Asianet Suvarna News Asianet Suvarna News

77 ದಿನಗಳಿಂದ ರಾಕೇಶ್- ಅಮೂಲ್ಯ ನಡುವೆ ಏನಾಗುತ್ತಿದೆ; ಕಾಲೆಳೆದ ಗುರೂಜೀ ಖಡಕ್ ಉತ್ತರ ಕೊಟ್ಟ ರೂಪಿ

ಬಿಬಿ ಮನೆಯಲ್ಲಿ ಬೆಂಕಿ ಹಚ್ಚಿಸಿದ ಗುರೂಜೀ. ರಾಕೇಶ್ ಅಡಿಗ ಮತ್ತು ಅಮೂಲ್ಯ ಪರ ನಿಂತ ರೂಪೇಶ್ ಶೆಟ್ಟಿ...

Ayravardhan guruji creates fight with Rakesh adiga Amulya in Bigg boss 9 vcs
Author
First Published Dec 13, 2022, 1:06 PM IST

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ರಿಯಾಲಿಟಿ ಶೋ 77ನೇ ದಿನಕ್ಕೆ ಕಾಲಿಟ್ಟು ಫಿನಾಲೆ ದಿನಕ್ಕೆ ಕೇವಲ 3 ವಾರ ಉಳಿದಿದೆ. ಮನೆಯಲ್ಲಿ ಕೇವಲ 9 ಸ್ಪರ್ಧಿಗಳು ಉಳಿದಿದ್ದಾರೆ. ಪ್ರಶಾಂತ್ ಸಂಬರಗಿ ಹೊರ ಬಂದ ಮೇಲೆ ಬಿಬಿ ಮನೆ ಸಿಕ್ಕಾಪಟ್ಟೆ ಸೈಲೆಂಟ್ ಆಗಿದೆ ಎಂದು ವೀಕ್ಷಕರು ಕಾಮೆಂಟ್ ಮಾಡುತ್ತಿದ್ದಂತೆ ಆರ್ಯವರ್ಧನ್ ಗುರೂಜಿ ಬೆಂಕಿ ಹಚ್ಚಿದ್ದಾರೆ. ಕೋಪ ಮಾಡಿಕೊಳ್ಳ ಬಾರದು ಸೈಲೆಂಟ್ ಆಗಿರಬೇಕು ಎಂದು ಸುಮ್ಮನಿದ್ದ ಅಮೂಲ್ಯ ಕಾಲೆಳೆದ ಆರ್ಯರ್ಧನ್ ಗುರೂಜಿ....

ಲೀವಿಂಗ್ ಏರಿಯಾದಲ್ಲಿ ಅಮೂಲ್ಯ ಗೌಡ ಮತ್ತು ರಾಕೇಶ್ ಪರಸ್ಪರ ಕುಳಿತುಕೊಂಡು ಚರ್ಚೆ ಮಾಡುವಾಗ ಪಕ್ಕದಲ್ಲಿದ್ದ ಆರ್ಯವರ್ಧನ್ ಪ್ರಶ್ನೆ ಮಾಡುತ್ತಾರೆ. '77 ದಿನವಾಗಿದೆ ನಿಮ್ಮಿಬ್ಬರು ಸಿಕ್ಕಾಪಟ್ಟೆ ಮಾತನಾಡುತ್ತಾ ಇರುತ್ತೀರಾ ಏನು ಅಂಥದ್ದು ಬೊಟ್ಟಿದ್ದೀರಾ ಅಂತ ಮಾತನಾಡುತ್ತೀರಾ' ಎಂದು ಪ್ರಶ್ನೆ ಮಾಡಿದ್ದಾರೆ.  ತಕ್ಷಣವೇ ರಾಕೇಶ್ ಮತ್ತು ಅಮೂಲ್ಯ ಕೋಪ ಮಾಡಿಕೊಳ್ಳುತ್ತಾರೆ. 'ಯಾರಾದ್ರೂ ಏನಾದರೂ ಅಂದರೆ ತಲೆ ಕೆಡಿಸಿಕೊಳ್ಳದೆ ಹೇಗೆ ಬದುಕುವುದು' ಎಂದು ರಾಕೇಶ್ ಕೂಲ್ ಆಗಿ ಉತ್ತರಿಸಿದ್ದಾರೆ. ಆದರೆ ಸುಮ್ಮನಿರದ ಅಮೂಲಕ ಟಾಂಗ್ ಕೊಡುತ್ತಾರೆ. 

'ನೀವು ನಾಳೆಯಿಂದ ಯಾಕೆ ನಮ್ಮ ಜೊತೆಗೆ ಒಂದು ಕುಳಿತುಕೊಂಡು ಮಾತನಾಡಬಾರದು? ಈ ಥರದ್ದೆಲ್ಲಾ ಬೇಕಾದರೆ ರಾಕಿ ಹತ್ರ ಕೇಳಿ. ನನ್ನ ಮುಂದೆ ಮಾತ್ರ ಕೇಳಬೇಡಿ ಗುರುಗಳೇ. ಈ ಥರ ಆಲೋಚನೆ ಇರುವವರ ಬಳಿ ನಂಗೆ ಮಾತನಾಡೋದಕ್ಕೂ ಇಷ್ಟವಿಲ್ಲ'ಎಂದಿದ್ದಾರೆ. ಆದರೂ ಸುಮ್ಮನಾಗದ ಆರ್ಯವರ್ಧನ್ 'ಇವರೊಬ್ಬರ ಹತ್ರಾನೇ  ಮೀಟಿಂಗ್ ನಡೆಯುತ್ತೆ. ಬೇರೆ ಯಾರು ಹತ್ರಾನು ಮೀಟಿಂಗ್ ಆಗಲ್ಲ. ಒಂದು ಪಿಕ್ಚರ್ ಬಗ್ಗೆ ಯಾರಾದರೂ ಸಖತ್ತಾಗಿದೆ, ಸೂಪರ್ ಆಗಿದೆ ಎಂದರೆ ಹೋಗಬಹುದು. ಆದೇ ಆ ಸಿನಿಮಾಗೆ ಯಾರಾದರೂ ಟಿಕೆಟ್‌ ತೆಗೆದುಕೊಂಡು ಕೂರುತ್ತಾರಾ? ಇರುವ ವಿಚಾರವನ್ನು ನೇರವಾಗಿ ಕೇಳಿದೆ. ಇದು ನಿಮ್ಮ ಹುಟ್ಟುಗುಣ' ಎಂದಿದ್ದಾರೆ.

Ayravardhan guruji creates fight with Rakesh adiga Amulya in Bigg boss 9 vcs

ಆರ್ಯವರ್ಧನ್ ಹೇಳುತ್ತಿರುವ ಮಾತಿನಲ್ಲಿ ಅರ್ಥವಿಲ್ಲ ಎಂದು ರೂಪೇಶ್ ಶೆಟ್ಟಿ ಎಷ್ಟು ಸಲ ಹೇಳುತ್ತಿದ್ದರೂ ಯಾರ ಮಾತು ಕೇಳಿಸಿಕೊಳ್ಳಲಿಲ್ಲ. ಕೊನೆಗೆ ರೂಪೇಶ್ ಶೆಟ್ಟಿ ಎಂಟ್ರಿ ಕೊಟ್ಟು ಅರ್ಯವರ್ಧನ್ ಬಾಯಿ ಮುಚ್ಚಿಸಿದ್ದಾರೆ. 'ಅಲ್ಲ ಗುರುಗಳೇ ನಾವು ಮಾತನಾಡುತ್ತೀವಿ. ಅದನ್ನು ತಪ್ಪು ಅನ್ನೋದಕ್ಕೆ ಆಗುತ್ತಾ' ಎಂದು ಕೇಳಿದ್ದಾರೆ. 'ನಿಮ್ಮನ್ನು ಮಧ್ಯದಲ್ಲಿ ಬನ್ನಿ ಎಂದ್ನಾ'ಎಂದು ರೂಪಿ ಬಾಯಿ ಮುಚ್ಚಿಸುತ್ತಾರೆ. ಒಟ್ಟಿನಲ್ಲಿ ಪ್ರಶಾಂತ್ ಸಂಬರಗಿ ಸ್ಥಾನವನ್ನು ಆರ್ಯವರ್ಧನ್ ಸ್ವೀಕರಿಸಲಿದ್ದಾರೆ.

ಬೆಂಗಳೂರು ಬಿಡುತ್ತಾರಾ ಅಮೂಲ್ಯ?

ರಾಕೇಶ್ ಅಡಿ ಮತ್ತು ಅಮೂಲ್ಯ ಗೌಡರನ್ನು ನ್ಯೂ ಲವ್ ಬರ್ಡ್ಸ್‌ ಎಂದು ರೇಗಿಸುತ್ತಿದ್ದಾರೆ. ಶೋ ಆರಂಭದಿಂದಲ್ಲೂ ಫ್ಯಾಮಿಲಿ ಬಗ್ಗೆ ಮಾತನಾಡುವ ಅಮೂಲ್ಯ ಅಣ್ಣ ಮತ್ತು ತಂದೆ ಥ್ಯಾಂಕ್ಸ್‌... 

BBK9 ನಾನು Contestant ಅಲ್ಲ ಅಮೂಲ್ಯ..ಅಮೂಲ್ಯ; ಅವಾಜ್‌ಗೆ ತಕ್ಕ ಬುದ್ಧಿ ಹೇಳಿದ ಕಿಚ್ಚ ಸುದೀಪ್

'ತಂದೆ ಮತ್ತು ಅಣ್ಣ ಎಷ್ಟು ನೋವು ಬೇಕಿದ್ದರೂ ತೆಗೆದುಕೊಳ್ಳುತ್ತಾರೆ ಆದರೆ ನನಗೆ ನೋವು ಗೊತ್ತಾಗ ಬಾರದು ಎಂದು ನೋಡಿಕೊಂಡರು. ಯಾಕೆ ಈ ರೀತಿ ಅಂತ ಗೊತ್ತಿಲ್ಲ..ಆದರೆ ನಾನು ಇವತ್ತು ತುಂಬಾನೇ ಲಕ್ಕಿ. ಈ ಕ್ಷಣನೂ ನನಗೆ ನೋವು ಗೊತ್ತಾಗಬಾರದು ಎಂದು ನೋಡಿಕೊಳ್ಳುತ್ತಿದ್ದಾರೆ. ಅಮ್ಮ ತೀರ್ಕೊಂಡಿರುತ್ತಾರೆ ನಾನು ಬೆಂಗಳೂರಿಗೆ ಬರ್ತೀನಿ ಸೀರಿಯಲ್ ಮಾಡ್ತೀನಿ ಅಪ್ಪ ಅಣ್ಣ ಮೈಸೂರಿನಲ್ಲಿ ಇರುತ್ತಾರೆ. ಒಂದು ಸಂದರ್ಭ ಬರುತ್ತೆ...ನಾನು ಮೈಸೂರಿಗೆ ಹೋಗಬೇಕು ಏಕೆಂದರೆ ಅಣ್ಣನಿಗೆ ಬೆಂಗಳೂರಿನ ಕೆಲಸ ಫಿಕ್ಸ್‌ ಆಗುತ್ತೆ. ನಾನು ಮೈಸೂರಿಗೆ ಹೋದರೆ ನನ್ನ ಕೆಲಸ ಹೋಗುತ್ತೆ ಅವನು ಬೆಂಗಳೂರಿಗೆ ಬರಬೇಕು ಅನ್ನೋ ಆಸೆ ತುಂಬಾ ಇತ್ತು. ತಾಯಿ ಹೋದ ನಂತರ ಮನೆ ಜವಾಬ್ದಾರಿ ಹೆಣ್ಣು ಮಗಳ ಕೈ ಸೇರುತ್ತದೆ ಆಗ ಅಣ್ಣ ಕಾಲ್ ಮಾಡಿ ಸಂಪೂರ್ಣ ವಿವರ ಕೊಡುತ್ತಾನೆ ನಾನು ಸರಿ ನನಗೆ ಆಯ್ಕೆ ಇಲ್ಲ ಮೈಸೂರಿಗೆ ಬರ್ತೀನಿ ಅಂತ ಹೇಳುತ್ತೀನಿ.' ಅಮೂಲ್ಯ ಮಾತನಾಡಿದ್ದಾರೆ.

'ಒಂದು ದಿನ ಅಣ್ಣ ಸಂಜೆ ಬೆಂಗಳೂರಿಗೆ ಬರ್ತಾನೆ ಅಂದು ರಾತ್ರಿ ನಾನು ಮೈಸೂರಿಗೆ ಹೊರಡಬೇಕಿತ್ತು...ಎಂದೂ ಅಣ್ಣನಿಗೆ ಥ್ಯಾಂಕ್ಸ್‌ ಹೇಳಿರಲಿಲ್ಲ ಈ ಬಿಗ್ ಬಾಸ್ ವೇದಿಕೆ ಮೂಲಕ ಹೇಳುತ್ತೀನಿ ಜೀವನದಲ್ಲಿ ಈ ಮಟ್ಟಕ್ಕೆ ಬಂದಿದ್ದೀನಿ ಅಂದ್ರೆ ಅದಕ್ಕೆ ಮೂರ್ನಾಲ್ಕು ಜನ ಕಾರಣ ಅದರಲ್ಲಿ ನೀನು ಒಬ್ಬ. ಅಂದು ರಾತ್ರಿ ಅಣ್ಣ ಬೆಂಗಳೂರಿಗೆ ಬರುವುದಿಲ್ಲ...ಕರೆ ಮಾಡಿ ನಾನು ಮೈಸೂರಿನಲ್ಲಿ ಕೆಲಸ ಹುಡುಕಿ ಅಲೇ ಜೀವನ ಕಟ್ಟಿಕೊಳ್ಳುತ್ತೇನೆ ನಿನಗೆ ತೊಂದರೆ ಆಗುವುದು ಬೇಡ ಎನ್ನುತ್ತಾನೆ. ಬೇರೆ ಅವರ ಜೀವನದಲ್ಲಿ ಈ ರೀತಿ ನಡೆದಿದ್ಯಾ ಅಂತ ನನಗೆ ಗೊತ್ತಿಲ್ಲ..ಅಣ್ಣ ಮತ್ತು ತಂದೆ ಪ್ರತಿ ಸಲವೂ ನನಗೋಸ್ಕರ ಅವರ ಕೆಲವ ಅವರ ಜೀವನದ ಮುಖ್ಯ ಗಳಿಗೆಗಳನ್ನು ಬಿಟ್ಟು ಕೊಡುತ್ತಿದ್ದರು. ಜೀವನದಲ್ಲಿ ಕಷ್ಟ ಅನುಭವಿಸಲು ಬಿಡಲಿಲ್ಲ. ತಂದೆ 60 ವರ್ಷದ ಮೇಲೆ ಆಗಿದೆ  ಇವತ್ತಿಗೂ ನಾನು ಅವರಿಗೆ ಕರೆ ಮಾಡಿದ್ದರೆ ಎಷ್ಟೇ ನೋವಿದ್ದರೂ ವಾಯ್ಸ್‌ ಬದಲಾಯಿಸಿಕೊಂಡು ಮಾತನಾಡುತ್ತಾರೆ ಏಕೆಂದರೆ ನನ್ನ ವಾಯ್ಸ್‌ ಹೇಗಿದೆ ಎಂದು ತಿಳಿದುಕೊಳ್ಳುತ್ತಾರೆ ಸಮಸ್ಯೆ ಅನಿಸಿದ್ದರೆ ಇರು ಇರು ಬೆಂಗಳೂರಿಗೆ ಬರುತ್ತೀನಿ ಅಂತಾರೆ. ಅಷ್ಟು ಕೇರ್ ಮಾಡ್ತಾರೆ ನನ್ನ ಫ್ಯಾಮಿಲಿ ಅವರು' ಎಂದು ಹೇಳಿದ್ದಾರೆ.

Follow Us:
Download App:
  • android
  • ios