ಭಾಗ್ಯಲಕ್ಷ್ಮೀ: ಭಾಗ್ಯ ಒಳ್ಳೆಯತನಕ್ಕೆ ಒಲಿದು ಬಂದ ದುರ್ಗೆಯರು! ನಿಜ ಜೀವನದಲ್ಲಿ ಹೀಗಾಗಿದ್ದರೆ!

ಎಲ್ಲೆಲ್ಲೂ ನವರಾತ್ರಿ ಸಂಭ್ರಮ. ಸೀರಿಯಲ್‌ನಲ್ಲೂ ಇದು ಪ್ರತಿಬಿಂಬಿಸುತ್ತಿದೆ. ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಂತೂ ದುರ್ಗೆಯರು ಒಳ್ಳೆ ಹೆಣ್ಣುಮಗಳ ಭಾಗ್ಯಗೆ ಫುಲ್ ಸಪೋರ್ಟ್ ಮಾಡುತ್ತಿದ್ದಾರೆ.

bhagyalaxmi serial devi supports Bhagya navratri special episodes of colors kannada bni

ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ಸಿಕ್ಕಾಪಟ್ಟೆ ಒಳ್ಳೆ ಹೆಣ್ಣುಮಗಳು. ಇದೀಗ ಅವಳ ಬೆಂಬಲಕ್ಕೆ ದುರ್ಗೆಯರು ನಿಂತಿದ್ದಾರೆ. ಭಾಗ್ಯ ವಿದ್ಯಾಭ್ಯಾಸಕ್ಕೆ ಅಡ್ಡಗಾಲು ಹಾಕುತ್ತಿರುವ ಕನ್ನಿಕಾಗೆ ಸರಿಯಾಗಿ ಪಾಠ ಕಲಿಸಲು ಮುಂದಾಗಿದ್ದಾರೆ. ಈ ಎಪಿಸೋಡ್‌ನಲ್ಲಿ ಭಾಗ್ಯಾ ಬಗ್ಗೆ ಕನ್ನಿಕಾ ದೇವಿಯರ ಮುಂದೆ ಏನೇನೋ ಸುಳ್ಳು ಹೇಳಲು ಪ್ರಯತ್ನಿಸಿದರೆ ಸತ್ಯ ಏನು ಅನ್ನುವುದನ್ನು ದೇವಿಯರೆ ಬಾಯಿ ಬಿಡಿಸಿದ್ದಾರೆ. ಈ ಮೂಲಕ ಭಾಗ್ಯ ಬೆಂಬಲಕ್ಕೆ ದೇವಿಯರು ನಿಂತಿದ್ದಾರೆ. ಆದರೆ ಪದೇ ಪದೇ ಹಬ್ಬದ ಸಮಯದಲ್ಲಿ ಇಂಥಾ ಎಪಿಸೋಡ್‌ಗಳನ್ನೇ ಹಾಕೋದ್ರಿಂದ ವೀಕ್ಷಕರು ಮಾತ್ರ ಈ ಕಾಂಸೆಪ್ಟ್ ಹಳೇದಾಯ್ತು, ನಾವು ಬಿಗ್‌ಬಾಸ್ ನೋಡ್ತೀವಿ ಅಂತಿದ್ದಾರೆ.

ಇಲ್ಲಿ ಹೊಸದಾಗಿ ಭಾಗ್ಯ ಎಂಬುವವರು ಅಡ್ಮಿಶನ್ ಆಗಿದ್ದಾರಲ್ಲ ಅವರು ಎಲ್ಲಿ ಎಂದು ಕನ್ನಿಕಾ ಬಳಿಯೇ ಮಂಗಳ ಗೌರಿ ಪ್ರಶ್ನೆಯನ್ನು ಮಾಡಿದ್ದಾರೆ. ಇನ್ನು ಕನ್ನಿಕಾ ಅವಳು ಶೋಕಿಗಾಗಿ ಶಾಲೆಗೆ ಬರುತ್ತಿದ್ದಳು. ಈಗ ಪಬ್ಲಿಸಿಟಿ ಸಿಕ್ಕ ಮೇಲೆ ಶಾಲೆಗೆ ಬರುತ್ತಿಲ್ಲ ಒಂದೇ ಒಂದು ದಿನ ಪ್ರೇಯರ್‌ಗೆ ಬಂದು ವಾಪಸ್ ಹೋಗಿದ್ದಾಳೆ ಎಂದು ಸುಳ್ಳು ಹೇಳಿದ್ದಾಳೆ. ಇದೇ ವೇಳೆ ಹರೀಶ್ ಬೆಳಗ್ಗೆ ಬಂದಿದ್ದರು ಎಂದಾಗ ಒಂದು ವಾರದ ಹಿಂದೆ ಬಂದಿದ್ದರು. ಈಗ ಶಾಲೆಗೆ ಬರುತ್ತಿಲ್ಲ ಎಂದು ಹೇಳಿದ್ದಾಳೆ. ಭಾಗ್ಯ ಬಗ್ಗೆ ಕನ್ನಿಕಾ ಬರೀ ಸುಳ್ಳನ್ನೇ ಹೇಳುತ್ತಾ ಇದ್ದಾಳೆ.‌ ಇದೇ ವೇಳೆ ನವದುರ್ಗೆಯರು ನಗುತ್ತಾ ಇದ್ದಾರೆ. ಯಾಕೆಂದರೆ ಕನ್ನಿಕಾ ಸುಳ್ಳು ಹೇಳಿದ್ದಾಳೆ ಎಂದು ದೇವಿಯರಿಗೆ ಗೊತ್ತಿದೆ ಇದಕ್ಕಾಗಿ ಸುಮ್ಮನೆ ನಿಂತಿದ್ದಾರೆ.

ಮತ್ತೆ ಮಾಲ್ಡೀವ್ಸ್‌ ಫೋಟೋ ಶೇರ್ ಮಾಡಿದ Sonu Gowda: ಚೆಡ್ಡಿಲಿ ತುಂಬಾ ಸೆಕ್ಸಿಯಾಗಿ ಕಾಣಿಸ್ತೀರಾ ಅನ್ನೋದಾ!

ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನವರಾತ್ರಿ ಸಂಭ್ರಮ ಮನೆ ಮಾಡಿದೆ ಭಾಗ್ಯ ಮನೆಯಲ್ಲಿ ಸುನಂದಾ ಬೊಂಬೆಗಳನ್ನ ಕೂರಿಸಿ ಮಗಳಿಗೆ ಆದಷ್ಟು ಅನುಕೂಲವನ್ನು ಮಾಡಿಕೊಡುತ್ತಿದ್ದಾರೆ. ಸುನಂದಾ ಜೊತೆಗೆ ಅವರ ಮೊಮ್ಮಗ ಗುಂಡಣ್ಣ ಸಹ ಅಜ್ಜಿಗೆ ಬೊಂಬೆಗಳನ್ನ ಕೂರಿಸಿ ಅಮ್ಮ ಬರುವ ದಾರಿಯನ್ನೇ ಕಾಯುತ್ತಾ ಇದ್ದಾನೆ‌. ಪೂಜಾ ಮಾತ್ರ ತನ್ನ ಮನೆಗೆ ಹೋಗದೆ ಭಾವನಾ ಮನೆಯಲ್ಲಿ ಸೇರಿಕೊಂಡಿದ್ದಾಳೆ. ಯಾಕೆಂದರೆ ಪೂಜಾಗೆ ಭಾವನ ವಿಕ್‌ನೆಸ್ (weakness) ಪ್ಲಸ್ ಪಾಯಿಂಟ್ ಆಗಿ ಪರಿಣಮಿಸಿದೆ. ಭಾವನ ಬಳಿ ಎಷ್ಟು ಹಣ ಬೇಕೋ ಅಷ್ಟು ಹಣವನ್ನು(money) ಪಡೆಯಬಹುದು ಎಂದು ಕೊಂಡಿದ್ದಾಳೆ.

ಭಾಗ್ಯ ಶಾಲೆಯಿಂದ ಹೊರಗೆ ಬಂದಿದ್ದಾಳೆ. ಅವಳು ಶಾಲೆಯವರೆಗೆ ನಿಂತು ಯೋಚನೆ ಮಾಡುತ್ತಿದ್ದಾಳೆ. ನನಗೆ ಸಹಾಯವನ್ನ ಮಾಡುವವರು ಯಾರು, ಈ ಸೊಸೈಟಿಯಲ್ಲಿ ಹಣ ಇರುವವರಿಗೆ ಮಾತ್ರ ಒಂದು ಉತ್ತಮವಾದ ಭವಿಷ್ಯ (future) ಸಿಗಲಿದೆ ಅಂದುಕೊಂಡಿದ್ದಾಳೆ.‌ ಅಷ್ಟರಲ್ಲಿ ಅಲ್ಲಿಗೆ ದುರ್ಗೆಯ ಅವತಾರದಲ್ಲಿ ಮಂಗಳ ಗೌರಿ ಎಂಟ್ರಿ ಕೊಟ್ಟಿದ್ದು, ಶಾಲೆಯ ಒಳಗೆ ಭಾಗ್ಯಾಳನ್ನ ಕರೆದುಕೊಂಡು ಹೋಗಿದ್ದಾರೆ. ಆದರೆ ಕನ್ನಿಕಾ ಮಾತ್ರ ತನ್ನ ನರಿ ಬುದ್ಧಿಯನ್ನ ತೋರಿಸಿ ಭಾಗ್ಯದ ಅಡ್ಮಿಶನ್ ಲೆಟರ್‌ನ್ನು ಹರಿದು ಹಾಕಿದ್ದಾಳೆ. ಇದೇ ವೇಳೆ ಕನ್ನಿಕಾ ಮುಂದೆ ದುರ್ಗೆ ಪ್ರತ್ಯಕ್ಷವಾಗಿದ್ದು ಕನ್ನಿಕಾ ಶಾಕ್‌ಗೆ (shock) ಒಳಗಾಗಿದ್ದಾಳೆ.

ಭಾಗ್ಯ ಶಾಲೆಗೆ ಬರುತ್ತಿಲ್ಲ. ಸೋಷಿಯಲ್ ಮೀಡಿಯಾ ಶೋಕಿಗಾಗಿ ಸ್ಕೂಲಿಗೆ ಬರೋ ನಾಟಕ (drama) ಆಡ್ತಿದ್ದಾಳೆ. ಮೂವತ್ತೈದು ವರ್ಷ ವಯಸ್ಸಿನ ಅವಳಿಗೆ ಶಾಲೆ ಅಂದರೆ ಅಂಥಾ ಗೌರವ ಇಲ್ಲ. ಅವಳಿಗೆ ಇರೋದು ಶೋಕಿ ಮಾತ್ರ ಅಂತೆಲ್ಲ ದೇವಿಯರ ಮುಂದೆ ಕನ್ನಿಕಾ ಹೇಳುತ್ತಿದ್ದರೆ ಅದನ್ನು ನಂಬಲು ದೇವಿಯರು ಸಿದ್ಧರಿಲ್ಲ. ಕನ್ನಿಕಾ ಹೀಗೆಲ್ಲ ಸುಳ್ಳು ಹೇಳುತ್ತಿರುವಾಗಲೇ ಅವಳ ಮುಂದೆ ಭಾಗ್ಯಳನ್ನು ತಂದು ನಿಲ್ಲಿಸಿದ್ದಾರೆ.

 

ಎಂಗೇಜ್ಮೆಂಟ್ ಎಂದು ಶ್ರೇಷ್ಠಾಳನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಲಾಯಿತು. ಇದೇ ವೇಳೆ ಶ್ರೇಷ್ಠಾ ರಘು ಕಡೆಯವರು ಯಾರು ಬರೋದಿಲ್ವ ಎಂದು ಕೇಳಿದ್ದಾಳೆ. ಇದಕ್ಕೆ ಶ್ರೀವರ ನಾವೇ ರಘು ಕಡೆಯವರಾಗಿ ಮುಂದೆ ನಿಂತು ಎಂಗೇಜ್ಮೆಂಟ್ ಮಾಡುತ್ತೇವೆ ಎಂದಾಗ ಊರಿನವರೆಲ್ಲರಿಗೂ ಸಹ ಎಂಗೇಜ್ಮೆಂಟ್ ವಿಚಾರ ತಿಳಿಯಲಿ ಎಂದು ಫೋನ್ ಮಾಡಿಸಿ ಎಲ್ಲರನ್ನು ಕರೆದಿದ್ದಾಳೆ. ಬಳಿಕ ನನಗೆ ಇಷ್ಟವಿಲ್ಲದ ಎಂಗೇಜ್ಮೆಂಟ್ ಮಾಡುತ್ತಿದ್ದಾರೆ ಎಂದು ತಂದೆಗೆ ಅವಮಾನ ಮಾಡಿದ್ದಾಳೆ. ಇದೆ ವೇಳೆ ಅಲ್ಲಿಗೆ ಬಂದ ಜನರು ಏನು ಶ್ರೀವರ ನೀನೇ ಬೆಳೆಸಿದ ಹುಡುಗನ ಜೊತೆಗೆ ಮದುವೆ ಮಾಡಲು ಹೊರಟಿದ್ದಿಯಲ್ಲ. ಅದು ಸಹ ಮಗಳಿಗೆ ಇಷ್ಟವಿಲ್ಲ ಎಂದು ಕುಹಕವಾಡಿದ್ದಾರೆ. ಜನರ ಮಾತನ್ನ ಕೇಳಿದ ಶ್ರೀವರ ಕೆಳಗೆ ಕುಸಿದು ಬಿದ್ದಿದ್ದಾರೆ .ಇದೇ ವೇಳೆ ರಘು ಮಾವನಿಗೆ ಈ ರೀತಿ ಆಯಿತಲ್ಲ ಎಂದು ಶ್ರೇಷ್ಠಾಳನ್ನು ಎಲ್ಲದರೂ ಹೋಗಿ ಸಾಯಿ ಇನ್ಮುಂದೆ ನೀನು ಈ ಊರಿಗೆ ಕಾಲಿಡಬೇಡ ಎಂದು ಹೇಳಿದ್ದಾನೆ.

Shrirasthu Shubhamasthu: ತುಳಸಿ ಕಣ್ಣಿಂದ ಧಾರಾಕಾರ ನೀರು; ಅಯ್ಯೋ, ಸ್ವಂತ ಮಕ್ಕಳೇ ಮರೆಯಲಾಗದ ಗಾಯ ಮಾಡಿದರೇ?

Latest Videos
Follow Us:
Download App:
  • android
  • ios