ನಾಲ್ಕು ವಾರಗಳ ಹಿಂದೆ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ನ ಕ್ಯಾಪ್ಟನ್‌ ರೂಮ್‌ಅನ್ನು ಲಾಕ್‌ ಮಾಡಿಸಿದ್ದರು. ಮನೆಯಲ್ಲಿ ಬಿಗ್‌ ಬಾಸ್‌ ಕ್ಯಾಪ್ಟನ್‌ಗೆ ಗೌರವ ಕೊಡೋದು ಗೊತ್ತಿಲ್ಲ ಅನ್ನೋದು ಸುದೀಪ್‌ ನೀಡಿದ್ದ ಕಾರಣವಾಗಿತ್ತು.

ಬೆಂಗಳೂರು (ಜ.1): ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ರೂಮ್‌ಗೆ ಮತ್ತೆ ಬೀಗ ಬೀಳುತ್ತಾ? ಗೊತ್ತಿಲ್ಲ ಹೀಗೊಂದು ಅನುಮಾನವಂತೂ ಕಾಡುತ್ತಿದೆ. ನಾಲ್ಕು ವಾರಗಳ ಹಿಂದೆ ನಿರೂಪಕ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ಮನೆಯ ಕ್ಯಾಪ್ಟನ್‌ ರೂಮ್‌ಗೆ ಮನೆಯ ಸದಸ್ಯರಿಂದಲೇ ಬೀಗ ಹಾಕಿಸಿದ್ದರು. ಅದಕ್ಕೆ ಕಾರಣ, ಈ ಬಾರಿಯ ಬಿಗ್‌ ಬಾಸ್‌ನಲ್ಲಿ ಮನೆಯ ಕ್ಯಾಪ್ಟನ್‌ಗೆ ನೀಡಬೇಕಾದ ಗೌರವವನ್ನು ಸ್ಪರ್ಧಿಗಳು ನೀಡುತ್ತಿಲ್ಲ ಅನ್ನೋದು ಅವರ ಮಾತಾಗಿತ್ತು. ಮನೆಯ ಸದಸ್ಯರ ನಡುವಿನ ವೈಮನಸ್ಯ ಹೇಗೆಯೇ ಇರಲಿ, ಆದರೆ ಮನೆಯ ವಿಚಾರದಲ್ಲಿ ಕ್ಯಾಪ್ಟನ್‌ ಹೇಳುವ ಮಾತುಗಳನ್ನು ಗೌರವಿಸಿ ಕೇಳಬೇಕು ಎನ್ನುವುದು ಅವರು ನೀಡಿದ್ದ ಸೂಚನೆಯಾಗಿತ್ತು. ಅದಾದ ನಂತರ ಒಂದು ವಾರ ಮನೆಗೆ ಯಾವುದೇ ಕ್ಯಾಪ್ಟನ್‌ ಇದ್ದಿರಲಿಲ್ಲ. ಆ ಬಳಿಕ ನಮ್ರತಾ ಹಾಗೂ ಈಗ ತನಿಷಾ ಮನೆಯ ಕ್ಯಾಪ್ಟನ್‌ ಆಗಿದ್ದಾರೆ. ಇದರ ಬೆನ್ನಲ್ಲಿಯೇ ಮತ್ತೆ ಕ್ಯಾಪ್ಟನ್‌ ಮಾತನ್ನು ಧಿಕ್ಕರಿಸುವ ಅವರಿಗೆ ಅಗೌರವ ತೋರುವ ಮಾತುಗಳು ಬರುತ್ತಿದೆ. ಈ ಬಾರಿ ಮೈಕೆಲ್‌ ಅಜಯ್‌ ಹಾಗೂ ತನಿಷಾ ನಡುವೆ ಮನೆಯ ಕೆಲಸದ ವಿಚಾರವಾಗಿಯೇ ಮಾತಿನ ಸಮರವಾಗಿದೆ. ಇದರ ನಡುವೆ ಮೈಕೆಲ್‌ ಅಜಯ್‌ ಅವರು ಆಡಿರುವ ಮಾತುಗಳ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

59 ಸೆಕೆಂಡ್‌ನ ಪ್ರೋಮೋದ ಆರಂಭದಲ್ಲಿ ಮೈಕೆಲ್‌ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸುವ ತನೀಷಾ, 'ಮೈಕೆಲ್‌ ನಿಮ್ಮ ಕೆಲಸ ಮಾಡೋದಕ್ಕೆ ಪ್ರತಿ ಬಾರಿ ನಿಮಗೆ ರಿಮೈಂಡ್‌ ಮಾಡೋದಕ್ಕೆ ಸಾಧ್ಯವಿಲ್ಲ. ನೀವಾಗೆ ಮಾಡಬೇಕು ಎನ್ನುತ್ತಾರೆ. ಅದಕ್ಕೆ ಮೈಕೆಲ್‌, ನನಗೆ ಇಷ್ಟ ಬಂದ ಹಾಗೆ ಮಾಡುತ್ತೇನೆ. ನನಗೆ ಇಷ್ಟ ಇಲ್ಲ ಅಂದ್ರೆ ಮಾಡೋದಿಲ್ಲ ಎಂದು ಅಸಡ್ಡೆಯಿಂದ ಮಾತನಾಡಿದ್ದಾರೆ. ಆದರೆ, ಮನೆಯಲ್ಲಿ ಮಾಡೋ ಕೆಲಸ ಮಾಡಲೇಬೆಕಲ್ಲ ಎಂದು ತನೀಷಾ ಹೇಳಿದ್ದಾರೆ.

ಇಲ್ಲಿ ನೀವು ಹೇಳಿದ್ದ ಕೆಲಸವನ್ನು ಮಾಡಬೇಕು ಅಂತಾ ಎಲ್ಲಿ ಬರೆದಿದೆ. ತೋರ್ಸು ಎಂದು ಮೈಕೆಲ್‌ ಹೇಳಿದ್ದಾರೆ. ಇದಕ್ಕೆ ತನೀಷಾ ಎಲ್ಲರೂ ಇಲ್ಲಿನ ನಿಯಮ ಫಾಲೋ ಮಾಡ್ತಿದ್ದಾರೆ ಎಂದು ಹೇಳಿದ್ದಕ್ಕೆ, ಅದಕ್ಕೆ ನಾನೇನೂ ಮಾಡೋಕೆ ಆಗಲ್ಲ ಎಂದು ಅಹಂನಿಂದ ಹೇಳಿದ್ದಾರೆ. 'ನೀ ಏನ್‌ ಮಾಡೋದು ಅಂದ್ರೆ? ಈಗ ನಾನು ಹೇಳ್ತಾ ಇದ್ದೀನಿ ಅನ್ನೋ ಕಾರಣಕ್ಕೆ ಈ ಕೆಲಸ ಮಾಡೋಕೆ ಇಷ್ಟ ಇಲ್ವಾ? ಅಥವಾ ಕೆಲಸ ಮಾಡೋಕೆ ಇಷ್ಟ ಇಲ್ವಾ?' ಎಂದು ತನಿಷಾ ಸಿಟ್ಟಿನಿಂದಲೇ ಕೇಳಿದ್ದಾರೆ.

ಇದಕ್ಕೆ ಮತ್ತಷ್ಟು ಸಿಟ್ಟಾಗುವ ಮೈಕೆಲ್‌, ನನಗೆ ಮಾಡೋಕೆ ಇಷ್ಟ ಇಲ್ಲ. ನಾನೇನು ಇಷ್ಟ ಪಟ್ಟಾ ಕೆಲ್ಸ ಮಾಡ್ತಿದ್ದೀನಾ?' ಎಂದಿದ್ದಾರೆ. ಇಲ್ಲಿ ಯಾರೂ ಇಷ್ಟ ಪಟ್ಟು ಕೆಲ್ಸ ಮಾಡ್ತಿಲ್ಲ ಮೈಕೆಲ್‌. ಇಲ್ಲೊಂದು ಜವಾಬ್ದಾರಿ ಇದೆ. ಆ ಜವಾಬ್ದಾರಿಯನ್ನು ಮುಗಿಸ್ತಾ ಇದ್ದೇವೆ. ನಿಮ್ಮ ಹತ್ತಿರ ಮಾತನಾಡಿ, ನಿಮ್ಮನ್ನು ಮುದ್ದು ಮಾಡಿ ನಮಗೇನು ಆಗಬೇಕಿಲ್ಲ ಎಂದು ತನಿಷಾ ಪ್ರತಿಕ್ರಿಯಿಸಿದ್ದಾರೆ.

'ಹೌದು ನೀನು ಹೇಳಿದ್ದನ್ನು ನಾನು ಕೇಳಿ ಇಲ್ಲಿ ಏನೂ ಆಗಬೇಕಾಗಿದ್ದಿಲ್ಲ. ನೀವು ಬಂದು ಏನು ಡಿಕ್ಟೇಟರಾ? ಒಂದು ಕಪ್‌ಅಲ್ಲಿ ಮೂರು ಬಾಲ್‌ ಹಾಕಿದ್ದೀಯಾ ಅಷ್ಟೇ. ನೀನೇನು ದೊಡ್ಡ ಸಾಧನೆ ಮಾಡಿಲ್ಲ ಲೈಫ್‌ಅಲ್ಲಿ. ಸುಮ್ನೆ ಇರು' ಎಂದು ಎಚ್ಚರಿಸಿದ್ದಾರೆ. ಇಲ್ಲಿ ಬಂದು ಏನೋ ಲೈಫ್‌ಟೈಮ್‌ ಅಚೀವ್‌ಮೆಂಟ್‌ ಮಾಡಿದ್ದ ಲೆವಲ್‌ ಅಲ್ಲಿ ಮಾತನಾಡ್ತೀಯಾ? ಎಂದು ಹೇಳುವ ಮೂಲಕ ಬಿಗ್‌ ಬಾಸ್‌ ಕಾರ್ಯಕ್ರಮವನ್ನೇ ಅವಮಾನಿಸಿದ್ದಾರೆ.

Scroll to load tweet…

ಬಿಗ್‌ ಬಾಸ್‌ ಮನೆಯ ಶನಿ ಯಾರು? ಈ ಮೂರು ಜನರ ಹೆಸರಂತೂ ಫಿಕ್ಸ್‌!

ಈ ಹಿಂದೆಯೂ ಹಲವು ಬಾರಿ ಮೈಕೆಲ್‌ ಅಜಯ್‌ ಬಾಯಿಂದ ಬಿಗ್‌ ಬಾಸ್‌ ಕಾರ್ಯಕ್ರಮವನ್ನೇ ಲೇವಡಿ ಮಾಡುವಂಥ ಮಾತುಗಳು ಬಂದಿದ್ದವು. ಬಿಗ್‌ ಬಾಸ್‌ನಲ್ಲಿ ಹೆಚ್ಚೆಂದ್ರೆ ಏನ್‌ ಆಗಬಹುದು. ಅವರೇನು ಶಿಕ್ಷೆ ಕೊಡ್ತಾರಾ? ಅನ್ನೋ ರೀತಿಯಲ್ಲಿ ಮಾತನಾಡಿದ್ದರು. ಇದಕ್ಕೆ ವಾರದ ಪಂಚಾಯ್ತಿಯಲ್ಲಿ ಸ್ವತಃ ಕಿಚ್ಚ ಸುದೀಪ್‌, ಮೈಕೆಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. 

72 ಲಕ್ಷ ವೋಟ್‌ ಪಡೆದ ಬಿಗ್‌ ಬಾಸ್‌ ಸ್ಪರ್ಧಿ, ಕಿಚ್ಚ ರಿವಿಲ್‌ ಮಾಡಿದ್ರು ಅಚ್ಚರಿಯ ನಂಬರ್‌!