ಬಿಗ್ ಬಾಸ್‌ ಸೀಸನ್‌ 14ರ ವಿನ್ನರ್ ರುಬೀನಾ ದಿಲೈಕ್‌ಗೆ ಕೊರೋನಾ ವೈರಸ್ ತಗುಲಿತ್ತು. ಚೇತರಿಸಿಕೊಂಡರೂ ಕ್ವಾರಂಟೈನ್‌ನಲ್ಲಿರುವ ರುಬೀನಾ, ವಿಡಿಯೋ ಮಾಡುವ ಮೂಲಕ ಅಭಿಮಾನಿಗಳ ಜೊತೆ ಮಾತನಾಡಿ ತಮ್ಮ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ್ದಾರೆ. 

'ನಿಮ್ಮೆಲ್ಲರ ಜೊತೆ ಮಾತನಾಡಬೇಕು, ಈ ಕೊರೋನಾ ನೀಡಿದ ಯಾತನೆ ಬಗ್ಗೆ ಹಂಚಿಕೊಳ್ಳಬೇಕು ಎಂದು ತುಂಬಾ ದಿನಗಳಿಂದ ಕಾಯುತ್ತಿದ್ದೆ. ನಿಜಕ್ಕೂ ನಾನು ಪುಣ್ಯ ಮಾಡಿದ್ದೆ. ಅಮೇಜಿಂಗ್ ಫ್ಯಾಮಿಲಿ, ಹೆಚ್ಚು ಪ್ರೀತಿ ತೋರಿಸುವ ಗಂಡ ಹಾಗೂ ನನ್ನ ಬೆನ್ನೆಲುಬಾಗಿ ನಿಲ್ಲುವ ನನ್ನ ಪೋಷಕರು, ನನ್ನ ಸಹೋದರಿ, ಎಲ್ಲರಿಗಿಂತ ಹೆಚ್ಚಾಗಿ ಯಾರನ್ನೂ ಮರೆತರೂ ನಿಮ್ಮನ್ನು ಮರೆಯುವಂತಿಲ್ಲ, ನನ್ನ ಅಭಿಮಾನಿಗಳು. ನಿಮ್ಮ ಪ್ರೀತಿ ಹಾರೈಕೆಯಿಂದ ನಾನು ಗುಣಮುಖಳಾಗಿರುವೆ,' ಎಂದು ರುಬೀನಾ ಮಾತನಾಡಿದ್ದಾರೆ.

Biggboss ವಿನ್ನರ್‌ಗೆ ಮಂಗಳಮುಖಿ ಆಶಿರ್ವಾದ: ಸೀರೆ ಗಿಫ್ಟ್ ಕೊಟ್ಟ ರುಬೀನಾ 

ಸುಮಾರು 17 ದಿನಗಳ ಕಾಲ ಮನೆಯಲ್ಲಿ ಐಸೋಲೇಟ್ ಆಗಿದ್ದ ರುಬೀನಾ ಮುಂಬರುವ ದಿನಗಳಲ್ಲಿ ಪ್ಲಾಸ್ಮ ದಾನ ಮಾಡುವುದಕ್ಕೆ ನಿರ್ಧರಿಸಿದ್ದಾರೆ. 'ದಯವಿಟ್ಟು ಎಲ್ಲರೂ ಜಾಗೃತೆಯಿಂದ ಇರಿ. ಈ ದಿನಗಳಲ್ಲಿ ನಮ್ಮ ಆರೋಗ್ಯ ತುಂಬಾ ಮುಖ್ಯ. ಜೀವ ಒಂದಿದ್ದರೆ ಜೀವನದಲ್ಲಿ ಏನೂ ಬೇಕಿದ್ದರೂ ಪಡೆದುಕೊಳ್ಳಬಹುದು. ಕೊರೋನಾದಿಂದ ಬಳಲುತ್ತಿರುವ ಎಲ್ಲರಿಗೂ ನಿಮ್ಮ ಪ್ರಾರ್ಥನೆ ಇರಲಿ. ಸಾಧ್ಯವಾದಷ್ಟು ಜನರಿಗೆ ಸಹಾಯ ಮಾಡಿ,' ಎಂದು ಮಾತನಾಡುತ್ತಲೇ ರುಬೀನಾ ಕಣ್ಣೀರಿಟ್ಟಿದ್ದಾರೆ.

 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona