ಹೆಂಡ್ತಿ, ತಾಯಿ ಸ್ಥಾನವನ್ನು ಕೆಲಸದಾಕೆ ತುಂಬಲು ಸಾಧ್ಯನಾ? ಭಾಗ್ಯಲಕ್ಷ್ಮಿ ಸೀರಿಯಲ್​ನಲ್ಲಿ ಭಾಗ್ಯ ಹೇಳಿದ್ದೇನು? 

ಭಾಗ್ಯ ಪತಿಗೆ ಚಾಲೆಂಜ್​ ಹಾಕಿದ್ದಾಳೆ. ಏಳು ದಿನಗಳು ನಾನು ಮನೆಯಲ್ಲಿ ಇರುವುದಿಲ್ಲ. ನೀವು ಈ ಏಳು ದಿನಗಳನ್ನು ಚೆನ್ನಾಗಿ ನಿಭಾಯಿಸಿದ್ದೇ ಆದಲ್ಲಿ ನಿಮ್ಮ ಬಾಳಿನಿಂದ ದೂರ ಹೋಗುತ್ತೇನೆ ಎಂದಿದ್ದಾಳೆ. ಇದನ್ನು ಕೇಳಿ ತಾಂಡವ್​ ಖುಷಿಯಾಗಿದ್ದಾನೆ. ಭಾಗ್ಯ ಮನೆಬಿಟ್ಟು ಹೋಗಿದ್ದಾಳೆ. ಮಕ್ಕಳಿಗೆ ಇದರ ಅರಿವು ಇಲ್ಲ. ತಾಂಡವ್‌ ಮನೆಗೆ ವಾಪಸಾಗಿದ್ದಾನೆ. ಅಮ್ಮ ಸ್ವಲ್ಪ ದಿನ ರೆಸ್ಟ್‌ಗೆ ಅಂತ ತವರಿಗೆ ಹೋಗಿದ್ದಾಳೆ ಎಂದು ಕುಸುಮಾ ಮೊಮ್ಮಕ್ಕಳಿಗೆ ಹೇಳಿದ್ದಾಳೆ. ತಾನು ಗೆದ್ದ ಖುಷಿಯಲ್ಲಿದ್ದಾನೆ ತಾಂಡವ್‌. ಹಾಗಿದ್ದರೆ ಗೆಲುವು ಯಾರದ್ದಾಗುತ್ತದೆ? ತಾಂಡವ್​ ಏಳು ದಿನಗಳಲ್ಲಿ ಮನೆಯನ್ನು ನಿಭಾಯಿಸಲು ಶಕ್ಯನಾಗುತ್ತಾನಾ? ಇದೇನು ದೊಡ್ಡ ಷರತ್ತು ಅಲ್ಲ ಎಂದು ಬೀಗುತ್ತಿರುವ ತಾಂಡವ್​ಗೆ ಹೆಂಡತಿ ಇಲ್ಲದೇ ಮನೆಯನ್ನು ನಿಭಾಯಿಸಲು ಸಾಧ್ಯವಾಗುತ್ತಾ? ಒಂದು ವೇಳೆ ಆತ ನಿಭಾಯಿಸಿದರೆ ಏನಾಗುತ್ತದೆ, ಆತ ಸೋತರೆ ಏನಾಗುತ್ತದೆ? ಇದರ ಮೊದಲ ಹಂತದ ಸೋಲನ್ನು ಇದೀಗ ಕಂಡಿದ್ದಾನೆ. ದುಬಾರಿ ಗಿಫ್ಟ್‌ ಕೊಟ್ಟು ಮಕ್ಕಳ ಪ್ರೀತಿ ಗಳಿಸಬಹುದು ಎನ್ನುವ ಅವನ ಅನಿಸಿಕೆ ಸುಳ್ಳಾಗಿದೆ. ಮಗ ಗಿಫ್ಟ್‌ ಎಸೆದು ಹೋದರೆ, ಮಗಳು ತನಗೆ ಇದೆಲ್ಲಾ ಬೇಡ ಎಂದು ಅಪ್ಪನ ಮುಖಕ್ಕೆ ಹೊಡೆಯುವಂತೆ ಹೇಳಿದ್ದಾಳೆ. 

ಹಾಗಿದ್ದರೆ ಮುಂದೇನು ಎನ್ನುವಷ್ಟರದಲ್ಲಿಯೇ ಮನೆಯನ್ನು ತಾನು ನಿಭಾಯಿಸಬಲ್ಲೆ ಎಂದು ತೋರಿಸಲು ತಾಂಡವ್​ ಕೆಲಸದಾಕೆಯನ್ನು ಕರೆದುಕೊಂಡು ಬಂದಿದ್ದಾನೆ. ಅದೂ ಸಾಮಾನ್ಯದವಳಲ್ಲ. ಹೈ ಫೈಯವಳು. ತಾನು ಒಂದು ಗಂಟೆಯಲ್ಲಿ ಮನೆಯ ಎಲ್ಲಾ ಕೆಲಸವನ್ನೂ ಮಾಡಿ ಮುಗಿಸುವುದಾಗಿ ಹೇಳಿದ್ದಾಳೆ. ಹಾಗಿದ್ದರೆ ತಾಂಡವ್​ ಮನೆಯನ್ನು ನಿಭಾಯಿಸಲು ಸಾಧ್ಯವಾಗುತ್ತಾನಾ? ಭಾಗ್ಯಲಕ್ಷ್ಮಿಗೆ ಸೋಲಾಗುತ್ತಾ ಎನ್ನುವುದು ಈಗಿರುವ ಪ್ರಶ್ನೆ.

ವಿಶ್ವ ಸುಂದರಿ ಸ್ಪರ್ಧೆಗೆ ಕ್ಷಣಗಣನೆ: ಹಾವಾಡಿಗರ ನಾಡಲ್ಲ, ಅಭಿವೃದ್ಧಿಯ ಬೀಡು... ಕನ್ನಡತಿ ಸಿನಿ ಶೆಟ್ಟಿ ಹೇಳಿದ್ದೇನು?

View post on Instagram

ಆದರೆ ಷರತ್ತಿನ ಪ್ರಕಾರ ತಾಂಡವ್​ ಮನೆಯನ್ನು ನಿಭಾಯಿಸಬೇಕಿತ್ತು. ಆದರೆ ಕೆಲಸದಾಕೆ ಬಂದಿದ್ದಾಳೆ. ಇನ್ನು ತಾಂಡವ್​ ಸೋಲುವುದಿಲ್ಲ ಎಂದು ಭಾಗ್ಯಲಕ್ಷ್ಮಿಯ ಅಮ್ಮನಿಗೆ ಶಾಕ್​ ಆಗಿದೆ. ಭಾಗ್ಯಳ ಬಳಿ ಬಂದು ತನ್ನ ಆತಂಕ ವ್ಯಕ್ತಪಡಿಸಿದ್ದಾಳೆ. ಕೆಲಸದಾಕೆ ಬಂದಿದ್ದಾಳೆ, ಇನ್ನು ತಾಂಡವ್ ಷರತ್ತಿನಲ್ಲಿ ಗೆದ್ದರೆ ಭಾಗ್ಯ ಶಾಶ್ವತವಾಗಿ ಆ ಮನೆಯಿಂದ ದೂರವಾಗಬೇಕಾಗುತ್ತದೆ, ಇಬ್ಬರ ಡಿವೋರ್ಸ್​ ಆಗುತ್ತದೆ ಎನ್ನುವುದು ಆಕೆಯ ಭಯ. 

ಆದರೆ ತಾಳ್ಮೆಯ ಮೂರ್ತಿಯಾಗಿರುವ ಭಾಗ್ಯ ಸುಲಭದಲ್ಲಿ ಸೋಲು ಒಪ್ಪಿಕೊಳ್ಳುವವಳಲ್ಲ. ಅಮ್ಮನಿಗೇ ಬುದ್ಧಿ ಹೇಳಿದ್ದಾಳೆ. ಹೆಂಡ್ತಿ, ತಾಯಿ ಸ್ಥಾನವನ್ನು ಕೆಲಸದಾಕೆ ತುಂಬಲು ಸಾಧ್ಯನಾ ಎಂದು ಭಾಗ್ಯ ಅಮ್ಮನಿಗೆ ಪ್ರಶ್ನಿಸಿದ್ದಾಳೆ. ಒಂದು ವೇಳೆ ಹೀಗೆ ಆಗಿದ್ದೇ ಹೌದಾದರೆ, ಯಾರೂ ಸಂಸಾರ ಮಾಡುತ್ತಿರಲಿಲ್ಲ. ಅಮ್ಮ ಮತ್ತು ಪತ್ನಿಯ ಸ್ಥಾನವನ್ನು ತುಂಬಲು ಕೆಲಸದವಳಿಗೆ ಸಾಧ್ಯವೇ ಇಲ್ಲ ಎನ್ನುವುದು ಭಾಗ್ಯಳ ಮಾತು. ನೀವೇನನ್ನುತ್ತೀರಾ? 

ಸಿನಿಮಾದಲ್ಲಿ ಚಾನ್ಸ್​ ಕೊಡಿಸುವುದಾಗಿ ಲೈಂಗಿಕ ದೌರ್ಜನ್ಯ: ಸ್ಯಾಂಡಲ್​ವುಡ್​ ನಟನ ವಿರುದ್ಧ ಯುವತಿ ದೂರು