Shrirasthu Shubhamasthu: ತುಳಸಿ ಕಣ್ಣಿಂದ ಧಾರಾಕಾರ ನೀರು; ಅಯ್ಯೋ, ಸ್ವಂತ ಮಕ್ಕಳೇ ಮರೆಯಲಾಗದ ಗಾಯ ಮಾಡಿದರೇ?
"ನಿಮಗೆ ನಿಮ್ಮ ಸ್ವಾರ್ಥವೇ ಮುಖ್ಯ, ಮಕ್ಕಳ ಹಿತವಲ್ಲ. ನಿಮ್ಮಿಂದ ನಮ್ಮ ಜೀವನವೇ ಹಾಳಾಯಿತು" ಎಂದು ಮಗಳು ತಾಯಿಗೆ ಬಯ್ಯುತ್ತಿದ್ದರೆ, ಇತ್ತ ಮಗ ತಾಯಿಗೆ "ನಾವು ತಂದೆ-ತಾಯಿ ಇಲ್ಲದ ಅನಾಥ ಮಕ್ಕಳು. ಎಲ್ಲರೂ ಸ್ವಾರ್ಥಿಗಳೇ. ಈಗ ಏನೋ ಒಂದು ಮಾಡುತ್ತ ಮಾತನಾಡುತ್ತ ಇದ್ದರೂ ನಾಳೆ ಎಲ್ಲರೂ ಇದೇ ಮನೆಗೇ ಬರುವವರೇ" ಎಂದು ತಾಯಿ-ತಂದೆ ಮನಸ್ಸಿಗೆ ಚುಚ್ಚಿ ಮಾತನಾಡುತ್ತಿದ್ದಾನೆ.

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ 'ಶ್ರೀರಸ್ತು ಶುಭಮಸ್ತು' ಧಾರಾವಾಹಿ ಇತ್ತೀಚೆಗೆ ಹಲವು ತಿರುವುಗಳನ್ನು ತೆಗೆದುಕೊಳ್ಳುತ್ತಿದ್ದು, ಭಾರೀ ಕುತೂಹಲ ಕೆರಳಿಸುತ್ತದೆ. ತುಳಸಿ ಮತ್ತು ಮಾಧವರು ತಮ್ಮ ತಮ್ಮ ನೋವು ಮರೆತು ಒಂದಾಗಬೇಕು ಎಂದು ಬಯಸಿರುವ ಹೊತ್ತಿಗೆ, ಮಕ್ಕಳಿಗಾಗಿ ಮನೆ ಒಂದಾಗಬೇಕು ಎಂದು ತುಳಸಿ ಬಯಸಿದರೆ, ಇತ್ತ ಆಗುತ್ತಿರುವುದೇ ಬೇರೆ. ಮಕ್ಕಳೇ ತಾಯಿ ತುಳಸಿ ಮನಸ್ಸಿಗೆ ಮರೆಯಲಾಗದ ಗಾಯ ಮಾಡಿದ್ದಾರೆ ಎನ್ನಬಹುದು. ಮಗ-ಮಗಳು ತನ್ನ ಬಗ್ಗೆ ಚುಚ್ಚಿ ಮಾತನಾಡುತ್ತಿದ್ದರೆ ಅಮ್ಮ ತುಳಸಿ ಕಣ್ಣೀರ ಕೋಡಿ ಹರಿಸುತ್ತ ಅಸಾಹಯಕರಾಗಿ ನಿಂತಿದ್ದಾಳೆ. ತುಳಸಿ ಕಣ್ಣಿರಿಗೆ ಕರಗಿದ ಮಾಧವ ಮಕ್ಕಳನ್ನು ಸರಿ ದಾರಿಗೆ ತರುವನೇ? ಉತ್ತರಕ್ಕೆ ಕಾಯಲೇಬೇಕು.
"ನಿಮಗೆ ನಿಮ್ಮ ಸ್ವಾರ್ಥವೇ ಮುಖ್ಯ, ಮಕ್ಕಳ ಹಿತವಲ್ಲ. ನಿಮ್ಮಿಂದ ನಮ್ಮ ಜೀವನವೇ ಹಾಳಾಯಿತು" ಎಂದು ಮಗಳು ತಾಯಿಗೆ ಬಯ್ಯುತ್ತಿದ್ದರೆ, ಇತ್ತ ಮಗ ತಾಯಿಗೆ "ನಾವು ತಂದೆ-ತಾಯಿ ಇಲ್ಲದ ಅನಾಥ ಮಕ್ಕಳು. ಎಲ್ಲರೂ ಸ್ವಾರ್ಥಿಗಳೇ. ಈಗ ಏನೋ ಒಂದು ಮಾಡುತ್ತ ಮಾತನಾಡುತ್ತ ಇದ್ದರೂ ನಾಳೆ ಎಲ್ಲರೂ ಇದೇ ಮನೆಗೇ ಬರುವವರೇ" ಎಂದು ತಾಯಿ-ತಂದೆ ಮನಸ್ಸಿಗೆ ಚುಚ್ಚಿ ಮಾತನಾಡುತ್ತಿದ್ದಾನೆ. ಮಕ್ಕಳಿಗಾಗಿಯೇ ಬದುಕುತ್ತಿರುವ ತುಳಸಿಗೆ ಈ ಮಾತುಗಳಿಂದ ಗಾಯ ಆಗುತ್ತದೆ. ಅತ್ತ ಗಂಡ ಮಾಧವ ತಮ್ಮ ಮಕ್ಕಳ ಬಗ್ಗೆ ಯೋಚಿಸಿ, ಹೆಂಡತಿ ಜತೆ ಮನಸ್ತಾಪ ಇದ್ದರೂ ಮತ್ತೆ ಒಂದಾಗಲು ಪ್ರಯತ್ನ ಮಾಡುತ್ತಿದ್ದರೆ, ಇತ್ತ ಸ್ವತಃ ಮಕ್ಕಳೇ ತಂದೆ-ತಾಯಿ ಸರಿ ಇಲ್ಲ ಎಂದು ಹೇಳುವಂತಿದೆ.
BBK10: ಅದೆಷ್ಟೇ ಟಾರ್ಗೆಟ್ ಮಾಡಿದ್ರೂ ಈ ಮೂವರನ್ನ 'ದೊಡ್ಮನೆ'ಯಿಂದ ಮನೆಗೆ ಕಳಿಸಲು ಆಗದು!
ಬೇರೆ ಯಾರೋ ಏನೋ ಹೇಳಿದರೆ ತಾಯಿ-ತಂದೆಯರು ಅದನ್ನು ತಮ್ಮ ಮಕ್ಕಳ ಹಿತದೃಷ್ಟಿಯಿಂದ ಸಹಿಸಿಕೊಳ್ಳುತ್ತಾರೆ. ಆದರೆ, ಸ್ವತಃ ಮಕ್ಕಳೇ ಹೀಗೆ ಚುಚ್ಚಿ ಮಾತನ್ನಾಡುತ್ತಿದ್ದರೆ ತಾಯಿಗೆ ಸಹಿಸಿಕೊಳ್ಳಲು ಅಸಾಧ್ಯವಾಗಿ ಕಣ್ಣೀರೇ ಗತಿ ಎಂಬಂತಾಗಿದೆ. ಆದರೆ, ಮಕ್ಕಳಿಗಾಗಿಯೇ ಬದುಕುತ್ತಿರುವ, ಮತ್ತೆ ಒಂದಾಗುತ್ತಿರುವ ತಾಯಿ-ತಂದೆಯನ್ನು ತುಳಸಿ-ಮಾಧವರ ಮಕ್ಕಳು ಅರ್ಥ ಮಾಡಿಕೊಳ್ಳುವರೇ? ಅದನ್ನು ತಿಳಿಯಲು ಜೀ ಕನ್ನಡದಲ್ಲಿ ಪ್ರತಿ ರಾತ್ರಿ 9.30ಕ್ಕೆ 'ಶ್ರೀರಸ್ತು ಶುಭಮಸ್ತು' ಸೀರಿಯಲ್ ನೋಡಲೇಬೇಕು. ಇಂದಿನ ಸಂಚಿಕೆಯಲ್ಲಿ ಇದಕ್ಕೆ ಉತ್ತರ ಸಿಗಬಹುದು, ತಪ್ಪದೇ ನೋಡಿ.
BBK10 ಪ್ರೇಮಿಗಳು ಶಾಕ್: 'ದೊಡ್ಮನೆ'ಯಲ್ಲಿ ನಡೆಯಿತಾ ಘೋರ ದುರಂತ, ಕಾರ್ತಿಕ್-ಸಂಗೀತಾ ಮಧ್ಯೆ ಬಿಗ್ ಫೈಟ್?!