ಪರ ಪರ ಕೆರ್ಕೋಬೇಕು ಅನ್ನಿಸ್ತಿದೆ ಎಂತಿದ್ದಾರಲ್ಲ ಭಾಗ್ಯ- ಶ್ರೇಷ್ಠಾ! ಏನಾಯ್ತು?

ಭಾಗ್ಯಲಕ್ಷ್ಮಿ ಸೀರಿಯಲ್‌ ಭಾಗ್ಯ ಮತ್ತು ಶ್ರೇಷ್ಠಾ ಪಾತ್ರಧಾರಿಗಳು ರೀಲ್ಸ್‌ ಮಾಡಿದ್ದಾರೆ. ನೆಟ್ಟಿಗರು ಏನೆಲ್ಲಾ ಹೇಳ್ತಿದ್ದಾರೆ ನೋಡಿ...
 

BhagyaLakshmi serial Bhagya urf Sushma Rao and Shrestha ufr Kavya Gowda funny reels suc

ಸೀರಿಯಲ್‌ನಲ್ಲಿ ಇಬ್ಬರೂ ಹಾವು-ಮುಂಗುಸಿ. ರಿಯಲ್‌ ಲೈಫ್‌ನಲ್ಲಿ ಸ್ನೇಹಿತೆಯರು. ಅಲ್ಲಿ ಸವತಿಯಾಗಲು ರೆಡಿಯಾಗಿದ್ರೆ, ಇಲ್ಲಿ ಇಬ್ಬರೂ ಸೇರಿ ರೀಲ್ಸ್‌ ಮಾಡ್ತಿದ್ದಾರೆ. ಇದು ಭಾಗ್ಯಲಕ್ಷ್ಮಿಯ ಭಾಗ್ಯ ಮತ್ತು ಶ್ರೇಷ್ಠಾಳ ಮಾತು. ಸೀರಿಯಲ್‌ ವಿಷಯಕ್ಕೆ ಬರುವುದಾದರೆ, ಕೊನೆಗೂ ಗಂಡನ ಸತ್ಯ ಭಾಗ್ಯಳಿಗೆ ತಿಳಿದಿದೆ.  ಕುಟುಂಬ, ಗಂಡ ಮಕ್ಕಳು ಎಂದು ತನ್ನ ಜೀವನ ಸವೆಸಿ, ಗಂಡನೇ ಸರ್ವಸ್ವ ಎಂದುಕೊಂಡ ತನ್ನ ಬಾಳು ಹೀಗಾಯ್ತು ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾಳೆ. ಆದರೆ ಮುಂದೇನು ಮಾಡಬೇಕು ಎನ್ನುವ ದೃಢ ಸಂಕಲ್ಪ ಮಾಡಿದ್ದಾಳೆ. ಅತ್ತ ಪೊಲೀಸರ ಕೈಯಲ್ಲಿ ಸಿಕ್ಕಾಕ್ಕೊಂಡಿರೋ ತಾಂಡವ್‌ ರಕ್ಷಣೆಗೆ ಭಾಗ್ಯಳನ್ನು ಕರೆದಿದ್ದಾನೆ.  ಭಾಗ್ಯ ಅಲ್ಲಿಗೆ ಹೋಗಿದ್ದಾಳೆ. ಅವಳ ಮ್ಯಾನೇಜರ್‍‌ಗೆ ಇವನೇ ನನ್ನ ಗಂಡ ಎನ್ನುವ ವಿಷಯ ತಿಳಿಸಿದ್ದಾಳೆ. ಪತ್ನಿ ಬಂದು ಕರೆದರೆ ನೀವು ಬಿಡುವುದಾಗಿ ಹೇಳಿದ್ದೀರಲ್ಲ, ಈಗ ಬಿಟ್ಟುಬಿಡಿ ಎಂದು ಪೊಲೀಸರಿಗೆ ತಾಕೀತು ಮಾಡಿ,  ತಾಂಡವ್‌ನ ಕೈಯನ್ನು ದರದರ ಹಿಡಿದು ಎಳೆದುಕೊಂಡು ಹೋಗಿದ್ದಾಳೆ ಭಾಗ್ಯ. ಆದದ್ದು ಆಗಲಿ ಎಂದು ವೇಗವಾಗಿ ಕಾರನ್ನು ಚಲಾಯಿಸಿದ್ದಾಳೆ. ಅಪಘಾತವಾಗಿದೆ ಇನ್ನೇನೋ ಮುಂದೆ ಗೊತ್ತಿಲ್ಲ.

ಅದೇ ಇನ್ನೊಂದೆಡೆ ಭಾವಿ ಪತಿಯ ಜೊತೆ ಟೂರ್‍‌ ಮೂಡ್‌ನಲ್ಲಿದ್ದ ಶ್ರೇಷ್ಠಾ ಫುಲ್‌ ಸುಸ್ತಾಗಿದ್ದಾಳೆ. ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ. ಆದರೆ ರಿಯಲ್‌ ಲೈಫ್‌ನಲ್ಲಿ ಈ ಇಬ್ಬರು ಸ್ನೇಹಿತೆಯರು ಸಕತ್‌ ಮಜಾ ಮಾಡಿದ್ದಾರೆ. ಭಾಗ್ಯ ಶ್ರೇಷ್ಠಾಳನ್ನು ಉದ್ದೇಶಿಸಿ, ಈ ಬ್ಯೂಟಿಫುಲ್ ಶ್ರೇಷ್ಠಾ, ಬಿಕನಾಸಿ ಮಳೆ, ಈ ಬ್ಯಾವರ್ಸಿ ಸೊಳ್ಳೆಗಳು ಕಚ್ತಾ ಇದ್ದರೆ, ಪರ ಪರ ಕೆರಕೋಬೇಕು ಎನ್ನಿಸ್ತದೆ ಎಂದು ತಮಾಷೆ ಮಾಡಿದ್ದಾರೆ. ಇದರ ವಿಡಿಯೋ ಅನ್ನು ಭಾಗ್ಯ ಪಾತ್ರಧಾರಿ ಸುಷ್ಮಾ ಕೆ. ರಾವ್‌ ಶೇರ್‍‌ ಮಾಡಿದ್ದಾರೆ. ಅಯ್ಯೋ, ಮೇಡಂ ಅವಳನ್ನ ನಂಬಬೇಡಿ, ಹಿಡಿದು ಜೈಲಿಗೆ ಹಾಕಿ ಅಂತ ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ. ಸವತಿಯರಿಬ್ಬರೂ ಒಂದಾಗಿಬಿಟ್ರಾ, ಗಂಡನ ಜೊತೆ ಅವಳ ಮದ್ವೆ ಮಾಡಿಸೋಕೆ ರೆಡಿ ಆಗಿಬಿಟ್ರಾ ಎಂದೆಲ್ಲಾ ನಟಿಯ ಕಾಲೆಳೆಯುತ್ತಿದ್ದಾರೆ. 

ಆ ಮೂಲ, ಈ ಮೂಲ ಕೇಳಬಾರ್ದು ಎನ್ನುತ್ತಲೇ ಅಮ್ಮನ ಮಲಗುವ ಕೋಣೆ ರಹಸ್ಯ ತೆರೆದಿಟ್ಟ ವಿನೋದ್‌ ರಾಜ್!

ಇನ್ನು ಭಾಗ್ಯಳ ಒರಿಜಿನಲ್ ಹೆಸರು ಸುಷ್ಮಾ ಕೆ. ರಾವ್‌ ಆಗಿದ್ದರೆ, ಶ್ರೇಷ್ಠಾಳದ್ದು ಕಾವ್ಯಾ ಗೌಡ. ಸುಷ್ಮಾ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್‌ ಆಕ್ಟೀವ್‌ ಆಗಿದ್ದಾರೆ.  ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

 ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ  ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ,  ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್​ ರೋಲ್​ ಮೂಲಕ ಮನೆ ಮಾತಾಗಿದ್ದಾರೆ.   3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ.  ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್​ ಬಿಟ್ಟಿದ್ದರು. ಆದರೆ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಯಾವ ರೀತಿ ಟರ್ನ್​ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. 

ಡೈರೆಕ್ಟ್ರು ಹೇಳಿದ್ರೂ ಕೇಳ್ದೇ ನನ್ ಪರವಾಗಿನೇ ಇರ್ಬೇಕು ಎಂದು ಲೈವ್‌ನಲ್ಲೇ ಚಿರುಗೆ ಧಮ್ಕಿ ಹಾಕೋದಾ ಸೌಂದರ್ಯ?

Latest Videos
Follow Us:
Download App:
  • android
  • ios