ಗಂಡನನ್ನು ಲವರ್ ಗೆ ಒಪ್ಪಿಸಿದ ಮೇಲೂ ಅವಳ ಜೊತೆನೇ ಹೀಗೆಲ್ಲಾ ಡಾನ್ಸ್‌ ಮಾಡೋದು ಬೇಕಿತ್ತಾ ಭಾಗ್ಯಂಗೆ?

ಗಂಡ ತಾಂಡವ್‌ಗೆ ಅವನ ಲವರ್ ಶ್ರೇಷ್ಠಾಳನ್ನು ಒಪ್ಪಿಸಿರೋ ಭಾಗ್ಯ, ಈಗ ಅವಳ ಜೊತೆನೇ ಸುಂದರ ಸ್ನೇಹವಿದು ಅಂತ ಡಾನ್ಸ್‌ ಮಾಡೋದಾ? ಏನಿದು ಕಥೆ? 
 

Bhagyalakshmi after entrusted  Shrestha to Tandav dancing with her video viral fans reacts suc

 ಮದುವೆ ವಾರ್ಷಿಕೋತ್ಸವದಂದೇ ಎಲ್ಲರನ್ನೂ ಕರೆಸಿ ತನಗೆ ತಿಳಿದಿರುವ ವಿಷಯವನ್ನು ಬಹಿರಂಗಪಡಿಸಿದ್ದಾಳೆ. ಅಲ್ಲಿ ಶ್ರೇಷ್ಠಾಳೂ ಆಗಮಿಸಿದ್ದಳು. ಕೊನೆಗೆ ಹೇಗೋ ಎಲ್ಲವೂ ತಿಳಿದ ಮೇಲೆ ಇನ್ನೇನು? ತಾಂಡವ್‌, ಭಾಗ್ಯಳಿಗೆ ನಿನ್ನ ಜೊತೆ ಇರಲು ಸಾಧ್ಯವೇ ಇಲ್ಲ ಎಂದಿದ್ದಾನೆ. ಮಾತಿಗೆ ಮಾತುಬೆಳೆದು, ಭಾಗ್ಯ ನಿಮ್ಮ ಸಹಾಯ ಇಲ್ಲದೇ ನಾನು ಹೇಗೆ ಎಲ್ಲರನ್ನೂ ಸಾಕಬಲ್ಲೆ ಎನ್ನುವುದನ್ನು ತೋರಿಸುತ್ತೇನೆ ಎಂದು ಮಕ್ಕಳು, ಅತ್ತೆ-ಮಾವನನ್ನು ಕರೆದುಕೊಂಡು ಮನೆಬಿಟ್ಟು ಹೋಗಿದ್ದಾಳೆ. ಅತ್ತೆ-ಮಾವ, ಮಕ್ಕಳನ್ನು ಕರೆದುಕೊಂಡು ಭಾಗ್ಯ ಮನೆ ಬಿಟ್ಟು ತವರು ಸೇರಿದ್ದಾಳೆ. ಗಂಡನಿಲ್ಲದೇ ಹೇಗೆ ಬಾಳುವುದು ಎನ್ನುವುದನ್ನು ತೋರಿಸಿಕೊಡುವ ಚಾಲೆಂಜ್‌ ಹಾಕಿದ್ದಾಳೆ. ಈಗ ಇಬ್ಬರು ಬೆಳೆದುನಿಂತ ಮಕ್ಕಳು, ಅಮ್ಮ-ಅಮ್ಮ, ಅತ್ತೆ-ಮಾವ ಸೇರಿದಂತೆ ತಂಗಿ ಪೂಜಾ ಹಾಗೂ ಸುಂದ್ರಿ ಎಲ್ಲರ ಜವಾಬ್ದಾರಿಯನ್ನೂ ಭಾಗ್ಯ ಹೊತ್ತುಕೊಂಡಿದ್ದಾಳೆ. ಇಂಥ ಗಂಡ ನಿನಗೆ ಬೇಕಾ, ಬಿಟ್ಟು ಬಾ ಎಂದು ಒಂದೇ ಸಮನೆ ಕಮೆಂಟ್‌ನಲ್ಲಿ ಭಾಗ್ಯಳಿಗೆ ಬುದ್ಧಿ ಹೇಳುತ್ತಿದ್ದವರು ಫುಲ್‌ ಖುಷ್ ಆಗಿದ್ದಾರೆ. ಹೀಗೆ ಗಂಡನ ಮನೆ ಬಿಟ್ಟು ತವರು ಸೇರುವ ಹೆಣ್ಣುಮಕ್ಕಳನ್ನು ನಿಜ ಜೀವನದಲ್ಲಿ ಇದೇ ಕಮೆಂಟಿಗರು ಎಷ್ಟು ಪ್ರೋತ್ಸಾಹ ಕೊಡುತ್ತಾರೋ ಗೊತ್ತಿಲ್ಲ, ಒಟ್ಟಿನಲ್ಲಿ ಸೀರಿಯಲ್‌ನಲ್ಲಿ ಮುಂಚಿನಿಂದಲೂ ಭಾಗ್ಯಳ ಮೇಲೆ ಆಗುತ್ತಿರುವ ಅನ್ಯಾಯವನ್ನು ಕಣ್ಣಾರೆ ಕಂಡವರಂತೂ ಭಾಗ್ಯಳಿಗೆ ಗಂಡನನ್ನು ಬಿಟ್ಟುಬಿಡಲು ಸಲಹೆ ಕೊಟ್ಟು ಈಗ ಖುಷಿಯಿಂದ ಇದ್ದಾರೆ. ಗಂಡನಿಗೆ ವಿಚ್ಛೇದನ ಕೊಡದಿದ್ದರೂ ಲವರ್ ಶ್ರೇಷ್ಠಾಳ ಕೈಗೆ ಭಾಗ್ಯ ತನ್ನ ಗಂಡನನ್ನು ಒಪ್ಪಿಸಿ ಬಂದಾಗಿದೆ.

ಇದು ಭಾಗ್ಯಲಕ್ಷ್ಮಿ ಸೀರಿಯಲ್‌ ಸದ್ಯದ ಕಥೆ. ಆದರೆ ಇದೀಗ ವೈರಲ್‌ ಆಗಿರೋ ವಿಡಿಯೋದಲ್ಲಿ ಅದೇ ಮನೆಹಾಳಿ ಶ್ರೇಷ್ಠಾಳ ಜೊತೆ, ಭಾಗ್ಯ ಸಕತ್‌ ಸ್ಟೆಪ್‌ ಹಾಕಿದ್ದಾಳೆ. ಅಷ್ಟಕ್ಕೂ ಇದೇನು ಸೀರಿಯಲ್‌ ಕಥೆಯಲ್ಲ. ಬದಲಿಗೆ ಭಾಗ್ಯ ಪಾತ್ರಧಾರಿ ಸುಷ್ಮಾ ಕೆ.ರಾವ್‌ ಅವರು ಶ್ರೇಷ್ಠಾ ಪಾತ್ರಧಾರಿ ಕಾವ್ಯ ಗೌಡ ಜೊತೆ ರೀಲ್ಸ್‌ ಮಾಡಿದ್ದಾರೆ. ಪಲ್ಲವಿ ಅನುಪಲ್ಲವಿ ಚಿತ್ರದ ಸುಂದರ ಸ್ನೇಹವಿದು ಹಾಡಿಗೆ ರೀಲ್ಸ್‌ ಮಾಡಿದ್ದಾರೆ. ಇದನ್ನು ತಮ್ಮ ಜಾಲತಾಣದಲ್ಲಿ ಅವರು ಶೇರ್‍‌ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಸುಷ್ಮಾ ಅವರು ಸೋಷಿಯಲ್‌ ಮೀಡಿಯಾದಲ್ಲಿ ಸಕತ್‌ ಆಕ್ಟೀವ್‌ ಆಗಿದ್ದಾರೆ. ಆಗ್ಗಾಗ್ಗೆ ರೀಲ್ಸ್‌ ಶೇರ್‍‌ ಮಾಡುತ್ತಾರೆ. ಭಾಗ್ಯಲಕ್ಷ್ಮಿ ತಂಡದ ಸದಸ್ಯರ ಜೊತೆ ಕೆಲವುವಿಡಿಯೋಗಳನ್ನೂ ಹಂಚಿಕೊಳ್ಳುತ್ತಾರೆ. ಇದೀಗ ಶ್ರೇಷ್ಠಾ ಅಂದ್ರೆ ಕಾವ್ಯ ಅವರ ಜೊತೆಗೆ ಡಾನ್ಸ್‌ ಮಾಡಿದ್ದು, ಅದನ್ನು ಶೇರ್‍‌ಮಾಡಿಕೊಂಡಿದ್ದಾರೆ. ಆದರೆ ಇಲ್ಲಿ ನೆಟ್ಟಿಗರು ಇವರನ್ನು ಸುಷ್ಮಾ ಮತ್ತು ಕಾವ್ಯ ಆಗಿ ನೋಡುತ್ತಿಲ್ಲ. ಬದಲಿಗೆ ಭಾಗ್ಯ ಮತ್ತು ಶ್ರೇಷ್ಠಾ ರೀತಿ ನೋಡಿಕೊಂಡು ಕಮೆಂಟ್‌ ಮಾಡುತ್ತಿದ್ದಾರೆ. ಬೇಡ ತಾಯಿ ಅವಳ ಸಹವಾಸ ಎನ್ನುತ್ತಿದ್ದಾರೆ. 

ಶೂಟಿಂಗ್‌ ಸೆಟ್‌ನಲ್ಲಿ ಶ್ರೇಷ್ಠಾಳನ್ನು ತಾಂಡವ್‌ ಎತ್ತಿಕೊಳ್ಳುವಾಗ ಏನಾಯ್ತು? ಮೇಕಿಂಗ್‌ ವಿಡಿಯೋ ವೈರಲ್‌

ಇನ್ನು ಭಾಗ್ಯಳ ಒರಿಜಿನಲ್ ಹೆಸರು ಸುಷ್ಮಾ ಕೆ. ರಾವ್‌ ಆಗಿದ್ದರೆ, ಶ್ರೇಷ್ಠಾಳದ್ದು ಕಾವ್ಯಾ ಗೌಡ. ಸುಷ್ಮಾ ಅವರು ಸೋಷಿಯಲ್ ಮೀಡಿಯಾದಲ್ಲಿಯೂ ಸಕತ್‌ ಆಕ್ಟೀವ್‌ ಆಗಿದ್ದಾರೆ.  ಸುಷ್ಮಾ ಕುರಿತು ಹೇಳುವುದಾದರೆ, ಇವರು ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದಿಂದ ಹಿಂದಿಯಲ್ಲಿ ಪದವಿ ಪಡೆದಿದ್ದಾರೆ.  ಭರತನಾಟ್ಯ ಮತ್ತು ಕೂಚುಪುಡಿ ಕಲಾವಿದೆ. ನೃತ್ಯಕ್ಕಾಗಿ  1997ರಲ್ಲಿ  ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. 2005ರಲ್ಲಿ ನಟನೆಗಾಗಿಯೂ ಆರ್ಯಭಟ ಪ್ರಶಸ್ತಿ ಪಡೆದಿದ್ದಾರೆ. ಇವರಿಗೆ ಈಗ 38 ವರ್ಷ ವಯಸ್ಸು. ಸುಷ್ಮಾ ರಾವ್ ಎಸ್‌.ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

 ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಇವರು ಐದು ವರ್ಷ ತೆಲುಗು ಧಾರಾವಾಹಿಯಲ್ಲಿ ನಾಯಕಿ  ಪಾತ್ರದಲ್ಲಿ ನಟಿಸಿದ್ದಾರೆ.ಬೆಂಗಳೂರು ಮೂಲದ ಕಾವ್ಯಾ,  ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ವಿಲನ್​ ರೋಲ್​ ಮೂಲಕ ಮನೆ ಮಾತಾಗಿದ್ದಾರೆ.   3 ವರ್ಷಗಳ ಹಿಂದೆ ಉದಯ ಟಿವಿಯಲ್ಲಿ ಮೂಡಿ ಬಂದ ದೇವಯಾನಿ ಧಾರಾವಾಹಿಯಲ್ಲಿ ನಟಿಸಿದ್ದರು. ವಿಜಯ್ ರಾಘವೇಂದ್ರ ನಟನೆಯ ರಿಂಗ ರಿಂಗ ರೋಸ್ ಎಂಬ ಸಿನಿಮಾಗೂ ಇವರು ನಟಿಸಿದ್ದಾರೆ.  ಇದಕ್ಕೂ ಮುನ್ನ ಜೀ ಕನ್ನಡ ವಾಹಿನಿಯ 'ಮಿಸ್ಟರ್ & ಮಿಸ್‌ಸ್ ರಂಗೇಗೌಡ' ಧಾರಾವಾಹಿಯಲ್ಲಿ ಲೀಡ್ ಆಗಿ 100 ಎಪಿಸೋಡ್‌ಲ್ಲಿ ನಟಿಸಿದ್ದರು. ಆಮೇಲೆ ಸೀರಿಯಲ್​ ಬಿಟ್ಟಿದ್ದರು. ಆದರೆ ಈಗ ಭಾಗ್ಯಲಕ್ಷ್ಮಿ ಸೀರಿಯಲ್ ಯಾವ ರೀತಿ ಟರ್ನ್​ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. 

'ಬ್ರಹ್ಮಗಂಟು' ಸೋಡಾಗ್ಲಾಸ್ ದೀಪಾಳ ಕಲರ್ ದಿನವೂ ಚೇಂಜ್‌ ಆಗ್ತಿರಲು ಇದೇ ಕಾರಣ ನೋಡಿ! ವಿಡಿಯೋ ವೈರಲ್

ಭಾಗ್ಯ ಮತ್ತು ಶ್ರೇಷ್ಠಾ ಡಾನ್ಸ್‌ ವಿಡಿಯೋ ಈ ಲಿಂಕ್‌ನಲ್ಲಿದೆ:

https://www.facebook.com/reel/549439794619641

Latest Videos
Follow Us:
Download App:
  • android
  • ios