Asianet Suvarna News Asianet Suvarna News

ಸೀರಿಯಲ್​ ನಟಿಯರ ಥರ ಅತ್ತು ತೋರಿಸ್ರಿ ಎಂದ್ರೆ ಈ ಪರಿ ಕಣ್ಣೀರು ಹಾಕೋದಾ? ನಕ್ಕು ನಕ್ಕು ಸುಸ್ತಾದ ಜನ

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್​ ನಾಯಕಿ ಸುಮನಾ ರೀತಿ ಅತ್ತು ತೋರಿಸಿ ಎಂದ್ರೆ ಪ್ರೇಕ್ಷಕರು ಹೇಗೆಲ್ಲಾ ಅತ್ತರು ಗೊತ್ತಾ?
 

audience responded to the crying scene of Kendasampige serial heroine Sumana suc
Author
First Published Feb 24, 2024, 4:45 PM IST

ಧಾರಾವಾಹಿಯೇ ಆಗಿರಲಿ ಅಥವಾ ಸಿನಿಮಾವೇ ಆಗಿರಲಿ ಅಲ್ಲಿ ಅಳುವ ದೃಶ್ಯ ಬಂದಾಗ ಬಹುತೇಕ ಎಲ್ಲ ನಟ-ನಟಿಯರು ಗ್ಲಿಸರಿನ್​ ಬಳಸುತ್ತಾರೆ. ಕೆಲವೇ ಕೆಲವರು ಮಾತ್ರ ನೈಜತೆಯಲ್ಲಿ ದೃಶ್ಯಕ್ಕೆ ತಕ್ಕನಾಗೆ ಕಣ್ಣೀರು ಹಾಕುವುದು ಉಂಟು. ಈಚಿನ ಧಾರಾವಾಹಿಗಳಲ್ಲಿ ಅಳುವ ಪಾತ್ರ ಮಾಮೂಲು. ಏಕೆಂದರೆ ಸೀರಿಯಲ್​ಗಳಲ್ಲಿ ಹೆಚ್ಚಾಗಿ ಅತೀ ಒಳ್ಳೆಯವರು ಎನಿಸಿಕೊಂಡವರು ಒಬ್ಬಾಕೆ, ಅತಿ ಕೆಟ್ಟವಳು ಎನಿಸಿಕೊಂಡಾಕೆ ಇನ್ನೊಬ್ಬಳು ಇರುವ ಕಾರಣ, ಒಳ್ಳೆಯವಳು ಸದಾ ಕಣ್ಣೀರು ಹಾಕುವುದು ಇದ್ದೇ ಇದೆ. ಆ ಸಮಯದಲ್ಲಿ ನಟಿಯರು ಕಣ್ಣೀರು ಹಾಕುವಾಗ ಗ್ಲಿಸರಿನ್​ ಬಳಸುತ್ತಾರೆ. ಆದರೆ ಅವರ ಕಣ್ಣೀರನ್ನು ನೋಡಿ ಅದೆಷ್ಟೋ ಪ್ರೇಕ್ಷಕರು ತಮಗೇ ಏನೋ ಕೆಟ್ಟದ್ದು ಆಗಿದೆ ಎಂದ ಹಾಗೆ ನಿಜವಾಗಿ ಕಣ್ಣೀರು ಸುರಿಸುವುದು ಉಂಟು. ಸಿನಿಮಾ ಮತ್ತು ಸೀರಿಯಲ್​ಗಳನ್ನು ನೋಡುವಾಗ ಕಣ್ಣೀರು ಹಾಕುವ ದೊಡ್ಡ ವರ್ಗವೇ ಇದೆ. ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರಿಗೆ ಕಣ್ಣೀರು ಎನ್ನುವುದು ಸಾಮಾನ್ಯ. 

ಆದರೆ ನಾಯಕಿಯಂತೆ ಕಣ್ಣೀರು ಹಾಕುವ ಚಾಲೆಂಜ್​ ಕೊಟ್ಟರೆ? ಇಂಥದ್ದೇ ಒಂದು ಚಾಲೆಂಜ್​ ಸ್ವೀಕರಿಸಿದರು ಹೊಸಪೇಟೆಯ ಮಂದಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಕೆಂಡಸಂಪಿಗೆ ಸೀರಿಯಲ್​ ಸಂತೆ ಹೊಸಪೇಟೆಯಲ್ಲಿ ನಡೆದಿದ್ದು, ಅದರಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅದರಲ್ಲಿ ನಾಯಕಿ ಸುಮನಾಳಂತೆ ಯಾರು ಕಣ್ಣೀರು ಹಾಕುತ್ತೀರಿ ಎನ್ನುವ ಪ್ರಶ್ನೆ ಎದುರಾಯಿತು. ಇದಕ್ಕಾಗಿ ಕೆಲವರು ಅತ್ತು ತೋರಿಸಿದರೆ ಉಳಿದವರು ನಕ್ಕೂ ನಕ್ಕೂ ಸುಸ್ತಾದರು. 

ಮದ್ವೆಯಾಗ್ತೇನಂತ ಪ್ರತಾಪ್​ ಬಳಿ ಹೊಸಪೇಟೆ ಯುವತಿಯರು! ನಾಚಿ ನೀರಾದ ಡ್ರೋನ್​ ಮಾಡಿದ್ದೇನು ನೋಡಿ...

ಅದರಲ್ಲಿಯೂ ಒಬ್ಬ ಮಹಿಳೆ ಅಂತೂ ಯಾವುದೇ ಹೀರೋಯಿನ್​ನನ್ನು ಮೀರಿಸುವಂತೆ ಅತ್ತು ತೋರಿಸಿದರೆ, ಅಲ್ಲಿದ್ದವರು ಬಿದ್ದೂ ಬಿದ್ದೂ ನಕ್ಕರು. ಮಹಿಳೆ ತಮ್ಮದೇ ಆದ ಕೆಲವು ಡೈಲಾಗ್​ ಹೇಳುವ ಮೂಲಕ ಅಳುವಿನ ಸೀನ್​ ಕ್ರಿಯೇಟ್​ ಮಾಡಿ ಉಳಿದವರನ್ನು ನಗಿಸಿದ್ದಾರೆ. ಅಳುವಿನಲ್ಲೂ ಸುಮನಾಗೆ ಅಭಿಮಾನ ತೋರಿದ ಹೊಸಪೇಟೆ ಮಂದಿ ಎಂಬ ಶೀರ್ಷಿಕೆ ಜೊತೆ ಈ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿದರೆ ಎಂಥವರಿಗೂ ನಗು ಬರುವುದು ಸಹಜ. 

ಅಂದಹಾಗೆ ಈ ಸೀರಿಯಲ್​ ವಿಷಯಕ್ಕೆ ಬರುವುದಾದರೆ, ಶ್ರೀದೇವಿ ಕಾಲೋನಿಯ ಕಾರ್ಪೊರೇಟರ್ ತೀರ್ಥಂಕರ್ ಪ್ರಸಾದ್ ಸ್ವಾರ್ಥ ರಾಜಕಾರಣಿ. ತನ್ನ ಲಾಭಕ್ಕಾಗಿ ಯಾರನ್ನ ಬಳಸಿಕೊಳ್ಳೋದಕ್ಕೂ ತೀರ್ಥಂಕರ್ ಪ್ರಸಾದ್ ಹಿಂದೆ ಮುಂದೆ ನೋಡಲ್ಲ. ಹತ್ತಿದ ಏಣಿಯನ್ನ ಒದೆಯೋಕೂ ತೀರ್ಥಂಕರ್ ಪ್ರಸಾದ್‌ ಹೇಸಲ್ಲ. ಎಲೆಕ್ಷನ್‌ನಲ್ಲಿ ಗೆಲುವು ಸಾಧಿಸಲು, ಶ್ರೀದೇವಿ ಕಾಲೋನಿಯ ವೋಟ್ ಬ್ಯಾಂಕ್ ಸೆಳೆಯಲು ಹೂವು ಮಾರುವ ಹುಡುಗಿ ಸುಮನಾ ಕೊರಳಿಗೆ ತೀರ್ಥಂಕರ್ ಪ್ರಸಾದ್ ತಾಳಿ ಕಟ್ಟುತ್ತಾನೆ. ಇಲ್ಲಿಂದ ಶುರುವಾದ ಸೀರಿಯಲ್​ ಈಗ ಎರಡು ವರ್ಷ ಸಮೀಪಿಸುತ್ತಿದೆ. 2022ರ ಆಗಸ್ಟ್​ನಿಂದ ಈ ಧಾರಾವಾಹಿ ಶುರುವಾಗಿದ್ದು, ಅದರ ಹಬ್ಬವನ್ನು ಹೊಸಪೇಟೆಯಲ್ಲಿ ಆಚರಿಸಲಾಗುತ್ತಿದೆ. ಇದರಲ್ಲಿ ಬಿಗ್​ಬಾಸ್​ ಸ್ಪರ್ಧಿಗಳೂ ಭಾಗವಹಿಸಿ ಒಂದಿಷ್ಟು ಮನರಂಜನೆ ನೀಡಿದ್ದಾರೆ. 

ಛೀ ಹೀಗೆಲ್ಲಾ ಹೇಳ್ಬೇಡಿಯಪ್ಪ... ನಾಚಿಕೆ ಆಗತ್ತೆ ಎಂದ 'ಕೆಂಡಸಂಪಿಗೆ' ತೀರ್ಥಂಕರ: ನೇರಪ್ರಸಾರದಲ್ಲಿ ನಟ

Follow Us:
Download App:
  • android
  • ios