ಸ್ಟಾರ್ ಷೆಫ್ ಆದ್ರೆನೇ ಒಪ್ಲಿಲ್ಲ... ಕಾರು ಕಲಿತ್ರೆ ಒಪ್ತಾನಾ? ಅದೇನಂತ ಕಥೆ ಮಾಡ್ತೀರಪ್ಪಾ... ಫ್ಯಾನ್ಸ್ ಬೇಸರ
ಭಾಗ್ಯಳಿಗೆ ಕಾರು ಕಲಿಸಲು ಮುಂದಾಗಿದ್ದಾನೆ ಮಾವ. ಇದರ ಪ್ರೊಮೋಗೆ ಇನ್ನಿಲ್ಲದಂತೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ ನೆಟ್ಟಿಗರು. ಅಷ್ಟಕ್ಕೂ ಆಗಿರೋದೇನು?
ಏನಾದರೂ ಮಾಡಿಯಾದರೂ ಸರಿ. ಸೊಸೆಯನ್ನು ಬದಲಾಯಿಸಬೇಕು, ತನ್ನ ಮಗ ಅವಳನ್ನು ಒಪ್ಪಿಕೊಳ್ಳಬೇಕು, ಲವರ್ ಅನ್ನು ಬಿಡಬೇಕು... ಇದು ಭಾಗ್ಯಲಕ್ಷ್ಮಿಯ ಅತ್ತೆ ಕುಸುಮಾಳ ಹಠ. ಇದೇ ಕಾರಣಕ್ಕೆ ಸೊಸೆ ಭಾಗ್ಯಳನ್ನು ಬದಲಾಯಿಸುವ ಪಣ ತೊಟ್ಟಿದ್ದಾಳೆ. ಅವಳಿಗೆ ಸಾಥ್ ನೀಡಿದ್ದಾನೆ ಗಂಡ ಹಾಗೂ ಮನೆಯ ಇತರ ಸದಸ್ಯರು. ಯಾಕೆಂದ್ರೆ ಎಲ್ಲರಿಗೂ ತಾಂಡವ್ ಮತ್ತು ಶ್ರೇಷ್ಠಾಳ ಅಸಲಿಯತ್ತು ಗೊತ್ತು. ಆದರೆ ವಿಚಿತ್ರ ಎಂದ್ರೆ ಇದುವರೆಗೂ ಭಾಗ್ಯಳಿಗೆ ಮಾತ್ರ ತನ್ನ ಗಂಡನ ಬಗ್ಗೆ ಗೊತ್ತಾಗಲಿಲ್ಲ. ಮನೆಯವರೆಲ್ಲರೂ ಏಕಿಷ್ಟು ವಿಚಿತ್ರವಾಗಿ ಆಡುತ್ತಿದ್ದಾರೆ ಎಂದು ಭಾಗ್ಯ ಸತ್ಯ ತಿಳಿಯಲು ಇನ್ನಿಲ್ಲದ ಕಸರತ್ತು ಮಾಡಿದ್ದಳು. ಆದರೂ ಆಕೆಗೆ ಗೊತ್ತಾಗಲೇ ಇಲ್ಲ. ಶ್ರೇಷ್ಠಾಳನ್ನು ಮದುವೆಯಾಗ ಹೊರಟಿದ್ದವ ತನ್ನ ಗಂಡ ತಾಂಡವ್ನೇ ಇರಬೇಕು ಎಂಬ ಸಂದೇಹದಿಂದ ಆ ಸತ್ಯವನ್ನು ತಿಳಿಯಲು ಭಾಗ್ಯ ಇನ್ನಿಲ್ಲದಂತೆ ಪ್ರಯತ್ನ ಪಡುತ್ತಿದ್ದಾಳೆ. ಆದರೆ ಸತ್ಯ ಮಾತ್ರ ಗೊತ್ತಾಗಲಿಲ್ಲ. ಅತ್ತ ಶ್ರೇಷ್ಠಾಳನ್ನು ಕಟ್ಟಿ ಹಾಕಿ ಕುಸುಮಾ, ಪೂಜಾ ಎಲ್ಲರೂ ಸೇರಿ ಹಿಂಸೆ ಕೊಡುತ್ತಿರುವ ವಿಷಯ ತಾಂಡವ್ಗೆ ಗೊತ್ತಾಗಿದೆ. ಎಲ್ಲರ ವಿರುದ್ಧ ಸೇಡು ತೀರಿಸಿಕೊಳ್ಳಲು ಶ್ರೇಷ್ಠಾ ಹವಣಿಸುತ್ತಿದ್ದಾಳೆ. ಆದರೆ ಇನ್ನೊಂದು ತಿಂಗಳು ತಡೆದುಕೋ. ಅಷ್ಟರಲ್ಲಿ ಅಮ್ಮ ತನ್ನ ಕೈಯಾರೇ ಡಿವೋರ್ಸ್ ಕೊಡಿಸುತ್ತಾಳೆ ಎಂದು ಶ್ರೇಷ್ಠಾಳನ್ನು ಸಮಾಧಾನಪಡಿಸಿದ್ದಾನೆ ತಾಂಡವ್.
ಅಷ್ಟಕ್ಕೂ ಕುಸುಮಾ ಒಂದು ತಿಂಗಳಿನಲ್ಲಿ ಭಾಗ್ಯಳನ್ನು ಬದಲಾಯಿಸುವ ಪಣ ತೊಟ್ಟಿದ್ದಾಳೆ. ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಾಳೆ. ಅದೇ ರೀತಿ ಭಾಗ್ಯಳನ್ನು ಚೆನ್ನಾಗಿ ರೆಡಿ ಮಾಡಿದ್ದಳು. ಅರೆ ಕ್ಷಣ ಭಾಗ್ಯಳ ಸೌಂದರ್ಯ ನೋಡಿ ತಾಂಡವ್ ಖುಷಿ ಪಟ್ಟರೂ ಕೊನೆಗೆ ಇನ್ನಿಲ್ಲದ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದ. ಗೂಬೆ, ಕತ್ತೆ ಎಂದಿದ್ದ. ಗೂಬೆಗೆ ಸೌಂದರ್ಯ ಮಾಡಿದರೆ ನವಿಲು ಆಗಲ್ಲ. ಮಾಡುವ ನಾಲ್ಕು ದೋಸೆ, ಚಪಾತಿಗೆ ಏಪ್ರಾನ್ ಸಾಕು, ಇದೆಲ್ಲಾ ಯಾಕೆ ಎಂದು ನಿಂದಿಸಿದ್ದ.
ನದಿ ಬಳಿ ನಿಂತು ಬದುಕಿದ್ದರೆ ಮತ್ತೆ ಸಿಗ್ತೇನೆ ಎಂದ 'ಭಾಗ್ಯಲಕ್ಷ್ಮಿ' ನಟಿ ಸುಷ್ಮಾ: ಆತಂಕಗೊಂಡ ಫ್ಯಾನ್ಸ್
ಆದರೂ ಈಗ ತಾಂಡವ್ ಭಾಗ್ಯಳನ್ನು ಒಪ್ಪಿಕೊಳ್ಳುವಂತೆ ಮಾಡುವ ಪಣ ಬಿಡಲಿಲ್ಲ ಕುಸುಮಾ. ಭಾಗ್ಯಳಿಗೆ ಈಗ ಮಾವ ಸಾಥ್ ನೀಡಿದ್ದು, ಕಾರು ಕಲಿಸಲು ಹೊರಟಿದ್ದಾನೆ. ಅಡುಗೆ ಮಾಡ್ತಿರೋ ಭಾಗ್ಯಳನ್ನು ಅರ್ಧಕ್ಕೆ ಕರೆದು ಕಾರು ಕಲಿಸಲು ಕರೆದುಕೊಂಡು ಹೋಗಿದ್ದಾನೆ ಮಾವ. ಆದರೆ ಇನ್ನೂ ಭಾಗ್ಯಳಿಗೆ ಯಾಕೆ ಇವರೆಲ್ಲಾ ಹೀಗೆ ಮಾಡ್ತಾ ಇದ್ದಾರೆ ಎನ್ನುವುದೇ ತಿಳಿದಿಲ್ಲ. ಒಂದು ವೇಳೆ ನಿನ್ನ ಗಂಡನೇ ಹೀಗೆ ಮಾಡಿದ್ರೆ ಎಂದು ಬಾಯಿಬಿಟ್ಟು ಅತ್ತೆ ಕೇಳಿದಾಗಲೂ ಭಾಗ್ಯಳಿಗೆ ವಿಷಯ ತಿಳಿದಿಲ್ಲ. ಇಂಥ ವಿಚಿತ್ರ ರೀತಿಯಿಂದಲೇ ಸೀರಿಯಲ್ ಮುಂದೆ ಸಾಗಿದೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾಗಿದ್ದು ಮಾತ್ರವಲ್ಲದೇ, ಇಂಗ್ಲಿಷ್ ಕಲಿತಿದ್ದಾಳೆ ಭಾಗ್ಯ. ಅದೂ ಸಾಲದು ಎನ್ನುವುದಕ್ಕೆ ಸ್ಟಾರ್ ಹೋಟೆಲ್ನಲ್ಲಿ ಷೆಫ್ ಆಗಿ ಲಕ್ಷ ಸಂಬಳ ಪಡೆಯುತ್ತಿದ್ದಾಳೆ. ಅತ್ತೆಯಿಂದಾಗಿ ಮೇಕಪ್ ಮಾಡಿಕೊಂಡು ಸುಂದರಿಯಾಗಿ ಕಂಡಿದ್ದಾಳೆ. ಇಷ್ಟೆಲ್ಲಾ ಆದರೂ ತಾಂಡವ್ಗೆ ಪೂಜಾಳ ಮೇಲೆ ಪ್ರೀತಿ ಹುಟ್ಟಲಿಲ್ಲ. ಕತ್ತೆ, ಗೂಬೆ ಅಂತೆಲ್ಲಾಕೆಟ್ಟ ಕೆಟ್ಟ ಶಬ್ದಗಳಿಂದ ಬೈಯುತ್ತಲೇ ಇದ್ದಾನೆ. ಇಷ್ಟೆಲ್ಲಾ ಮಾಡಿದವ ಭಾಗ್ಯ ಕಾರು ಕಲಿತ ಮಾತ್ರಕ್ಕೆ ಒಪ್ಪಿಕೊಳ್ತಾನಾ? ಇದೆಂಥ ಹುಚ್ಚುತನ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ವೀಕ್ಷಕರೇನು ಹುಚ್ಚರು ಅಂತ ತಿಳಿದುಕೊಂಡಿರುವಿರಾ ಎಂದು ಕೇಳುತ್ತಿದ್ದಾರೆ. ಅದೇ ಇನ್ನೊಂದೆಡೆ, ಭಾಗ್ಯಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಕಣ್ಣಾರೆ ನೋಡುತ್ತಿರುವ ನೆಟ್ಟಿಗರು ಗಂಡನನ್ನು ಬಿಟ್ಟು ಬಾ, ಇಂಥ ಗಂಡ ನಿನಗೆ ಬೇಡ ಎಂದೆಲ್ಲಾ ಸಲಹೆ ಕೊಡುತ್ತಿದ್ದಾರೆ.
ಪುಟ್ಟಕ್ಕನ ಮಗಳು ಸ್ನೇಹಾ ಹಾಟ್ ಫೋಟೋಶೂಟ್: ಜಿಲ್ಲಾಧಿಕಾರಿ ಘನತೆ ಕಾಪಾಡಿ ಪ್ಲೀಸ್ ಅನ್ನೋದಾ ಫ್ಯಾನ್ಸ್?