WATCH: 'ನನಗೂ ಇಂದು ಸೆಟ್‌ಗೆ ಬರೋಕೆ ಇಷ್ಟವಿರಲಿಲ್ಲ..': ಬಿಷ್ಣೋಯ್ ಗ್ಯಾಂಗ್ ಬೆದರಿಕೆ ಬಳಿಕ ಆತಂಕದಲ್ಲಿ ಭಾಯಿಜಾನ್!
ನನಗೂ ಇಂದು ಈ ಸೆಟ್‌ಗೆ ಬರಲು ಇಷ್ಟವಿರಲಿಲ್ಲ ಆದರೆ...', ಬೆದರಿಕೆ ಬಂದ ನಂತರ ಭಾಯಿಜಾನ್ ಬಿಗ್ ಬಾಸ್ ವೇದಿಕೆಯಲ್ಲಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
Salman khan: ಬಾಬಾ ಸಿದ್ದಿಕ್ ಹತ್ಯೆಯ ನಂತರ ಸಲ್ಮಾನ್ ಖಾನ್ ಮತ್ತೊಮ್ಮೆ ಬಿಷ್ಣೋಯ್ ಗ್ಯಾಂಗ್ ನಿಂದ ಟಾರ್ಗೆಟ್ ಆಗಿದ್ದಾರೆ. ಈ ಹಿಂದಿನಿಂದಲೂ ಬೆದರಿಕೆ ಇತ್ತಾದರೂ ಇತ್ತೀಚೆಗೆ ಸಿದ್ದಿಕ್ ಹತ್ಯೆ ಬಳಿಕ ಹತ್ಯೆಯ ನಂತರ ಸಲ್ಮಾನ್ ಖಾನ್ ಗೆ ಪ್ರತಿದಿನ ಬೆದಕೆಗಳು ಬರುತ್ತಿವೆ. ಈ ಹಿನ್ನೆಲೆ ಸಲ್ಮಾನ್ ಖಾನ್ ಭದ್ರತೆ ಹೆಚ್ಚಿಸಲಾಗಿದೆ. ಸಾರ್ವಜನಿಕ ವೇದಿಕೆಗಳಲ್ಲಿ, ಸಿನಿಮಾ ಶೂಟಿಂಗ್‌ನಲ್ಲಿ ಕಾಣಿಸಿಕೊಳ್ಳದಂತೆ ಎಚ್ಚರಿಕೆ ವಹಿಸಲಾಗಿದೆ. ಹೀಗಾಗಿ ಬಿಗ್ ಬಾಸ್ ಶೂಟಿಂಗ್ ನಿಲ್ಲಿಸಿದ್ದಾರೆ ಎಂಬ ವರದಿಗಳು ಬಂದಿದ್ದವು. ಆದರೆ ಸಲ್ಮಾನ್ ಭದ್ರತೆ ನಡುವೆ ಬಿಗ್ ಬಾಸ್ ಶೂಟಿಂಗ್ ಸೆಟ್‌ಗಳಲ್ಲಿ ತೊಡಗಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲೂ ಪೊಲೀಸ್ ಬಿಗಿ ಭದ್ರತೆ ಇದೆ. ಬಿಗ್ ಬಾಸ್‌ನ ಎರಡನೇ ವಾರಾಂತ್ಯದಲ್ಲಿ, ಸಲ್ಮಾನ್ ಬಿಗ್ ಬಾಸ್ ಮನೆಯ ಸದಸ್ಯರೊಂದಿಗೆ ಮಾತನಾಡುವಾಗ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಶಿಲ್ಪಾ ಶಿರೋಡ್ಕರ್ ಮತ್ತು ಅವಿನಾಶ್ ಮಿಶ್ರಾ ನಡುವೆ ವಾಗ್ವಾದ ನಡೆದಿರುವುದು ಕಂಡುಬಂದಿದೆ. ಯಾಕೆಂದರೆ ಬಿಗ್ ಬಾಸ್ ರೇಷನ್ ಜವಾಬ್ದಾರಿಯನ್ನು ಅವಿನಾಶ್ ಗೆ ನೀಡಿದ್ದಾರೆ. ಮನೆಯ ಸ್ಪರ್ಧಿಗಳು ಏನಾದರೂ ಅಡುಗೆ ಮಾಡಬೇಕಾದರೆ ಅವಿನಾಶ್ ಅವರಿಂದ ರೇಷನ್ ತೆಗೆದುಕೊಳ್ಳಬೇಕು. ಆದರೆ ಸ್ಪರ್ಧಿಗಳಿಗೆ ಕೆಲವು ಅಗತ್ಯವಾದುದ್ದು ಮಾತ್ರ ನೀಡಲು ಅವಿನಾಶ್ ಸಿದ್ಧರಾಗಿದ್ದಾರೆ. ಆ ಸಮಯದಲ್ಲಿ ಶಿಲ್ಪಾ ನಾನ್ ವೆಜ್ ಫುಡ್ ಕೇಳುತ್ತಾಳೆ. ಆದರೆ ಅದನ್ನು ನೀಡಲು ಅವಿನಾಶ್ ನಿರಾಕರಿಸಿದ್ದಾರೆ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗಿದೆ.
Bigg Boss 18: ಸ್ಪರ್ಧಿಯಾಗಿ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿದ್ದ ಕತ್ತೆ ಒಂದೇ ವಾರದಲ್ಲಿ ಹೊರಕ್ಕೆ!
ಕೊಲೆ ಬೆದರಿಕೆಯ ಆತಂಕದಲ್ಲಿ ಸಲ್ಮಾನ್?
ಇದೇ ವೇಳೆ 'ವೀಕೆಂಡ್ ಕಾ ವಾರ್' ನಲ್ಲಿ ಸಲ್ಮಾನ್ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅವರು ಶಿಲ್ಪಾಗೆ ಹೇಳುತ್ತಾರೆ, ಶಿಲ್ಪಾ, ನಿಮ್ಮ ಮಗಳು ಊಟಕ್ಕೆ ಕೋಪಗೊಂಡಾಗ, ಅವಳಿಗೆ ಏನು ಹೇಳುತ್ತೀರಿ? ಶಿಲ್ಪಾ, 'ಸಾರ್, ಅವರು ಊಟದ ಬಗ್ಗೆ ಕೋಪಗೊಂಡಿಲ್ಲ, ಅವರ ಮೇಜ್ ಬಗ್ಗೆ ಕೋಪಗೊಂಡರು. ಆಗ ಸಲ್ಮಾನ್ ಅವಳಿಗೆ ಆ ಭಾವನೆಗಳನ್ನು ಹೇಳುತ್ತಾನೆ. 'ನನಗೆ ಇಂದು ಸೆಟ್‌ಗೆ ಬರಲು ಇಷ್ಟವಿರಲಿಲ್ಲ. ಆದರೂ ಬಂದಿದ್ದೇನೆ' ಎಂದು ಆತಂಕ ವ್ಯಕ್ತಪಡಿಸಿರುವ ಭಾಯಿಜಾನ್
ಕನ್ನಡದ ಕಿಚ್ಚ ಸುದೀಪ್ ಬೆನ್ನಲ್ಲೇ ಹಿಂದಿ ಬಿಗ್ ಬಾಸ್ ನಿರೂಪಣೆಯಿಂದ ಸಲ್ಮಾನ್ ಖಾನ್ ಹೊರಗೆ?
ಬೆದರಿಕೆ ಬಳಿಕ ಶೂಟಿಂಗ್ ನಿಲ್ಲಿಸಿದ ವದಂತಿ
ಬಿಷ್ಣೋಯ್ ಗ್ಯಾಂಗ್ ಮುಂದಿನ ಗುರಿ ಸಲ್ಮಾನ್ ಎಂಬ ಬಹಿರಂಗ ಬೆದರಿಕೆಯೊಡ್ಡಿರುವ ಹಿನ್ನೆಲೆ ಭದ್ರತೆ ಕಾರಣಗಳಿಗಾಗಿ ನಟ ಸಲ್ಮಾನ್ ಖಾನ್ ಬಿಗ್ ಬಾಸ್ 18ರ ಚಿತ್ರೀಕರಣದಿಂದ ದೂರ ಉಳಿದಿದ್ದಾರೆ ಎಂದು ಇತ್ತೀಚೆಗೆ ವರದಿಗಳು ಬಂದಿದ್ದವು. ಆದರೆ ಇವೆಲ್ಲ ಕೇವಲ ವದಂತಿಗಳು. ಈ ಬಾರಿಯ ವೀಕೆಂಡ್ ಕಾ ವಾರ್ ನಡೆಸಿಕೊಟ್ಟಿದ್ದಾರೆ. ಸಲ್ಮಾನ್ ಖಾನ್ ಬಿಗಿ ಭದ್ರತೆಯೊಂದಿಗೆ ಬಿಗ್‌ಬಾಸ್ ಸ್ಪರ್ಧಿಗಳೊಂದಿಗೆ ಎಂದಿನಂತೆ ಮುಕ್ತವಾಗಿ ಮಾತನಾಡಿದ್ದಾರೆ. ಸಲ್ಮಾನ್ ಯಾವುದೇ ವಿರಾಮ ತೆಗೆದುಕೊಂಡಿಲ್ಲ ಆಪ್ತರು ತಿಳಿಸಿದ್ದಾರೆ.