Bigg Boss Ott: 2ನೇ ಹೆಂಡತಿ ಪರವಾಗಿ 1ನೇ ಹೆಂಡತಿಗೆ ಬಹಿರಂಗ ಕ್ಷಮೆ ಕೇಳಿದ ನಟ ಅರ್ಜುನ್!
ಕಾಲಿಗೆ ಬಿದ್ದು ಬಹಿರಂಗವಾಗಿ ಕ್ಷಮೆ ಕೇಳುತ್ತೀನಿ ಎಂದು ಇಬ್ಬರೂ ಪತ್ನಿಯರ ಬಗ್ಗೆ ಬಿಗ್ ಬಾಸ್ ನಾನು ಯಾರು ವೇದಿಕೆಯಲ್ಲಿ ಮಾತನಾಡಿದ ಅರ್ಜುನ್....
ಕನ್ನಡ ಕಿರುತೆರೆ ಜನಪ್ರಿಯ ನಟ ಅರ್ಜುನ್ ರಮೇಶ್ ಈಗ ಕಿಚ್ಚ ಸುದೀಪ್ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ ಓಟಿಟಿ ಸೀಸನ್ 1ರಲ್ಲಿ ಸ್ಪರ್ಧಿಸುತ್ತಿದ್ದಾರೆ. ತುಂಬಾನೇ ಸ್ಟ್ರಾಂಗ್ ಸ್ಪರ್ಧಿಯಾಗಿ ಕಾಣಿಸುತ್ತಿರುವ ಅರ್ಜುನ್ ಪರ್ಸನಲ್ ಲೈಫ್ ವಿಚಾರಗಳನ್ನು ಮೊದಲ ಬಾರಿಗೆ ರಿವೀಲ್ ಮಾಡಿದ್ದಾರೆ. ಇಬ್ಬರೂ ಪತ್ನಿಯರೊಂದಿಗೆ ನಟ ಹೇಗೆ ಲೈಫ್‌ನ ಮ್ಯಾನೇಜ್ ಮಾಡುತ್ತಿದ್ದಾರೆ, ಎರಡನೇ ಪತ್ನಿ ವಿಚಾರ ಹೇಳಿದಾಗ ಸಂಸಾರದಲ್ಲಿ ಆದ ಗೊಂದಲವೇನು ಎಂದು ಹೇಳಿಕೊಂಡಿದ್ದಾರೆ.
ಅರ್ಜುನ್ ರಮೇಶ್ ಮಾತು:
'ಜನರಿಗೆ ನನ್ನ ಜೀವನದ ಬಗ್ಗೆ ಪ್ರತಿಕ್ರಿಯೆ ಕೊಡುವುದಕ್ಕೆ ಹೋಗಲ್ಲ. ಇದು ನನ್ನ ಸಂಸಾರ ಏನೇ ಆಗು ಹೋಗುಗಳಿದ್ದರೆ ನಾನೇ ನಿಭಾಯಿಸಬೇಕು ಏಕೆಂದರೆ ನನ್ನ ಕೈಯಾರೆ ನಾನೇ ಮಾಡಿಕೊಂಡಿರುವುದು ನಾನೇ ಸರಿ ಮಾಡಬೇಕು. ನಾನು ಪಟ್ಟಿರುವ ಕಷ್ಟ ನಾನು ಪಟ್ಟಿರುವ ನೋವು ಆ ಡಿಪ್ರೆಶನ್.....ನಾನು ತುಂಬಾನೇ ಎಮೋಷನಲ್. Experiance makes man perfect ಅಂತ ಹೇಳ್ತಾರೆ ನನ್ನ ಜೀವನ ನನ್ನನ್ನು ಗಟ್ಟಿ ಮಾಡಿದೆ ಆದರೂ ಬೇರೆ ಅವರ ನೋವು ಕೇಳಿದಾಗ ಕುಗ್ಗುವೆ. ಸುಲಭವಾಗಿ ನನ್ನನ್ನು ಒಬ್ಬರು ಹೊಡೆಯಬಹುದು ಅಂದ್ರೆ ಅದು ಪ್ರೀತಿಯಲ್ಲಿ ಮಾತ್ರ ಅದು ಬಿಟ್ಟು ಗೆಲ್ಲಬಹುದು ಅಂದುಕೊಂಡರೆ ಅದು ಅಸಾಧ್ಯ. ಜೀವನದಲ್ಲಿ ನಾನು ಅಂದುಕೊಂಡಿರುವುದನ್ನು ಎಲ್ಲಾ ಮಾಡಿಕೊಂಡು ನಡೆಸಿಕೊಂಡು ಬಂದಿರುವೆ.ಅದಿಕ್ಕೆ ನನಗೆ ಕಾರಣ ನನ್ನ ತಂದೆ. ಗಾರೆ ಕೆಲಸ ಮಾಡಿರುವವರ ಮಗ ನಾನುನ ಅವರು ಕೂಡ ಎಲ್ಲಾ ಕಷ್ಟ ಸುಖಗಳನ್ನು ನೋಡಿಕೊಂಡು ಬಂದಿದ್ದಾರೆ. ಕಷ್ಟ ಪಟ್ಟು ಜೀವನದಲ್ಲಿ ಈ ಸ್ಥಾನಕ್ಕೆ ಬಂದಿದ್ದಾರೆ' ಎಂದು ಅರ್ಜುನ್ ಮಾತನಾಡಿದ್ದಾರೆ.
ಆಕೆನೇ ಫಸ್ಟ್ ಆಕೆನೇ ಲಾಸ್ಟ್: ಡಿವೋರ್ಸ್ ಬಗ್ಗೆ ಸತ್ಯ ಬಿಚ್ಚಿಟ್ಟ ಸೋಮಣ್ಣ ಮಾಚಿಮಾಡ
'ತಂದೆ ತಾಯಿಗೆ ಬೇಸರ ಮಾಡಿರುವುದು ನನ್ನ ಮದುವೆ ವಿಚಾರದಲ್ಲಿ ಮಾತ್ರ ಅವರಿಗೆ ಕ್ಷಮೆ ಕೇಳುತ್ತೀನಿ. ಇನ್ನೂ ಕ್ಷಮೆ ಕೇಳಬೇಕು ಅಂದ್ರೆ ನನ್ನ ಮೊದಲ ಪತ್ನಿ ಮಿಲನ್‌ಗೆ ಕ್ಷಮೆ ಕೇಳುವೆ. ಮಿಲನ್, ರಮೀಕಾ ಮತ್ತು ನನ್ನ ಪರವಾಗಿ ನಿನ್ನ ಕಾಲಿಗೆ ನಮಸ್ಕಾರ ಮಾಡಿ ನಾನು ಬಹಿರಂಗ ಕ್ಷಮೆ ಕೇಳುವೆ. ಎಲ್ಲವೂ ಬಿಟ್ಟು ನನ್ನ ನಂಬಿ ನೀನು ಬಂದಿದ್ದೆ. ನೀನು ಎಂಥಾ ನಿರ್ಧಾರ ತೆಗೆದುಕೊಂಡಿದ್ಯಾ ಅಂದ್ರೆ ದೇವರು, ನಾನು ದೇವರ ಪೂಜೆ ಮಾಡ್ತೀನಿ ಆದರೆ ನೀನು ದೇವರಂತೆ ನಡೆದುಕೊಂಡಿರುವೆ. ನನ್ನ ಜೀವನಕ್ಕೆ ದೇವರು ನೀನು. ನಿನ್ನ ಕೈಯಲ್ಲಿ ಎಲ್ಲಾ ಇತ್ತು, ಒಂದು ಕ್ಷಣ ಸಾಕಿತ್ತು ಇನ್ನೊಂದು ಹೆಣ್ಣು ಮತ್ತು ಆ ಮಗುವಿನ ಜೀವನ ಹಾಳು ಮಾಡುವುದಕ್ಕೆ ಕೇಸ್ ಹಾಕಬಹುದಿತ್ತು ಏನ್ ಬೇಕಿದ್ದರೂ ಮಾಡಬಹುದಿತ್ತು ಆದರೆ ನೀನು ಆ ದಾರಿ ಹಿಡಿದಿಲ್ಲ. ನನ್ನ ತಂದೆ ತಾಯಿಗೆ ನೀನು ಮಗಳಾಗಿರುವೆ ನನ್ನ ಜೀವನಕ್ಕೆ ನೀನು ದೇವರು ಈ ವೇದಿಕೆ ಮೇಲೆ ನಾನು ಒಂದು ಆಣೆ ಮಾಡುವೆ' ಎಂದು ಅರ್ಜುನ್ ಹೇಳಿದ್ದಾರೆ.
ತಾಯಿ ಸಾವಿಗೆ ನೀನೇ ಕಾರಣ; ಕಡ್ಡಿ ಮುರಿಯುವಂತೆ ಉತ್ತರ ಕೊಟ್ಟ Bigg Boss ಸ್ಫೂರ್ತಿ ಗೌಡ!
'ಮಿಲನ್ ಮತ್ತು ರಮಿನಾ ನಿಮ್ಮಗೆ ನಾನೊಂದು ಪ್ರಾಮಿಸ್ ಮಾಡುವೆ. ರಮಿಕಾ ನೀನು ಕೂಡ ನನ್ನ ಕೋಪ ತಡೆದುಕೊಂಡು ನನ್ನ ಜೊತೆ ಜೀವನ ಮಾಡುತ್ತಿರುವೆ. ಎಷ್ಟೋ ಕಡೆ ನೀನು ಮಿಲನ್‌ನ ಕೇಳು ಆಕೆ ಬೇಸರ ಮಾಡಿಕೊಳ್ಳುತ್ತಾಳೆ ಆಕೆ ಹೇಳಿದಂತೆ ಮಾಡು ಅಂತ ಹೇಳುತ್ತೀ ನಿನ್ನ ಆ ಸ್ವಭಾವ ನನಗೆ ತುಂಬಾ ಇಷ್ಟ. ಹೀಗಾಗಿ ನನ್ನ ಕೊನೆ ಉಸಿರು ಇರುವವರೆಗೂ ನಿಮ್ಮಿಬ್ಬರಿಗೂ ಯಾರೂ ಕೂಡ ಬೆರಳು ತೋರಿಸಿ ಮಾತನಾಡಬಾರದು ಆ ರೀತಿ ನೋಡಿಕೊಳ್ಳುತ್ತೀನಿ. ನನ್ನ ಪರ್ಸನಲ್ ಲೈಫ್ ಬಗ್ಗೆ ಜನರು ಚರ್ಚೆ ಮಾಡಬೇಡಿ. ನಟನಾಗಿ ಮಾತ್ರ ನೀವು ನನ್ನನ್ನು ನೋಡಿ ನನ್ನ ಸಂಸಾರವನ್ನು ನಾನೇ ಸರಿ ಮಾಡಿಕೊಳ್ಳಬೇಕು ಹಾಗೆ ನಾನು ನಡೆಸಿಕೊಂಡು ಹೋಗುತ್ತಿರುವೆ. ಜೀವನದಲ್ಲಿ ನಾನು ಎದುರಿಸಿಕೊಂಡು ನೀವು ಹಾಗೆ ಮಾಡಿ' ಎಂದಿದ್ದಾರೆ ಅರ್ಜುನ್.