ಕೆಂಡಸಂಪಿಗೆ ಸುಮಾಗೆ ತಾಂಡವ್ ಸಹಾಯ; ಅಬ್ಬಾ ಜೀವನದಲ್ಲಿ ಒಳ್ಳೇ ಕೆಲ್ಸ ಮಾಡ್ದ ಅಂತ ನೆಟ್ಟಿಗರು!
ಪತ್ನಿ ವಿರುದ್ಧ ಕಿಡಿ ಕಾರುವ ತಾಂಡವ್ ಮೊದಲ ಸಲ ಒಂದು ಹೆಣ್ಣಿಗೆ ಸಹಾಯ ಮಾಡಿ ವೀಕ್ಷಕರಿಂದ ಭೇಷ ಎನಿಸಿಕೊಂಡಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಹುತೇಕ ಧಾರಾವಾಹಿಗಳ ನಡುವೆ ಮಹಾ ಮಿಲನಾ ನಡೆಯುತ್ತಿದೆ. ಈ ವೇಳೆ ಟಾಪ್ ಧಾರಾವಾಹಿಗಳಾದ ಕೆಂಡಸಂಪಿಗೆ ಮತ್ತು ಭಾಗ್ಯ ಲಕ್ಷ್ಮಿ ಒಬ್ಬರಿಗೊಬ್ಬರು ಸಾಥ್ ಕೊಟ್ಟಿದ್ದಾರೆ. ಸುಮ್ಮನಾಳಿಗೆ ಅತ್ತೆ ಮಾವ ಕೊಟ್ಟ ಪರೀಕ್ಷೆಯಲ್ಲಿ ಗೆಲ್ಲುವಂತೆ ತಾಂಡವ್ ಸಹಾಯ ಮಾಡಿದ್ದಾನೆ. ಹೀಗಾಗಿ ವೀಕ್ಷಕರು ಮೊದಲ ಸಲ ಭೇಷ್ ಎನ್ನುತ್ತಿದ್ದಾರೆ.
ಹೌದು! ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸುಮನ್ನಾ ಗರ್ಭಿಣಿ ಎಂದು ತಿಳಿಯುತ್ತಿದ್ದಂತೆ ಅತ್ತೆ ಮಾವ ಪರೀಕ್ಷೆ ನೀಡಲು ಶುರು ಮಾಡಿದ್ದಾರೆ. ಸುಮನ್ನಾ ಗೆಲ್ಲಬಾರದು ಎಂದು ಪಟ್ಟು ಹಿಡಿದು ಮನೆಯವರು ಇಲ್ಲದ ಸಲ್ಲದ ಪ್ರಯತ್ನಗಳನ್ನು ಮಾಡುತ್ತಾರೆ. ಸುಮನ್ನಾ ಕೈಗೆ ಒಂದು ಪಾರ್ಸಲ್ ಕೊಟ್ಟು ಮಠದ ಸ್ವಾಮೀಜಿಗಳಿಗೆ ನೀಡುವಂತೆ ಮಾವ ಹೇಳುತ್ತಾರೆ. ಸುಮನ್ನ ಧಾರಿಯಲ್ಲಿ ಹೋಗುತ್ತಿದ್ದಂತೆ ಕೈಯಲ್ಲಿ ಪಾರ್ಸನಲ್ ಕಳ್ಳತನವಾಗುತ್ತದೆ ಆಗ ಎದುರಿಗಿದ್ದ ಕಾರು ಬಂದು ನಿಲ್ಲುತ್ತದೆ. ಕಿಟಿಕಿ ತೆಗೆದು ಸಹಾಯ ಬೇಕಾ ಎಂದು ಕೇಳುವುದು ತಾಂಡವ್.
'ಭಾಗ್ಯಲಕ್ಷ್ಮಿ' ಧಾರಾವಾಹಿಗೆ ಟ್ವಿಸ್ಟ್: ಗೊಣ್ಣೆ ತೆಗೆಯಲೂ ಬರೋಲ್ಲವೆಂದು ಮಗಳಿಗೇ ಕುಟುಕಿದ ಭಾಗ್ಯ
ಪಾರ್ಸನಲ್ ತುಂಬಾನೇ ಮುಖ್ಯ ನಾನು ಗರ್ಭಿಣಿ ಓಡಲು ಆಗಲ್ಲ ಎಂದು ಮನವಿ ಮಾಡಿಕೊಂಡಾಗ ತಾಂಡವ್ ಸಹಾಯ ಮಾಡಲು ಮುಂದಾಗುತ್ತಾನೆ. ಕಳ್ಳನ ಹಿಂದೆ ಓಡಿ ಹೋಗಿ ಹೊಡೆದು ಪಾರ್ಸನಲ್ ತೆಗೆದುಕೊಂಡು ಬರುತ್ತಾನೆ. ಅಷ್ಟರಲ್ಲಿ ಕಳ್ಳ ಪ್ಯಾಕೆಟ್ ಓಪನ್ ಮಾಡಿ ನೋಡಿದರೆ ಅದರಲ್ಲಿ ಭಗವದ್ಗೀತೆ ಪುಸ್ತಕವಿತ್ತು. ಪಾರ್ಸಲ್ ಕೈಗೆ ಸಿಕ್ಕ ಖುಷಿಯಲ್ಲಿ ಸುಮನ್ನಾ ಇದ್ದರೆ ಮತ್ತೊಂದು ಕಡೆ ಪಾರ್ಸನಲ್ ಓಪನ್ ಮಾಡಿ ನೋಡಿದೆ ಎಂದುಕೊಳ್ಳುತ್ತಾರೆ ಮಾವ ಅವರಿಗೆ ನಂಬಿಕೆ ಮೋಸ ಮಾಡಿದೆ ಎಂದುಕೊಳ್ಳುತ್ತಾರೆ.
ತಾಂಡವ್ ಸಹಾಯ ನೋಡಿ ವೀಕ್ಷಕರು ಮೆಚ್ಚಿಕೊಳ್ಳುತ್ತಾರೆ. ಪದೇ ಪದೇ ಹೆಂಡತಿ ದಡ್ಡಿ ಪೆಡ್ಡಿ ಎಂದು ಹೇಳುವ ತಾಂಡವ್ ಒಂದು ಹೆಣ್ಣಿಗೆ ಸಹಾಯ ಮಾಡಿದ್ದಾನೆ ಎಂದು ನಂಬಲಾಗದು. ಸುಮನ್ನಾಳ ಮೇಲೆ ತೋರಿಸದ ಕರುಣೆಯನ್ನು ಭಾಗ್ಯಳ ಮೇಲೆ ತೋರಿಸಿದರೆ ಸಂಸಾರ ಚೆನ್ನಾಗಿರುತ್ತದೆ ಎನ್ನುತ್ತಾರೆ ನೆಟ್ಟಿಗರು.
Bhagya Lakshmi Serial: ಮಗನಿಗೆ ಸವಾಲು ಹಾಕಿ ಸೊಸೆ ಬೆಂಬಲಕ್ಕೆ ನಿಂತ ಕುಸುಮಾ
ತಾಂಡವ್‌ಗೆ ನೆಟ್ಟಿಗರ ಕ್ಲಾಸ್:
ದಿನದಿಂದ ದಿನಕ್ಕೆ ರೋಚಕ ತಿರುವುಗಳೊಂದಿಗೆ ಪ್ರಸಾರವಾಗುತ್ತಿರುವ ಧಾರಾವಾಹಿ ಭಾಗ್ಯಲಕ್ಷ್ಮಿ (Bhagyalakshmi). ಸೊಸೆಗೆ ಬೆಂಬಲವಾಗಿ ನಿಂತಿರೋ ಅತ್ತೆಯನ್ನು ನೋಡಿ ಸೀರಿಯಲ್ ಪ್ರಿಯರು ಮೆಚ್ಚಿಕೊಂಡಿದ್ದು, ಇದೀಗ ಸೊಸೆಗೆ 10ನೇ ತರಗತಿ ಕಲಿಸೋ ತಯಾರಿಯಲ್ಲಿದ್ದಾರೆ ಕುಸುಮಾ. ಸೊಸೆಯ ಕೈಯಾರೆ ಪುಸ್ತಕಗಳನ್ನು ದೇವರ ಮುಂದೆ ಇರಿಸಿ, ಮನೆಯವರನ್ನೆಲ್ಲಾ ಕರೆಯುತ್ತಾಳೆ ಕುಸುಮಾ. ದೇವರ ಮನೆಯಲ್ಲಿ ಭಾಗ್ಯಾ ಪುಸ್ತಕಗಳನ್ನು ನೋಡಿ ಶಾಖ್ ಆಗಿರೋ ತಾಂಡವ್, ಅಮ್ಮ ತೆಗೆದುಕೊಂಡಿರೋ ನಿರ್ಧಾರದಿಂದ ಹಿಂದೆ ಬರುವಂತೆ ಕಾಣಿಸುತ್ತಿಲ್ಲ, ಎಂದು ಮನಸ್ಸಿನಲ್ಲಿಯೇ ಕೋಪ ಮಾಡ್ಕೊಂಡಿದ್ದಾನೆ. ಅಮ್ಮನ ಹಠವನ್ನು ಪತ್ನಿಯಿಂದಾಲೇ ಸರಿ ಮಾಡಲು ಯತ್ನಿಸುತ್ತಿರುವ ತಾಂಡವ್, ಮತ್ತೆ ಭಾಗ್ಯಾಳನ್ನು ಹಂಗಿಸಿ ಮಾತನಾಡಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಗಂಡನ ನಡೆಗೆ ಅತೀವ ಕಮೆಂಟ್ ಮೂಲಕ ಅತೀವ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಮಂದಿ.