ಬಿಗ್ ಬಾಸ್‌ ಸೀಸನ್‌-13ರಲ್ಲಿ ವೀಕೆಂಡ್‌ ಶೋನಲ್ಲಿ 'ಚಪಕ್' ಚಿತ್ರದ ಪ್ರಮೋಷನ್‌ಗೆಂದು ದೀಪಿಕಾ ಪಡುಕೋಣೆ, ಲಕ್ಷ್ಮಿ ಅಗರ್ವಾಲ್ ಹಾಗೂ ನಟ ವಿಕ್ರಾಂತ್ ಭಾಗಿಯಾಗಿದ್ದರು.  ಆಗ ನೀಡಿದ ಟಾಸ್ಕ್‌ನಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದು ಹೀಗೆ...

ಈ ವೇಳೆ ಮನೆಯೊಳಗಿದ್ದ ಸ್ಪರ್ಧಿಗಳಿಗೆ ತಮ್ಮ ಜೀವನದ ಕರಾಳ ಘಟನೆಯನ್ನು ಇತರರೊಂದಿಗೆ ಹಂಚಿಕೊಳ್ಳಬೇಕಾದ ಟಾಸ್ಕ್ ನೀಡಿದ್ದರು. 'ದೇವೋಂ ಕೆ ದೇವ್ ಮಹಾದೇವ್' ಧಾರಾವಾಹಿಯ ನಟಿ ಆರತಿ ಸಿಂಗ್ ಚಿಕ್ಕವರಿರುವಾಗಲೇ ತಮ್ಮ ಮೇಲಾದ ಅತ್ಯಾಚಾರದ ಬಗ್ಗೆ ಹೇಳಿಕೊಂಡಿದ್ದಾರೆ.

ಬಿಗ್ ಬಾಸ್‌ ಮನೆಯ ಮೇಕಪ್‌ ರೂಂ ಸೀಕ್ರೆಟ್ ರಿವೀಲ್; ಹೇಗಿದೆ ನೋಡಿ!

'ನಾನು ಲಖನೌದಲ್ಲಿ ಕುಟುಂಬದವರೊಂದಿಗೆ ವಾಸವಿದ್ದೆ. ಆಗ ನನಗೆ ಮಧ್ಯಾಹ್ನ ನಿದ್ದೆ ಮಾಡುವ ಅಭ್ಯಾಸವಿತ್ತು. ಅವತ್ತು ಮನೆಯಲ್ಲಿ ನಾನೊಬ್ಬಳೇ ಇದ್ದೆ. ಅಡುಗೆ ಮನೆಯಲ್ಲಿ ಕೆಲಸದವನಿದ್ದ. ನಾನು ಮಲಗಿರುವಾಗ ಕೆಲಸದವನು ನನ್ನ ಮೇಲೆ ಅತ್ಯಾಚಾರ ಮಾಡಲು ಬಂದ. ತಕ್ಷಣವೇ ನಾನು ಗಾಬರಿಗೊಂಡು ಅವನನ್ನು ನೂಕಿ ಕಿರುಚಾಡಿಕೊಂಡು ಹೊರ ಬಂದೆ,' ಎಂದು ನಡುಗುತ್ತಾ ತಮ್ಮ ಜೀವನದಲ್ಲಿ ನಡೆದ ಕರಾಳ ಘಟನೆಯನ್ನು ನೆನೆದು ಕಣ್ಣೀರಾಗಿದ್ದಾರೆ.

'ದುನಿಯಾ' ರಶ್ಮಿ ದರ್ಬಾರ್; ಇಷ್ಟೊಂದು ಸಣ್ಣ ಆಗಲು ಕಾರಣವೇನು?

'ಎನ್‌ಕೌಂಟರ್‌', 'ಸಸುರಾಲ್‌', 'ಸಿಮರ್ ಕಾ' ಮತ್ತು 'ಉಡಾನ್‌' ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ಆರತಿ ಅಭಿನಯಿಸಿದ್ದಾರೆ.