Asianet Suvarna News Asianet Suvarna News

ವೀಕ್ಷಕರನ್ನು ಬುದ್ಧಿ ಇಲ್ಲದವರು ಅಂದುಕೊಂಡ್ರಾ? ಭಾಗ್ಯಲಕ್ಷ್ಮಿ ಸೀರಿಯಲ್​ಗೆ ನೆಟ್ಟಿಗರ ಅಸಮಾಧಾನ

ಭಾಗ್ಯಲಕ್ಷ್ಮಿ ಸೀರಿಯಲ್​ನ ಕೆಲವೊಂದು ಘಟನೆಗಳನ್ನು ಪ್ರಸ್ತಾಪಿಸಿರುವ ಸೀರಿಯಲ್​ ಪ್ರೇಮಿಗಳು ಧಾರಾವಾಹಿಯನ್ನು ಸಕತ್​ ಟ್ರೋಲ್​ ಮಾಡುತ್ತಿದ್ದಾರೆ.  ಏನದು?
 

Bhagyalakshmi Serial trolled by neteizens quoting many incidents of Bhagya suc
Author
First Published May 22, 2024, 5:53 PM IST

ಭಾಗ್ಯಳಿಗೆ ಫೈವ್​ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಸಿಕ್ಕಿದೆ. ಆದರೆ ಅಸಲಿಗೆ ಭಗಾಯಾ ಎನ್ನುವ ಅಭ್ಯರ್ಥಿ ಎಂದು ಭಾಗ್ಯಳನ್ನು ಅಂದುಕೊಂಡಿದ್ದು, ಈಕೆಗೆ ಜಾಬ್​ ನೀಡಲಾಗಿದೆ. ಆದರೆ ಇಂಗ್ಲಿಷ್​ ಬರದೇ ಪರದಾಡುತ್ತಿದ್ದಾಳೆ ಭಾಗ್ಯ.   ಹಲವಾರು ಅಡೆತಡೆಗಳನ್ನು ಮೀರಿ ಎಸ್​​ಎಸ್​​ಎಲ್​ಸಿ ಪರೀಕ್ಷೆ ಬರೆದವಳು ಭಾಗ್ಯ. ಫಸ್ಟ್​ ಕ್ಲಾಸ್​ನಲ್ಲಿಯೇ ಪಾಸಾಗಿದ್ದಾಳೆ.  ಆದರೆ ಸಂದರ್ಶನದಲ್ಲಿ ಬೇಸಿಕ್​ ಇಂಗ್ಲಿಷ್​ ಕೂಡ ಗೊತ್ತಿಲ್ಲದಂತೆ ಈಕೆ ತಡವರಿಸಿದ್ದು ನೋಡಿ ಸೀರಿಯಲ್​ ಅನ್ನು ಸಕತ್​ ಟ್ರೋಲ್​ ಮಾಡಲಾಗಿತ್ತು. ಕನ್ನಡ ಮೀಡಿಯಂನಲ್ಲಿ ಕಲಿತಿದ್ದು ಎಂದು ಭಾಗ್ಯ ಹೇಳುತ್ತಾಳೆ. ಮಗಳದ್ದು ಇಂಗ್ಲಿಷ್​  ಮೀಡಿಯಂ. ಒಟ್ಟಿಗೇ ಕಲಿತಂತೆ ತೋರಿಸಲಾಗಿತ್ತು. ಒಂದು ವೇಳೆ ಕನ್ನಡ ಮೀಡಿಯಂನಲ್ಲಿ ಕಲಿತರೂ ಬೇಸಿಕ್​ ಇಂಗ್ಲಿಷ್​ ಅರ್ಥ ಮಾಡಿಕೊಳ್ಳದಷ್ಟು ಪೆದ್ದರು ಯಾರೂ ಇಲ್ಲ ಎನ್ನುವುದು ನೆಟ್ಟಿಗರ ಅಭಿಮತ. ಆಗ ಆ ರೀತಿಯ ಟ್ರೋಲ್​ ಆದರೆ, ಈಗ ಮತ್ತೊಂದು ರೀತಿಯಲ್ಲಿ ಭಾಗ್ಯಲಕ್ಷ್ಮಿ ಸೀರಿಯಲ್ ಟ್ರೋಲ್​  ಆಗುತ್ತಿದೆ.

ವೇಟ್ರೆಸ್​ ಕೆಲಸವನ್ನು ಭಾಗ್ಯಳಿಗೆ ನೀಡಲಾಗಿದೆ. ಬರುವ ಗ್ರಾಹಕರು ಇಂಗ್ಲಿಷ್​ನಲ್ಲಿ ಮಾತನಾಡುತ್ತಿದ್ದಾರೆ. ಅವರು ಆರ್ಡರ್​ ಮಾಡುವ ತಿನಿಸು ಯಾವುದು ಎಂದು ಭಾಗ್ಯಳಿಗೆ ತಿಳಿಯುವುದಿಲ್ಲ. ಸ್ಟಾರ್​ ಹೋಟೆಲ್​ಗಳಲ್ಲಿ ವಿಚಿತ್ರ ತಿನಿಸುಗಳು ಇರುತ್ತವೆ ಎನ್ನುವುದು ಸತ್ಯವಾದರೂ ಕೊನೆಯ ಪಕ್ಷ, ಮೆನು ನೋಡಿ ಯಾವುದನ್ನು ಆರ್ಡರ್​ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದು ಎಸ್​ಎಸ್​ಎಲ್​ಸಿ ಆದವಳಿಗೆ ಕಷ್ಟವೇ ಎನ್ನುವುದು ನೆಟ್ಟಿಗರ ಪ್ರಶ್ನೆ. ತಿನಿಸುಗಳ ಹೆಸರು ಗೊತ್ತಿಲ್ಲದೇ ಹೋದರೂ ಮೆನು ನೋಡಿ ಅದನ್ನು ಓದಬಹುದಲ್ಲವೆ ಎನ್ನುತ್ತಿದ್ದಾರೆ ಅವರು. ವೀಕ್ಷಕರನ್ನೇನು ದಡ್ಡರು ಅಂದುಕೊಂಡಿರಾ ಎಂದು ಕೆಲವರು ನಿರ್ದೇಶಕರನ್ನೇ ಪ್ರಶ್ನಿಸುತ್ತಿದ್ದಾರೆ.

ಅಂತೂ ಕರ್ನಾಟಕದ ಹಣೆಬರಹ ಇಲ್ಲಿ ತೋರಿಸ್ತಾ ಇದ್ದೀರಿ ಬಿಡಿ ಅಂತಿದ್ದಾರೆ ಭಾಗ್ಯಲಕ್ಷ್ಮಿ ಫ್ಯಾನ್ಸ್​...

ಅದೂ ಸಾಲದು ಎಂಬುದಕ್ಕೆ ಈಗ ಭಾಗ್ಯ ಹೋಗಿ ನನಗೆ ಸರ್ವಿಂಗ್​ ಕೆಲಸ ಮಾಡುವುದು ಕಷ್ಟವಾಗುತ್ತಿದೆ. ಅಡುಗೆ ಕೆಲಸ ಕೊಡಿ ಎನ್ನುತ್ತಿದ್ದಾಳೆ. ಅಲ್ಲಿ ಅವಳಿಗೆ ಬೈದು ಕಳಿಸಲಾಗುತ್ತದೆ. ಅದೇನೇ ಇದ್ದರೂ ಸಂದರ್ಶನದಿಂದ ಹಿಡಿದು ಆ ನಂತರದ ಎಲ್ಲಾ ಬೆಳವಣಿಗೆಗಳೂ ಒಂದು ರೀತಿಯಲ್ಲಿ ಹಾಸ್ಯಾಸ್ಪದ ಆಗಿದೆ ಎಂದು ಕಮೆಂಟ್​ಗಳ ಸುರಿಮಳೆಯೇ  ಆಗುತ್ತಿದೆ. ಸಂದರ್ಶನ ಮಾಡಲು ಬರುವಾಗ, ಅಲ್ಲಿ ಅಭ್ಯರ್ಥಿಗಳ ಫೋಟೋ ಇರುವುದಿಲ್ಲವೆ? ಅರ್ಹತೆಯ ಬಗ್ಗೆಯೂ ಇರುತ್ತದೆ. ಅದನ್ನು ನೋಡುತ್ತಲೇ ಸಂದರ್ಶನ ಮಾಡಲಾಗಿದೆ. ಸಂದರ್ಶನದ ಸಮಯದಲ್ಲಿ ಭಾಗ್ಯಳಿಗೆ ಒಂದಕ್ಷವೂ ಇಂಗ್ಲಿಷ್​ ಬರಲಿಲ್ಲ. ಆಂ, ಊಂ ಮಾಡುತ್ತಲೇ ಉತ್ತರಿಸಿದ್ದಾಳೆ. ಇದು ಎಂಥ ಪೆದ್ದರಿಗೂ ಡೌಟ್​ ತರಿಸುತ್ತದೆ. ಮಾತ್ರವಲ್ಲದೇ ಅವಳು ತಾನು ಭಗಾಯ ಅಲ್ಲ, ಭಾಗ್ಯ ಎನ್ನುತ್ತಲೇ ಇದ್ದಾಳೆ. ಅಷ್ಟಾದರೂ ಸ್ಟಾರ್​ ಹೋಟೆಲ್​ನ ಸಂದರ್ಶಕರು ಆಕೆಯನ್ನು ಸೆಲೆಕ್ಟ್​ ಮಾಡಿರುವುದು ಹಾಸ್ಯಾಸ್ಪದ ಎನ್ನುತ್ತಿದ್ದಾರೆ ಟ್ರೋಲಿಗರು.

ಇನ್ನು ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಭಾಗ್ಯಳ  ಪರಿಸ್ಥಿತಿ ಚಿಂತಾಜನಕವಾಗಿದೆ. ಗಂಡ- ಹೆಂಡತಿ ನಡುವೆ ಬಿರುಕು ಮೂಡಿದೆ. ಮನೆ ಎರಡು ಭಾಗವಾಗಿದೆ. ಅಷ್ಟಕ್ಕೂ ಈಗ ಭಾಗ್ಯಳ ಸ್ಥಿತಿ ಅಲ್ಲೋಲ ಕಲ್ಲೋಲವಾಗಿದೆ. ಮನೆಯ ಅರ್ಧ ಇಎಂಐ ನಾನೇ ಕಟ್ಟುತ್ತೇನೆ ಎಂದು ಪತಿ ತಾಂಡವ್​ ಎದುರು ಭಾಗ್ಯ ಒಪ್ಪಿಕೊಂಡು ಬಂದಿದ್ದಾಳೆ. ಈಕೆ ಹೇಗಾದರೂ ಮಾಡಿ ದುಡಿಯಲೇಬೇಕು. ಹೇಗೆ ದುಡಿಯುವುದು ಎನ್ನುತ್ತಿರುವಾಗಲೇ ಅಚಾನಕ್​ ಆಗಿ ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಆದರೆ ಅಲ್ಲಿ ಪರದಾಡುತ್ತಿದ್ದಾಳೆ. ಈಗ  ಮುಂದೇನು ಎನ್ನುವುದು ಪ್ರಶ್ನೆ. 

ಜನಾರ್ದನನಿಗೆ ಮಾಧವ್​ ಕಪಾಳ ಮೋಕ್ಷ: ಒನ್​ ಮೋರ್​ ಒನ್​ ಮೋರ್​ ಎಂದ ಫ್ಯಾನ್ಸ್​...


Latest Videos
Follow Us:
Download App:
  • android
  • ios