ಸೀರಿಯಲ್‌ನಲ್ಲಿ ನಟಿಸೋ ಆಸೆ ಇದ್ಯಾ? ಇಲ್ಲಿದೆ ನೋಡಿ ಒಳ್ಳೇ ಅವಕಾಶ, ಟ್ರೈ ಮಾಡಿ
ಕಲಾವಿದ, ಕಲಾವಿದೆಯಾಗುವ ಕನಸು ಕಾಣ್ತಿದ್ದರೆ ಅದನ್ನು ನನಸಾಗಿಸಿಕೊಳ್ಳಲು ಇಲ್ಲೊಂದು ಅವಕಾಶವಿದೆ. ನೀವು ಭಕ್ತಿಪ್ರಧಾನ ಸೀರಿಯಲ್ ನಲ್ಲಿ ಪಾತ್ರಕ್ಕೆ ಜೀವ ತುಂಬಿ, ಲಕ್ಷಾಂತರ ಕನ್ನಡಾಭಿಮಾನಿಗಳ ಮನಸ್ಸು ಕದಿಯಬಹುದು. ಆಡಿಷನ್ ಫುಲ್ ಡಿಟೇಲ್ ಇಲ್ಲಿದೆ.
ಸಿನಿಮಾ (Film), ಧಾರಾವಾಹಿ (serial)ಯಲ್ಲಿ ನಟಿಸಬೇಕೆಂಬ ಕನಸನ್ನು ಅನೇಕರು ಹೊಂದಿದ್ದಾರೆ. ಇದಕ್ಕೆ ನಿರಂತರ ಪ್ರಯತ್ನ ನಡೆಸುವವರ ಸಂಖ್ಯೆ ಸಾಕಷ್ಟಿದೆ. ಕರ್ನಾಟಕದ ಮೂಲೆ ಮೂಲೆಯಲ್ಲಿ ಅದ್ಭುತ ಕಲಾವಿದರಿದ್ದು, ಅವರಿಗೆ ಸೂಕ್ತ ಅವಕಾಶ ಸಿಗ್ತಿಲ್ಲ ಎನ್ನುವ ಕೂಗೂ ಇದೆ. ಅಷ್ಟೇ ಅಲ್ಲ, ಸೀರಿಯಲ್ ಗೆ ಆಡಿಷನ್ (audition) ಎಲ್ಲಿ ನಡೆಯುತ್ತೆ, ಯಾವಾಗ ಕಲಾವಿದರ ಆಯ್ಕೆ ಆಗುತ್ತೆ ಎಂಬುದೇ ಅನೇಕರಿಗೆ ತಿಳಿದಿರೋದಿಲ್ಲ. ನೀವೂ ನಟ- ನಟಿಯಾಗ್ಬೇಕು, ಕಿರುತೆರೆ ಮೇಲೆ ಮಿಂಚಬೇಕು, ಸೀರಿಯಲ್ ಮೂಲಕ ಪ್ರತಿ ಮನೆಗೆ ಪ್ರತಿ ದಿನ ಬರ್ಬೇಕು ಅಂದ್ರೆ ನಿಮಗೊಂದು ಸುವರ್ಣಾವಕಾಶವಿದೆ. ಜೀ ಕನ್ನಡ, ಕನ್ನಡ ಬಲ್ಲ ಕಲಾವಿದರಿಗೆ ಅವಕಾಶ ನೀಡ್ತಿದೆ. ಹೊಸ ಧಾರಾವಾಹಿಯಲ್ಲಿ ನೀವು ನಟಿಸಬಹುದು. ಯಾವ ಧಾರವಾಹಿ, ಯಾವ ವಾಹಿನಿ ಸೇರಿದಂತೆ ಏನೆಲ್ಲ ಮಾನದಂಡ ಅಗತ್ಯ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಜೀ ಕನ್ನಡದಲ್ಲಿ (Zee Kannada) ನಟ – ನಟಿಯರಿಗೆ ಆಹ್ವಾನ : ಕನ್ನಡದ ಪ್ರಸಿದ್ಧ ಚಾನೆಲ್ ಗಳಲ್ಲಿ ಒಂದಾದ ಜೀ ಕನ್ನಡ ಇಂಟರ್ಟೈನ್ಮೆಂಟ್ ನಟ – ನಟಿಯರು ಬೇಕಾಗಿದ್ದಾರೆ ಎಂಬ ಪೋಸ್ಟ್ ಒಂದನ್ನು ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಮಹಾಲಕ್ಷ್ಮಿ ಗ್ಲಾಸ್ ಹಿಂದಿದೆ ಈ ಕಥೆ, ಹಿತ್ತಾಳೆ ಕಿವಿ ವೈಷ್ಣವ್ ಮೇಲೆ ಕೆಂಡ ಕಾರಿದ ವೀಕ್ಷಕರು
ಯಾವ ಧಾರವಾಹಿ : ಜೀ ಕನ್ನಡದಲ್ಲಿ ಶ್ರೀ ರಾಘವೇಂದ್ರ ಮಹಿಮೆ (Sri Raghavendra Mahime) ಎಂಬ ಹೊಸ ಧಾರಾವಾಹಿ ಬರ್ತಿದೆ. ಅದ್ರ ಶೂಟಿಂಗ್ ಶೀಘ್ರದಲ್ಲೇ ಶುರುವಾಗಲಿದೆ. ಅದಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದೆ.
ಅರ್ಹತೆ : ಜೀ ಕನ್ನಡ ತನ್ನ ಹೊಸ ಸೀರಿಯಲ್ ಶ್ರೀ ರಾಘವೇಂದ್ರ ಮಹಿಮೆಗೆ 18 -40 ವರ್ಷದೊಳಗಿನ ಕಲಾವಿದರಿಗೆ ಆದ್ಯತೆ ನೀಡ್ತಿದೆ. ನಟನೆ ಬಲ್ಲವರು ಇಲ್ಲಿ ಅವಕಾಶ ಪಡೆಯಲಿದ್ದಾರೆ. ಸ್ಪಷ್ಟವಾಗಿ ಕನ್ನಡ ಮಾತನಾಡಬಲ್ಲ ಕಲಾವಿದರನ್ನು ಆಯ್ಕೆ ಮಾಡಲಾಗುವುದು. ವಿಶೇಷವಾಗಿ ರಾಘವೇಂದ್ರ ಸ್ವಾಮಿ ಪಾತ್ರಕ್ಕೆ ಮೊದಲ ಆದ್ಯತೆ ಎಂದು ವಾಹಿನಿ ಹೇಳಿದೆ.
ಎಲ್ಲಿ ನಡೆಯಲಿದೆ ಆಡಿಷನ್ : ಡಿಸೆಂಬರ್ 7ರಂದು ಶನಿವಾರ ಆಡಿಷನ್ ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಆಡಿಷನ್ ಶುರುವಾಗಲಿದೆ. ಆಸಕ್ತ ಕಲಾವಿದರು, ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿರುವ ಕಂಠೀರವ ಸ್ಟುಡಿಯೋ (Kanteerava Studio)ಕ್ಕೆ ಬರಬೇಕು. ತಮ್ಮ ಜೊತೆ ಫೋಟೋ ತರುವಂತೆ ವಾಹಿನಿ ಸೂಚನೆ ನೀಡಿದೆ. ಹೆಚ್ಚಿನ ಮಾಹಿತಿಗಾಗಿ 9513888050 ನಂಬರ್‌ಗೆ ವಾಟ್ಸಾಪ್ ಮಾಡಬಹುದು.
'ಹುಡುಗರು' ಮಾಡುವವರೆಗೂ ಪುನೀತ್ ರಾಜ್‌ಕುಮಾರ್ ಬಗ್ಗೆ ಬೇರೆನೇ ಅಭಿಪ್ರಾಯ ಇತ್ತು: ಶ್ರೀನಗರ ಕಿಟ್ಟಿ
ಇನ್ಸ್ಟಾಗ್ರಾಮ್ ಈ ಪೋಸ್ಟ್ ಗೆ ಸಾಕಷ್ಟು ಕಮೆಂಟ್ ಬಂದಿದೆ. ಬಡ ಮಕ್ಕಳಿಗೆ ಚಾನ್ಸ್ ನೀಡುವಂತೆ ಬಳಕೆದಾರರು ವಿನಂತಿಸಿಕೊಂಡಿದ್ದಾರೆ. ಟಿಆರ್ಪಿಗಾಗಿ ನಿಮ್ಮ ಮನಸ್ಸಿಗೆ ಬಂದಂತೆ ರಾಯರ ಕಥೆಯನ್ನು ಹೇಳಬೇಡಿ. ಸತ್ಯ ಕಥೆಯನ್ನು ವೀಕ್ಷಕರಿಗೆ ತೋರಿಸಿ ಎಂದು ಜನರು ಸಲಹೆ ನೀಡಿದ್ದಾರೆ. ಜೀ ಕನ್ನಡ ಈಗಾಗಲೇ ಅತೀ ಶೀಘ್ರದಲ್ಲಿ ಅಂತ ಸೀರಿಯಲ್ ಪ್ರೋಮೋ ಪ್ರಸಾರ ಮಾಡ್ತಿದೆ. ಹಾಗಾಗಿ ರಾಘವೇಂದ್ರ ಸ್ವಾಮಿ ಭಕ್ತರು, ಆದಷ್ಟು ಬೇಗ ಸೀರಿಯಲ್ ಬರುತ್ತೆ ಎನ್ನುವ ನಿರೀಕ್ಷೆಯಲ್ಲಿದ್ರು. ಆದ್ರೆ ಈಗ ಆಡಿಷನ್ ಶುರುವಾಗ್ತಿದೆ ಎಂಬುದನ್ನು ಕೇಳಿ ಅವರಿಗೆ ನಿರಾಸೆಯಾಗಿದೆ. ಆಡಿಷನ್ ನಡೆದು, ಶೂಟಿಂಗ್ ಮುಗಿದು ಸೀರಿಯಲ್ ಬರೋರು 2026ಕ್ಕೆ ಎಂದು ಬೇಸರ ವ್ಯಕ್ತಪಡಿಸ್ತಿದ್ದಾರೆ. ಅದೇನೇ ಇರಲಿ, ನಿಮಗೆ ನಟನೆ ಬರುತ್ತೆ, ಸೀರಿಯಲ್ ಮಾಡಲು ಆಸಕ್ತಿ ಇದೆ ಅಂದ್ರೆ ಒಂದು ಟ್ರೈ ಮಾಡಿ, ಆಡಿಷನ್ ನೀಡಿ. ಆಲ್ ದಿ ಬೆಸ್ಟ್.