ಹಿಂದಿ ಬಿಗ್ ಬಾಸ್ ಸೀಸನ್‌ 14 ಕೆಲವೇ ದಿನಗಳಲ್ಲಿ ಫಿನಾಲೆ ಹಂತ ತಲುಪಲಿದೆ. ಸೀಸನ್‌ನ ಪ್ರಕ್ರಿಯೆಯಂತೆ ಪ್ರತಿ ಸ್ಪರ್ಧಿಯ ಒಬ್ಬ ಕುಟುಂಬದ ಸದಸ್ಯ ಮನೆಯೊಳಗೆ ಪ್ರವೇಶಿಸಿ, ಮಾತನಾಡಿಸುವ ಅವಕಾಶವಿತ್ತು. ಕುಟುಂಬದವರು ಮನೆಯೊಳಗೆ ಬರಲಿದ್ದಾರೆ ಎಂದು ಪ್ರತಿಯೊಬ್ಬರೂ ಡಿಫರೆಂಟ್ ಆಗಿ ರೆಡಿಯಾಗುತ್ತಿದ್ದರು. ಅಷ್ಟರಲ್ಲಿ ರಾಖಿ ಮಾಡಿದ ಅವಾಂತರ ನೋಡಿ..

'ರಾಖಿ ಸಾವಂತ್‌ಗೆ ಇನ್ನೂ ಗಂಡನ ಜೊತೆ ಫಸ್ಟ್‌ ನೈಟ್‌ ಆಗಿಲ್ಲ' 

ಇದೇ ಮೊದಲ ಸೀಸನ್‌ ರಿಯಲ್ ಲೈಫ್ ಗಂಡ ಹೆಂಗತಿ ಬಿಗ್ ಬಾಸ್‌ ಮನೆಯಲ್ಲಿರುವುದು. ಅಭಿನವ್ ಹಾಗೂ ರುಬೀನಾ ಇಬ್ಬರೂ ವೀಕ್ಷಕರ ನೆಚ್ಚಿನ ಸ್ಪರ್ಧಿಗಳು. ಆದರೆ ರಾಖಿ ಬೇಕೆಂತಲೇ ಮಾಡುತ್ತಿರುವ ಪ್ಲಾನ್‌ಗೆ ಖಂಡಿತವಾಗಿಯೂ ಇವರಿಬ್ಬರ ನಡುವೆ ಬಿರುಕು ಮೂಡುವುದರಲ್ಲಿ ಅನುಮಾನವಿಲ್ಲ.

ಗಾರ್ಡನ್‌ ಏರಿಯಾದಲ್ಲಿ ರುಬೀನಾ ಮಾತನಾಡುತ್ತಾ ಕುಳಿತಿರುವಾಗ ರಾಖಿ ಲಂಗ ಹಾಗೂ ಬ್ಲೌಸ್ ಧರಿಸಿ ಅಭಿನವ್ ಎದುರು ನಿಂತು ತಮಗೆ ಸೀರೆ ಉಡಿಸಲು ಸಹಾಯ ಕೋರುತ್ತಾಳೆ. ಒಂದು ನಿಮಿಷವೂ ಯೋಚಿಸದೆ ಅಭಿನವ್ ಸಹಾಯ ಮಾಡಲು ಮುಂದಾಗುತ್ತಾರೆ. ವಿಚಾರ ತಿಳಿದು ತಕ್ಷಣವೇ ರುಬೀನಾ ಲೀವಿಂಗ್ ಏರಿಯಾಗಿ ಬಂದು ಇವರಿಬ್ಬರನ್ನು ನೋಡುತ್ತಾರೆ. ಕೋಪಗೊಂಡು ರುಬೀನಾ ಜಗಳ ಮಾಡುತ್ತಾಳೆ, ಎಂದು ಕೊಂಡವರೇ ಹೆಚ್ಚು. ಆದರೆ ಅಲ್ಲಿ ನಡೆದದ್ದೇ ಬೇರೆ.

ಹೌದು ಸ್ವಾಮಿ, ಬಿಗ್‌ಬಾಸ್ ಶುರುವಾಗ್ತಿದೆ, ದೊಡ್ಮನೆಗೆ ಯಾರ್ಯಾರ್ ಹೋಗ್ತಾರೆ..? 

ಹೌದು! ರುಬೀನಾ ಸದಾ ತನ್ನ ಗಂಡನ ಪರವಾಗಿ ನಿಲ್ಲುತ್ತಾರೆ. ಆತನ ಮೇಲೆ ಅಪಾರ ನಂಬಿಕೆ ಇರುವ ಕಾರಣ ರುಬೀನಾ ಏನೇ ಆದರೂ ತಕ್ಷಣ ರಿಯಾಕ್ಟ್ ಮಾಡುವುದಿಲ್ಲ. ಸುಮ್ಮನೆ ನಿಂತು ನೋಡುತ್ತಾರೆ. ಈ ಹಿಂದೆ ಸಲ್ಮಾನ್ ಖಾನ್ ರುಬೀನಾಳ ಕಾಲು ಎಳೆದಿದ್ದರು, 'ನಿಮ್ಮ ಜೊತೆ ನಿಮ್ಮ ಲಗೇಜ್ ತಂದಿದ್ದೀರಾ?' ಎಂದು. ಸುಮ್ಮನಿರದ ರುಬೀನಾ ಸ್ಟಾರ್ ನಟ ಎಂಬುದನ್ನೂ ಯೋಚಿಸದೇ ನೇರ ನುಡಿಯಲ್ಲಿ ಮಾತನಾಡಿದ್ದರು ಅಂದಿನಿಂದ ರುಬೀನಾ ತಮ್ಮ ಪತಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂದು ಜನರಿಗೆ ತಿಳಿಯಿತು.