ಕ್ರಿಕೆಟರ್‌ ಅಯ್ಯಪ್ಪ ಇನ್‌ಸ್ಟಾಗ್ರಾಂ ನಕಲಿ ಖಾತೆಗಳ ಬಗ್ಗೆ ಪತ್ನಿ ಅನು ಸ್ಪಷ್ಟನೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ ನಕಲಿ ಖಾತೆಗಳು ತೆರೆಯುವುದು ತುಂಬಾನೇ ಕಾಮನ್. ಆದರೆ ಪದೇ ಪದೆ ಆಗುತ್ತಿದ್ದರೆ ಏನು ಮಾಡಬೇಕು? ಈ ವಿಚಾರದ ಬಗ್ಗೆ ಅಯ್ಯಪ್ಪ ಪತ್ನಿ ಅನು ಸ್ಪಷ್ಟನೆ ನೀಡಿದ್ದಾರೆ. 

ಕ್ರಿಕೆಟರ್‌ ಅಯ್ಯಪ್ಪ - ಕಿರುತೆರೆ ನಟಿ ಅನು ಪೋವಮ್ಮ ಪೇಮ ಕಥೆ ರಿವೀಲ್‌! ಇಲ್ಲಿದೆ ನೋಡಿ 

ಅನು ಸ್ಪಷ್ಟನೆ:
'ಹಾಯ್‌..ನನ್ನ ಗಂಡನ ಹೆಸರಿನಲ್ಲಿ ಕ್ರಿಯೇಟ್ ಆಗಿರುವ ನಕಲಿ ಖಾತೆ ಇದು. ಇದರಿಂದ ಯಾರಿಗೆಲ್ಲಾ ಮೆಸೇಜ್ ಬರುತ್ತಿದೆ ದಯವಿಟ್ಟು ಉತ್ತರ ಕೊಡಬೇಡಿ. ಆದಷ್ಟು ಜನರು ಈ ಖಾತೆಯನ್ನು ರೀಪೋರ್ಟ್‌ ಮಾಡಿದರೆ ಡಿಲೀಟ್ ಆಗುತ್ತದೆ;' ಎಂದು ಬರೆದುಕೊಂಡಿದ್ದಾರೆ.

ಫಾಸ್ಟ್‌ ಬೌಲರ್‌ ಅಯ್ಯಪ್ಪ ಹಾಗೂ ಅನು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುವ ದಂಪತಿಗೆ ನೆಟ್ಟಿಗರು 'ನೀವಿಬ್ಬರು ಎಷ್ಟು ರೋಮ್ಯಾಂಟಿಕ್' ಎಂದು ಕಾಮೆಂಟ್ ಮಾಡುತ್ತಿದ್ದಾರೆ.