Biggboss15: ವೇದಿಕೆಯಲ್ಲಿ ಸಲ್ಮಾನ್ ಜೊತೆ 'ಮನಿಕೆ ಮಗೆ ಹಿತೆ' ಸುಂದರಿ Yohani
- ಬಿಗ್‌ಬಾಸ್ ವೇದಿಕೆಯಲ್ಲಿ ಶ್ರೀಲಂಕಾ ಸುಂದರಿ
- ಸಲ್ಮಾನ್ ಖಾನ್ ಜೊತೆ ಹಾಡೋದ್ಯಾರು ಗೊತ್ತಾ ?
- ಮನಿಕೆ ಮಗೆ ಹಿತೆ ಹಾಡು ಸಲ್ಲು ಬಾಯಲ್ಲಿ
ಶ್ರೀಲಂಕಾದ ಸಂಗೀತ ಕೇಳೋಕೆ ತುಂಬಾ ಹಿತವಾಗಿದೆ ಅಂತ ಸದ್ಯ ಜಗತ್ತಿಗೇ ಟ್ರೆಂಡ್ ಮಾಡಿದ ಸುಂದರಿ ಬಿಗ್‌ಬಾಸ್ 15ರ ವೇದಿಕೆಗೆ ಬರುತ್ತಿದ್ದಾರೆ. ಮನಿಕೆ ಮಗೆ ಹೀತೆ ಹಾಡಿನ ಮೂಲಕ ಇನ್‌ಸ್ಟಗ್ರಾಂನಲ್ಲಿ ಸಖತ್ ಟ್ರೆಂಡ್ ಆದ ಸುಂದರಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈಗ ಸಿಂಗರ್ ಯೋಹಾನಿ ಬಿಗ್‌ಬಾಸ್ ವೇದಿಕೆಗೆ ಬರುತ್ತಿದ್ದಾರೆ.
ಸಲ್ಮಾನ್ ಖಾನ್ ಜೊತೆಗಿನ ಬಿಗ್ ಬಾಸ್ 15 ರ ಮೊದಲ 'ವೀಕೆಂಡ್ ಕಾ ವಾರ್' ಸಮಯ ಬಂದಿದೆ. ಕಾರ್ಯಕ್ರಮದ ಪ್ರೋಮೋಗಳು ಈಗಾಗಲೇ ಹೊರಬಿದ್ದಿದ್ದು ಎಲ್ಲೆಡೆ ವೈರಲ್ ಆಗಿದೆ. ಈ ವಾರದಲ್ಲಿ ಸಲ್ಲು ಜೊತೆಗೆ ಆಕರ್ಷಣೆ ವ್ಯಕ್ತಿಯಾಗಿ ಒಬ್ಬರು ಎಂಟ್ರಿ ಕೊಟ್ಟಿದ್ದಾರೆ. ಅದು ಸಿಂಗರ್ ಯೊಹಾನಿ.
ಮನಿಕೆ ಮಾಗೆ ಹಿತೆ: ವೈರಲ್ ಸಿನ್ಹಾಲಾ ಸಾಂಗ್ ಚೆಲುವೆ ಈಕೆ
ವೀಕೆಂಡ್ ಕಾ ವಾರ್ ಹಾಸ್ಯ ಎಲಿಮಿನೇಷನ್‌ನ ಮಿಶ್ರಣವಾಗಿರುತ್ತದೆ. ಮನಿಕೆ ಮಗೆ ಹಿತೆ ಗಾಯಕಿ ಯೊಹಾನಿ ದಿಲೋಕ ಡಿ ಸಿಲ್ವಾ ಅವರು 'ನವರಾತ್ರಿ ಸ್ಪೆಷಲ್' ನಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಯೋಹಾನಿಯ ಜೊತೆಗೆ ನಿಕ್ಕಿ ತಾಂಬೋಲಿ, ರಾಖಿ ಸಾವಂತ್, ರಾಹುಲ್ ವೈದ್ಯ, ಅರ್ಜುನ್ ಬಿಜ್ಲಾನಿ, ಆಸ್ತಾ ಗಿಲ್, ನಿಯಾ ಶರ್ಮಾ, ಮತ್ತು ಕರಣ್ ಪಟೇಲ್ ಸೇರಿದಂತೆ ಇನ್ನೂ ಕೆಲವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮೊದಲ ಬಾರಿಗೆ ಕಾರ್ಯಕ್ರಮಕ್ಕೆ ಬರುತ್ತಿರುವ ಯೊಹಾನಿ ತುಂಬಾ ಉತ್ಸುಕರಾಗಿದ್ದಾರೆ. ಇದು ದೊಡ್ಡ ಅನುಭವ ಮತ್ತು ಸಲ್ಮಾನ್ ಖಾನ್ ಅವರನ್ನು ಭೇಟಿಯಾಗುವುದು ನಿಜಕ್ಕೂ ಅದ್ಭುತವಾಗಿದೆ ಎಂದು ಅವರು ಹೇಳಿದ್ದಾರೆ. ಅವರು ಸಲ್ಮಾನ್ ಖಾನ್ ಜೊತೆಗಿನ ಕೆಲವು ಸ್ಮರಣೀಯ ಕ್ಷಣಗಳ ಬಗ್ಗೆ ಮಾತನಾಡಿದ್ದಾರೆ.
ಬಾಲಿವುಡ್‌ಗೂ ಎಂಟ್ರಿ ಕೊಟ್ಟ ಯೋಹಾನಿ; 'ಮನಿಕೆ ಮಾಗೆ ಹಿತೆ' ವೈರಲ್
ನಾನು ಅವರಿಗೆ 'ಮನಿಕೆ ಮಿಗೆ ಹಿತೆ' ಕಲಿಸಿದೆ. ಮತ್ತು ಎರಡನೆಯದಾಗಿ ನಾನು ಹಾಡನ್ನು ಹಾಡುತ್ತೀರಾ ಎಂದು ಕೇಳಿದಾಗ ಮತ್ತು ನಾನು ಯಾಕೆ ಕೆಲವು ಸಾಲುಗಳನ್ನು ಹಾಡುವುದಿಲ್ಲ ಎಂದು ಅವರು ಹೇಳಿದರು. ಇವೆರಡೂ ಸುಂದರ ಕ್ಷಣ ಎಂದಿದ್ದಾರೆ ಯೊಹಾನಿ. ಬಿಗ್ ಬಾಸ್ ಅದ್ಭುತ ಶೋ. ನಾನು ಯಾವುದೇ ಸಮಯದಲ್ಲಿ ಅದರ ಭಾಗವಾಗಲು ಇಷ್ಟಪಡುತ್ತೇನೆ ಎಂದಿದ್ದಾರೆ.
"
ಯೊಹಾನಿಯ ಹಾಡು ಭಾರೀ ಯಶಸ್ಸು ಪಡೆದಿದೆ. ಇದೊಂದು ಅಗಾಧ ಅನುಭವ. ಈ ಟ್ರ್ಯಾಕ್‌ಗೆ ಅಂತಹ ಪ್ರತಿಕ್ರಿಯೆ ಸಿಕ್ಕಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದಾರೆ. ರಾಖಿ ಸಾವಂತ್ ಸಹ ವೇದಿಕೆಯಲ್ಲಿ ಸಲ್ಮಾನ್ ಖಾನ್ ಜೊತೆ ಕೆಲವು ಮೋಜಿನ ಕ್ಷಣಗಳನ್ನು ಹಂಚಿಕೊಳ್ಳುವುದನ್ನು ಕಾಣಬಹುದು. ಅವಳು ಗೊರಿಲ್ಲಾ ವಸ್ತ್ರದಲ್ಲಿ ಕಾಣಿಸುತ್ತಾರೆ. ನೇಹಾ ಭಾಸಿನ್ ಕೂಡ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದಾರೆ