ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆಯೋಜಕರಿಗೆ ಕುಂಬಳಗೋಡು ಠಾಣೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ವಿಚಾರಣೆಗೆ ಬರುವಂತೆ 'ಬಿಗ್‌ಬಾಸ್' ಆಯೋಜಕರಿಗೆ ನೋಟಿಸ್‌ ನೀಡಲಾಗಿದೆ. 

ಬೆಂಗಳೂರು (ಅ.13): ಬಿಗ್‌ಬಾಸ್‌ ಕನ್ನಡ ಸೀಸನ್‌ 11 ಆಯೋಜಕರಿಗೆ ಕುಂಬಳಗೋಡು ಠಾಣೆ ಪೊಲೀಸರು ನೋಟಿಸ್‌ ನೀಡಿದ್ದಾರೆ. ವಿಚಾರಣೆಗೆ ಬರುವಂತೆ 'ಬಿಗ್‌ಬಾಸ್' ಆಯೋಜಕರಿಗೆ ನೋಟಿಸ್‌ ನೀಡಲಾಗಿದೆ. ಸ್ವರ್ಗ, ನರಕ ವಿಚಾರವಾಗಿ ಮಹಿಳೆಯರ ಕುರಿತಾದ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಮಹಿಳಾ ಆಯೋಗದಿಂದ ದೂರು ದಾಖಲಿಸಿದ್ದು, ಮಹಿಳಾ ಆಯೋಗದ ದೂರು ಆಧರಿಸಿ ಪೊಲೀಸರು ನೋಟಿಸ್‌ ಜಾರಿ ಮಾಡಿದ್ದಾರೆ.

'ಬಿಗ್‌ಬಾಸ್' ಸೆಟ್‌ಗೆ ತೆರಳಿ ಇನ್‌ಸ್ಪೆಕ್ಟರ್ ಮಂಜುನಾಥ್ ಹೂಗಾರ ಅವರು ನೋಟಿಸ್ ನೀಡಿದ್ದಾರೆ. ಸ್ವರ್ಗ ನರಕ ವಿಚಾರವಾಗಿ ನಡೆದ ಸಂಭಾಷಣೆಯ ರಾ ಫುಟೇಜ್ ನೀಡುವಂತೆ ಪೊಲೀಸರು ಸೂಚನೆ ನೀಡಿದ್ದಾರೆ. ಒಂದು ವೇಳೆ ಅಸಡ್ಡೆ ತೋರಿಸಿದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಎಲ್ಲರಿಗೂ ತಿಳಿದಿರುವ ಹಾಗೆ ಸ್ವರ್ಗ ನರಕ ಎಂಬ ಕಾನ್ಸೆಪ್ಟನ್ನು ಇಡಲಾಗಿತ್ತು. ಇಲ್ಲಿ ನರಕಕ್ಕೆಂದು ಹೋದ ಸ್ಪರ್ಧಿಗಳಿಗೆ ಊಟದ ಬದಲಿಗೆ ಗಂಜಿ, ನೆಲದ ಮೇಲೆ ಹಾಕಲಾದ ಬೆಡ್‌ನಲ್ಲಿ ನಿದ್ದೆ, ಕೂರಲು ಕುರ್ಚಿ ಇಲ್ಲ, ನೀರಿಗೆ ಒಂದು ಮಡಿಕೆ, ಶೌಚಾಲಯಕ್ಕೆಂದು ಹೋಗಲು ಸ್ವರ್ಗವಾಸಿಗಳ ಅನುಮತಿ ಇವೆಲ್ಲವನ್ನೂ ಮಾಡಬೇಕಿತ್ತು.

ಮೆಗಾಸ್ಟಾರ್ ಚಿರಂಜೀವಿ ಫ್ಯಾನ್ಸ್​ಗೆ ಭರ್ಜರಿ ದಸರಾ ಗಿಫ್ಟ್: ಸೂಪರ್ ಹೀರೋ ಅವತಾರದಲ್ಲಿ ಎಂಟ್ರಿ

ನರಕವಾಸಿಗಳನ್ನು ಜೈಲಿನ ಮಾದರಿಯ ಸರಳುಗಳ ಹಿಂದೆ ಇಡಲಾಗಿತ್ತು. ಇದು ಕೆಲವೊಂದು ಸಾಮಾಜಿಕ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದು, ಯಾವುದೇ ವ್ಯಕ್ತಿಯ ಇಷ್ಟದ ವಿರುದ್ಧವಾಗಿ, ಹಾಗೂ ಇಷ್ಟದ ಅನುಸಾರವಾಗಿ ಬಂಧನದಲ್ಲಿ ಇಡುವಂತಿಲ್ಲ, ಕನಿಷ್ಠ ಅಗತ್ಯಗಳಾದ ಪೌಷ್ಠಿಕ ಆಹಾರ, ಶೌಚಾಲಯದ ವ್ಯವಸ್ಥೆಯನ್ನು ಸಹ ನೀಡದೆ ಮಾನವ ಹಕ್ಕು ಉಲ್ಲಂಘಟನೆ ಮಾಡಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಆರೋಪ ಮಾಡಿದ್ದರು.