ಅಮೃತಧಾರೆಯ ಭೂಮಿ ಪದೇ ಪದೇ ಎಡವ್ತಾ ಇರೋದ್ಯಾಕೆ? ಸ್ಟ್ರಾಂಗ್ ಪಾತ್ರಕ್ಕೆ ಇದೆಲ್ಲ ಬೇಕಾ?

ಸೀರಿಯಲ್ಲಿನಲ್ಲಿ ನಾಯಕಿ ಪಾತ್ರ ಎಷ್ಟೇ ಸ್ಟ್ರಾಂಗ್ ಆಗಿದ್ರೂ ಕೆಲವೊಂದು ಸಿಲ್ಲಿ ಸಂಗತಿಗಳನ್ನು ತಂದು ಆ ಪಾತ್ರಗಳ ತೂಕ ಕಡಿಮೆ ಮಾಡ್ತಾರೆ. ಅಮೃತಧಾರೆಯ (Amruthadhare serial) ಭೂಮಿ ಪಾತ್ರ ಪದೇ ಪದೇ ಎಡವ್ತಾ ಇರೋದು ಇದಕ್ಕೆ ಬೆಸ್ಟ್ ಎಕ್ಸಾಂಪಲ್.

 

audience hook to the couple of Gautam bhumika in amruthadhare serial bni

ಅಮೃತಧಾರೆ ಸೀರಿಯಲ್ (Amruthadhare Serial) ಜೀ ಕನ್ನಡ (Zee kannada) ವಾಹಿನಿಯಲ್ಲಿ ಪ್ರಸಾರ ಆರಂಭಿಸಿದ್ದು ಮೇ 29, 2023ರಿಂದ. ಈಗ ನೂರು ಎಪಿಸೋಡ್‌ಗಳನ್ನೂ ದಾಟಿ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಹಿಂದಿಯ 'ಬಡೆ ಅಚ್ಚೆ ಲಗ್ತಾ‌' ಧಾರಾವಾಹಿ ರೀಮೆಕ್ ಇದಾಗಿದ್ದು ಕನ್ನಡ ವೀಕ್ಷಕರ ಮನಗೆದ್ದಿದೆ. ರಾಜೇಶ್ ನಟರಂಗ ಹಾಗೂ ಛಾಯಾಸಿಂಗ್ ಅವರು ನಟನೆ ನೋಡಲು ಅವರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ಗೌತಮ್ ದಿವಾನ್ ಆಗಿ ರಾಜೇಶ್ ನಟರಂಗ, ಭೂಮಿಕಾ ಪಾತ್ರದಲ್ಲಿ ಛಾಯಾಸಿಂಗ್ ಅಭಿನಯಿಸಿದ್ದಾರೆ. ಸಿಹಿಕಹಿ ಚಂದ್ರು, ಅಮೃತ ನಾಯಕ್, ವನಿತಾ ವಾಸು, ಚೈತ್ರಾ ಶೆಣೈ, ಶಶಿ ಹೆಗ್ಡೆ ಹೀಗೆ ಹಲವಾರು ಕಲಾವಿದರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತಮ್ಮ ತಮ್ಮ ಕುಟುಂಬಕ್ಕಾಗಿ ಭೂಮಿಕಾ ಹಾಗೂ ಗೌತಮ್ ತಮ್ಮ ಬದುಕನ್ನೇ ತ್ಯಾಗ ಮಾಡುವುದೇ ಕಥೆಯ ವೈಶಿಷ್ಟ್ಯವಾಗಿದೆ.

ಪ್ರತಿದಿನ ಹೊಸ ಹೊಸ ತಿರುವು ಪಡೆಯುತ್ತಾ ಧಾರಾವಾಹಿ ತನ್ನದೇ ಆದ ಅಭಿಮಾನಿ ಬಳಗವನ್ನ ಸೃಷ್ಟಿ ಮಾಡಿಕೊಂಡಿದೆ. ಧಾರಾವಾಹಿಯನ್ನ ವೀಕ್ಷಕರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಕಥೆಯು ಕೂಡ ತುಂಬಾ ಚೆನ್ನಾಗಿ ಇದೆ ಎಂದು ಹೇಳುತ್ತಿದ್ದಾರೆ. ಅಮೃತಧಾರೆ ಧಾರಾವಾಹಿ ಪ್ರಸಾರವಾದ ದಿನದಿಂದಲೂ ವೀಕ್ಷಕರನ್ನು ಸೆಳೆಯುತ್ತಿದೆ. ಟಿ ಆರ್ ಪಿಯೂ ತೃಪ್ತಿಕರವಾಗಿದೆ.  

ಆದರೆ ಈ ಸೀರಿಯಲ್ಲಿನಲ್ಲಿ ಭೂಮಿಕಾ ಬಹಳ ಸ್ಟ್ರಾಂಗ್ ಪಾತ್ರ. ಈ ಪಾತ್ರದ ಕೆಲವು ಡೈಲಾಗ್‌ಗಳನ್ನು ವೀಕ್ಷಕರು ಎಷ್ಟು ಇಷ್ಟಪಟ್ಟಿದ್ದರು ಅಂದರೆ ಆ ಡೈಲಾಗ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಹಾಗೆ ನೋಡಿದರೆ ಈ ಸೀರಿಯಲ್ ಶುರುವಾಗೋ ಮುಂಚೆ ಈ ಸೀರಿಯಲ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ನೆಗೆಟಿವ್ ಫೀಡ್‌ಬ್ಯಾಕ್ ಓಡಾಡ್ತಿತ್ತು. ಜೊತೆ ಜೊತೆಯಲಿ ಸೀರಿಯಲ್ ಹಿಟ್ ಆಗಿದ್ದೇ ಆಗಿದ್ದು, ಜೀ ಕನ್ನಡದಲ್ಲಿ ಯಾವಾಗಲೂ ಅಂಕಲ್ ಆಂಟಿ ಲವ್‌ ಸ್ಟೋರಿ ಧಾರಾವಾಹಿ ಮಾಡ್ತಾರೆ ಎಂದು ಕೆಲವರು ಹೇಳಿದ್ದರು.  ಆದರೆ ಕಥೆ ಶುರುವಾದ ಮೇಲೆ ಪ್ರೇಕ್ಷಕರೇ ಫಿದಾ ಆಗಿದ್ದಾರೆ. ಇದೀಗ ಗೌತಮ್ ದಿವಾನ್ ಹಾಗೂ ಭೂಮಿಕಾ ಇಬ್ಬರ ನಟನೆಗೂ ಕೂಡ ಒಳ್ಳೆಯ ಅಂಕ ಸಿಗುತ್ತಿದೆ.

 ಭಾಗ್ಯಲಕ್ಷ್ಮೀ: ಮನೆಗೇ ನುಗ್ಗಿ ಮನೆಮಂದಿ ಮುಂದೆಯೇ ತಾಂಡವ್‌ ತಬ್ಬಿಕೊಂಡ ಶ್ರೇಷ್ಠಾ, ಮುಂದಿದೆಯಾ ಗ್ರಹಚಾರ?

ಆದರೆ ಈಗ ವೀಕ್ಷಕರಿಗೆ ಸಿಟ್ಟು ತರಿಸ್ತಿರೋದು ಸ್ಕ್ರೀನ್ ಪ್ಲೇ. ಪದೇ ಪದೇ ಭೂಮಿಕಾ ಎಡವೋದು, ಗೌತಮ್ ಹಿಡ್ಕೊಳ್ಳೋದನ್ನೇ ತೋರಿಸ್ತಿದ್ದಾರೆ. ಇವರಿಬ್ಬರ ನಡುವೆ ರೊಮ್ಯಾನ್ಸ್ ಅಂದರೆ ಭೂಮಿಕಾ ಎಡವೋದು, ಗೌತಮ್ ಹಿಡ್ಕೊಳ್ಳೋದು ಅನ್ನೋ ಲೆವೆಲ್‌ಗೆ ಇದೆ. ಕೆಲವೊಮ್ಮೆ ಎಡವೋದು ಅನ್ನೋದು ವ್ಯಕ್ತಿತ್ವ ದೋಷವನ್ನು ತೋರಿಸುತ್ತೆ. ಒಮ್ಮೆ ಆಕಸ್ಮಿಕವಾಗಿ ಎಡವೋದು ಸರಿ, ಆದರೆ ಪದೇ ಪದೇ ಎಡವೋದು ಆ ವ್ಯಕ್ತಿತ್ವದ ದೋಷವನ್ನೇ ತೋರಿಸುತ್ತೆ. ಭೂಮಿಯಂಥಾ ಸ್ಟ್ರಾಂಗ್ ಪಾತ್ರಕ್ಕೆ ಇಂಥಾ ದುರ್ಬಲ ಮ್ಯಾನರಿಸಂ ಬೇಕಿಲ್ಲವೇನೋ. ಇದರ ಬದಲಾಗಿ ಇವರಿಬ್ಬರ ಆತ್ಮೀಯತೆಯನ್ನು ಭಿನ್ನವಾಗಿ ಹೊಸ ಬಗೆಯಲ್ಲಿ ತೋರಿಸಬಹುದಿತ್ತು. ಈ ಪ್ರೌಢ ಪಾತ್ರಗಳ ಮೆಚ್ಯೂರಿಟಿಗೆ ತಕ್ಕಂಥಾ ದೃಶ್ಯಗಳಿದ್ದರೆ ಚಂದ. 

ಇನ್ನುಳಿದಂತೆ ಗೌತಮ್ ಹಾಗೂ ಭೂಮಿಕಾ ಇಬ್ಬರು ಪರಸ್ಪರ ಗಂಡ ಹೆಂಡತಿಯಂತೆ ಇಲ್ಲ. ಕೇವಲ ಮನೆಯವರ ಒತ್ತಾಯಕ್ಕೆ ಮದುವೆಯಾದವರಂತೆ ಇದ್ದಾರೆ. ಮುಂದೆ ಕಥೆ ಯಾವ ರೀತಿ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಇಬ್ಬರ ಅಭಿರುಚಿಗಳು ಬೇರೆ ಬೇರೆಯಾಗಿದ್ದು. ಗೌತಮ್ ಅವರ ಅಜ್ಜಿ ಇಬ್ಬರನ್ನು ಆದಷ್ಟು ಒಂದು ಮಾಡಬೇಕು ಎಂದು ಪ್ರಯತ್ನ ಮಾಡುತ್ತಿದ್ದಾರೆ. ಅಜ್ಜಿಗಾಗಿ ಗೌತಮ್ ಭೂಮಿಕಾ ಜೊತೆಯಲ್ಲಿ ತುಂಬಾ ಚೆನ್ನಾಗಿ ಇರುವಂತೆ ನಡೆದುಕೊಳ್ಳುತ್ತಿದ್ದಾನೆ. ತಿಳಿಯದೇ ಇವರಿಬ್ಬರ ನಡುವೆ ಆತ್ಮೀಯತೆ ಬೆಳೆಯುತ್ತೆ. ಆದರೆ ಮತ್ತೆ ಮತ್ತೆ ಭೂಮಿಯನ್ನು ಎಡವುವಂತೆ ಮಾಡೋದು ಬೇಡ ಅನ್ನೋದು ವೀಕ್ಷಕರ ಹಂಬಲ್ ರಿಕ್ವೆಸ್ಟ್. 

ಒಲವಿನ ನಿಲ್ದಾಣ ಸೀರಿಯಲ್ ಸಿದ್ಧಾಂತ್ ಅಮ್ಮ ನಿರುಪಮಾ ಸಖತ್ ಸ್ಟೈಲಿಶ್!
 

Latest Videos
Follow Us:
Download App:
  • android
  • ios