ಸುಷ್ಮಾ ರಾವ್ ಅನ್ನೋ ಟ್ಯಾಲೆಂಟೆಡ್ ನಟಿ, ನಿರೂಪಕಿ, ಸದ್ಯಕ್ಕೀಗ ಭಾಗ್ಯಲಕ್ಷ್ಮೀ ಸೀರಿಯಲ್ ನ ಭಾಗ್ಯ ಅಂತಲೇ ಫೇಮಸ್. ಈ ಹೋಮ್ಲಿ ಹೋಮ್ಲಿ ಚೆಲುವೆಯ ಹ್ಯಾಪಿ ಬರ್ತ್ ಡೇಗೆ ಕಲರ್ಸ್ ಕನ್ನಡ ಟೀಮ್ ಏನ್ ಗಿಫ್ಟ್ ಕೊಟ್ಟಿದೆ ಗೊತ್ತಾ?
ಸುಷ್ಮಾ ರಾವ್ ಅಂದ್ರೆ ಭರಪೂರ ಟ್ಯಾಲೆಂಟ್. ಮೂವತ್ತೆಂಟರ ಹೊಸ್ತಿಲಲ್ಲಿರುವ ಈ ನಟಿಯ ಮಾತೂ ಚೆಂದ, ಅಭಿನಯವೂ ಚೆಂದ, ಸೀರಿಯಲ್‌ನಲ್ಲಿ ಬಂದ್ರೂ ಜನ ಶಭಾಶ್ ಅಂತಾರೆ, ರಿಯಾಲಿಟಿ ಶೋನಲ್ಲಿ ಈಕೆಯ ಆಟ, ತುಂಟಾಟಕ್ಕೆ ಬೆನ್ನು ತಟ್ಟುತ್ತಾರೆ. ದಶಕದ ಹಿಂದೆ ಸುಷ್ಮಾ ರಾವ್ ಅಂದ್ರೆ ಭಾವನಾ ಅಂತಿದ್ರು ಜನ. ಗುಪ್ತ ಗಾಮಿನಿ ಸೀರಿಯಲ್‌ನಲ್ಲಿ ಅವರು ಮಾಡ್ತಿದ್ದ ಭಾವನಾ ಪಾತ್ರ ಸಖತ್ ಪಾಪ್ಯುಲರ್. ಅವರು ಎಲ್ಲಿ ಸಿಕ್ಕರೂ ಜನ ಭಾವನಾ ಅಂತಲೇ ಕರೆದು ಮಾತಾಡಿಸುವಷ್ಟು ಮನೆ ಮಾತಾದರು. ಆ ಬಳಿಕ ಒಂದಿಷ್ಟು ಸೀರಿಯಲ್‌ಗಳಲ್ಲಿ ನಟಿಸಿ ಆ ಬಳಿಕ ಸೀರಿಯಲ್‌ನಿಂದ ಹೊರಬಂದರು. ಜನಪ್ರಿಯತೆ ಇದ್ದಾಗಲೇ ಸೀರಿಯಲ್‌ನಿಂದ ಯಾಕೆ ಹೊರ ಬಂದಿರಿ ಅಂತ ಕೇಳಿದರೆ ಸುಷ್ಮಾ ಕೊಡೋ ಉತ್ತರ ಇದು. 'ಏಕತಾನತೆ ಇರಬಾರದು. ಹಾಗಾಗಿ ಜನರಿಗೆ ಬೋರ್ ಅನಿಸುವ ಮೊದಲೇ ಪಾತ್ರದಿಂದ ಹೊರಬರಬೇಕು ಎಂಬುದು ನನ್ನ ಅಭಿಪ್ರಾಯ. ಹಾಗಾಗಿ ನಾನು ನಟನೆಯಿಂದ ವಿರಾಮ ತೆಗೆದುಕೊಂಡೆ. ನಂತರ ನಿರೂಪಕಿಯಾಗಿ ಸಕ್ರಿಯಳಾಗಿದ್ದೆ.
ಆ ಸಮಯದಲ್ಲಿ ಸಾಕಷ್ಟು ಅಭಿಮಾನಿಗಳು, ಏಕೆ ನಟನೆಯಿಂದ ದೂರ ಉಳಿದಿದ್ದೀರಿ. ನಿಮ್ಮ ‘ಸೊಸೆ’ ಮತ್ತು ‘ಗುಪ್ತಗಾಮಿನಿ’ ಧಾರಾವಾಹಿಯ ನಟನೆ ನಮಗೆ ಮರೆಯಲು ಸಾಧ್ಯವಿಲ್ಲ. ಮತ್ತೆ ಧಾರಾವಾಹಿಯಲ್ಲಿ ಅಭಿನಯಿಸಿ ಎಂದು ಕೇಳುತ್ತಲೇ ಇದ್ದರು. ಅದಕ್ಕೆ ಪೂರಕವಾಗಿ ನನಗೆ ಸಾಕಷ್ಟು ಧಾರಾವಾಹಿಗಳ ಆಫರ್ ಬರುತ್ತಿತ್ತು. ಆದರೆ, ಧಾರಾವಾಹಿಯಲ್ಲಿನಟಿಸಲು ನನಗೆ ತುಂಬಾ ಭಯ. ಏಕೆಂದರೆ ಅದು ಹೆಚ್ಚಿನ ಕಮಿಟ್‌ಮೆಂಟ್ ಕೇಳುತ್ತದೆ. ಉಡುಗೆ ತೊಡುಗೆ, ಸಮಯ, ಹಗಲು ರಾತ್ರಿ ಶೂಟಿಂಗ್ ಸೇರಿದಂತೆ ಹಲವು ವಿಷಯಗಳಿಗೆ ನಾವು ಬದ್ಧರಾಗಿರಬೇಕು. ನಮ್ಮನ್ನು ಅದಕ್ಕೆ ಹೊಂದಿಸಿಕೊಳ್ಳಬೇಕು. ಒಮ್ಮೆ ಕಮಿಟ್ ಆದರೆ ಬಿಡುವ ಹಾಗಿಲ್ಲ. ರಿಸ್ಕ್ ಎಂದೇ ಹೇಳಬಹುದು. ಹಾಗಾಗಿ ಧಾರಾವಾಹಿಯಲ್ಲಿ ನಟಿಸಲು ಹಿಂಜರಿಯುತ್ತಿದ್ದೆ. ಆದರೆ ‘ಭಾಗ್ಯಲಕ್ಷ್ಮಿ’ ಧಾರಾವಾಹಿ ತಂಡ ನೀವೇ ಈ ಭಾಗ್ಯ ಪಾತ್ರದಲ್ಲಿ ನಟಿಸಬೇಕು ಎಂದು ನನ್ನನ್ನು ಕರೆದಾಗ ನನಗೆ ನಿರಾಕರಿಸಲು ಸಾಧ್ಯವಾಗಲಿಲ್ಲ. ಪಾತ್ರವೂ ನನಗೆ ತುಂಬಾ ಇಷ್ಟವಾಯಿತು. ಹಾಗಾಗಿ ನಾನು ಮತ್ತೆ ನಟನೆಗೆ ಬಂದೆ' ಎನ್ನುತ್ತಾರೆ ಸುಷ್ಮಾ.
ಸೀರಿಯಲ್‌ನಲ್ಲಿ ಮಾತ್ರ ನಾವು ಲವರ್ಸ್, ಪ್ಲೀಸ್ ಅರ್ಥ ಮಾಡ್ಕೊಳ್ಳಿ ಅಂತಿದ್ದಾರೆ ಸ್ನೇಹ ಕಂಠಿ
ಶುರುವಲ್ಲಿ ಭಾಗ್ಯಲಕ್ಷ್ಮೀ ಸೀರಿಯಲ್ ಒಂದೇ ಆಗಿತ್ತು. ಆದರೆ ಸುಷ್ಮಾ ನಟನೆಯ ಭಾಗ್ಯ ಪಾತ್ರಕ್ಕೆ ಸಿಕ್ಕ ಅಭೂತಪೂರ್ವ ಪ್ರತಿಕ್ರಿಯೆ ನೋಡಿ ಸೀರಿಯಲ್ ಟೀಮ್ ಈ ಸೀರಿಯಲ್ ಅನ್ನೇ ಎರಡು ಕವಲಾಗಿ ಮಾಡಿತು. ತಂಗಿ ಲಕ್ಷ್ಮಿಯ ಕಥೆಯಾಗಿ ಅಷ್ಟೇ ಇರಬೇಕಿದ್ದ ಈ ಸೀರಿಯಲ್ ಜನರ ಪ್ರತಿಕ್ರಿಯೆ ಕಾರಣಕ್ಕೆ ಅಕ್ಕನ ಸಪರೇಟ್ ಕಥೆಯನ್ನೂ ಪ್ರಸಾರ ಮಾಡತೊಡಗಿತು. ಈ ಹಿಂದಿನ ವಾರಗಳಲ್ಲಿ ಕಲರ್ಸ್ ಸೀರಿಯಲ್ ಇತಿಹಾಸದಲ್ಲೇ ಹೆಚ್ಚಿನ ಟಿಆರ್‌ಪಿ ಪಡೆದ ಸೀರಿಯಲ್‌ಗಳಲ್ಲೊಂದಾಗಿ ಭಾಗ್ಯಲಕ್ಷ್ಮೀ ಗುರುತಿಸಿಕೊಂಡಿದೆ. ಈ ಸೀರಿಯಲ್ ಅನ್ನು ಈ ಮಟ್ಟಿಗೆ ಪಾಪ್ಯುಲರ್ ಮಾಡಿದ ಭಾಗ್ಯ ಪಾತ್ರಧಾರಿ ಸುಷ್ಮಾಗೆ ಕಲರ್ಸ್ ಕನ್ನಡ ಸರ್ಪೈಸಿಂಗ್ ಬರ್ತ್ ಡೆ ಗಿಫ್ಟ್ ನೀಡಿದೆ. ಆಕೆಗೆ ವೀಕ್ಷಕರು ನೀಡಿದ ಪ್ರತಿಕ್ರಿಯೆಗಳದ್ದೇ ಒಂದು ಕ್ರಿಯೇಟಿವ್ ಪ್ರೋಮೋ ತಯಾರಿಸಿ ಸುಷ್ಮಾ ಅಭಿಮಾನಿಗಳ ಬರ್ತ್ ಡೇ ವಿಶ್‌ಗೆ ಅವಕಾಶ ಕೊಟ್ಟಿದೆ. ಈ ಡಿಫರೆಂಟ್ ಪ್ರೋಮೋ ಕಂಡು ಸುಷ್ಮಾ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ತಮ್ಮ ನೆಚ್ಚಿನ ನಟಿಗೆ ಶುಭಾಶಯಗಳ ಸುರಿಮಳೆ ಹರಿಸಿದ್ದಾರೆ.
ಮುದ್ದಾದ ನಗೆ, ಮೋಡಿ ಮಾಡುವ ಅಭಿನಯ, ಪ್ರೀತಿ ತುಂಬಿದ ಮಾತುಗಳ ಮೂಲಕವೇ ವೀಕ್ಷಕರ ಮನಗೆದ್ದಿರುವ ಅಕ್ಕಮ್ಮಾಗೆ ಹ್ಯಾಪಿ ಬರ್ತ್ ಡೇ. ಈ ಅಕ್ಕಮ್ಮ ಇನ್ನಷ್ಟು ಸ್ಟ್ರಾಂಗ್ ಆಗಿ, ಮಧ್ಯಮ ವರ್ಗದ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ ನಿಲ್ಲಲಿ ಅನ್ನೋ ಹಾರೈಕೆ ಅಭಿಮಾನಿಗಳದ್ದು.
ನಿಜವಾಗ್ಲೂ ಇಷ್ಟು ಬೇಗ ಬದಲಾದ್ನಾ ತಾಂಡವ್? ಭಾಗ್ಯಲಕ್ಷ್ಮಿ ಕಥೆ ಹೆಂಗೆ ಮುಂದುವರಿಯುತ್ತೆ?
