Anupama Gowda: ನಟಿ-ನಿರೂಪಕಿ ಅನುಪಮಾ ಗೌಡ ಕೆಲವು ದಿನಗಳ ಹಿಂದೆ ತಮ್ಮ ಬ್ಯುಸಿ ಶೆಡ್ಯೂಲ್ ಗೆ ಬ್ರೇಕ್ ಕೊಟ್ಟು ಕಾಶಿ ವಿಶ್ವನಾಥನ ದರ್ಶನ ಪಡೆದು ಬಂದಿದ್ದಾರೆ. ಜೊತೆಗೆ ಕಾಶಿಯಲ್ಲಿ ಶಿವನನ್ನು ನೋಡಲು ಹೋದ ನಟಿ ಅನುಭವಿಸಿದ ಸುಂದರ ಕ್ಷಣ, ಆಧ್ಯಾತ್ಮಿಕತೆಯ ಕುರಿತು ನಟಿ ಮಾಹಿತಿ ಹಂಚಿಕೊಂಡಿದ್ದಾರೆ. 

ಕಾಶಿಯಲ್ಲಿ ನಟಿ ನಿರೂಪಕಿ ಅನುಪಮಾ ಗೌಡ

ನಟಿ -ನಿರೂಪಕಿ ಅನುಪಮಾ ಗೌಡ ಕೆಲವು ದಿನಗಳ ಹಿಂದಷ್ಟೇ ತಮ್ಮ ಬ್ಯುಸಿ ಶೆಡ್ಯೂಲ್ ನಿಂದ ಬ್ರೇಕ್ ತೆಗೆದುಕೊಂಡು ಉತ್ತರ ಪ್ರದೇಶದಲ್ಲಿರುವ ಆಧ್ಯಾತ್ಮಿಕ ತಾಣವಾದ ಕಾಶಿಗೆ ಭೇಟಿ ನೀಡಿ, ಅಲ್ಲಿ ಒಂದಷ್ಟು ದಿನಗಳನ್ನು ಕಳೆದು ಬಂದಿದ್ದಾರೆ. ಇದೀಗ ತಾವು ಕಾಶಿಯಲ್ಲಿ ಕಳೆದ ಮಧುರ ಕ್ಷಣಗಳನ್ನು ಜೊತೆಗೆ ಸೇರಿಸಿ ವಿಡಿಯೋ ಮಾಡಿದ್ದು, ಅದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅದರಲ್ಲಿ ಕಾಶಿಯಲ್ಲಿ ಶಿವನನ್ನು ಕಾಣಲು ಹೊರಟ ನಟಿಗೆ ಏನೆಲ್ಲಾ ಅನುಭವ ಆಯ್ತು ಎನ್ನುವುದನ್ನು ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅನುಪಮಾ ಕಾಶಿಯ ಕುರಿತು ಬರೆದದ್ದು ಹೀಗೆ

ಕಾಶಿ

ಶಿವನ ಕಾಣಲು ಹೋದ ನನಗೆ ಸಿಕ್ಕಿದ್ದು ಸಾಕಷ್ಟು ,

ಆ ಸಾಕಷ್ಟುಗಳ ಮಧ್ಯೆ ಇದ್ದದು ಮೌನ,

ಆ ಮೌನದ ಮಧ್ಯೆ ಇದ್ದದು ಯೋಚನೆಗಳು,

ಆ ಯೋಚನೆಗಳ ನಡುವಲ್ಲೆ ಕಂಡಿದ್ದು ಸಾವುಗಳ ಮನೆ,

ಆ ಸಾವಿನ ಮನೆಯಲ್ಲೆ ಹುಟ್ಟಿ, ಬದುಕಿ, ಸಾಯುವ ಸಮುದಾಯ,

ಆ ಸಮುದಾಯಕ್ಕೆ ಇಲ್ಲದ ನಮ್ಮ ದೇವರ ಸ್ಥಾನ,

ಪ್ರಾಣವಿಲ್ಲದ ನಮ್ಮ ದೇಹಕ್ಕೆ ಅವರ ಜಾಗವೇ ಕೊನೆಯ ಸ್ಥಾನ….

ನಾ ಕಂಡ ಕಾಶಿ ಆದೆಷ್ಟೋ…..

ನಟಿ ಅನುಪಮಾ ಕಾಶಿಗೆ ಹೋಗಿದ್ದು ಶಿವನನ್ನು ಕಾಣಲು, ಆದರೆ ಅಲ್ಲಿ ಶಿವನಲ್ಲದೇ ಸಾಕಷ್ಟು ವಿಷಯಗಳನ್ನು ಸಹ ಕಂಡಿದ್ದಾರೆ ನಟಿ. ಅಲ್ಲಿ ಎಲ್ಲಾ ಸದ್ದು ಗದ್ದಲದ ನಡುವೆ ಅನುಪಮಾ ಮೌನವನ್ನು ಕಂಡುಕೊಮ್ಡಿದ್ದಾರೆ. ಈ ಮೌನಗಳ ನಡುವೆ ತುಂಬಾ ಯೋಚನೆಗಳನ್ನು ಆಲೋಚನೆಗಳನ್ನು ಕಂಡುಕೊಂಡಿದ್ದಾರೆ. ಅಷ್ಟೇ ಅಲ್ಲ ಅಷ್ಟೊಂದು ಆಲೋಚನೆಗಳ ಮಧ್ಯೆ ಸಾವಿನ ಮನೆಯನ್ನು ಸಹ ನೋಡಿದ್ದು, ಅಲ್ಲಿ ಹುಟ್ಟಿ, ಬದುಕಿ ಸಾಯುವ ಜನರನ್ನು ಸಹ ಕಂಡಿದ್ದಾರೆ. ಪ್ರಾಣವೇ ಇಲ್ಲದ ಈ ದೇಹಕ್ಕೆ ಕೊನೆಯ ಸ್ಥಾನವೇ ಸ್ಮಶಾನ… ಹೀಗೆ ಹತ್ತು ಹಲವು ವಿಷಯಗಳನ್ನು ಕಂಡುಕೊಂಡಿರುವ ಬಗ್ಗೆ ನಟಿ ತಿಳಿಸಿದ್ದಾರೆ.

ಅನುಪಮಾ ಗೌಡ ಈಗ ಏನು ಮಾಡುತ್ತಿದ್ದಾರೆ?

ನಟಿ ಅನುಪಮಾ ಗೌಡ ಸದ್ಯ ಗಿಚ್ಚಿಗಿಲಿಗಿಲಿ ಜ್ಯೂನಿಯರ್ ಕಾರ್ಯಕ್ರಮದ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಷಕ್ಕೊಂದರಂತೆ ರಿಯಾಲಿಟಿ ಶೋಗಳ ನಿರೂಪಣೆ ಮಾಡುತ್ತಿದ್ದಾರೆ. ಅನುಪಮಾ ಗೌಡ 2019ರಲ್ಲಿ ತ್ರ್ಯಯಂಬಕಂ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾಕ್ಕಾಗಿ ಇತ್ತೀಚೆಗೆ ಅನುಪಮಾ ರಾಜ್ಯಪ್ರಶಸ್ತಿ ಪಡೆದಿದ್ದರು. ‘ಲಂಕೇಶ್ ಪತ್ರಿಕೆ’ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಿದ್ದ ಅನುಪಮಾ, ಬಳಿಕ ಕನ್ನಡ ಸೀರಿಯಲ್, ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಬಿಗ್ ಬಾಸ್ ಸೀಸನ್ 3ರಲ್ಲಿ ಸ್ಪರ್ಧಿಯಾಗಿದ್ದ ಅನುಪಮಾ ಗೌಡಾಗೆ, ಆ ಬಳಿಕ ನಿರೂಪಕಿಯಾಗಿ ಅವಕಾಶಗಳು ಒದಗಿ ಬರಲು ಶುರುವಾಯಿತು. ಇದು ಕನ್ನಡ ಕಿರುತೆರೆಯ ಜನಪ್ರಿಯ ಕಿರುತೆರೆ ನಟಿಯರಲ್ಲಿ ಒಬ್ಬರಾಗಿದ್ದಾರೆ.

View post on Instagram