ಅಮೃತಧಾರೆ ಧಾರಾವಾಹಿಯು ವಿಭಿನ್ನ ಕಥಾಹಂದರದಿಂದ ಗಮನ ಸೆಳೆದಿದೆ. ಮಧ್ಯವಯಸ್ಕರ ಪ್ರೇಮಕಥೆಯಾಗಿದ್ದರೂ, ಅತ್ತೆಯ ಕುತಂತ್ರಕ್ಕೆ ಸೊಸೆ ಪ್ರತಿತಂತ್ರ ಹೂಡುತ್ತಾಳೆ. ಆದರೆ, ಈಗ ಭೂಮಿಕಾ ತನಗೆ ಮಕ್ಕಳಾಗುವುದಿಲ್ಲ ಎಂಬ ಕಾರಣಕ್ಕೆ ಅತ್ತೆಯ ಮಾತಿನಂತೆ ಗಂಡನಿಗೆ ಮರುಮದುವೆ ಮಾಡಲು ಹೊರಟಿದ್ದಾಳೆ. ಇದರಿಂದ ವೀಕ್ಷಕರು ಅಸಮಾಧಾನಗೊಂಡಿದ್ದು, ಉತ್ತಮ ಧಾರಾವಾಹಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವೀಕ್ಷಕರು ತುಂಬಾ ಇಷ್ಟಪಟ್ಟು ನೋಡುತ್ತಿರುವ, ಸದಾ ಟಿಆರ್​ಪಿಯಲ್ಲಿ ಉನ್ನತ ಸ್ಥಾನವನ್ನೇ ಕಾಯ್ದುಕೊಂಡು ಬಂದಿರುವ ಸೀರಿಯಲ್​ಗಳಲ್ಲಿ ಒಂದು ಅಮೃತಧಾರೆ. ಇದಕ್ಕೆ ಕಾರಣವೂ ಇದೆ. ಹಿಂದಿನಿಂದಲೂ ಇಲ್ಲಿಯವರೆಗೆ ಬಂದಿರುವ ಬೇರೆ ಬೇರೆ ಭಾಷೆಗಳ ಸಹಸ್ರಾರು ಸೀರಿಯಲ್​ಗಳ ಪೈಕಿ ಹೆಚ್ಚಿನವರು ಮಹಿಳಾ ಕೇಂದ್ರೀಕೃತವೇ ಆಗಿದ್ದರೂ ಅದರಲ್ಲಿ ಅಳುಮುಂಜಿ ಸೊಸೆ, ವಿಲನ್​ ಅತ್ತೆಯನ್ನೇ ತೋರಿಸಿ ಬರಲಾಗಿದೆ. ಆದರೆ ಅಮೃತಧಾರೆ ವಿಭಿನ್ನವಾಗಿ ಎಲ್ಲರ ಮನಸ್ಸನ್ನು ಗೆಲ್ಲಲು ಕಾರಣ, ಇದರಲ್ಲಿ ಇರುವ ಡಿಫರೆಂಟ್​ ಥೀಮ್​. ಮಧ್ಯವಯಸ್ಸಿನವರ ನವೀರಾದ ಪ್ರೇಮದ ಕಥೆ ಇದಾಗಿದ್ದರೂ, ಇಲ್ಲಿ ವಿಲನ್​ ಅತ್ತೆಯ ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಲೇ ಇರುವ ಸೊಸೆ. ಗಂಡ-ಹೆಂಡತಿಯನ್ನು ಬೇರೆ ಬೇರೆ ಮಾಡಲು ಅತ್ತೆ ಶಕುಂತಲಾ ದೇವಿ ಹೂಡುತ್ತಿರುವ ಪ್ಲ್ಯಾನೇ ಗಂಡ-ಹೆಂಡತಿಯನ್ನು ಮತ್ತಷ್ಟು, ಇನ್ನಷ್ಟು ಹತ್ತಿರ ಮಾಡುತ್ತಿದೆ. ಶಕುಂತಲಾದೇವಿ ಏನೇ ಪ್ಲ್ಯಾನ್​ ಮಾಡಿದ್ರೂ ಅದಕ್ಕೆ ತಕ್ಕ ಉತ್ತರ ಕೊಡುತ್ತಲೇ ಬಂದವಳು ಸೊಸೆ ಭೂಮಿಕಾ. ಆದರೆ ಈಗ?

ತನಗೆ ಮಕ್ಕಳಾಗುವುದಿಲ್ಲ ಎನ್ನುವ ಕಾರಣಕ್ಕೆ, ಇದೇ ವಿಲನ್​ ಅತ್ತೆಯ ಮಾತು ಕೇಳಿರುವ ಭೂಮಿಕಾ, ಗಂಡನಿಗೆ ಮತ್ತೊಂದು ಮದುವೆ ಮಾಡಿಸಲು ಹೊರಟಿದ್ದಾಳೆ. ಆತ ಹಿಂದೆ ಯಾರನ್ನಾದರೂ ಇಷ್ಟಪಟ್ಟಿದ್ನಾ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿ ವಿಫಲ ಆಗಿದ್ದಾಳೆ, ಯಾಕೆಂದ್ರೆ ಅಂಥದ್ದೇನೂ ಇಲ್ಲ ಎಂದುಬಿಟ್ಟಿದ್ದಾನೆ ಗೌತಮ್​. ಇದೀಗ ಭೂಮಿಕಾ, ಗೌತಮ್​ನನ್ನು ಯಾರಾದರೂ ಇಷ್ಟಪಟ್ಟಿರಬಹುದಲ್ವೇ ಎನ್ನುವ ಹುಡುಕಾಟ ಶುರು ಮಾಡಿದ್ದಾಳೆ! ಒಂದೆಡೆ, ಈ ಮನೆಗೆ ವಾರಸುದಾರನನ್ನು ಕೊಡಲು ಆಗುತ್ತಿಲ್ಲ ಎಂದು ನೋವು ಪಟ್ಟುಕೊಂಡು, ದೇವರ ಎದುರು ನನ್ನನ್ನು- ಗೌತಮ್​ ಅವರನ್ನೂ ಬೇರೆ ಬೇರೆ ಮಾಡಬೇಡಪ್ಪಾ ದೇವರೇ ಎಂದು ಬೇಡಿಕೊಂಡಿರೋ ಭೂಮಿಕಾ ಈಗ ಮತ್ತೊಂದು ಮದುವೆ ಮಾಡಲು ಬಯಸಿದ್ದಾಳೆ. ಇದೊಂದು ರೀತಿಯಲ್ಲಿ ಹಾಸ್ಯಾಸ್ಪದ ಎನ್ನಿಸುತ್ತಿದೆ, ಒಳ್ಳೆಯ ಸೀರಿಯಲ್​ ಅನ್ನು ಕೆಟ್ಟದ್ದಾಗಿ ಮಾಡುವುದು ಹೇಗೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದು ಸೀರಿಯಲ್​ ಪ್ರೇಮಿಗಳು ಗರಂ ಆಗಿದ್ದಾರೆ.

ಗೀತಾ ಬೇರೆ ಪಕ್ಷಕ್ಕೆ ಹೋದ್ರೂ ಸಪೋರ್ಟ್​ ಮಾಡುವೆ: ರಾಜಕೀಯ ಎಂಟ್ರಿ ಕುರಿತು ಶಿವರಾಜ್​ ಕುಮಾರ್​ ಹೇಳಿದ್ದೇನು?

ಅಮೃತಧಾರೆ ಬರು ಬರುತ್ತಾ ಮೃತಧಾರೆ ಆಗ್ತಿದೆ ಎಂದು ಹಲವರು ಕಮೆಂಟ್​ನಲ್ಲಿ ಹೇಳುತ್ತಿದ್ದಾರೆ. ಹಿಂದೊಮ್ಮೆ ಶಕುಂತಲಾಳ ಕುತಂತ್ರದಿಂದ ನಕಲಿ ಜ್ಯೋತಿಷಿ ಬಂದಾಗ ಇದೇ ಭೂಮಿಕಾ ಬೇರೆ ಜ್ಯೋತಿಷಿಯೊಬ್ಬರ ಬಳಿ ಹೋಗಿ ಸಮಸ್ಯೆ ಪರಿಹಾರ ಮಾಡಿಕೊಂಡಿದ್ದಳು. ಇದೀಗ ಒಬ್ಬರು ವೈದ್ಯರು ಮಕ್ಕಳಾಗುವುದಿಲ್ಲ ಎಂದರೆ, ಮತ್ತೊಬ್ಬರ ಬಳಿ ಹೋಗಿ ಸಲಹೆ ಪಡೆಯಬೇಕು ಎನ್ನುವುದು ಈ ಬುದ್ಧಿವಂತೆ ಟೀಚರ್​ಗೆ ಗೊತ್ತಾಗಲಿಲ್ಲವೆ? ಕೊನೆಯ ಪಕ್ಷ ತನಗೆ ಮಕ್ಕಳಾಗುವ ಏನಾದ್ರೂ ಛಾನ್ಸಸ್​ ಇದೆಯಾ ಎಂದು ಬೇರೆಯವರ ಬಳಿ ಹೋಗಿ ಕೇಳುವಷ್ಟು ಕನಿಷ್ಠ ಬುದ್ಧಿಯೂ ಇಲ್ಲದಂತೆ ನಿರ್ದೇಶಕರು ಮಾಡಿರುವುದು ಹಾಸ್ಯವಲ್ಲದೇ ಇನ್ನೇನು ಎನ್ನುತ್ತಿದ್ದಾರೆ ಗರಂ ಆಗಿರೋ ವೀಕ್ಷಕರು. 

ಇಷ್ಟು ಬೇಗ ಭೂಮಿಕಾ ಪೆದ್ದಿ ಆಗಿದ್ದು ಯಾಕೆ? ಅದೂ ತಮ್ಮನ್ನು ಸಾಯಿಸಲು ಹೊಂಚು ಹಾಕಿರುವ ಅತ್ತೆಯ ಬಗ್ಗೆ ಆಕೆಗೆ ಚೆನ್ನಾಗಿ ಗೊತ್ತು. ಆಕೆ ದುಷ್ಟಳು ಎನ್ನುವುದೂ ಗೊತ್ತು. ಹಾಗಿರುವಾಗ ಅಂಥ ಅತ್ತೆಯ ಮಾತಿನ ಹಿಂದೆ ಎಂಥ ಕುತಂತ್ರ ಇರುತ್ತದೆ ಎನ್ನುವುದು ಇವಳಿಗೆ ಯಾಕೆ ತಿಳಿದಿಲ್ಲ? ತನ್ನನ್ನು ಮತ್ತು ಗಂಡನನ್ನು ದೂರ ಮಾಡಲು ಈ ಹಿಂದೆ ಎಷ್ಟು ಸರ್ಕಸ್​ ಮಾಡಿದ್ದಳು ಎಂದು ಅರಿತಿರುವ ಭೂಮಿಕಾ ಮಿಸ್ಸು, ಇಲ್ಲಿ ಮಿಸ್ಸು ಹೊಡೆದದ್ದೇಕೆ? ಇಂಥ ಅವಿವೇಕತನದಿಂದ ಸೀರಿಯಲ್​ ಯಾಕೆ ಹಾಳು ಮಾಡುತ್ತೀರಿ ಎಂದೆಲ್ಲಾ ಅಭಿಮಾನಿಗಳು ಗರಂ ಆಗುತ್ತಿದ್ದಾರೆ. ಅಷ್ಟಕ್ಕೂ ಇವಳು ಹೇಳಿದ ಮಾತ್ರಕ್ಕೆ ಗೌತಮ್​ ಏನೂ ಬೇರೆ ಮದ್ವೆಯಾಗುವುದಿಲ್ಲ ಎನ್ನುವುದು ನಿಜವಾದರೂ, ಆಣೆ-ಗೀಣೆ ಮಾಡಿಸಿ ಮದ್ವೆ ಮಾಡಿಸಿಬಿಟ್ಟರೆ ಎನ್ನುವ ಚಿಂತೆ ಅಭಿಮಾನಿಗಳಿಗೆ! ಎಷ್ಟೇ ಆದರು ಸೀರಿಯಲ್​​ ಮುಂದೆ ಹೋಗಬೇಕಲ್ವಾ, ಅಲ್ಲಿ ಟ್ವಿಸ್ಟ್​ ಇರಲೇಬೇಕು, ಏನು ಬೇಕಾದರೂ ಆದೀತು ಎನ್ನುವುದು ವೀಕ್ಷಕರಿಗೆ ತಿಳಿದಿದ್ದರೂ, ಒಳ್ಳೆಯ ಸಂಬಂಧ ಹಾಳು ಮಾಡಬೇಡಿ ಎಂದು ರಿಕ್ವೆಸ್ಟ್​ ಮಾಡಿಕೊಳ್ಳುತ್ತಿದ್ದಾರೆ. 

ಒಂದೇ ಸೀರೆಯನ್ನು ಹೇಗೆಲ್ಲಾ ಧರಿಸ್ಬೋದು? ಸೀತಾರಾಮ ಸೀತಾ ಹೇಳಿಕೊಟ್ಟರು ಹಲವು ಬಗೆ... ವಿಡಿಯೋ ವೈರಲ್