹಿಟ್ ಗೀತೆ ‘ಸಿಹಿ ಗಾಳಿ ಸಿಹಿ ಗಾಳಿ’ ಬಗ್ಗೆ ಮಾತು ಬಂತು. ಗೀತೆ ರಚನೆ ಮಾಡಿದ ಸುಮನಾ ಕಿತ್ತೂರು, ನಿರ್ದೇಶನ ಮಾಡಿದ ಕೆ.ಎಂ.ಚೈತನ್ಯ ಮತ್ತು ಸಂಗೀತ ನೀಡಿದ ಮಾಂತ್ರಿಕ ಇಳಯರಾಜ ಅವರಿಗೆ ಚಪ್ಪಾಳೆ ಸಲ್ಲಬೇಕು ಎಂದರು. ಅಲ್ಲದೇ ಇದಕ್ಕೆ ಚಿತ್ರಕಥೆ ಸಿದ್ಧಮಾಡಿಕೊಟ್ಟಿದ್ದು ಗಿರೀಶ್ ಕಾರ್ನಾಡರು ಎಂಬುದನ್ನು ನೆನಪಿಟ್ಟುಕೊಳ್ಳಬೇಕು ಎಂದರು.