ಬಿಗ್ ಬಾಸ್ ಕನ್ನಡ ಸೀಸನ್ 10 ಶೋ ಬಗ್ಗೆ ಬೇಸರ ವ್ಯಕ್ತಪಡಿಸಿ, ಈ ರಿಯಾಲಿಟಿ ಶೋ ಮಕ್ಕಳಿಗೆ ಸೂಕ್ತ ಅಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ನಟಿ ಕಾವ್ಯಾ ಶಾಸ್ತ್ರಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

ಬಿಗ್ ಬಾಸ್ ಕನ್ನಡ ಸೀಸನ್ 10 ಪ್ರಾರಂಭವಾಗಿ ಮೂರು ವಾರ ಕಳೆದಿದ್ದು, ಈ ವಾರ ಸಂಪೂರ್ಣ ಗಲಾಟೆಯಲ್ಲೇ ಬಿಗ್ ಬಾಸ್ ನಡೆಯುತ್ತಿದ್ದು, ಸ್ಪರ್ಧಿಗಳು ತೀರಾ ಕೆಳಮಟ್ಟದ ಪದಗಳನ್ನು ಬಳಸಿ ಜಗಳವಾಡುತ್ತಿದ್ದು, ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಹಲವು ಮಂದಿ ಈ ಬಾರಿಯ ಬಿಗ್ ಬಾಸ್‌ ಮನೆಯಲ್ಲಿನ ಘಟನೆಗಳು, ಸ್ಪರ್ಧಿಗಳ ಬಗ್ಗೆ ಬೇಸರ ಹೊರಹಾಕಿದ್ದಾರೆ. ಬಿಗ್ ಬಾಸ್ ಸೀಸನ್ 4ರಲ್ಲಿ ಸ್ಪರ್ಧಿ, ನಟಿ ಕಾವ್ಯಾ ಶಾಸ್ತ್ರಿ ಕೂಡ ಬಿಗ್ ಬಾಸ್ ಬಗ್ಗೆ ಇದೀಗ ಅಸಮಾಧಾನ ಹೊರ ಹಾಕಿದ್ದಾರೆ. 

ಈ ಸೀಸನ್‌ನಲ್ಲಿ ಕೆಲವು ಸದಸ್ಯರು ನಡೆದುಕೊಳ್ಳುತ್ತಿರುವ ರೀತಿಗೆ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಹಲವು ಮಂದಿ ಆಕ್ರೋಶ ಹೊರಹಾಕಿದ್ದಾರೆ. ಭಾಷೆಯ ಬಳಕೆ, ಕೆಟ್ಟ ಕೆಟ್ಟ ಪದಗಳನ್ನು ಬಳಸುವುದು, ಒಬ್ಬರ ಬಗ್ಗೆ ಒಬ್ಬರು ಗೌರವ ಇಲ್ಲದೆ ನಡೆದುಕೊಳ್ಳುವುದು ನಡೆಯುತ್ತಿದೆ. ಇದೇ ಸಮಯದಲ್ಲಿ ನಟಿಯೂ ಶೋ ಬಗ್ಗೆ ಬೇಸರ ವ್ಯಕ್ತಪಡಿಸಿ, ಈ ರಿಯಾಲಿಟಿ ಶೋ ಮಕ್ಕಳಿಗೆ ಸೂಕ್ತ ಅಲ್ಲ ಎಂದು ಅಭಿಪ್ರಾಯ ಹೊರಹಾಕಿದ್ದಾರೆ. ನಟಿ ಕಾವ್ಯಾ ಶಾಸ್ತ್ರಿ ತಮ್ಮ ಸೋಶಿಯಲ್ ಮೀಡಿಯಾ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 

View post on Instagram


'ಈ ಸಲದ ಕನ್ನಡದ ಬಿಗ್​ಬಾಸ್‌ ಸೀಸನ್‌ ನಿಜಕ್ಕೂ ಬೇಸರ ತಂದಿದೆ. ಶೋನಲ್ಲಿ ಉಳಿಯೋ ಭರದಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದನೆ, ಚಾರಿತ್ರ್ಯ ವಧೆ, ಹೆಣ್ಣುಮಕ್ಕಳ ಮೇಲೆ ಏಕವಚನದ ಬಳಕೆ, ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರುಧ್ವನಿಯಲ್ಲಿ ಗದರುವುದು, ಹೆದರಿಸುವುದು, ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿರುವ ತಂದೆ - ತಾಯಂದಿರು ದಯವಿಟ್ಟು ಇಂತಹ ಕಾರ್ಯಕ್ರಮಗಳನ್ನು ಚಿಕ್ಕ ಮಕ್ಕಳ ಎದುರು ನೋಡದಿರಿ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತದೆ ಹಾಗೂ ಅವರು ಈ ಸ್ವಭಾವದ ಅನುಕರಣೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ' ಎಂದು ಬೇಸರದಿಂದಲೇ ಬಿಗ್ ಬಾಸ್ ವೀಕ್ಷಕರಿಗೆ ಕಿವಿ ಮಾತು ಹೇಳಿದ್ದಾರೆ. 

ಸೂಚನೆ: ನಾನು ಯಾವುದೇ ಕಾರ್ಯಕ್ರಮದ ವಿರೋಧಿಯಲ್ಲ. ಇದು ಚಿಕ್ಕ ಮಕ್ಕಳಿರುವ ಪೋಷಕರಿಗೆ ಜಾಗೃತಿ ಮೂಡಿಸಲು ಮಾತ್ರ. ಯಾವುದೇ ಕಾರ್ಯಕ್ರಮ ಅದು ಧಾರಾವಾಹಿಯಾಗಿರಲಿ ಅದನ್ನು ವೀಕ್ಷಿಸಲು ಸೂಕ್ತವಾದ ವಯಸ್ಸಿನ ವರ್ಗ ಯಾವುದು ಎಂಬುದನ್ನು ತಿಳಿಸುತ್ತದೆ. ಆದರೆ, ನಾವು ಅದನ್ನು ನಿರ್ಲಕ್ಷಿಸುತ್ತೇವೆ ಮತ್ತು ನಮ್ಮ ಮನೆಗಳಲ್ಲಿ ಇಂತಹ ಕಾರ್ಯಕ್ರಮಗಳನ್ನು ನೋಡುತ್ತೇವೆ. ನಿಮ್ಮ ಮಗು ನಿಮ್ಮ ಕುಳಿತು ಇಂತಹ ಶೋಗಳನ್ನು ನೋಡದಿದ್ದರೂ, ಕೇವಲ ಆಡಿಯೋ ಕೂಡ ಅವರ ಮೇಲೆ ಪರಿಣಾಮ ಬೀರಬಹುದು. ದಯವಿಟ್ಟು ನಿಮ್ಮ ಮಗುವಿನ ಬಗ್ಗೆ ಕಾಳಜಿ ವಹಿಸಿ ಎಂದು ಕೈಮುಗಿದು ಕೇಳಿಕೊಂಡಿದ್ದಾರೆ.

ನಿಮ್ಮನ್ನ ಈ ಲುಕ್‌ನಲ್ಲಿ ನೋಡುತ್ತಿದ್ರೆ... ಪಡ್ಡೆಹೈಕ್ಳ ಎದೆಯಲ್ಲಿ ಪ್ರೀತಿಯ ಕಿಚ್ಚು ಹಚ್ಚಿದ ರಚ್ಚು!

ಇನ್ನು ಬಿಗ್ ಬಾಸ್ ಸೀಸನ್ 4ರಲ್ಲಿ ಕಾವ್ಯ ಶಾಸ್ತ್ರಿ ಸ್ಪರ್ಧಿಯಾಗಿ ಗಮನ ಸೆಳೆದರು. ಭುವನ್, ರೇಖಾ, ಕಾರುಣ್ಯ, ನಿರಂಜನ್ ದೇಶಪಾಂಡೆ, ಶಾಲಿನಿ ಕೂಡ ಈ ಸೀಸನ್‌ನಲ್ಲಿ ಇದ್ದರು. ಶುಭವಿವಾಹ, ರಾಧಿಕಾ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಮತ್ತು ಹಲವು ಸಿನಿಮಾಗಳಲ್ಲಿ ಕಾವ್ಯ ನಟಿಸಿದ್ದಾರೆ.