ಬಿಗ್ ಬಾಸ್ 11ನೇ ಆವೃತ್ತಿಯನ್ನು ಹನುಮಂತ ಗೆದ್ದುಕೊಂಡಿದ್ದಾನೆ. ಬಹುಮಾನವಾಗಿ 50 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಆದರೆ ಹನುಮಂತ ಸರ್ಕಾರಕ್ಕೆ ಎಷ್ಟು ಟ್ಯಾಕ್ಸ್ ಕಟ್ಟಬೇಕು? ಹನುಮಂತನ ಕೈಗೆ ಸಿಗುವ ಹಣವೆಷ್ಟು?
ಬೆಂಗಳೂರು(ಜ.27) ಕಿಚ್ಚ ಸುದೀಪ್ ನಡೆಸಿಕೊಡುವ ಕನ್ನಡ ಬಿಗ್ ಬಾಸ್ ಶೋನ 11ನೇ ಆವೃತ್ತಿ ಅದ್ದೂರಿಯಾಗಿ ಅಂತ್ಯಗೊಂಡಿದೆ. ಕರ್ನಾಟಕದಲ್ಲಿ ಮನೆ ಮಾತಾಗಿರುವ ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಮೂಲಕ ಈ ಆವೃತ್ತಿಗೆ ತೆರೆ ಬಿದ್ದಿದೆ. ಸ್ಪರ್ದಿ ಹನುಮಂತ ಈ ಬಾರಿಯ ಬಿಗ್ ಬಾಸ್ ಟ್ರೋಫಿ ಗೆದ್ದಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಎಂಟ್ರಿಪಡು ಟ್ರೋಫಿ ಗೆದ್ದ ಸಾಧನೆಯನ್ನು ಹನುಮಂತ ಮಾಡಿದ್ದಾರೆ. ಬಿಗ್ ಬಾಸ್ ಟ್ರೋಫಿ ಜೊತೆಗೆ ಹನುಮಂತ 50 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. ಆದರೆ ಭಾರತದಲ್ಲಿ ಬಹುಮಾನ ಮೊತ್ತಕ್ಕೆ ದುಬಾರಿ ತೆರಿಗೆ ಕಟ್ಟಬೇಕು. ಅದು ಯಾವುದೇ ರೂಪದಲ್ಲಿ ಇರಬಹುದು. ಲಾಟರಿ ಮೂಲಕ ಪಡೆದರೂ ದುಬಾರಿ ತೆರಿಗೆ ಅನ್ವಯಿಸಲಿದೆ. ಹೀಗಾಗಿ ಸದ್ಯ ಹನುಮಂತನ ಕೈಗೆ ಸಿಗುವ ಹಣವೆಷ್ಟು ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಬಿಗ್ ಬಾಸ್ 11ನೇ ಆವೃತ್ತಿಗೆ ಗೆದ್ದ ಹನುಮಂತನಿಗೆ 50 ಲಕ್ಷ ರೂಪಾಯಿ ಚೆಕ್ ವಿತರಿಸಲಾಗಿದೆ. ಆದರೆ ಬಹುಮಾನ, ಲಾಟರಿ, ಲಕ್ಕಿಡಿಪ್ ಸೇರಿದಂತೆ ಯಾವುದೇ ಬಹುಮಾನ ರೂಪದಲ್ಲಿ ನಿಮಗೆ ಹಣ ಬಂದರೆ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು. ಬಂದಿರುವ ಹಣದಲ್ಲಿ ಶೇಕಡಾ 30 ರಷ್ಟು ತೆರಿಗೆ ರೂಪದಲ್ಲಿ ಪಾವತಿಸಬೇಕು. 10,000 ರೂಪಾಯಿಗಿಂತ ಮೇಲ್ಪಟ್ಟು ಎಷ್ಟು ಹಣ ಬಂದರೂ ಈ ತೆರಿಗೆ ಅನ್ವಿಯಸಲಿದೆ. ಹೀಗಾಗಿ ಹನುಮಂತ ಸದ್ಯ 50 ಲಕ್ಷ ರೂಪಾಯಿ ಬಹುಮಾನದ ಮೊತ್ತದಲ್ಲಿ ಶೇಕಡಾ 30 ರಷ್ಟು ತೆರಿಗೆ ಪಾವತಿಸಬೇಕು.
ಬಿಗ್ ಬಾಸ್ ಕನ್ನಡ 11 ಗೆದ್ದು ಬೀಗಿದ ಹಳ್ಳಿ ಹೈದ ಹನುಮಂತ ಲಮಾಣಿ, ಮುಗಿಲು ಮುಟ್ಟಿದ ಸಂಭ್ರಮ
ತೆರಿಗೆ ಪಾವತಿಸಿ ಹನುಮಂತನ ಕೈಗೆ ಸಿಗು ಹಣವೆಷ್ಟು?
50 ಲಕ್ಷ ರೂಪಾಯಿ ಬಹುಮಾನಕ್ಕೆ ಶೇಕಡಾ 30 ರಷ್ಟು ತೆರಿಗೆ ಎಂದರೆ 15 ಲಕ್ಷ ರೂಪಾಯಿ ಹಣವನ್ನು ತೆರಿಗೆ ರೂಪದಲ್ಲಿ ಪಾವತಿಸಬೇಕು. ಹೀಗಾಗಿ ಹನುಮಂತನ ಕೈಗೆ ಸಿಗುವ ಹಣ 35 ಲಕ್ಷ ರೂಪಾಯಿ ಮಾತ್ರ. ಬಿಗ್ ಬಾಸ್ ಬಹುಮಾನ ಮೊತ್ತವನ್ನು ಕಾನ್ಫಿಡೆಂಟ್ ಗ್ರೂಪ್ ನೀಡಿದೆ. ಇದೀಗ ಹನುಮಂತನಿಗೆ ಈ 50 ಲಕ್ಷ ರೂಪಾಯಿ ಬಹುಮಾನ ಮೊತ್ತ ನೀಡುವಾಗ ಕಾನ್ಫಿಡೆಂಟ್ ಗ್ರೂಪ್, ಸರ್ಕಾರಕ್ಕೆ 15 ಲಕ್ಷ ರೂಪಾಯಿ ತೆರಿಗೆ ಪಾವತಿಸಿ ಉಳಿದ 35 ಲಕ್ಷ ರೂಪಾಯಿ ಮೊತ್ತವನ್ನು ಖಾತೆಗೆ ಜಮೆ ಮಾಡಲಿದೆ.
ಕೇವಲ ಹನುಮಂತ ಮಾತ್ರವಲ್ಲ, ಬಿಗ್ ಬಾಸ್ ರನ್ನರ್ ಅಪ್ ಗೆದ್ದವರು, ಬಹುಮಾನ ಮೊತ್ತ ಯಾರೆಲ್ಲ ಪಡೆಯುತ್ತಾರೋ, ಎಲ್ಲರೂ ತೆರಿಗೆ ಪಾವತಿಸಬೇಕು. ಬಿಗ್ ಬಾಸ್ 11ನೇ ಆವೃತ್ತಿಯಲ್ಲಿ ಹನುಮಂತ ವಿನ್ನರ್ ಆಗಿ ಟ್ರೋಫಿ ಗೆದ್ದರೆ, ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಬಿಗ್ ಬಾಸ್ ರನ್ನರ್ ಅಪ್ ಸ್ಪರ್ಧಿಗೆ 15 ಲಕ್ಷ ರೂಪಾಯಿ ಬಹುಮಾನ ಮೊತ್ತ ನೀಡಲಾಗಿದೆ. ತ್ರಿವಿಕ್ರಮ್ ಕೂಡ ಶೇಕಡಾ 30 ರಷ್ಟು ತೆರಿಗೆ ಪಾವತಿಸಬೇಕು. ಹೀಗಾಗಿ 15 ಲಕ್ಷ ರೂಪಾಯಿ ಬಹುಮಾನ ಮೊತ್ತದಲ್ಲಿ ತ್ರಿವಿಕ್ರಮ್ 4.5 ಲಕ್ಷ ರೂಪಾಯಿ ತೆರಿಗೆ ರೂಪದಲ್ಲಿ ನೀಡಬೇಕು. ಹೀಗಾಗಿ ತ್ರಿವಿಕ್ರಮ್ ಕೈಗೆ ಸಿಗುವ ಮೊತ್ತ 10.5 ಲಕ್ಷ ರೂಪಾಯಿ ಮಾತ್ರ.
ಸೆಕೆಂಡ್ ರನ್ನರ್ ಅಪ್ ಆಗಿ ರಜತ್ ಟ್ರೋಫಿ ಗೆದ್ದಿದ್ದಾರೆ. ಹನುಮಂತನ ರೀತಿಯಲ್ಲೆ ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ರಜತ್ ಬಿಗ್ ಬಾಸ್ ಫಿನಾಲೆ ಪ್ರವೇಶಿಸುವ ಮೂಲಕ ದಾಖಲೆ ಬರೆದಿದ್ದರು. ಆದರೆ ಪ್ರಶಶ್ತಿ ಹನುಮಂತನ ಪಾಲಾಗಿತ್ತು. ಇತ್ತ ರನ್ನರ್ ಅಪ್ ಪ್ರಶಸ್ತಿ ತ್ರಿವಿಕ್ರಮ್ ಪಡೆದುಕೊಂಡಿದ್ದರು. ಹೀಗಾಗಿ ರಜತ್ ಎರಡನೇ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಡಬೇಕಾಯಿತು. ರಜತ್ 10 ಲಕ್ಷ ರೂಪಾಯಿ ಬಹುಮಾನ ಗೆದ್ದುಕೊಂಡಿದ್ದಾರೆ. ರಜತ್ ಕೂಡ ಶೇಕಡಾ 30 ರಷ್ಟು ತೆರಿಗೆ ಪಾವತಿಸಬೇಕು. ಅಂದರೆ ಬಹುಮಾನ ರೂಪದಲ್ಲಿ ಪಡೆದ 10 ಲಕ್ಷ ರೂಪಾಯಿಗೆ 3 ಲಕ್ಷ ರೂಪಾಯಿ ತೆರಿಗೆ ರೂಪದಲ್ಲಿ ಪಾವತಿಸಬೇಕು. ಅಂದರೆ ರಜತ್ ಕೈಗೆಸುವ ಮೊತ್ತ 7 ಲಕ್ಷ ರೂಪಾಯಿ ಮಾತ್ರ.
ಬಿಗ್‌ಬಾಸ್‌ನಲ್ಲಿ ಇಬ್ಬರು ಸ್ಪರ್ಧಿಗಳ ಇತಿಹಾಸ, ಹನುಮಗೆ 50 ಲಕ್ಷ, ಮಿಕ್ಕ 5 ಫೈನಲಿಸ್ಟ್‌ಗಳಿಗೆ ಸಿಕ್ಕ ಹಣವೆಷ್ಟು?
