ಬೆಳ್ಳುಳ್ಳಿ ಕಬಾಬ್ ಸವಿರುಚಿ ತೋರಲು 'ರಾವುಲ್ಲಾ' ಮಾಲೀಕನ ಎಂಟ್ರಿ: ಒನ್ ಮೋರ್..ಒನ್ ಮೋರ್ ಅನ್ನಲು ರೆಡಿನಾ?
ಬೆಳ್ಳುಳ್ಳಿ ಕಬಾಬ್ ಮೂಲಕ ಫೇಮಸ್ ಆಗಿರೋ ಚಂದ್ರು ಅವರು ಕಲರ್ಸ್ ಕನ್ನಡ ವಾಹಿನಿಗೆ ಎಂಟ್ರಿ ಕೊಡಲಿದ್ದಾರೆ. ಎಲ್ಲಿ? ಹೇಗೆ? ಯಾವಾಗ? ಇಲ್ಲಿದೆ ಡಿಟೇಲ್ಸ್..
ಬೆಳ್ಳುಳ್ಳಿ ಕಬಾಬ್, ಒನ್ ಮೋರ್... ಒನ್ ಮೋರ್... ರಾವುಲ್ಲಾ ರಾವುಲ್ಲಾ... ಇವೆಲ್ಲವೂ ಈಗ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ಬಾಯಲ್ಲೂ ಹರಿದಾಡುತ್ತಿರುವ ಶಬ್ದಗಳು. ಕರಿಮಣಿ ಮಾಲಿಕ ನಾನಲ್ಲ ಎಂಬ ಹಾಡು ಫೇಮಸ್ ಆಗುತ್ತಿದ್ದಂತೆಯೇ ಅದರ ಹಿಂದೆ ನಾನು ನಂದಿನಿ ಖ್ಯಾತಿಯ ವಿಕ್ಕಿ ಅವರ ಕರಿಮಣಿ ಮಾಲಿಕ ರಾವುಲ್ಲಾ... ಹಾಡು ಸಕತ್ ಫೇಮಸ್ ಆಯಿತು. ಈ ಹಾಡು ಸಾಕಷ್ಟು ವೈರಲ್ ಆಗುತ್ತಿದ್ದಂತೆಯೇ ಬೆಳ್ಳುಳ್ಳಿ ಕಬಾಬ್ ಮಾಲೀಕ ಚಂದ್ರು ಅವರಿಗೂ ಡಿಮ್ಯಾಂಡ್ ಜಾಸ್ತಿ ಆಗಿದೆ. ಇದೀಗ ತಮ್ಮದೇ ಆದ ರೀತಿಯಲ್ಲಿ ಹಲವು ಕಡೆಗಳಲ್ಲಿ ಬೆಳ್ಳುಳ್ಳಿ ಕಬಾಬ್ ಕೂಡ ಮಾರಾಟವಾಗುತ್ತಿದೆ. ಇದೀಗ ಒರಿಜಿನಲ್ ಬೆಳ್ಳುಳ್ಳಿ ಕಬಾಬ್ ಸವಿರುಚಿಯನ್ನು ತೋರಲು ಖುದ್ದು ಚಂದ್ರು ಅವರೇ ನಿಮ್ಮ ಮುಂದೆ ಬರಲಿದ್ದಾರೆ!
ಹೌದು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಸವಿರುಚಿ ಅಡುಗೆ ಕಾರ್ಯಕ್ರಮ ಇದಾಗಲೇ ಸಾಕಷ್ಟು ಜನಪ್ರಿಯವಾಗಿದೆ. ಇದರಲ್ಲಿ ಹಲವಾರು ಖ್ಯಾತ ಶೆಫ್ಗಳೂ ಎಂಟ್ರಿ ಕೊಟ್ಟಿದ್ದು, ವಿವಿಧ ಅಡುಗೆಗಳ ರುಚಿಯನ್ನು ಉಣಬಡಿಸಿದ್ದಾರೆ. ಸವಿರುಚಿ ಸೀಸನ್ 3 ಬರುವ ಏಪ್ರಿಲ್ 9ರಿಂದ ಆರಂಭವಾಗಲಿದ್ದು, ಈ ಬಾರಿ ವಿಶೇಷತೆ ಎಂದರೆ ಬೆಳ್ಳುಳ್ಳಿ ಕಬಾಬ್. ಬೆಳ್ಳುಳ್ಳಿ ಕಬಾಬ್ ಮಾಲಿಕರಾಗಿರುವ ಚಂದ್ರು ಅವರು ಬೆಳ್ಳುಳ್ಳಿ ಕಬಾಬ್ ಮಾಡಿ ತೋರಿಸುವುದು ಮಾತ್ರವಲ್ಲ, ಇಡೀ ಸೀಸನ್ನಲ್ಲಿ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಕೊನೆಗೂ ಸಿಕ್ಕ ಒರಿಜಿನಲ್ ರಾವುಲ್ಲಾ! ಬೆಳ್ಳುಳ್ಳಿ ಕಬಾಬ್ ಓನರ್ ಜೊತೆ ಕರಿಮಣಿ ಮಾಲೀಕನ ಎಂಟ್ರಿ!
ನಿರೂಪಕಿ ಜಾಹ್ನವಿಯವರ ಜೊತೆ ಚಂದ್ರು ಅವರೂ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದರ ಪ್ರೊಮೋ ಅನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ. "ಐಟಮ್ ವೆರೈಟಿ ಸ್ಟೈಲು ಪಕ್ಕಾ ನಾಟಿ, ಹೊಸ ಗ್ಯಾಂಗ್ ಸವಿರುಚಿ, ಏಪ್ರಿಲ್ 9ರಿಂದ ಮಧ್ಯಾಹ್ನ 12 ಎಂದು ಪ್ರೊಮೋ ಬಿಡುಗಡೆ ಮಾಡಲಾಗಿದೆ. "ಮಟಮಟ ಮಧ್ಯಾಹ್ನ ಚಟಪಟ ಒಗರಣೆ ಪಟಪಟ ಮಾತು" ಎಂದು ವಿಡಿಯೋದಲ್ಲಿ ತಿಳಿಸಲಾಗಿದೆ. ಜತೆಗೆ ಮನಸ್ಸಿನೊಳಗೆ ಖಾಲಿ ಖಾಲಿ ಓ ನಲ್ಲ ನಲ್ಲ ಹಿನ್ನೆಲೆ ಹಾಡೂ ಇದೆ. ಹೊಸ ಗ್ಯಾಂಗ್‌ನ ಹೊಸ ರಂಗಿನೊಂದಿಗೆ ಯುಗಾದಿ ಹಬ್ಬದ ಸಮಯದಲ್ಲಿ ಸವಿರುಚಿ ಕಾರ್ಯಕ್ರಮ ಆರಂಭವಾಗಲಿದೆ.
ಅಂದಹಾಗೆ ಬೆಳ್ಳುಳ್ಳಿ ಕಬಾಬ್ ಚಂದ್ರು ಅವರಿಗೆ ಇದಾಗಲೇ ಸಿನಿಮಾ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ಇವರು ಮೇಕಪ್ ಮ್ಯಾನ್ ಆಗಿ ಕೆಲಸ ಮಾಡಿದ್ದವರು. ಸ್ಯಾಂಡಲ್ವುಡ್ ನಟಿ ಮಾಲಾಶ್ರಿ ಜತೆ ಕೆಲಸವನ್ನೂ ಮಾಡಿದವರು. ಮಾತ್ರವಲ್ಲದೇ ಡಾ.ರಾಜ್ಕುಮಾರ್, ಶಿವರಾಜ್ಕುಮಾರ್, ಅಂಬರೀಷ್ ಸೇರಿದಂತೆ ಹಲವು ಕಲಾವಿದರಿಗೆ ಇವರು ಅಡುಗೆಯನ್ನೂ ಮಾಡಿಕೊಟ್ಟಿದ್ದಾರೆ. ಅಡುಗೆಗೆ ಜನಪ್ರಿಯತೆ ಹೆಚ್ಚಿದಂತೆ ಸ್ವಂತ ಹೋಟೆಲ್ ಆರಂಭಿಸಿದರು. ಬೆಂಗಳೂರಿನಲ್ಲಿ ಇವರ ದೊಡ್ಡ ಫ್ಯಾಮಿಲಿ ರೆಸ್ಟೂರೆಂಟ್ ಇದೆ.
ಬೆಳ್ಳುಳ್ಳಿ ಕಬಾಬ್ ಮಾಲೀಕಂಗೂ ವಿಕ್ಕಿಪಿಡಿಯಾಗೂ 'ಸಂಧಾನ'! ಗಿಫ್ಟ್ ನೋಡಿ ಚಂದ್ರು ಏನಂದ್ರು?