Asianet Suvarna News Asianet Suvarna News

ನೇರಪ್ರಸಾರದಲ್ಲಿ ಪ್ರೇಕ್ಷಕರ ಜೊತೆ 'ಅಂತರಪಟ' ಆರಾಧನಾ: ಕನಸು ಅನಿಸ್ತಿದೆ ಅಕ್ಕಾ ಎಂದ ಬಾಲಕಿ

ನೇರಪ್ರಸಾರದಲ್ಲಿ ಪ್ರೇಕ್ಷಕರ ಜೊತೆ 'ಅಂತರಪಟ' ಆರಾಧನಾ ಮಾತು. ಮಾತನಾಡಿದ ಪ್ರೇಕ್ಷಕರು ಏನೆಂದ್ರು?
 

Antarapata Serial Actress Aradhana alias Tanviya Balaraj talk with the fans live suc
Author
First Published Nov 15, 2023, 2:28 PM IST | Last Updated Nov 15, 2023, 2:28 PM IST

ಕಲರ್ಸ್​ ಕನ್ನಡ ವಾಹಿನಿಯ ಕಡೆಯಿಂದ ಪ್ರೇಕ್ಷಕರಿಗೆ ದೀಪಾವಳಿ ಗಿಫ್ಟ್​ ರೂಪದಲ್ಲಿ  ನೆಚ್ಚಿನ ನಟ-ನಟಿಯರ ಜೊತೆ ವೀಕ್ಷಕರಿಗೆ ನೇರಪ್ರಸಾರದ ಮೂಲಕ ಮಾತನಾಡುವ ಅವಕಾಶವನ್ನು ನವೆಂಬರ್​ 14ರಂದು ಕಲ್ಪಿಸಿತ್ತು. ಹಲವಾರು ನಟ-ನಟಿಯರು ನೇರಪ್ರಸಾರದಲ್ಲಿ ಬಂದು ತಮ್ಮ ಸೀರಿಯಲ್​ ಫ್ಯಾನ್ಸ್​ ಜೊತೆ ಮಾತನಾಡಿದರು. ಅದರಂತೆಯೇ ಅಂತರಪಟ ಸೀರಿಯಲ್​ ನಾಯಕಿ ಆರಾಧನಾ ಅವರೂ ತಮ್ಮ ಮತ್ತು ಕಲರ್ಸ್ ಕನ್ನಡ ಅಭಿಮಾನಿಗಳ ಜೊತೆ ಕೆಲವು ಹೊತ್ತು ಮಾತುಕತೆ ನಡೆಸಿದರು. ಇವರ ರಿಯಲ್​ ಹೆಸರು ತನ್ವಿಯಾ ಬಾಲರಾಜ್. ಎಲ್ಲರಿಗೂ ನಟಿ ದೀಪಾವಳಿ ಶುಭಾಶಯ ಕೋರಿದರು. ಬಳಿಕ ಅವರು, ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್​ ಖಾತೆಯ ಬಳಕೆದಾರರ ಸಂಖ್ಯೆ ಮೂರು ಮಿಲಿಯನ್​ ಅಂದರೆ 30 ಲಕ್ಷ ಮಾಡಿರುವ ಬಳಕೆದಾರರಿಗೆ ಧನ್ಯವಾದ ಸಲ್ಲಿಸಿದ ಅವರು, ಇದು ಕಲರ್ಸ್​ ಕನ್ನಡ ಹಾಗೂ ಇದರ ಕಲಾವಿದರಿಗೆ ದೀಪಾವಳಿ ಬೋನಸ್​ ಎಂದು ಹೇಳಿದರು.  ಇದೇ ವೇಳೆ ದೀಪಾವಳಿ ಹಬ್ಬದ ಪ್ರಯುಕ್ತ ಸಿದ್ಧಪಡಿಸಿದ್ದ ವಿಶೇಷ ಹಾಡಿನ ಕುರಿತು ಮಾತನಾಡಿದ  ನಟಿ, ಈ ಹಾಡು ನಾಲ್ಕು ಮಿಲಿಯನ್​ ವೀಕ್ಷಣೆ ಕಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.  
 
ಗೋಕಾಕ್​ನ 9ನೇ ತರಗತಿಯ ವಿಂದ್ಯಾ ಎಂಬ ಬಾಲಕಿ ಹಾಗೂ   ಬಿಕಾಂ  ಓದುತ್ತಿರುವ ಭಾವನಾ ಸೇರಿದಂತೆ ಕೆಲವರು ನಟಿಯ ಜೊತೆ ನೇರಪ್ರಸಾರದಲ್ಲಿ ಮಾತನಾಡಿದರು. ಖುದ್ದು ನಟಿಯ ಜೊತೆ ಮಾತನಾಡುತ್ತಿರುವುದು ಕನಸಿನಂತೆ ಕಾಣಿಸುತ್ತಿದೆ ಎಂಬುದು ಇಬ್ಬರ ಅಭಿಪ್ರಾಯವಾಗಿತ್ತು. ನಂತರ ಅಂತರಪಟ ಸೀರಿಯಲ್​ ತಮ್ಮ ನೆಚ್ಚಿನ ಧಾರಾವಾಹಿಯಾಗಿದೆ ಎಂದ ಅವರು, ದಿನವೂ ಇದನ್ನು ತಪ್ಪದೇ ನೋಡುವುದಾಗಿ ಹೇಳಿದರು. ನಿಮ್​ ಜೊತೆ ಮಾತನಾಡುತ್ತಿರುವುದು ಕನಸು ಅನ್ನಿಸ್ತಿದೆ, ಅಕ್ಕ ನಿಮ್ಮ ಆ್ಯಕ್ಟಿಂಗ್​ ಸೂಪರ್​ ಎಂದು ಬಾಲಕಿ ವಿಂದ್ಯಾ ಹೇಳಿದರೆ, ತಮ್ಮ ಮನೆಯಲ್ಲಿ ಎಲ್ಲರೂ ನಿಮ್ಮ ಸೀರಿಯಲ್​ ಅನ್ನು ತಪ್ಪದೇ ನೋಡುತ್ತಾರೆ, ಎಲ್ಲರಿಗೂ ನೀವು ತುಂಬಾ ಇಷ್ಟ ಎಂದರು ಭಾವನಾ. 

ಬಿಗ್​ಬಾಸ್​ ಮನೆಯಲ್ಲಿ ಭಾಗ್ಯ ಅನುಭವ ಹೇಗಿತ್ತು, ಯಾವ ಸ್ಪರ್ಧಿ ಇಷ್ಟ? ವೀಕ್ಷಕರು ಕೇಳಿದ ಪ್ರಶ್ನೆಗೆ ನಟಿ ಹೀಗೆಂದ್ರು...

ಅಂದಹಾಗೆ ಅಂತರಪಟ  ಅಪ್ಪನ ಕನಸನ್ನು ಕಾಣುತ್ತಿರುವ ಹುಡುಗಿಯೊಬ್ಬಳ ಕತೆ. ಅಪ್ಪನ ಪ್ರೀತಿ ಕಾಣ ಬಯಸಿದ ಮಗಳೇ, ಅಪ್ಪನ ಸಾಲ ತೀರಿಸೋ ಪರಿಸ್ಥಿತಿ ಬರುತ್ತೆ. ಅಪ್ಪ ಕುಡಿದು, ಕುಡಿದು ಹೆಚ್ಚು ಸಾಲ ಮಾಡಿರುತ್ತಾನೆ. ಮನೆ ಬಳಿಯೇ ಸಾಲಗಾರರು ಬರುತ್ತಿದ್ದಾರೆ. ದೇವರ ಬಳಿ ಇರೋ ಅಪ್ಪನ ಕನಸು ನನಸು ಮಾಡಲು ಆರಾಧನಾ ಪ್ರಯತ್ನ ಪಡ್ತಾ ಇದ್ದಾಳೆ. ಅದಕ್ಕಾಗಿ ಯಶಸ್ಸಿನ ಹಾದಿಯಲ್ಲಿ ನಡೆಯುತ್ತಿದ್ದಾಳೆ.  ಅದನ್ನು ಆಕೆ ಹೇಗೆ ಎದುರಿಸುತ್ತಾಳೆ ಎನ್ನುವ ಕಥಾ ಹಂದರವನ್ನು ಈ ಧಾರಾವಾಹಿ ಹೊಂದಿದೆ.

ಇನ್ನು, ಆರಾಧನಾ ಪಾತ್ರ ಮಾಡುತ್ತಿರುವವರ ಹೆಸರು ತನ್ವಿಯಾ ಬಾಲರಾಜ್. ಇವರು ಕಿರುತೆರೆಗೆ ಹೊಸಬರು. ಮೊದಲ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ತನ್ವಿಯಾ ಅವರು ಮೂಲತಃ ಮಂಡ್ಯದ ಹುಡುಗಿ. ಇವರಿಗೆ ಬಾಲ್ಯದಿಂದಲೂ ನಟಿಯಾಗಬೇಕೆಂಬ ಆಸೆಯಂತೆ, ಆ ಆಸೆ ಇದೀಗ ಅಂತರಪಟ ಮೂಲಕ ನೆರವೇರಿದೆ. ತನ್ವಿಯಾ ಬಾಲರಾಜ್ ಅವರು ಡ್ಯಾನ್ಸರ್ ಸಹ ಹೌದು. ತನ್ವಿಯಾ ಇನ್‍ಸ್ಟಾಗ್ರಾಂನಲ್ಲಿ ಸಾಕಷ್ಟು ರೀಲ್ಸ್ ಮಾಡುವ ಮೂಲಕ ಈಗಾಗಲೇ ಅಭಿಮಾನಿಗಳನ್ನು ಗಳಿಸಿದ್ದಾರೆ.  
ಮೇಡಂ.. ನೀವು ನಿಜವಾಗ್ಲೂ ಸೀರಿಯಲ್​ನ ಗಂಡ ವೈಷ್ಣವ್​ರನ್ನೇ ಮದ್ವೆಯಾಗ್ತೀರಾ? ಲೈವ್​ಗೆ ಬಂದ ನಟಿಯನ್ನು ಪ್ರಶ್ನಿಸಿದ ಬಾಲಕಿ

Latest Videos
Follow Us:
Download App:
  • android
  • ios