BBK9 ಆರ್ಯವರ್ಧನ್ ಗುರೂಜಿನ ನಾನು ಮುಟ್ಟಿದ್ರೆ ಅರ್ಧ ಮೀಸೆ ಬೋಳಿಸಿಕೊಳ್ತೀನಿ: ರೂಪೇಶ್ ಶೆಟ್ಟಿ
ಆರ್ಯವರ್ಧನ್ ಮತ್ತು ರೂಪೇಶ್ ಶೆಟ್ಟಿ ನಡುವೆ ಜಗಳ. ಅರ್ಧ ಮೀಸೆ ಬೋಳಿಸುವ ಮಾತು ಯಾಕೆ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಸೀಸನ್ 9 ಫಿನಾಲೆ ವಾರಕ್ಕೆ ಎರಡು ವಾರಗಳಿದೆ ಅಷ್ಟೆ. ಓಟಿಟಿ ಸೀಸನ್ 1ಯಿಂದ ಟಿವಿ ಸೀಸನ್ 9ಕ್ಕೆ ಎಂಟ್ರಿ ಕೊಟ್ಟಿ ಅರ್ಯವರ್ಧನ್ ಗುರೂಜಿ ಮತ್ತು ರೂಪೇಶ್ ಶೆಟ್ಟಿ ನಡುವೆ ಒಳ್ಳೆಯ ಬಾಂಧವ್ಯವಿದೆ. ಈ ಸಲುಗೆಯಿಂದ ಇಬ್ಬರು ಅಪ್ಪಾಜ್ಜಿ- ಮಗನ ರೀತಿಯಲ್ಲಿ ವರ್ತಿಸುತ್ತಾರೆ. ಈ ಪ್ರೀತಿಯಿಂದಲೇ ರೂಪಿ ಗುರೂಜಿಗೆ ಹೊಡೆದು ಬಿಡಿದು ಮಾತನಾಡಿಸುವುದು. ದಿನಕ್ಕೊಂದು ಸಮಸ್ಯೆ ಬಗ್ಗೆ ಚರ್ಚೆ ಮಾಡುವ ಗುರೂಜಿ ಈಗ ನನ್ನನ್ನು ಯಾರು ಮುಟ್ಟಿ ಮಾತನಾಡಿಸಬಾರದು ಎಂದು ಹೇಳಿದ್ದಾರೆ. ಇದಕ್ಕೆ ಬಿಬಿ ಮನೆಯಲ್ಲಿ ಬಾಯ್ ಗ್ಯಾಂಗ್ ಗರಂ ಆಗಿದ್ದಾರೆ.
ಹೌದು! ಆರ್ಯವರ್ಧನ್ ಗುರೂಜಿ ದಿನಕ್ಕೊಂದು ಸಮಸ್ಯೆ ಬಗ್ಗೆ ಗಾರ್ಡನ್ ಏರಿಯಾದಲ್ಲಿ ಚರ್ಚೆ ಮಾಡುತ್ತಾರೆ. ಆದರೆ ಈ ಸಲ ಅಡುಗೆ ಮನೆಯಲ್ಲಿದ್ದ ಆರ್ಯವರ್ಧನ್‌ಗೆ ರೂಪೇಶ್ ಶೆಟ್ಟಿ ಹೊಡೆದು ಮಾತನಾಡಿಸುತ್ತಿದ್ದರು ಇದ್ದಕ್ಕಿದ್ದಂತೆ ಗರಂ ಆದ ಗುರೂಜಿ ನನ್ನನ್ನು ಮುಟ್ಟಿ ಮಾತನಾಡಿಸಬೇಡಿ ಹೊಡೆದು ಮಾತನಾಡಿಸಬೇಡಿ ಹಾಗೆ ಮಾಡಿ ಮಾಡಿ ನಾನು ಸಣ್ಣಗಾಗಿರುವೆ ಎಂದು ಹೇಳಿದ್ದಾರೆ. ಈ ಮಾತುಗಳನ್ನು ಕೇಳಿ ಒಮ್ಮೆ ಎಲ್ಲರು ಶಾಕ್ ಆದರು ಆದರೆ ನಕ್ಕು ಸುಮ್ಮನಾದ್ದರು. ಆದರೆ ಇದನ್ನು ಇಲ್ಲಿಗೆ ಬಿಡದ ರೂಪೇಶ್ ಶೆಟ್ಟಿ ಮತ್ತು ರೂಪೇಶ್ ರಾಜಣ್ಣ ದೊಡ್ಡ ವಿಚಾರ ಮಾಡುತ್ತಾರೆ.
'ನಿಮಗೆ ಮುಟ್ಟಿ ಮಾತನಾಡಿಸಿದ್ರೆ ಇಷ್ಟ ಆಗಲ್ಲ. ನೀವು ಅಮುಕು ಅಂದಾಗ ಅಮುಕೋದು ಡ್ಯಾನ್ಸ್ ಮಾಡೋದು ಒತ್ತೋದು ಮಾಡ್ತಿದ್ವಿ. ನನ್ನನ್ನು ಯಾರೂ ಮುಟ್ಟಿ ಮಾತನಾಡಿಸಬಾರದು ಅಂತ ಹೇಳಿ. ನಾನೇನಾದ್ರೂ ನಿಮ್ಮನ್ನು ಮುಟ್ಟಿ ಮಾತನಾಡಿಸಿದ್ರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ತೀನಿ. ಅಮುಕೋದು ಮಾಡಲ್ಲ ತುಳಿಯೋದಿಲ್ಲ. ನಾನೇನಾದ್ರೂ ಈ ತರ ಮಾಡಿದ್ರೆ ರಾಕೇಶ್ ಮೇಲೆ ಆಣೆ. ನಿಮಗೆ 10 ಸೆಕೆಂಟ್ ಟೈಮ್ ಕೊಡ್ತೀನಿ ಅಷ್ಟರೊಳಗೆ ಹೇಳಿ' ಎಂದು ರೂಪೇಶ್ ಶೆಟ್ಟಿ ಹೇಳಿದ್ದಾರೆ. 'ನೀವು ಯೋಚನೆ ಮಾಡಿ ಈ ಮಾತು ಹೇಳಿದ್ರಿ. ನಾನು ಕೂಡ ಯೋಚನೆ ಮಾಡಿ ಸಮಯ ತೆಗೆದುಕೊಂಡು ಹೇಳುತ್ತೀನಿ' ಎಂದಿ ಆ ಜಾಗದಿಂದ ಮಾಯವಾಗುತ್ತಾರೆ.
ಗುರೂಜಿ ಈ ಮಾತನ್ನು ಒಪ್ಪಿಕೊಳ್ಳಬೇಕು ಅಥವಾ ರೂಪೇಶ್ ಶೆಟ್ಟಿ ಮುಟ್ಟಿ ಮೀಸೆ ತೆಗೆಯಬೇಕು ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಆರ್ಯವರ್ಧನ್ ಸ್ವಮ್ಮಿಂಗ್:
ಬಿಗ್ ಬಾಸ್ ಸ್ವಿಮ್ಮಿಂಗ್ ಪೂಲ್‌ಗೆ ಸಂಬಂಧ ಪಟ್ಟ ಯಾವುದೇ ಟಾಸ್ಕ್ ಕೊಟ್ಟರೂ ಸೂಪರ್ ಡೂಪರ್ ಅಗಿ ಮಾಡಿ ಮುಗಿಸುವುದು ಆರ್ಯವರ್ಧನ್. ಆದರೆ ಕೆಲವು ದಿನಗಳ ಹಿಂದೆ ಕೊಟ್ಟ ಟಾಸ್ಕ್ ಸ್ವಲ್ಪ ಕಷ್ಟವಾಗಿದ್ದ ಕಾರಣ ಅನುಪಮಾ ಗೌಡ ಬಳಿ ತಮ್ಮ ಸ್ವಿಮ್ಮಿಂಗ್ ಸ್ಕಿಲ್‌ನ ವಿವರಿಸುತ್ತಿದ್ದಾರೆ.
BBK9; ತಾರಕಕ್ಕೇರಿದ ಜಗಳ; ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದ ಆರ್ಯವರ್ಧನ್- ರೂಪೇಶ್
'ಬಿಗ್ ಬಾಸ್ ರೂಲ್ಸ್ ಬದಲಾಯಿಸುವುದಿಲ್ಲ ಎಂದು ನನಗೆ ತಿಳಿಯಿತ್ತು. ಮೊನ್ನೆ ನಡೆದ ನೀರಿನ ಟಾಸ್ಕ್‌ನಲ್ಲಿ ಹೆಚ್ಚಿನ ಎಫರ್ಟ್ ಹಾಕಿದೆ ಹೇಗೆಲ್ಲಾ ಮಾಡಬಹುದು ಹಾಗೆಲ್ಲಾ ಪ್ರಯತ್ನ ಪಟ್ಟಿರುವೆ. ನಾನು ಭೂಮಿ ಮೇಲೆ ಹೇಗೆ ವಾಸ ಮಾಡುತ್ತೀನಿ ಅದೇ ರೀತಿ ನೀರಿನೊಳಗೆ ವಾಸ ಮಾಡಬಹುದು ನಾನು ದಿನವೂ ಬೆಳಗ್ಗೆ 6 ಗಂಟೆಗೆ ಸ್ವಿಮ್ಮಿಂಗ್ ಮಾಡುತ್ತೀನಿ ಹಾಗಾಗಿ ವೇಟ್ ಲಾಸ್ ಆಗಿರುವುದು ಹಾಗೆ ನನ್ನ ಹಾರ್ಟ್ ಚೆನ್ನಾಗಿರುವುದು. ಸ್ವಿಮ್ಮಿಂಗ್ ಮಾಡುವವರಿಗೆ ಹಾರ್ಟ್ ಬೀಟ್ ತುಂಬಾ ಚೆನ್ನಾಗಿರುತ್ತದೆ. ನಾನು ಸ್ವಿಮ್ಮಿಂಗ್ ಮಾಡುವಾಗ ಕತ್ತು ಎತ್ತುವುದಿಲ್ಲ ನನಗೆ ಸ್ವಿಮ್ಮಿಂಗ್‌ನ ಕೋಚ್ ಹೇಳಿಕೊಟ್ಟಿದ್ದು...ಎತ್ತು ಎಲ್ಲಾ ಎತ್ತಿ ಸ್ವಿಮ್ಮಿಂಗ್ ಮಾಡುವುದಿಲ್ಲ ನಿಧಾನಕ್ಕೆ ಆಮೆ ರೀತಿ ತರ 12 ರೌಂಡ್ ಮಾಡ್ತೀನಿ. 50 ಮೀಟರ್ ಜಾಗದಲ್ಲಿ 12 ರೌಂಡ್ ಮಾಡ್ತೀನಿ' ಎಂದು ಆರ್ಯವರ್ಧನ್ ಹೇಳಿದ್ದಾರೆ.