Asianet Suvarna News Asianet Suvarna News

ಭಾಗ್ಯಳಿಂದ ಮಾಲಿಷ್​ ಮಾಡಿಕೊಳ್ತಿರೋ ತಾಂಡವ್​ ಫುಲ್​ ಖುಷ್​! ಒಂದಾಗಿ ಬಿಟ್ರಾ ಗಂಡ-ಹೆಂಡ್ತಿ?

ಭಾಗ್ಯಳಿಂದ ಮಾಲಿಷ್​ ಮಾಡಿಕೊಳ್ತಿರೋ ತಾಂಡವ್​ ಫುಲ್​ ಖುಷ್​! ಒಂದಾಗಿ ಬಿಟ್ರಾ ಗಂಡ-ಹೆಂಡ್ತಿ? ಏನಿದು ಹೊಸ ವಿಷಯ? 
 

Bhagya of Bhagyalakshmi massaging Tandav in viral video fans reacts to this suc
Author
First Published May 25, 2024, 10:17 PM IST

ಭಾಗ್ಯ ಮತ್ತು ತಾಂಡವ್​ ಬೇರೆಯಾಗಿದ್ದಾರೆ. ವಿಚ್ಛೇದನವೊಂದು ಆಗಿಲ್ಲ ಬಿಟ್ಟರೆ, ಇಬ್ಬರ ನಡುವೆ ಯಾವುದೇ ರೀತಿಯ ಪ್ರೀತಿ ಇಲ್ಲ. ಒಂದೆಡೆ ಭಾಗ್ಯ ತನ್ನ ಸಂಸಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿದ್ದರೆ, ತಾಂಡವ್​ ಶ್ರೇಷ್ಠಾಳ ಜೊತೆಯಲ್ಲಿ ಸಂಸಾರ ಹೂಡಲು ಪ್ಲ್ಯಾನ್​ ಮಾಡುತ್ತಿದ್ದಾನೆ. ಮದುವೆಯ ಡೆಕೋರೇಷನ್​  ಮಾತುಕತೆಯೂ ನಡೆಯುತ್ತಿದೆ. ಇದರ ನಡುವೆಯೇ ಭಾಗ್ಯ ತಾಂಡವ್​ ತಲೆಗೆ ಮಾಲಿಷ್​ ಮಾಡುತ್ತಿರುವ ವಿಡಿಯೋ ಒಂದು ವೈರಲ್​ ಆಗಿದೆ. ಇದನ್ನು ನೋಡಿದ ಸೀರಿಯಲ್​ ಪ್ರೇಮಿಗಳು ಭಾಗ್ಯ ಮತ್ತು ತಾಂಡವ್​ ಒಂದಾಗಿ ಬಿಟ್ರಾ ಎಂದು ಪ್ರಶ್ನಿಸುತ್ತಿದ್ದಾರೆ. ಇಬ್ಬರೂ ಹೀಗೆ ಖುಷಿಯಾಗಿರಿ ಎನ್ನುತ್ತಿದ್ದಾರೆ. ಇನ್ನು ಕೆಲವರು ಮಾಲಿಷ್ ಅಲ್ಲ, ತಾಂಡವ್​ನ ಬುರುಡೆಗೆ ನಾಲ್ಕು ಬಿಡಿ, ಆಗ ಸರಿಯಾಗುತ್ತದೆ ಎನ್ನುತ್ತಿದ್ದಾರೆ.

ಅಷ್ಟಕ್ಕೂ ಇದೇನು ಸಿನಿಮಾ ಕಥೆಯಲ್ಲ. ಬದಲಿಗೆ ಭಾಗ್ಯ ಪಾತ್ರಧಾರಿ ಸುಷ್ಮಾ ರಾವ್​ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಇದನ್ನು ಶೇರ್​ ಮಾಡಿಕೊಂಡಿದ್ದಾರೆ. ಶೂಟಿಂಗ್​ ಮಧ್ಯೆ ಹೀಗೆಲ್ಲಾ ತುಂಟಾಟ ನಡೆಯುತ್ತದೆ. ಫ್ರೇಮ್​ನಲ್ಲಿ ನಮ್ಮ ಮುಖ ಬರಲ್ಲ ಎಂದಾಗ ಹೀಗೆಲ್ಲಾ ತಮಾಷೆಗೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಆದರೂ ಬಿಡದ ಅಭಿಮಾನಿಗಳು ಅದೇನೇ ಇರಲಿ ಭಾಗ್ಯ, ತಾಂಡವ್​ ಬುರುಡೆಗೆ ಸರಿಯಾಗಿ ಏಟು ಕೊಡಿ ಎನ್ನುತ್ತಿದ್ದಾರೆ. ಅಂದಹಾಗೆ ಸುಷ್ಮಾ ರಾವ್​ ಅವರು ಸೋಷಿಯಲ್​ ಮೀಡಿಯಾದಲ್ಲಿಯೂ ಆ್ಯಕ್ಟೀವ್​ ಇದ್ದಾರೆ. ಆಗಾಗ್ಗೆ ಇಂಥ ವಿಡಿಯೋಗಳನ್ನು ಶೇರ್​  ಮಾಡುತ್ತಿರುತ್ತಾರೆ.

ಕಾಂತಾರ ಚಿತ್ರದ ಬಳಿಕ ಸಪ್ತಮಿ ಗೌಡ ಸಂಭಾವನೆ ಎಷ್ಟು ಪಟ್ಟು ಹೆಚ್ಚಾಯ್ತು? ನಟಿಯಿಂದಲೇ ಗುಟ್ಟು ರಟ್ಟು

ಇನ್ನು ಭಾಗ್ಯಲಕ್ಷ್ಮಿ ಸೀರಿಯಲ್​ ಕುರಿತು ಹೇಳುವುದಾದರೆ, ಭಾಗ್ಯಳನ್ನು ಯಾವುದೋ ಭಗಾಯಾ ಎಂಬಾಕೆ ಎಂದು ತಿಳಿದು ಸ್ಟಾರ್​ ಹೋಟೆಲ್​ನಲ್ಲಿ ಕೆಲಸ ಕೊಟ್ಟಿದ್ದಾರೆ.   ಆದರೆ ಇಂಗ್ಲಿಷ್​ ಬರದೇ ಪರದಾಡುತ್ತಿದ್ದಾಳೆ ಭಾಗ್ಯ.   ಆದರೆ ಭಾಗ್ಯಳ ಸ್ಥಿತಿ ಮಾತ್ರ ಯಾರಿಗೂ ಬೇಡವಾಗಿದೆ. ವೇಟ್ರೆಸ್​ ಕೆಲಸವನ್ನು ಭಾಗ್ಯಳಿಗೆ ನೀಡಲಾಗಿದೆ. ಬರುವ ಗ್ರಾಹಕರು ಇಂಗ್ಲಿಷ್​ನಲ್ಲಿ ಮಾತನಾಡುತ್ತಿದ್ದಾರೆ. ಅವರು ಆರ್ಡರ್​ ಮಾಡುವ ತಿನಿಸು ಯಾವುದು ಎಂದು ಭಾಗ್ಯಳಿಗೆ ತಿಳಿಯುವುದಿಲ್ಲ. ಇದರಿಂದ ಪರದಾಡುತ್ತಿದ್ದಾಳೆ ಭಾಗ್ಯ.  ಆದರೆ ಇದೀಗ ಕೆಲಸ ಮಾಡುವುದಿದ್ದರೆ ತಾನು ಇಂಗ್ಲಿಷ್​ ಕಲಿಯಲೇ ಬೇಕು ಎನ್ನುವುದು ಭಾಗ್ಯಳಿಗೆ ಅರ್ಥವಾಗಿದೆ. ಆದ್ದರಿಂದ ಹೋಟೆಲ್​ಗೆ ಸ್ವಾಗತ ಎನ್ನುವಷ್ಟು ಇಂಗ್ಲಿಷ್​ ಕಲಿಯಲು ಶುರು ಮಾಡಿಕೊಂಡಿರುವಾಗಲೇ ಮತ್ತೊಂದು ಬರಸಿಡಿಲು ಬಡಿದಿದೆ. ಅದೇನೆಂದರೆ, ಇದೀಗ ಗಂಡ ತಾಂಡವ್​ ಮತ್ತು ಆತನ ಲವರ್​ ಶ್ರೇಷ್ಠಾಳ ಮದುವೆಗೆ ಡೆಕೋರೇಷನ್​ ಪ್ಲ್ಯಾನ್​ ಮಾಡುವ ಕೆಲಸ ಭಾಗ್ಯಳಿಗೇ ಬಂದಿದೆ! 

ಭಾಗ್ಯಾಳದ್ದು ಎಂದು ಭಗಾಯ ಸಿವಿ ನೋಡುವ ಸೂಪರ್‌ವೈಸರ್‌, ಭಾಗ್ಯಾಳನ್ನು ಕರೆದು ನಿಮ್ಮ ಸಿವಿ ನೋಡಿದೆ, ನೀವು ವೆಡ್ಡಿಂಗ್‌ ಡೆಕೊರೇಷನ್‌ನಲ್ಲಿ ಸ್ಪೆಷಲ್‌ ಕೋರ್ಸ್‌ ಮಾಡಿದ್ದೀರ ಎಂದು ನೋಡಿದೆ. ಆದ್ದರಿಂದ ಇಂದು ನೀವು ಅದೇ ಕೆಲಸ ಮಾಡಿ, ಮದುವೆ ಬಗ್ಗೆ ವಿಚಾರಿಸಲು ಒಬ್ಬರು ಕ್ಲೈಂಟ್‌ ಇಲ್ಲಿಗೆ ಬರುತ್ತಿದ್ದಾರೆ. ಅವರ ಜೊತೆ ನೀವೇ ಮಾತನಾಡಿ ಎನ್ನುತ್ತಾನೆ. ಇದನ್ನು ಕೇಳಿ ಭಾಗ್ಯಳಿಗೆ ತಲೆತಿರುಗಿದಂತೆ ಆಗುತ್ತದೆ. ಇಲ್ಲೇನು ಆಗುತ್ತಿದೆ ಎನ್ನುವುದೇ ತಿಳಿಯುವುದಿಲ್ಲ. ಮಳ್ಳಿಯಂತೆ ತಲೆಯಲ್ಲಾಡಿಸುತ್ತಾಳೆ. ಆದರೆ ಮದುವೆಯ ಬಗ್ಗೆ ಈ ಹೋಟೆಲ್​ಗೆ ಮಾತನಾಡಲು ಬರುತ್ತಿರುವವರು ತನ್ನ ಗಂಡ ಮತ್ತು ಶ್ರೇಷ್ಠಾ ಎನ್ನುವುದನ್ನು ಭಾಗ್ಯ ಕನಸಿನಲ್ಲಿಯೂ ಊಹಿಸಿರುವುದಿಲ್ಲ. ಆದರೆ ಅದು ಆಗಿಯೇ ಹೋಗಿದೆ. ಶ್ರೇಷ್ಠಾ ಮತ್ತು ತಾಂಡವ್​ ಮದುವೆ ಪ್ಲ್ಯಾನ್​ಗಾಗಿ ಈ ಹೋಟೆಲ್​ಗೆ ಬಂದಿದ್ದಾರೆ. ಅವರನ್ನು ಭಾಗ್ಯ ನೋಡುತ್ತಾಳೆಯೇ? ಭಾಗ್ಯಳನ್ನು ನೋಡುವ ಇವರಿಬ್ಬರ ಸ್ಥಿತಿ ಏನಾಗಬಹುದು? ನೂರೆಂಟು ಪ್ರಶ್ನೆಗಳು ಇದೀಗ ವೀಕ್ಷಕರ ಮುಂದಿದೆ. 

ಕಾಂತಾರ ಬೆಡಗಿ ಸಪ್ತಮಿ ಗೌಡ ಮದ್ವೆಯಾಗೋ ಹುಡುಗ ಹೀಗಿದ್ರೆ ಸಾಕಂತೆ... ನೀವ್​ ರೆಡಿನಾ...?

Latest Videos
Follow Us:
Download App:
  • android
  • ios