Asianet Suvarna News Asianet Suvarna News

ಬಿಗ್​ಬಾಸ್​ ಮನೆಯಲ್ಲಿ ಬಿಗ್​ ಬ್ರೇಕಿಂಗ್​ ನ್ಯೂಸ್​: ಕಿಚನ್​ನಿಂದ ಬೆಡ್​ರೂಮ್​ವರೆಗಿನ ವಿಷ್ಯ ಬಯಲು!

ಬಿಗ್​ಬಾಸ್​ ಮನೆಯಲ್ಲಿ ಬಿಗ್​ ಬ್ರೇಕಿಂಗ್​ ನ್ಯೂಸ್​ ಟಾಸ್ಕ್​ ನೀಡಲಾಗಿದ್ದು, ಇದರಲ್ಲಿ ಸುದ್ದಿ ಓದುವುದು, ಡಿಬೇಟ್​ ಮಾಡುವುದು ಸೇರಿದಂತೆ ಹಲವು ವಿಷಯಗಳು ಒಳಗೊಂಡಿದೆ. 
 

Big Breaking News task has been given in  Bigg Boss Kannada house suc
Author
First Published Dec 18, 2023, 12:53 PM IST

ಒಬ್ಬೊಬ್ಬರೇ ಸ್ಪರ್ಧಿಗಳು ಎಲಿಮಿನೇಟ್​ ಆಗುತ್ತಿದ್ದಂತೆಯೇ ಬಿಗ್​ಬಾಸ್​ ಮನೆಯಲ್ಲಿ ಟಫ್​  ಕಾಂಪಿಟೇಷನ್​ ಶುರುವಾಗಿದೆ. ಎಲ್ಲರಿಗೂ ಬಿಗ್​ಬಾಸ್​ ಪಟ್ಟ ಗೆಲ್ಲುವ ಛಲ. ಇದೇ ಕಾರಣಕ್ಕೆ ಸ್ನೇಹಿತರಾಗಿದ್ದವರೂ ದುಷ್ಮನ್​ ಆಗುತ್ತಿದ್ದಾರೆ. ಮಾಮೂಲಿನಂತೆಯೇ ಕಾದಾಟ, ಕಿತ್ತಾಟಗಳೂ ನಡೆಯುತ್ತಿವೆ. ಇದರ ನಡುವೆಯೇ  ಪ್ರತಿ ವಾರವೂ  ಒಂದೊಂದು ಹೊಸ ಹೊಸ ಟಾಸ್ಕ್‌  ನೀಡಲಾಗುತ್ತಿದೆ.  ಇದಾಗಲೇ ನೀಡಲಾಗಿದ್ದ ಟಾಸ್ಕ್​ಗಳಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿಯೂ ನಡೆದು ಹೋಗಿದೆ. ಸಂಗೀತಾ ಮತ್ತು ಪ್ರತಾಪ್​ ಕಣ್ಣಿಗೆ ಸೋಪಿನ ನೀರು ಎರಚಿ ಕಣ್ಣಿಗೆ ಹಾನಿ ಮಾಡಿರುವುದೂ ನಡೆದಿದೆ. ಜೊತೆಗೆ ಟಾಸ್ಕ್​ ಹೆಸರಿನಲ್ಲಿ ನಡೆದ ಗಲಾಟೆಯಲ್ಲಿ ಕೆಲ ಸ್ಪರ್ಧಿಗಳಿಗೆ ಏಟು ಕೂಡ ಆಗಿದೆ. ಇದೀಗ ಯಾವುದೇ ಗಲಾಟೆ-ಗೊಂದಲ ಇದ್ದರ ಟಾಸ್ಕ್​ ನೀಡಲಾಗಿದೆ. ಅದುವೇ ಬಿಗ್​ ಬ್ರೇಕಿಂಗ್​ ನ್ಯೂಸ್​ ಕೊಡುವ ಟಾಸ್ಕ್​.

ಹೌದು. ಸ್ಪರ್ಧಿಗಳು ನ್ಯೂಸ್​ ರೀಡರ್​ ಆಗಿದ್ದಾರೆ, ನಿರೂಪಕರಾಗಿದ್ದಾರೆ. ಇವರು ಬಿಗ್​ಬಾಸ್​ ಮನೆಯಲ್ಲಿ ನಡೆಯುವ ವಿಷಯಗಳನ್ನು ಹೇಳಬೇಕಿದೆ. ಮೈಕ್​ ಹಿಡಿದ ಸ್ಪರ್ಧಿಗಳು, ಎದುರು ಕುಳಿತಿರುವ ಇತರೆ ಸದಸ್ಯರಿಗೆ ಪಂಚಿಂಗ್​ ಸುದ್ದಿಗಳನ್ನು ವರದಿ ಮಾಡಬೇಕಿದೆ. ಈ ಟಾಸ್ಕ್​ ಅನ್ನು ಕೆಲ ಸ್ಪರ್ಧಿಗಳು ತೆಗೆದುಕೊಂಡಿದ್ದು, ಕಲರ್ಸ್​ ಕನ್ನಡ ವಾಹಿನಿ ಇದರ ಪ್ರೊಮೋ ಬಿಡುಗಡೆ ಮಾಡಿದೆ. ಈ ಟಾಸ್ಕ್​ನಲ್ಲಿ ಮೈಕ್​ ಹಿಡಿದ ಸ್ಪರ್ಧಿಗಳು ಕಿಚನ್​ನಲ್ಲಿ ನಡೆದದ್ದು, ಬೆಡ್​ರೂಮ್​ನಲ್ಲಿ ನಡೆದದ್ದು ಸೇರಿದಂತೆ ಬಿಗ್​ಬಾಸ್​ ಮನೆಯ ಎಲ್ಲಾ ಕೋಣೆಗಳಲ್ಲಿಯೂ ಏನೇನು ನಡೆದಿದೆ, ತಾವು ಏನೇನು ಕಂಡಿದ್ದೇವೆ ಎನ್ನುವುದನ್ನು ಉಳಿದ ಸ್ಪರ್ಧಿಗಳ ಎದುರೇ ಖುಲ್ಲಂಖುಲ್ಲಾ ಆಗಿ ಹೇಳಬೇಕಿದ್ದು, ಇದರ ಮಾಹಿತಿಗಳನ್ನು ನೀಡುತ್ತಿರುವುದನ್ನು ಪ್ರೊಮೋದಲ್ಲಿ ನೋಡಬಹುದು.  

ಸಂಗೀತಾನ್ನ ಮೈನಸ್ ಮಾಡಿದೆ... ನಾನು ಜೀರೊ ಅನ್ನೋದು ಪ್ರೂವ್ ಮಾಡ್ಲಿ... ಎನ್ನುತ್ತಲೇ ತಲೆ ಒಡೆದ ಕಾರ್ತಿಕ್​!

 ಪ್ರೋಮೋದಲ್ಲಿ ನಾವು  ತನಿಷಾ ಮತ್ತು ಸಂಗೀತಾ ಡಿಬೇಟ್ ಮಾಡುವುದನ್ನು ನೋಡಬಹುದು.  ಏನೆಂದರೆ ಈ ಟಾಸ್ಕ್​ನಲ್ಲಿ  ಬಿಗ್‌ಬಾಸ್ ಮನೆಯೊಳಗಿನ ಘಟನಾವಳಿಗಳು, ಸ್ಪರ್ಧಿಗಳ ವರ್ತನೆಗಳು, ಅವರ ಕುರಿತಾದ ಅಭಿಪ್ರಾಯಗಳನ್ನು ಸುದ್ದಿ ರೂಪದಲ್ಲಿ ನೀಡುವುದು ಮಾತ್ರವಲ್ಲದೇ  ಪ್ಯಾನಲ್ ಚರ್ಚೆಗಳನ್ನೂ ಮಾಡುವ ಟಾಸ್ಕ್​ ನೀಡಲಾಗಿದೆ. ಬರೀ ಹೇಳಿಕೆ ನೀಡಿದರೆ ಸಾಲದು.  ತಮ್ಮ ಹೇಳಿಕೆಗಳಿಗೆ ಸ್ಪರ್ಧಿಗಳು ಸ್ಪಷ್ಟೀಕರಣ ನೀಡಬೇಕಿದೆ. ಸಾಮಾನ್ಯವಾಗಿ ನ್ಯೂಸ್​ ಚಾನೆಲ್​ನಲ್ಲಿ ಅಗುವಂತೆ ಎದುರಿಗೆ ಇರುವವರು  ಕೌಂಟರ್ ಕೊಡಬೇಕಿದೆ.  ಸದ್ಯ ಈ ಪ್ರೊಮೋ ನೋಡಿದರೆ ದೈಹಿಕವಾಗಿ ಮಾರಾಮಾರಿ ಇಲ್ಲದಿದ್ದರೂ ಮಾತಿನ ಮೂಲಕವೇ ಸ್ಪರ್ಧಿಗಳು ಪರಸ್ಪರ ತಿವಿದುಕೊಳ್ಳುವ ಲಕ್ಷಣ ಜೋರಾಗಿ ಕಾಣಿಸುತ್ತಿದೆ.  ಇದರಲ್ಲಿ ಸಂಗೀತಾ ಮತ್ತು ಪ್ರತಾಪ್​  ದೃಶ್ಯವನ್ನು ನೋಡಬಹುದು.  ನಾನು ಕಾರ್ತಿಕ್‌ನಿಂದ ಈ ರೀತಿಯ ವರ್ತನೆ ನಿರೀಕ್ಷೆ ಮಾಡಿರಲಿಲ್ಲ, ಆದರೆ ಕಾರ್ತಿಕ್, ವಿನಯ್ ಜೊತೆಗೆ ಚೆನ್ನಾಗಿಯೇ ಇದ್ದಾರೆ. ನಾನು ಯಾವಾಗಲೂ ಒಂಟಿ ಅನಿಸುತ್ತದೆ ನಾನು ಒಬ್ಬಳೇ ಆಟವನ್ನು ಆಡುತ್ತೇನೆ ಎಂದು ಸಂಗೀತಾ ಡ್ರೋನ್​ ಪ್ರತಾಪ್​ಗೆ ಹೇಳಿದ್ದಾರೆ.  ಇದರ ಜೊತೆಗೆ,  ನಮ್ರತಾ ಹಾಗೂ ಪ್ರತಾಪ್ ಇಬ್ಬರೂ  ನ್ಯೂಸ್ ಆ್ಯಂಕರ್ ಆಗಿದ್ದನ್ನು ನೋಡಬಹುದು. ನಮ್ರತಾ ಬಿಗ್ ಬಾಸ್ ನ್ಯೂಸ್‌ಗೆ ಸ್ವಾಗತ ಎಂದು ಶುರು ಮಾಡಿದರೆ,  ತನಿಷಾ  ನ್ಯೂಸ್ ಓದಿದ್ದಾರೆ.

ಬಳಿಕ ನಮ್ರತಾ ಮತ್ತು ಸಂಗೀತಾ  ಡಿಬೇಟ್ ಶುರುವಾಗಿದೆ. ಈ ಡಿಬೇಟ್​ ವೇಳೆ ಡ್ರೋನ್ ಪ್ರತಾಪ್‌ಗೆ ಈಗೀಗ  ಅಹಂ ಹೆಚ್ಚಾಗಿದೆ ಎಂದು ತನಿಷಾ ಹೇಳಿದ್ದಾರೆ.  ವಿನಯ್ ಟೀಮ್‌ಗೆ ಕಾರ್ತಿಕ್ ಬಕೆಟ್ ಹಿಡಿಯಬೇಕು ಎಂಬ ಬಗ್ಗೆಯೂ ಚರ್ಚೆಯಾಗಿದ್ದು, ತನಿಷಾ ಹೀಗೆ ಕಾರ್ತಿಕ್​ಗೆ ಎನ್ನಿಸಿದ್ದರೆ  70 ದಿನಗಳನ್ನ ತೆಗೆದುಕೊಳ್ಳುತ್ತಿರಲಿಲ್ಲ ಎಂದಿದ್ದಾರೆ. ಆಗ ಸಂಗೀತಾ,  ಇತ್ತೀಚಿನ ದಿನಗಳಲ್ಲಿ ಅವರು ತುಂಬಾ ಕ್ಲೋಸ್ ಆಗುತ್ತಿದ್ದಾರೆ ಎಂದು ಹೇಳಿದ್ದಾರೆ. ಮೊದಲು ತುಂಬಾ ದ್ವೇಷದಿಂದ ನಡೆದುಕೊಳ್ಳುತ್ತಾ ಇದ್ದರು, ಈಗ ಸ್ನೇಹಿತರಂತೆ ವರ್ತಿಸುತ್ತಿದ್ದಾರೆ ಎಂದಿದ್ದಕ್ಕೆ ಕಾರ್ತಿಕ್ ಯಾಕೆ ಆಗಬಾರದು ಎಂದು ಉತ್ತರಿಸಿದ್ದಾರೆ. ಹೀಗೆ ಶುರುವಾಗುವ ಚರ್ಚೆ ಹಲವು ವಿಚಾರಗಳನ್ನು ಒಳಗೊಂಡಿದ್ದು, ಇದು ಯಾವ ಟರ್ನ್​ ತೆಗೆದುಕೊಳ್ಳಲಿದೆ ಕಾದು ನೋಡಬೇಕಿದೆ. 

ಎರಡನೇ ಮದ್ವೆಯಾಗ್ತೀರಾ ಎಂಬ ಪ್ರಶ್ನೆಗೆ ನಟಿ ಸಮಂತಾ ​ ಪರ್ಸಂಟೇಜ್​ ಉತ್ತರ ಕೊಡೋದಾ? ಫ್ಯಾನ್ಸ್​ ಶಾಕ್!


 

Follow Us:
Download App:
  • android
  • ios