ಬಾದ್‌ಷಾ ಕಿಚ್ಚನ ಜಾಗಕ್ಕೆ ಬರ್ತಾರಂತೆ ಕನ್ನಡದ ಮತ್ತೊಬ್ಬ ಸ್ಟಾರ್?: ರೆಡಿ ಆಯ್ತು ಬಿಗ್ ಬಾಸ್ 11ರ ಪ್ರೋಮೋ!

ಕನ್ನಡ ಕಿರುತೆರೆಯ ಬಿಗ್​ಬಾಸ್​ ಯಾರು ಅಂದ್ರೆ ಅದು ಕಿಚ್ಚನೇ ಅನ್ನೋದು ಅಳಿಸಲಾಗದ ಕಟು ಸತ್ಯ. ಆದ್ರೆ ಈ ಭಾರಿ ಕನ್ನಡ ಕಿರುತೆರೆ ಪ್ರೇಕ್ಷಕರು ಒಂಟಿ ಮನೆ ಸ್ಟೇಜ್​ನಲ್ಲಿ ಕಿಚ್ಚನನ್ನ ನೋಡಲ್ವಾ..? ಹೀಗೊಂದು ಡೌಟ್​ ಶುರುವಾಗಿದೆ.
 

Another Kannada star as Kichcha Sudeep takes place Bigg Boss 11 promo is ready gvd

ಕನ್ನಡ ಕಿರುತೆರೆ ಪ್ರೇಕ್ಷರಕರು ಮನ ತುಂಬಿ ನೋಡೋ ರಿಯಾಲಿಟಿ ಶೋ ಅಂದ್ರೆ ಬಿಗ್​ ಬಾಸ್.. ಬಾದ್​ ಷಾ ಕಿಚ್ಚ ಸುದೀಪ್​ ಸಾರಥ್ಯದ ಈ ಶೋ ಬೇರೆಲ್ಲಾ ಭಾಷೆಯ ಬಿಗ್​​ಬಾಸ್​​​​ಗಿಂತ ಹೆಚ್ಚು ಜನ ಪ್ರೀತಿ ಪಡೆದಿದೆ. ಆದ್ರೆ ಈ ಒಂಟಿ ಮನೆ ವೇಧಿಕೆ ಮೇಲೆ ಇನ್ಮುಂದೆ ಕಿಚ್ಚ ಇರಲ್ಲ. ಕನ್ನಡದ ಬೇರೊಬ್ಬ ನಟ ಬಿಗ್​ ಬಾಸ್ ನಿರೂಪಕ ಆಗ್ತಾರೆ ಅಂತ ಟಾಕ್ ಆಗಿದೆ. ಹಾಗಾದ್ರೆ ಆ ಸ್ಟಾರ್ ಯಾರು..? ಒಂಟಿ ಮನೆ ಜವಾಬ್ಧಾರಿ ಯಾರ ಹೆಗಲೇರುತ್ತೆ. ಸುದೀಪ್​ ಇಲ್ಲದೇ ನಿಜಕ್ಕೂ ಬಿಗ್​ಬಾಸ್ ಗೆಲ್ಲುತ್ತಾ.? ನೋಡೋಣ ಈ ಎಕ್ಸ್​​ಕ್ಲ್ಯೂಸೀವ್ ಸ್ಟೋರಿಯಲ್ಲಿ. ಬಾದ್​ ಷಾ ಕಿಚ್ಚ ಸುದೀಪ್​ ಕನ್ನಡ ಬೆಳ್ಳಿತೆರೆಯ ಅಭಿನಯ ಚಕ್ರವರ್ತಿ ಅಂತ ನಿಮ್ಗೆಲ್ಲಾ ಗೊತ್ತು. 

ಹಾಗೆ ಕನ್ನಡ ಕಿರುತೆರೆಯ ಬಿಗ್​ಬಾಸ್​ ಯಾರು ಅಂದ್ರೆ ಅದು ಕಿಚ್ಚನೇ ಅನ್ನೋದು ಅಳಿಸಲಾಗದ ಕಟು ಸತ್ಯ. ಆದ್ರೆ ಈ ಭಾರಿ ಕನ್ನಡ ಕಿರುತೆರೆ ಪ್ರೇಕ್ಷಕರು ಒಂಟಿ ಮನೆ ಸ್ಟೇಜ್​ನಲ್ಲಿ ಕಿಚ್ಚನನ್ನ ನೋಡಲ್ವಾ..? ಹೀಗೊಂದು ಡೌಟ್​ ಶುರುವಾಗಿದೆ. ಅದಕ್ಕೆ ಕಾರಣ ಇನ್ಮುಂದೆ ಬಿಗ್​​ಬಾಸ್ ಹೋಸ್ಟ್​ ಮಾಡಲ್ಲ ಅನ್ನೋ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿರೋದು. ಬಿಗ್ ಬಾಸ್ 11ರ ಪ್ರೊಮೊ ಶೂಟ್ ಈಗಾಗಲೇ ಆಗಿದೆ. ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಶೂಟಿಂಗ್ ಮಾಡಿದ್ದಾರೆ. ಆದ್ರೆ ಪ್ರೋಟೋ ಶೂಟ್​​ ಮಾಡೋ ಮೊದಲೇ ಬಿಗ್​​ಬಾಸ್​ ಕಿಚ್ಚನ ಸ್ಥಾನಕ್ಕೆ ಕನ್ನಡದ ಮತ್ತಿಬ್ಬರು ಸ್ಟಾರ್​ ಹೆಸರು ಭಾರಿ ಚರ್ಚೆಗೆ ಬಂದಿದೆ. 

ಅವರಲ್ಲಿ ಒಬ್ಬರು ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ. ಕನ್ನಡ ಬಿಗ್​ಬಾಸ್​11ರ ಮೇಲೆ ಎಲ್ಲರ ಕುತೂಹಲ ಇರೋದು ಕಾರ್ಯಕ್ರಮ ಯಾರು ನಡೆಸಿಕೊಡುತ್ತಾರೆ ಎನ್ನೋ ಬಗ್ಗೆ. ಈ ಬಾರಿ ಕಿಚ್ಚ  ಸುದೀಪ ಬಿಗ್ ಬಾಸ್ ನಿಂದ ದೂರ ಉಳಿಯುತ್ತಾರೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು. ಆಗ ಕೇಳಿ ಬಂದ ಹೊಸ ಹೆಸರೇ  ಕಾಂತಾರದ ಹೀರೋ ರಿಷಬ್ ಶೆಟ್ಟಿಯದ್ದು, ಆದ್ರೆ ಈಗ ಪ್ರೋಮೋ ಶೂಟ್​ ಆಗಿದ್ಮೇಲೆ ಗೊತ್ತಾಗಿದ್ದು, ರಿಷಬ್ ಬಿಗ್​ಬಾಸ್​ ಪಂಚಾಯ್ತಿ ಮಾಡೋದಿಲ್ಲ ಅನ್ನೋ ಸತ್ಯ. ಕಿಚ್ಚನಿಲ್ಲದ ಕನ್ನಡ ಬಿಗ್​ಬಾಸ್ ಊಹಿಸಿಕೊಳ್ಳೋಕು ಸಾಧ್ಯ ಇಲ್ಲ. ಆದ್ರೆ, ಈ ಭಾರಿ ರಿಷಬ್ ಶೆಟ್ಟಿ ಬಳಿಕ ರಮೇಶ್​ ಅರವಿಂದ್ ಹೆಸರು ಕೂಡ ಚಾಲ್ತಿಗೆ ಬಂದಿತ್ತು. 

ನಟನಿಗಾಗೇ ನಡೀತಾ ಈ ಹೋಮ ಹವನ?: ದರ್ಶನ್‌ಗೋಸ್ಕರ ಪೂಜೆ ಅಂದಿದ್ರೆ ನಾನು ಬರುತ್ತಿರಲಿಲ್ಲ ಎಂದು ಗುಡುಗಿದ ಜಗ್ಗೇಶ್

ರಮೇಶ್ ಅರವಿಂದ್​ ನಿರೂಪಣೆ ಮಾಡುತ್ತಾರೆ ಅಂತ ಹೇಳಲಾಗಿತ್ತು. ಈಗ ಅದು ಸುಳ್ಳು ಅನ್ನೋದು ಪಕ್ಕಾ ಆಗಿದೆ. ಬಿಗ್​ಬಾಸ್​ ನಿರೂಪಣೆ ಕಿರೀಟ ಅಂದು ಇಂದು ಎಂದೆಂದೂ ಕಿಚ್ಚನ ತಲೆ ಮೇಲೆ ಇರುತ್ತೆ. ಸುದೀಪ್ ಇಲ್ಲದ ಬಿಗ್​ಬಾಸ್​ ಊಸಿಸೋಕೂ ಸಾಧ್ಯವಿಲ್ಲ. ಸುದೀಪ್​​ ಇಲ್ಲದ ಬಿಗ್​ಬಾಸ್​​ಅನ್ನ ಕಿರುತೆರೆ ಪ್ರೇಕ್ಷಕರು ಒಪ್ಪಿಕೊಳ್ಳೋ ಚಾನ್ಸೇ ಇಲ್ಲ. ಹಾಗಾಗಿ ಈ ಬಾರಿ ಕೂಡಾ ಕಿಚ್ಚನೇ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಕಿಚ್ಚನ ಪಂಚಾಯತಿಯಲ್ಲಿಯೀ ಸ್ಪರ್ಧಿಗಳು ಕಟಕಟೆಯಲ್ಲಿ ನಿಲ್ಲಲ್ಲಿದ್ದಾರೆ. ಸೆಪ್ಟೆಂಬರ್​​ 29 ಬಿಗ್​ಬಾಸ್​ ಕನ್ನಡ ಸೀಸನ್ 11 ಆರಂಭ ಆಗುತ್ತಿದೆ. ಸ್ಪರ್ಧಿಗಳ ಆಯ್ಕೆ ಕೂಡ ನಡೆಯುತ್ತಿದೆ. ಈ ಭಾರಿ ಯಾರೆಲ್ಲಾ ಒಂಟಿ ಮನೆಯಲ್ಲಿ ಜಂಟಿಯಾಗ್ತಾರೆ ಕಾದು ನೋಡ್ಬೇಕು.

Latest Videos
Follow Us:
Download App:
  • android
  • ios